Kamal Haasan: ಇಂಡಿಯನ್‌ 2, ಇಂಡಿಯನ್‌ 3, ಥಗ್‌ ಲೈಪ್‌, ಕಲ್ಕಿ 2898 ಎಡಿ ಅಪ್‌ಡೇಟ್‌ ನೀಡಿದ್ರು ಕಮಲ್‌ ಹಾಸನ್‌
ಕನ್ನಡ ಸುದ್ದಿ  /  ಮನರಂಜನೆ  /  Kamal Haasan: ಇಂಡಿಯನ್‌ 2, ಇಂಡಿಯನ್‌ 3, ಥಗ್‌ ಲೈಪ್‌, ಕಲ್ಕಿ 2898 ಎಡಿ ಅಪ್‌ಡೇಟ್‌ ನೀಡಿದ್ರು ಕಮಲ್‌ ಹಾಸನ್‌

Kamal Haasan: ಇಂಡಿಯನ್‌ 2, ಇಂಡಿಯನ್‌ 3, ಥಗ್‌ ಲೈಪ್‌, ಕಲ್ಕಿ 2898 ಎಡಿ ಅಪ್‌ಡೇಟ್‌ ನೀಡಿದ್ರು ಕಮಲ್‌ ಹಾಸನ್‌

Kamal Haasan Upcoming Movies: ಕಮಲ್‌ ಹಾಸನ್‌ ಈ ವರ್ಷದ ತನ್ನ ಸಿನಿಮಾಗಳ ಕುರಿತು ಮಾಧ್ಯಮಕ್ಕೆ ಅಪ್‌ಡೇಟ್‌ ನೀಡಿದ್ದಾರೆ. ಇಂಡಿಯನ್‌ 2, ಇಂಡಿಯನ್‌ 3, ಥಗ್‌ ಲೈಪ್‌, ಕಲ್ಕಿ 2898 ಎಡಿ ಮುಂತಾದ ಸಿನಿಮಾಗಳಲ್ಲಿ ಈ ವರ್ಷ ಕಮಲ್‌ ಹಾಸನ್‌ ನಟಿಸಲಿದ್ದಾರೆ.

ಇಂಡಿಯನ್‌ 2, ಇಂಡಿಯನ್‌ 3, ಥಗ್‌ ಲೈಪ್‌, ಕಲ್ಕಿ 2898 ಎಡಿ ಅಪ್‌ಡೇಟ್‌ ನೀಡಿದ ನಟ ಕಮಲ್‌ ಹಾಸನ್‌
ಇಂಡಿಯನ್‌ 2, ಇಂಡಿಯನ್‌ 3, ಥಗ್‌ ಲೈಪ್‌, ಕಲ್ಕಿ 2898 ಎಡಿ ಅಪ್‌ಡೇಟ್‌ ನೀಡಿದ ನಟ ಕಮಲ್‌ ಹಾಸನ್‌

ಕಮಲ್‌ ಹಾಸನ್‌ ಮುಂದಿನ ಸಿನಿಮಾ ಯಾವುದು? ಯಾವೆಲ್ಲ ಸಿನಿಮಾಗಳಲ್ಲಿ ಇವರನ್ನು ಕಾಣಬಹುದು? ಮುಂತಾದ ಪ್ರಶ್ನೆಗೆ ಇದೀಗ ಉತ್ತರ ದೊರಕಿದೆ. ಮಾಧ್ಯಮ ಸಂದರ್ಶನವೊಂದರಲ್ಲಿ ಕಮಲ್‌ ಹಾಸನ್‌ ಅವರು ತಾನು ನಟಿಸಲಿರುವ ಇಂಡಿಯನ್‌ 2, ಇಂಡಿಯನ್‌ 3, ಥಗ್‌ ಲೈಪ್‌, ಕಲ್ಕಿ 2898 ಎಡಿ ಸಿನಿಮಾಗಳ ಕುರಿತು ಅಪ್‌ಡೇಟ್‌ ನೀಡಿದ್ದಾರೆ.

