ಕನ್ನಡ ಸುದ್ದಿ  /  ಮನರಂಜನೆ  /  Rcb ಸೋಲನ್ನು ಅಣಕಿಸಿ ಕುಹಕ ನಗೆ ಬೀರಿದ ತಮಿಳು ನಟಿ; ಕಾವೇರಿ ವಿಚಾರದಲ್ಲಿಯೂ ಕನ್ನಡಿಗರನ್ನು ಕೆಣಕಿದ್ದ ‘ಜಾಣೆ’

RCB ಸೋಲನ್ನು ಅಣಕಿಸಿ ಕುಹಕ ನಗೆ ಬೀರಿದ ತಮಿಳು ನಟಿ; ಕಾವೇರಿ ವಿಚಾರದಲ್ಲಿಯೂ ಕನ್ನಡಿಗರನ್ನು ಕೆಣಕಿದ್ದ ‘ಜಾಣೆ’

ಈ ಸಲದ ಐಪಿಎಲ್‌ನಲ್ಲಿ ಅಚ್ಚರಿಯ ರೀತಿಯಲ್ಲಿ ಪ್ಲೇಆಫ್‌ಗೇರಿದ್ದ ಆರ್‌ಸಿಬಿ, ಆರ್‌ಆರ್‌ ತಂಡದ ಎದುರು ಸೋಲನುಭವಿಸಿ ಹೊರಬಿದ್ಧಿದೆ. ಹೀಗೆ ಸೋತಿದ್ದನ್ನು ತಮಿಳು ನಟಿ ಬೆಂಗಳೂರು ದಂಡು ಬೋರ್ಡ್ ಶೇರ್‌ ಮಾಡಿ ಕುಹಕ ನಗೆ ಬೀರಿದ್ದಾರೆ.

ಆರ್‌ಸಿಬಿ ಸೋಲನ್ನು ಅಣಕಿಸಿ ಕುಹಕ ನಗೆ ಬೀರಿದ ತಮಿಳು ನಟಿ; ಕಾವೇರಿ ವಿಚಾರದಲ್ಲಿಯೂ ಕನ್ನಡಿಗರನ್ನು ಕೆಣಕಿದ್ದ ‘ಜಾಣೆ’
ಆರ್‌ಸಿಬಿ ಸೋಲನ್ನು ಅಣಕಿಸಿ ಕುಹಕ ನಗೆ ಬೀರಿದ ತಮಿಳು ನಟಿ; ಕಾವೇರಿ ವಿಚಾರದಲ್ಲಿಯೂ ಕನ್ನಡಿಗರನ್ನು ಕೆಣಕಿದ್ದ ‘ಜಾಣೆ’

