ಪ್ರಸನ್ನ ಜೊತೆ ಮದುವೆಗೂ ಮುನ್ನ ಆ ತೆಲುಗು ಸ್ಟಾರ್ ನಟನನ್ನು ಪ್ರೀತಿಸಿದ್ರಾ ಸ್ನೇಹಾ?
ಸ್ನೇಹಾ ಹಾಗೂ ಪ್ರಸನ್ನಾ ಅವರದ್ದು ಬಹಳ ವರ್ಷಗಳ ಹಿಂದಿನ ಪ್ರೀತಿ. ಇಬ್ಬರೂ ತಮ್ಮ ಪ್ರೀತಿಯನ್ನು ಮನೆಯವರ ಬಳಿ ತಡವಾಗಿ ಹೇಳಿಕೊಂಡಿದ್ದಾರೆ. ಇಷ್ಟಿದ್ದ ಮೇಲೆ ಶ್ರೀಕಾಂತ್ ಹಾಗೂ ಸ್ನೇಹಾ ಪ್ರೀತಿಸಲು ಹೇಗೆ ಸಾಧ್ಯ ಎಂದು ಸ್ನೇಹಾ ಆತ್ಮೀಯರು ಪ್ರಶ್ನಿಸುತ್ತಿದ್ದಾರೆ.
ಸ್ನೇಹಾ, ತಮಿಳು ಚಿತ್ರರಂಗದ ಸುಂದರ ನಟಿ. ಮದುವೆ ಆಗಿ ಇಬ್ಬರು ಮಕ್ಕಳಿದ್ದರೂ ಸ್ನೇಹಾ ಇನ್ನೂ ಸಂತೂರ್ ಮಮ್ಮಿಯಂತೆ ಇದ್ಧಾರೆ. ಸ್ನೇಹಾಗೆ ವಯಸ್ಸೇ ಆಗುವುದಿಲ್ಲವೇನೋ ಎಂಬಂತೆ ತಮ್ಮ ಸೌಂದರ್ಯ ಕಾಪಾಡಿಕೊಂಡು ಬರುತ್ತಿದ್ದಾರೆ. ವೃತ್ತಿ ಜೀವನದಲ್ಲಿ ಸ್ಟಾರ್ ನಟಿಯಾಗಿ ಮೆರೆದ ಸ್ನೇಹಾ ಈಗ ಗೃಹಿಣಿ, ಇಬ್ಬರು ಮಕ್ಕಳ ತಾಯಿ. ಆದರೂ ಸ್ನೇಹಾ ನಟನೆ ಮುಂದುವರೆಸಿದ್ದಾರೆ.
ಶ್ರೀಕಾಂತ್, ಸ್ನೇಹಾ ಪ್ರೀತಿಸಿದ್ರಾ?
ಸ್ನೇಹಾ ಹಾಗೂ ಪ್ರಸನ್ನ ಇಬ್ಬರದ್ದು ಲವ್ ಮ್ಯಾರೇಜ್. ಆತ ಕೂಡಾ ಖ್ಯಾತ ನಟ. ಪ್ರಸನ್ನ ಅವರನ್ನು ಭೇಟಿ ಮಾಡುವ ಮುನ್ನ ಸ್ನೇಹಾ, ಮತ್ತೊಬ್ಬ ನಟನನ್ನು ಪ್ರೀತಿಸುತ್ತಿದ್ದರು. ಆತ ಮತ್ತಾರೂ ಅಲ್ಲ ತೆಲುಗು ನಟ ಶ್ರೀಕಾಂತ್ ಎಂದು ತಮಿಳು ಪತ್ರಕರ್ತ, ಸಿನಿ ವಿಮರ್ಶಕ ಚೆಯ್ಯಾರು ಬಾಲು ಹೇಳಿದ್ದಾರೆ. ಬಾಲು ಇತ್ತೀಚೆಗೆ ರಜಿನಿಕಾಂತ್ ವಿಚಾರದ ಬಗ್ಗೆ ಮಾತನಾಡಿದ್ದರು. ಧನುಷ್ ಹಾಗೂ ಐಶ್ವರ್ಯ ವಿಚ್ಛೇದನಕ್ಕೆ ಅಮಲಾ ಪೌಲ್ ಕಾರಣ. ದಂಪತಿ ನಡುವೆ ಅಮಲಾ ಬಂದಿದ್ದ ವಿಚಾರ ಸ್ವತ: ರಜಿನಿಕಾಂತ್‌ಗೂ ತಿಳಿದಿತ್ತು. ಆ ಕಾರಣದಿಂದಲೇ ಒಮ್ಮೆ ಅವರು ಅಮಲಾ ಪೌಲ್ ಮನೆಗೆ ಹೋಗಿ ವಾರ್ನಿಂಗ್ ಮಾಡಿದ್ದರು ಎಂದು ಹೇಳಿದ್ದರು. ಈ ಸುದ್ದಿ ಬಹಳ ವೈರಲ್ ಆಗಿತ್ತು.
