Shakeela: ‘ಪ್ರಾಣಕ್ಕಿಂತ ಹೆಚ್ಚು ಪ್ರೀತಿಸಿದರೂ ನಮ್ಮಿಬ್ಬರ ಮದುವೆಗೆ ಜಾತಿ ಅಡ್ಡ ಬಂತು, ಅವನೀಗ ಸುಖ ಪುರುಷ!’ ಪ್ರೇಮಿಯನ್ನು ನೆನೆದ ಶಕೀಲಾ
ಕನ್ನಡ ಸುದ್ದಿ  /  ಮನರಂಜನೆ  /  Shakeela: ‘ಪ್ರಾಣಕ್ಕಿಂತ ಹೆಚ್ಚು ಪ್ರೀತಿಸಿದರೂ ನಮ್ಮಿಬ್ಬರ ಮದುವೆಗೆ ಜಾತಿ ಅಡ್ಡ ಬಂತು, ಅವನೀಗ ಸುಖ ಪುರುಷ!’ ಪ್ರೇಮಿಯನ್ನು ನೆನೆದ ಶಕೀಲಾ

Shakeela: ‘ಪ್ರಾಣಕ್ಕಿಂತ ಹೆಚ್ಚು ಪ್ರೀತಿಸಿದರೂ ನಮ್ಮಿಬ್ಬರ ಮದುವೆಗೆ ಜಾತಿ ಅಡ್ಡ ಬಂತು, ಅವನೀಗ ಸುಖ ಪುರುಷ!’ ಪ್ರೇಮಿಯನ್ನು ನೆನೆದ ಶಕೀಲಾ

ಶಕೀಲಾ ಬದುಕಲ್ಲಿ ಸಾಕಷ್ಟು ಜನ ಪುರುಷರು ಬಂದು ಹೋಗಿದ್ದಾರೆ. ಅದನ್ನು ಸ್ವತಃ ಶಕೀಲಾ ಸಾಕಷ್ಟು ಬಾರಿ ಸಂದರ್ಶನಗಳಲ್ಲಿ ಹೇಳಿಕೊಂಡಿದ್ದಾರೆ. ಬಯೋಗ್ರಫಿಯಲ್ಲೂ ನಮೂದಿಸಿದ್ದಾರೆ. ಇದೀಗ ತಮ್ಮ ಮೊದಲ ಪ್ರೇಮಿಯ ಬಗ್ಗೆ ಶಕೀಲಾ ಇತ್ತೀಚೆಗಷ್ಟೇ ಸಂದರ್ಶನವೊಂದರಲ್ಲಿ ಮತ್ತೆ ಹೇಳಿಕೊಂಡಿದ್ದಾರೆ.

Shakeela: ‘ಪ್ರಾಣಕ್ಕಿಂತ ಹೆಚ್ಚು ಪ್ರೀತಿಸಿದರೂ ನಮ್ಮಿಬ್ಬರ ಮದುವೆಗೆ ಜಾತಿ ಅಡ್ಡ ಬಂತು, ಅವನೀಗ ಸುಖ ಪುರುಷ!’ ಪ್ರೇಮಿಯನ್ನು ನೆನೆದ ಶಕೀಲಾ
Shakeela: ‘ಪ್ರಾಣಕ್ಕಿಂತ ಹೆಚ್ಚು ಪ್ರೀತಿಸಿದರೂ ನಮ್ಮಿಬ್ಬರ ಮದುವೆಗೆ ಜಾತಿ ಅಡ್ಡ ಬಂತು, ಅವನೀಗ ಸುಖ ಪುರುಷ!’ ಪ್ರೇಮಿಯನ್ನು ನೆನೆದ ಶಕೀಲಾ (instagram @imshakila_official/ twitter @itisprashanht)