Kasthuri Shankar: 17ನೇ ಆವೃತ್ತಿಯ ಐಪಿಎಲ್‌ ಟೂರ್ನಿಯಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡವನ್ನು ಸೋಲಿಸಿ ಅಚ್ಚರಿಯ ರೀತಿಯಲ್ಲಿ ಟಾಪ್‌ ನಾಲ್ಕರಲ್ಲಿ ಸ್ಥಾನ ಪಡೆದಿತ್ತು ಆರ್‌ಸಿಬಿ ತಂಡ. ಹಾಗೇ ಗೆಲುವು ದಾಖಲಿಸಿದ್ದೇ ತಡ, ಫ್ಯಾನ್ಸ್‌ ವಲಯದಲ್ಲಿ ಸಂಭ್ರಮ ಮನೆ ಮಾಡಿತ್ತು. ಆದರೆ, ಪ್ಲೇಆಫ್‌ನ ಎಲಿಮಿನೇಟರ್‌ ಸುತ್ತಿನಿಂದ ರಾಜಸ್ತಾನ್‌ ರಾಯಲ್ಸ್‌ ತಂಡದ ಎದುರು ಸೋತು ಆರ್‌ಸಿಬಿ ಹೊರಬಿದ್ದಿತ್ತು. ಈ ಮೂಲಕ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಮತ್ತೊಮ್ಮೆ ಪ್ರಶಸ್ತಿ ಸುತ್ತಿನಿಂದ ಕೂದಲೆಳೆ ಅಂತರದಿಂದ ಹೊರಬಂದು ಅಭಿಮಾನಿಗಳಿಗೂ ಶಾಕ್‌ ನೀಡಿತ್ತು. ಇದೀಗ ಇದೇ ಆರ್‌ಸಿಬಿ ಸೋಲನ್ನು ತಮಿಳು ನಟಿಯೊಬ್ಬರು ಸಂಭ್ರಮಿಸಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಈ ಸಲದ ಐಪಿಎಲ್‌ನಲ್ಲಿ ಆರ್‌ಸಿಬಿ ಸತತ ಸೋಲುಗಳಿಂದ ಕಂಗೆಟ್ಟು, ಬಳಿಕ ಫಿನಿಕ್ಸ್‌ನಂತೆ ಪುಟಿದೆದ್ದು ಚೆನ್ನೈ ತಂಡವನ್ನು ಸೋಲಿಸಿ ಪ್ಲೇಆಫ್‌ ಹಂತ ಪ್ರವೇಶ ಪಡೆದಿತ್ತು. ಚೆನ್ನೈ ತಂಡವನ್ನು ಸೋಲಿಸಿದ್ದೇ ತಡ, ಕರುನಾಡಿನ ಅಭಿಮಾನಿಗಳು ಸಿಎಸ್‌ಕೆ ತಂಡವನ್ನು ಹಿಗ್ಗಾ ಮುಗ್ಗಾ ಟ್ರೋಲ್‌ ಮಾಡಿದ್ದರು. ಒಂದು ಹೆಜ್ಜೆ ಮುಂದೆ ಹೋಗಿ, ಹುರಿದು ಮುಕ್ಕಿದ್ದರು. ಆರ್‌ಸಿಬಿ ಅಭಿಮಾನಿಗಳ ಈ ಟೀಕೆಗಳಿಗೆ ಸಿಎಸ್‌ಕೆ ಫಾನ್ಸ್‌ ರೋಸಿ ಹೋಗಿದ್ದರು. ಹೀಗಿರುವಾಗಲೇ ಆರ್‌ಆರ್‌ ವಿರುದ್ಧ ಆರ್‌ಸಿಬಿ ಸೋಲುತ್ತಿದ್ದಂತೆ, ಅಲ್ಲಿನವರ ಪುಂಡಾಟ ಹೆಚ್ಚಾಗಿದೆ. ಖ್ಯಾತ ಸಿನಿಮಾ ನಟಿಯೂ ಆರ್‌ಸಿಬಿ ಸೋಲನ್ನು ಸಂಭ್ರಮಿಸಿ ಕುಹಕ ನಗೆ ಬೀರಿದ್ದಾರೆ.

ಜಾಣ ಸಿನಿಮಾ ನಟಿಯ ಕುಹಕ ನಗು

ಆ ನಟಿ ಬೇರಾರು ಅಲ್ಲ. ಸೌತ್‌ನ ಎಲ್ಲ ಭಾಷೆಯ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ಕಸ್ತೂರಿ ಶಂಕರ್‌! ಕ್ರೇಜಿಸ್ಟಾರ್‌ ರವಿಚಂದ್ರನ್‌ ಜತೆಗೆ ಜಾಣ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿಕೊಟ್ಟಿದ್ದ ನಟಿ ಕಸ್ತೂರಿ ಶಂಕರ್‌, ಮೂಲ ತಮಿಳುನಾಡಿನವರು. ಇಂದಿಗೂ ಸಿನಿಮಾ ಮತ್ತು ತಮಿಳು ಕಿರುತೆರೆಯಲ್ಲಿ ಬಿಜಿಯಾಗಿರುವ ಕಸ್ತೂರಿ, ಸೋಷಿಯಲ್‌ ಮೀಡಿಯಾದಲ್ಲಿ ಸಕ್ರಿಯರು. ಇತ್ತೀಚೆಗಷ್ಟೇ ನಟಿ ಐಶ್ವರ್ಯಾ ರೈ ಅವರ ಸೌಂದರ್ಯದ ಬಗ್ಗೆ ಪೋಸ್ಟ್‌ ಹಂಚಿಕೊಂಡಿದ್ದ ಅವರು, ಇದೀಗ ಆರ್‌ಸಿಬಿ ಸೋಲುತ್ತಿದ್ದಂತೆ, ಕುಹಕ ನಗೆ ಬೀರಿ ಅಣಕಿಸಿದ್ದಾರೆ. ನಟಿಯ ಈ ಪೋಸ್ಟ್‌ಗೆ ತಮಿಳಿಗರೂ ಕೈ ಜೋಡಿಸಿದ್ದಾರೆ. ಅವರಿಂದಲೂ ಪ್ರತಿಕ್ರಿಯೆಗಳು ಸಂದಾಯವಾಗಿವೆ.

