ಕನ್ನಡ ಸುದ್ದಿ  /  ಮನರಂಜನೆ  /  Rajinikanth Biopic: ರಜನಿಕಾಂತ್ ಬಯೋಪಿಕ್ ಹಕ್ಕು ಪಡೆದ ಬಾಲಿವುಡ್ ನಿರ್ಮಾಪಕ! 2025ಕ್ಕೆ ಶೂಟಿಂಗ್‌, ರೀಲ್ ರಜನಿ ಯಾರು?

Rajinikanth Biopic: ರಜನಿಕಾಂತ್ ಬಯೋಪಿಕ್ ಹಕ್ಕು ಪಡೆದ ಬಾಲಿವುಡ್ ನಿರ್ಮಾಪಕ! 2025ಕ್ಕೆ ಶೂಟಿಂಗ್‌, ರೀಲ್ ರಜನಿ ಯಾರು?

ಕಾಲಿವುಡ್‌ನಲ್ಲಿ ಸೂಪರ್‌ ಸ್ಟಾರ್‌ ರಜನಿಕಾಂತ್‌ ಕುರಿತ ಬಯೋಪಿಕ್‌ ಸುದ್ದಿಯಲ್ಲಿದೆ. ಸದ್ಯ ಈ ಬಯೋಪಿಕ್‌ನ ಹಕ್ಕುಗಳನ್ನು ಬಾಲಿವುಡ್‌ ನಿರ್ಮಾಪಕ ಸಾಜಿದ್‌ ನಾಡಿಯಾದ್ವಾಲಾ ಪಡೆದುಕೊಂಡಿದ್ದಾರೆ ಎನ್ನಲಾಗುತ್ತಿದೆ.

Rajinikanth Biopic: ರಜನಿಕಾಂತ್ ಬಯೋಪಿಕ್ ಹಕ್ಕು ಪಡೆದ ಬಾಲಿವುಡ್ ನಿರ್ಮಾಪಕ! 2025ಕ್ಕೆ ಶೂಟಿಂಗ್‌, ರೀಲ್ ರಜನಿ ಯಾರು?
Rajinikanth Biopic: ರಜನಿಕಾಂತ್ ಬಯೋಪಿಕ್ ಹಕ್ಕು ಪಡೆದ ಬಾಲಿವುಡ್ ನಿರ್ಮಾಪಕ! 2025ಕ್ಕೆ ಶೂಟಿಂಗ್‌, ರೀಲ್ ರಜನಿ ಯಾರು?

Rajinikanth Biopic: ಕಾಲಿವುಡ್‌ ಸೂಪರ್ ಸ್ಟಾರ್, ಹಿರಿಯ ನಟ ರಜನಿಕಾಂತ್ ಅವರ ಜೀವನ ಸ್ಪೂರ್ತಿದಾಯಕ ಮತ್ತು ಅಷ್ಟೇ ಕಲರ್‌ಫುಲ್‌. ಬಸ್ ಕಂಡಕ್ಟರ್‌ನಿಂದ ಹಿಡಿದು ಕೋಟಿ ಕೋಟಿ ಜನರ ಪ್ರೀತಿ ಸಂಪಾದಿಸಿ ಸೂಪರ್ ಸ್ಟಾರ್ ಆಗಿ ಬೆಳೆದು ನಿಂತಿದ್ದಾರೆ. ಈ ನಡುವೆ ರಜನಿ ಅವರ ಜೀವನಾಧಾರಿತ ಬಯೋಪಿಕ್ ಬರಲಿದೆ ಎಂಬ ಸುದ್ದಿ ಕೆಲ ದಿನಗಳಿಂದ ಕೇಳಿ ಬರುತ್ತಲೇ ಇತ್ತು. ಈಗ ಆ ನಿಟ್ಟಿನಲ್ಲಿ ಪ್ರಯತ್ನಗಳು ಆರಂಭವಾದಂತಿದೆ. ಬಾಲಿವುಡ್ ನಿರ್ಮಾಪಕ ಸಾಜಿದ್ ನಾಡಿಯಾಡ್ವಾಲಾ ರಜನಿಕಾಂತ್ ಅವರ ಬಯೋಪಿಕ್ ಮಾಡುವ ಹಕ್ಕುಗಳನ್ನು ಪಡೆದುಕೊಂಡಿದ್ದಾರೆ ಎಂಬ ಹೊಸ ಸುದ್ದಿ ಇದೀಗ ಹೊರಬಿದ್ದಿದೆ.