Shakeela Love Story: ಸೌತ್‌ ಸಿನಿ ದುನಿಯಾದ ಮಾಜಿ ನೀಲಿ ತಾರೆ ಶಕೀಲಾ ಅಂದ್ರೆ, ಆಗಿನ ಕಾಲದಲ್ಲಿ ಅದೊಂದು ದೊಡ್ಡ ಕ್ರೇಜ್. ಅವರ ವಯಸ್ಕ ಸಿನಿಮಾಗಳು ಚಿತ್ರಮಂದಿರದಲ್ಲಿ ಬಿಡುಗಡೆ ಆಗುತ್ತಿವೆ ಎಂದರೆ ಇತರೆ ಸ್ಪರ್ಧಿಗಳು ಅಖಾಡಕ್ಕೆ ಇಳಿಯುತ್ತಿರಲಿಲ್ಲ. ಆದರೆ, ಇದೇ ಶಕೀಲಾ ಬದುಕು ಅಂದುಕೊಂಡಂತೆ ಹೂವಿನ ಹಾಸಿಗೆ ಆಗಿರಲಿಲ್ಲ. ಪಾಪುಲ್ಯಾರಿಟಿಯ ಜತೆಗೆ ನೋವೂ ಅವರ ಮಡಿಲು ಸೇರಿತ್ತು. ವಯಸ್ಕ ಸಿನಿಮಾ ನಟಿಯೆಂದರೆ, ಅವರೆಡೆಗಿನ ಇತರರ ಸೆಳೆತವೇ ಬೇರೆಯದ್ದಾಗಿತ್ತು.

ಶಕೀಲಾ ಬದುಕಲ್ಲಿ ಸಾಕಷ್ಟು ಜನ ಪುರುಷರು ಬಂದು ಹೋಗಿದ್ದಾರೆ. ಅದನ್ನು ಸ್ವತಃ ಶಕೀಲಾ ಸಾಕಷ್ಟು ಬಾರಿ ಸಂದರ್ಶನಗಳಲ್ಲಿ ಹೇಳಿಕೊಂಡಿದ್ದಾರೆ. ಬಯೋಗ್ರಫಿಯಲ್ಲೂ ನಮೂದಿಸಿದ್ದಾರೆ. ಇದೀಗ ತಮ್ಮ ಮೊದಲ ಪ್ರೇಮಿಯ ಬಗ್ಗೆ ಶಕೀಲಾ ಇತ್ತೀಚೆಗಷ್ಟೇ ಸಂದರ್ಶನವೊಂದರಲ್ಲಿ ಮತ್ತೆ ಹೇಳಿಕೊಂಡಿದ್ದಾರೆ. ಆಗಿನ ಕಾಲದಲ್ಲಿ ಶಕೀಲಾ ಅವರಿಗೆ ಬಂದ ಪ್ರಪೋಸ್‌ಗಳು ಒಂದೆರಡಲ್ಲ. ನಿತ್ಯ ಒಂದಿಲ್ಲೊಂದು ಪ್ರೇಮ ಪತ್ರಗಳು ಬರುತ್ತಲೇ ಇದ್ದವು. ಆದರೆ, ಅವ್ಯಾವ ಪತ್ರಗಳಿಗೂ ಅವರು ಮನಸೋತಿರಲಿಲ್ಲ. ಅವನೊಬ್ಬನನ್ನು ಬಿಟ್ಟು!

ಸದ್ಯ ಶಕೀಲಾ ಸೌತ್‌ನ ಹಲವು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ರಿಯಾಲಿಟಿ ಶೋಗಳಲ್ಲಿ ಭಾಗವಹಿಸುತ್ತಿರುತ್ತಾರೆ. ಇತ್ತೀಚೆಗಷ್ಟೇ ಬಿಗ್‌ಬಾಸ್‌ನಲ್ಲೂ ಸ್ಪರ್ಧಿಯಾಗಿ ಭಾಗವಹಿಸಿ ಮರಳಿದ್ದರು. ಈಗ ಇದೇ ಶಕೀಲಾ ತಮ್ಮ ಬಹುಕಾಲದ ಗೆಳೆಯನಾಗಿದ್ದ, ಅವನನ್ನೇ ಮದುವೆ ಆಗಬೇಕು, ಆತನ ಜತೆಗೆ ಸಂಸಾರ ನಡೆಸಬೇಕು ಎಂದುಕೊಂಡಿದ್ದ ವ್ಯಕ್ತಿಯ ಬಗ್ಗೆ ಶಕೀಲಾ ಸಂದರ್ಶನದಲ್ಲಿ ಮಾತನಾಡಿದ್ದಾರೆ. ಇನ್ನೇನು ಇಬ್ಬರು ಮನೆಯವರ ಒಪ್ಪಿಗೆ ಪಡೆದು ಮದುವೆ ಆಗಬೇಕು ಎನ್ನುವಷ್ಟರಲ್ಲಿಯೇ, ಜಾತಿ ಕಾರಣದಿಂದ ಮದುವೆಯೇ ನಿಂತುಹೋಯಿತು ಎಂದಿದ್ದಾರೆ.