ಆರ್‌ಸಿಬಿ ಸೋಲನ್ನು ಅಣಕಿಸಿ ಕುಹಕ ನಗೆ ಬೀರಿದ ತಮಿಳು ನಟಿ
ಆರ್‌ಸಿಬಿ ಸೋಲನ್ನು ಅಣಕಿಸಿ ಕುಹಕ ನಗೆ ಬೀರಿದ ತಮಿಳು ನಟಿ

ಅಷ್ಟಕ್ಕೂ ಕಸ್ತೂರಿ ಶಂಕರ್‌ ಪೋಸ್ಟ್‌ ಏನು?

ರೈಲು ನಿಲ್ದಾಣದಲ್ಲಿನ "ಬೆಂಗಳೂರು ದಂಡು" ಎಂಬ ಎಲ್ಲೋ ಬೋರ್ಡ್‌ನ ಫೋಟೋವನ್ನು ಶೇರ್‌ ಮಾಡಿದ ನಟಿ ಕಸ್ತೂರಿ ಶಂಕರ್‌, "ಇಲ್ಲಿನ ಸ್ಥಳೀಯರಿಗೆ ವರ್ಷಗಳಿಂದ ಇದು ತಿಳಿದಿರುವ ವಿಚಾರ.." ಎಂದು ಕ್ಯಾಪ್ಷನ್‌ ಹಾಕಿದ್ದಾರೆ. #eesala #illa ಈ ಸಲವೂ ಕಪ್‌ ಇಲ್ಲ ಎಂದು ಕುಹಕ ನಗು ಬೀರಿದ ಎಮೋಜಿಗಳನ್ನು ಶೇರ್‌ ಮಾಡಿದ್ದಾರೆ. ನಟಿಯ ಈ ಪೋಸ್ಟ್‌ಗೆ ಸಿಎಸ್‌ಕೆ ಅಭಿಮಾನಿಗಳೂ ಕೈ ಜೋಡಿಸಿದ್ದಾರೆ. ಅಷ್ಟಕ್ಕೂ ನಟಿ ಕಸ್ತೂರಿ ಈ ಪೋಸ್ಟ್‌ಅನ್ನು ಇಂದು (ಮೇ 24) ಮಧ್ಯರಾತ್ರಿ 1;18 ನಿಮಿಷಕ್ಕೆ ಪೋಸ್ಟ್‌ ಮಾಡಿದ್ದಾರೆ. ಇಷ್ಟೊತ್ತಿನಲ್ಲಿ ಏನ್‌ ಮಾಡ್ತಿದ್ದೀರಿ ಅಕ್ಕಾ ಎಂದೂ ಕೆಲವರು ನಟಿಯ ಕಾಲೆಳೆದಿದ್ದಾರೆ.

ಐಶ್ವರ್ಯಾ ರೈ ಬಗ್ಗೆಯೂ ಕಸ್ತೂರಿ ಕಾಮೆಂಟ್‌

ಸೋಷಿಯಲ್‌ ಮೀಡಿಯಾ ಟ್ವಿಟರ್‌ನಲ್ಲಿ ಐಶ್ವರ್ಯಾ ರೈ ಅವರ ಕಾನ್‌ ಸಿನಿಮೋತ್ಸವದ ಫೋಟೋ ಶೇರ್‌ ಮಾಡಿದ ಕಸ್ತೂರಿ ಶಂಕರ್‌, "ಟೈಮ್‌ ಎಂಬುದು ಪ್ರಪಂಚದ ಅತ್ಯಂತ ಸುಂದರ ಮಹಿಳೆಯರನ್ನು ಸಹ ಬಿಡುವುದಿಲ್ಲ. ಐಶ್ವರ್ಯಾ ರೈ ತಮ್ಮ ಗಡಿಯಾರವನ್ನು ಹಿಂದಕ್ಕೆ ತಿರುಗಿಸುವ ಅಗತ್ಯವಿರಲಿಲ್ಲ. ಅವರು ಸುಂದರವಾಗಿ ಉಳಿಯುತ್ತಿದ್ದರು. ಆದರೆ ಪ್ಲಾಸ್ಟಿಕ್ ಅವರ ಸಾರ್ವಕಾಲಿಕ ಸೌಂದರ್ಯವನ್ನು ಹಾಳುಮಾಡಿದೆ" ಎಂದು ಬರೆದುಕೊಂಡಿದ್ದರು.

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

ಟಿ20 ವರ್ಲ್ಡ್‌ಕಪ್ 2024