ಟ್ರೆಂಡಿಂಗ್​ ಸುದ್ದಿ

ಬಾಲಿವುಡ್‌ ನಿರ್ಮಾಪಕ ಸಾಜಿದ್ ನಾಡಿಯಾಡ್ವಾಲಾ ರಜನಿಕಾಂತ್ ಅವರ ಬಯೋಪಿಕ್‌ ಮಾಡುವ ಹಕ್ಕುಗಳನ್ನು ಪಡೆದುಕೊಂಡಿದ್ದಾರೆ ಎಂದು ಬಾಲಿವುಡ್ ಹಂಗಾಮಾ ವರದಿ ಮಾಡಿದೆ. ರಜನಿಕಾಂತ್ ಅವರ ಬಯೋಪಿಕ್‌ನ ಸ್ಕ್ರಿಪ್ಟ್ ಕೆಲಸವನ್ನು ಸಾಜಿದ್ ಅವರೇ ನಿರ್ವಹಿಸುತ್ತಾರೆ ಎಂದೂ ಹೇಳಲಾಗುತ್ತಿದೆ. ಸಾಜಿದ್ ನಾಡಿಯಾಡ್ವಾಲಾ ರಜನಿಕಾಂತ್ ಅವರ ದೊಡ್ಡ ಅಭಿಮಾನಿ. ಕೇವಲ ನಟನಾಗಿ ಮಾತ್ರವಲ್ಲದೆ ಒಬ್ಬ ವ್ಯಕ್ತಿಯಾಗಿಯೂ ಅವರದ್ದು ಅಸಾಧಾರಣ ವ್ಯಕ್ತಿತ್ವ. 

ಕಂಡಕ್ಟರ್‌ನಿಂದ ಸೂಪರ್‌ಸ್ಟಾರ್ ಆಗಿ ಬೆಳೆದ ರಜನಿಕಾಂತ್ ಅವರ ಕಥೆಯನ್ನು ಜಗತ್ತೇ ನೋಡಬೇಕೆಂದು ಅವರು ಬಯಸುತ್ತಾರೆ. ಸ್ಕ್ರಿಪ್ಟ್ ಕೆಲಸವನ್ನು ಅವರೇ ಖುದ್ದಾಗಿ ನಿಭಾಯಿಸುತ್ತಾರೆ. ನಟನಾಗಿ ಅತ್ಯುನ್ನತ ಎತ್ತರವನ್ನು ತಲುಪುವ ಪ್ರಯಾಣದ ಜೊತೆಗೆ, ಈ ಬಯೋಪಿಕ್‌ನಲ್ಲಿ ರಜನಿಕಾಂತ್ ಅವರ ಮಾನವೀಯತೆಯನ್ನೂ ಎತ್ತಿ ತೋರಿಸಲು  ನಿರ್ಮಾಪಕರು ಪ್ಲಾನ್‌ ಹಾಕಿದ್ದಾರಂತೆ. 

ಸಾಜಿದ್ ನಾಡಿಯಾಡ್ವಾಲಾ ಇತ್ತೀಚೆಗೆ ರಜನಿಕಾಂತ್ ಅವರನ್ನು ಭೇಟಿಯಾಗಿದ್ದರು. ಆ ಭೇಟಿ ಕ್ಷಣದ ಫೋಟೋವನ್ನು ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದರು. ಈ ಭೇಟಿಯ ವೇಳೆ ಇದೇ ಬಯೋಪಿಕ್‌ ಬಗ್ಗೆಯೂ ಒಂದಷ್ಟು ಸುದ್ದಿಗಳು ಹರಿದಾಡಿದ್ದವು. ಈಗ ಅದು ನಿಜವಾಗುತ್ತಿದೆ ಎಂದೇ ಹೇಳಲಾಗುತ್ತಿದೆ.