ಕಮಲ್‌ ಹಾಸನ್‌ ಅವರು 2024ರಲ್ಲಿ ನಟಿಸುತ್ತಿರುವ ಸಿನಿಮಾಗಳ ಕುರಿತು ಸಂದರ್ಶನದಲ್ಲಿ ಪ್ರಶ್ನೆ ಕೇಳಲಾಗಿತ್ತು. ಇದೇ ಸಮಯದಲ್ಲಿ ಭಾರತದ ಫ್ರಾಂಚೈಸಿಯಲ್ಲಿ ಎರಡನೇ ಮತ್ತು ಮೂರನೇ ಸರಣಿಯಲ್ಲಿ ಬರುತ್ತಿರುವ ಸಿನಿಮಾಗಳ ಕುರಿತು ಕಮಲ್‌ ಹಾಸನ್‌ ಮಾಹಿತಿ ನೀಡಿದ್ದಾರೆ. ಈ ಸುದ್ದಿ ಕೇಳಿ ಅಭಿಮಾನಿಗಳು ಖುಷಿಗೊಂಡಿದ್ದಾರೆ. 2013ರಲ್ಲಿ ಯಾವುದೇ ಬಿಗ್‌ ರಿಲೀಸ್‌ ಇಲ್ಲದೆ ಇದ್ದ ಕಾರಣ ಈ ವರ್ಷ ಕಮಲ್‌ ಹಾಸನ್‌ ನಟನೆಯ ಹಲವು ಸಿನಿಮಾಗಳನ್ನು ಅಭಿಮಾನಿಗಳು ಕಣ್ತುಂಬಿಕೊಳ್ಳಬಹುದು.

ಕಳೆದ ವರ್ಷ ನೀವು ಸಮಯವನ್ನು ಕಳೆದುಕೊಂಡಿರಾ ಎಂಬ ಪ್ರಶ್ನೆಗೆ "ನನ್ನ ಸಮಯ ಕಳೆದ ವರ್ಷ ಕಳೆದು ಹೋಯಿತೆಂದು ಹೇಳಲಾರೆ. ನಾವು ಸಿನಿಮಾ ಪ್ರೊಡಕ್ಷನ್‌ ವೇಗಗೊಳಿಸಲು ಸಾಧ್ಯವಿಲ್ಲ. ನಾವು ಇಂಡಿಯನ್‌ 2 ಮತ್ತು ಇಂಡಿಯನ್‌ 3 ಶೂಟಿಂಗ್‌ ಪೂರ್ಣಗೊಳಿಸಿದ್ದೇವೆ. ಈಗ ಇಂಡಿಯನ್‌ 2ನ ಪೋಸ್ಟ್‌ ಪ್ರೊಡಕ್ಷನ್‌ ವರ್ಕ್‌ ನಡೆಯುತ್ತಿದೆ. ಇದಾದ ಬಳಿಕ ಮುಂದಿನ ಸಿನಿಮಾದ ಪ್ರೊಡಕ್ಷನ್‌ ಆರಂಭವಾಗಬಹುದು" ಎಂದು ಕಮಲ್‌ ಹಾಸನ್‌ ಮಾಹಿತಿ ನೀಡಿದ್ದಾರೆ.