"ಮದುವೆ ಅಂದರೆ ಅದು ಇಬ್ಬರ ನಿರ್ಧಾರವಾಗಿರಲಿಲ್ಲ. ಕುಟುಂಬಗಳೂ ಒಪ್ಪಬೇಕಿತ್ತು. ನಾನೂ ಮುಸ್ಲಿಂ, ಆತ ಹಿಂದೂ. ನಮ್ಮಿಬ್ಬರ ಕುಟುಂಬಗಳ ನಡುವೆ ಈ ಮದುವೆ ವಿಚಾರದಲ್ಲಿ ಸಾಕಷ್ಟು ಅಂತರವಿತ್ತು. ಜಾತಿ ವಿಚಾರವಾಗಿ ಈ ಮದುವೆ ಆಗದು ಎಂಬ ಸುಳಿವೂ ನನಗೆ ಅದಾಗಲೇ ಸಿಕ್ಕಿತ್ತು. ಅದ್ಯಾವ ಮಟ್ಟಿಗೆ ಹೋಯಿತು ಎಂದರೆ, ಈ ಸಂಬಂಧ ಬೇಡ, ಬೇರೆ ಹುಡುಗಿಯನ್ನು ಮದುವೆ ಆಗು ಎಂದು ಆತನಿಗೆ ಮನೆಯಲ್ಲಿ ಒತ್ತಾಯ ಹೇರಿದರು. ಆತನ ಮನೆಯಲ್ಲಿ ಈ ಮದುವೆ ವಿಚಾರ ವಿಕೋಪಕ್ಕೆ ಹೋಯಿತು."

"ಕೊನೆಗೆ ನನ್ನ ಬಳಿ ಬಂದು, ಮದುವೆಗೆ ಒಪ್ಪದ ವಿಚಾರವನ್ನು ನನ್ನ ಮುಂದೆ ಹೇಳಿದ. ಬೇರೆ ಮದುವೆ ಆಗುವ ಬಗ್ಗೆಯೂ ತಿಳಿಸಿದ. ಆತನ ಮಾತಿಗೆ ನಾನೂ ಚಕಾರ ಎತ್ತದೆ ಒಪ್ಪಿದೆ ಸೂಚಿಸಿದೆ. ಏಕೆಂದರೆ, ಪ್ರೀತಿ ಪಾತ್ರರಿಗೆ ನೋವು ತರಿಸುವುದು ನನಗೂ ಇಷ್ಟವಿರಲಿಲ್ಲ. ಆತ ಸದಾ ಖುಷಿಯಾಗಿರಬೇಕು ಎಂದು ಬಯಸುವವಳು ನಾನು. ಆ ವ್ಯಕ್ತಿ ಯಾರೆಂದು ನಾನು ರಿವೀಲ್‌ ಮಾಡುವುದಿಲ್ಲ. ಏಕೆಂದರೆ, ಅವನೀಗ ಒಂಟಿಯಲ್ಲ. ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದಾನೆ. ಹೆಸರು ಹೇಳಿ ಸಂಸಾರ ಹಾಳು ಮಾಡುವುದು ನನಗಿಷ್ಟವಿಲ್ಲ" ಎಂದಿದ್ದಾರೆ.

ಇದೆಲ್ಲದರ ಜತೆಗೆ ಮೊದಲ ಸಂಬಂಧದ ಬಗ್ಗೆಯೂ ಶಕೀಲಾ ಮಾತನಾಡಿದ್ದಾರೆ. "ಆಗ ನನಗಿನ್ನು 11 ವರ್ಷ ವಯಸ್ಸು. ನನ್ನ ಮನೆ ಪಕ್ಕದ ವ್ಯಕ್ತಿ ಜತೆಗೆ ನನಗೆ ಸಂಬಂಧವಿತ್ತು. ಆತನ ಹೆಸರು ಸುರೇಶ್‌ ರೆಡ್ಡಿ. ನನಗೆ ಆಗ ಗೊತ್ತಿರಲಿಲ್ಲ. ಇದು ಲವ್ವಾ ಅಥವಾ ಬೇರೆ ಏನೋ ಎಂದು. ಆದರೆ, ಆ ವಯಸ್ಸಿನಲ್ಲಿ ಅದು ಘಟಿಸಿತ್ತು" ಎಂದು ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ ಶಕೀಲಾ.

Whats_app_banner