2025ರಲ್ಲಿ ಶೂಟಿಂಗ್‌ ಶುರು

ರಜನಿಕಾಂತ್ ಅವರ ಜೀವನಾಧಾರಿತ ಸಿನಿಮಾ 2025ರಲ್ಲಿ ಶೂಟಿಂಗ್‌ ಆರಂಭಿಸುವ ನಿರೀಕ್ಷೆಯಿದೆ. ಸದ್ಯ ಸ್ಕ್ರಿಪ್ಟ್ ಕೆಲಸ ನಡೆಯುತ್ತಿದೆಯಂತೆ. ಆದರೆ, ಈ ಬಯೋಪಿಕ್ ಬಗ್ಗೆ ಸಾಜಿದ್ ಅಥವಾ ರಜನಿಯಿಂದ ಯಾವುದೇ ಅಧಿಕೃತ ಘೋಷಣೆಯಾಗಿಲ್ಲ. ಸುದ್ದಿಗಳು ಮಾತ್ರ  ಜೋರಾಗಿಯೇ ಸದ್ದು ಮಾಡುತ್ತಿವೆ. ಇನ್ನೇನು ಶೀಘ್ರದಲ್ಲಿಯೇ ಸಿನಿಮಾ ಘೋಷಣೆ ಆಗುವ  ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ರೀಲ್‌ ರಜನಿ ಆಗ್ತಾರಾ ಧನುಷ್?

ಬಯೋಪಿಕ್‌ನಲ್ಲಿ ತಮಿಳು ಸ್ಟಾರ್ ಹೀರೋ, ಮಾಜಿ ಅಳಿಯ ಧನುಷ್, ರಜನಿ ಪಾತ್ರವನ್ನು ನಿರ್ವಹಿಸುತ್ತಾರೆ ಎನ್ನಲಾಗುತ್ತಿದೆ. ಇಳಯ ರಾಜಾ ಮತ್ತು ರಜನಿಕಾಂತ್ ಅವರ ಜೀವನಾಧಾರಿತ ಚಿತ್ರಗಳನ್ನು ಮಾಡುವ ಕನಸು ನನಗಿತ್ತು ಎಂದು ಧನುಷ್ ಈ ಹಿಂದೆ ಹೇಳಿದ್ದರು. ಸದ್ಯ ಖ್ಯಾತ ಸಂಗೀತ ನಿರ್ದೇಶಕ ಇಳಯರಾಜ ಅವರ ಜೀವನಾಧಾರಿತ ಚಿತ್ರದಲ್ಲಿ ಧನುಷ್ ನಟಿಸುತ್ತಿದ್ದಾರೆ.

ರಜನಿಕಾಂತ್ ಮುಂದಿನ ಸಿನಿಮಾಗಳು

ಸೂಪರ್‌ಸ್ಟಾರ್ ರಜನಿಕಾಂತ್ ಪ್ರಸ್ತುತ ತಮ್ಮ 170 ನೇ ಚಿತ್ರವಾಗಿ ವೆಟ್ಟೈನ್‌ ಶೂಟಿಂಗ್‌ನಲ್ಲಿ ಬಿಜಿಯಾಗಿದ್ದಾರೆ. ಈ ಆಕ್ಷನ್ ಡ್ರಾಮಾ ಚಿತ್ರವನ್ನು ಜ್ಞಾನವೇಲ್ ನಿರ್ದೇಶಿಸುತ್ತಿದ್ದಾರೆ. ಬಾಲಿವುಡ್ ಲೆಜೆಂಡ್ ಅಮಿತಾಭ್ ಬಚ್ಚನ್, ಫಹಾದ್ ಫಾಸಿಲ್, ಟಾಲಿವುಡ್ ನಟ ರಾಣಾ ದಗ್ಗುಬಾಟಿ, ಮಂಜು ವಾರಿಯರ್ ಮತ್ತು ರಿತಿಕಾ ಸಿಂಗ್ ಈ ಚಿತ್ರದಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸುತ್ತಿದ್ದಾರೆ. ಅದೇ ರೀತಿ ರಜಿನಿ ತಮ್ಮ ಮುಂದಿನ ಸಿನಿಮಾವನ್ನು ಸ್ಟಾರ್ ಡೈರೆಕ್ಟರ್ ಲೋಕೇಶ್ ಕನಕರಾಜ್ ಜೊತೆ ಮಾಡಲಿದ್ದಾರೆ. ಈ ಚಿತ್ರದ ಶೀರ್ಷಿಕೆ ಕೂಲಿ. ಇತ್ತೀಚೆಗೆ ಬಿಡುಗಡೆಯಾದ ಟೈಟಲ್ ಟೀಸರ್‌ಗೆ ಸೂಪರ್ ರೆಸ್ಪಾನ್ಸ್ ಸಿಕ್ಕಿದೆ.

IPL_Entry_Point