ಪ್ರಭಾಸ್‌ ನಟನೆಯ ಕಲ್ಕಿ 2898 ಎಡಿ ಸಿನಿಮಾದಲ್ಲಿ ಕಮಲ್‌ ಹಾಸನ್‌ ಪಾತ್ರವೇನು? ಈ ಪ್ರಶ್ನೆಗೂ ಉತ್ತರಿಸಿದ್ದಾರೆ. ಥಗ್‌ ಲೈಫ್‌ ಶೂಟಿಂಗ್‌ ಕೂಡ ಆರಂಭವಾಗಲಿದೆ. ಕಲ್ಕಿ ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ನಟಿಸಿದ್ದೇನೆ ಎಂದು ಅವರು ಹೇಳಿದ್ದಾರೆ. ಇಂಡಿಯನ್‌ ಸಿನಿಮಾದಲ್ಲಿ ಕಮಲ್‌ ಹಾಸನ್‌ ಸೇನಾಪತಿಯಾಗಿ ಕಾಣಿಸಿಕೊಂಡಿದ್ದರು. ಸ್ವಾತಂತ್ರ್ಯ ಹೋರಾಟಗಾರನಾಗಿದ್ದವು ಭ್ರಷ್ಟಾಚಾರದ ವಿರುದ್ಧ ಹೋರಾಡುವ ಕಥೆಯನ್ನು ಇದು ಹೊಂದಿದೆ.

ಇಂಡಿಯನ್‌ 2ನಲ್ಲಿ ಕಮಲ್‌ ಹಾಸನ್‌ ಜತೆಗೆ ಎಸ್ ಜೆ ಸೂರ್ಯ, ಪ್ರಿಯಾ ಭವಾನಿ ಶಂಕರ್, ಕಾಜಲ್ ಅಗರ್ವಾಲ್, ಸಿದ್ಧಾರ್ಥ್ ಮತ್ತು ರಾಕುಲ್ ಪ್ರೀತ್ ಸಿಂಗ್ ಮುಂತಾದವರು ನಟಿಸಿದ್ದಾರೆ. ಇಂಡಿಯನ್‌ 3 ಸಿನಿಮಾದ ಕುರಿತು ಸದ್ಯ ಯಾವುದೇ ಮಾಹಿತಿ ಲಭ್ಯವಿಲ್ಲ. ಯಾರೆಲ್ಲ ಈ ಸಿನಿಮಾದಲ್ಲಿ ನಟಿಸಿದ್ದಾರೆ ಎಂಬ ವಿವರವನ್ನು ಚಿತ್ರತಂಡ ತಿಳಿಸಿಲ್ಲ.

ಕಮಲ್‌ ಹಾಸನ್‌ ಭಾರತದ ಚಿತ್ರರಂಗದ ಪ್ರತಿಭಾನ್ವಿತ ನಟ. ಕನ್ನಡ, ತಮಿಳು, ತೆಲುಗು, ಬಂಗಾಳಿ, ಹಿಂದಿ ಸೇರಿದಂತೆ ಹಲವು ಭಾಷೆಗಳಲ್ಲಿ ನಟಿಸಿದ್ದಾರೆ. ಕನ್ನಡ ಎಂದಾಗ ರಾಮ ಶಾಮ ಭಾಮ ನೆನಪಾಗಬಹುದು. ಸಿನಿಮಾ ನಿರ್ಮಾಪಕರಾಗಿ, ನಿರ್ದೇಶಕರಾಗಿ, ಸಿನಿಮಾ ಬರಹಗಾರರಾಗಿ, ಹಿನ್ನೆಲೆ ಸಂಗೀತಗಾರರಾಗಿಯೂ ಕಮಲ್‌ ಹಾಸನ್‌ ಕೆಲಸ ಮಾಡಿದ್ದಾರೆ. ತನ್ನ ಹುಟ್ಟುಹಬ್ಬದ ದಿನ ಥಗ್‌ ಲೈಪ್‌ ಸಿನಿಮಾದ ಫಸ್ಟ್‌ ಲುಕ್‌ ಪೋಸ್ಟರ್‌ ಬಿಡುಗಡೆ ಮಾಡಿದ್ದರು. ಸುಮಾರು 36 ವರ್ಷಗಳ ಬಳಿಕ ಮಣಿರತ್ನಂ ನಿರ್ದೇಶನದಲ್ಲಿ ಕಮಲ್‌ ಹಾಸನ್‌ ನಟಿಸುವ ಸಿನಿಮಾ ಇದಾಗಿದೆ.

Whats_app_banner