ಗಾಸಿಪ್ ನಿರಾಕರಿಸಿದ ಸ್ನೇಹಾ ಆತ್ಮೀಯರು
ಇದೀಗ ಚೆಯ್ಯಾರು ಬಾಲು ಸ್ನೇಹಾ ಹಾಗೂ ಶ್ರೀಕಾಂತ್ ಬಗ್ಗೆ ಮಾತನಾಡಿದ್ದಾರೆ. ಸ್ನೇಹಾ ಹಾಗೂ ಶ್ರೀಕಾಂತ್ ಅನೇಕ ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿದ್ದಾರೆ. ಆದ್ದರಿಂದ ಇಬ್ಬರ ನಡುವೆ ಆತ್ಮೀಯತೆ ಉಂಟಾಗಿ ನಂತರ ಇಬ್ಬರೂ ಪ್ರೀತಿಸಲು ಆರಂಭಿಸಿದರು ಎಂದು ಇತ್ತೀಚಿನ ಸಂದರ್ಶನವೊಂದರಲ್ಲಿ ಹೇಳಿದ್ದರು. ಆದರೆ ಈ ವಿಚಾರವನ್ನು ಸ್ನೇಹಾ ಮನೆಯವರು ಹಾಗೂ ಸ್ನೇಹಿತರು ನಿರಾಕರಿಸಿದ್ದರು. ನಿಜ ಹೇಳಬೇಕೆಂದರೆ ಶ್ರೀಕಾಂತ್ ಅವರದ್ದೂ ಲವ್ ಮ್ಯಾರೇಜ್. ಶಿವರಂಜಿನಿ ಕೂಡಾ ನಟಿ.
ಸ್ನೇಹಾ ಪ್ರಸನ್ನ ಲವ್ ಮ್ಯಾರೇಜ್
ಇನ್ನು ಸ್ನೇಹಾ ಹಾಗೂ ಪ್ರಸನ್ನಾ ಅವರದ್ದು ಬಹಳ ವರ್ಷಗಳ ಹಿಂದಿನ ಪ್ರೀತಿ. ಇಬ್ಬರೂ ತಮ್ಮ ಪ್ರೀತಿಯನ್ನು ಮನೆಯವರ ಬಳಿ ತಡವಾಗಿ ಹೇಳಿಕೊಂಡಿದ್ದಾರೆ. ಇಷ್ಟಿದ್ದ ಮೇಲೆ ಶ್ರೀಕಾಂತ್ ಹಾಗೂ ಸ್ನೇಹಾ ಪ್ರೀತಿಸಲು ಹೇಗೆ ಸಾಧ್ಯ? ನಟ/ನಟಿಯರು ಒಂದೆರಡು ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿದರೆ ಸಾಕು ಅವರ ಬಗ್ಗೆ ಗಾಸಿಪ್ ಶುರುವಾಗುತ್ತದೆ. ಅದೇ ರೀತಿ ಸ್ನೇಹಾ ಹಾಗೂ ಶ್ರೀಕಾಂತ್ ಬಗ್ಗೆಯೂ ಗಾಸಿಪ್ ಹರಡಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಕನ್ನಡದಲ್ಲಿ 3 ಸಿನಿಮಾಗಳಲ್ಲಿ ನಟನೆ
ಸ್ನೇಹಾ ಹಾಗೂ ಪ್ರಸನ್ನ 2012 ರಲ್ಲಿ ಮದುವೆ ಆದರು. ಈ ದಂಪತಿಗೆ ಒಂದು ಗಂಡು, ಒಂದು ಹೆಣ್ಣು ಮಗುವಿದೆ. ಸಿನಿಮಾ ಬಗ್ಗೆ ಹೇಳುವುದಾದರೆ ಸ್ನೇಹಾ, ಇದೇ ಫೆಬ್ರವರಿಯಲ್ಲಿ ತೆರೆ ಕಂಡಿದ್ದ ಮಲಯಾಳಂ ಸಿನಿಮಾ 'ಕ್ರಿಸ್ಟೋಫರ್'ನಲ್ಲಿ ನಟಿಸಿದ್ದರು. ನಂತರ ಅವರು ಹೊಸ ಸಿನಿಮಾ ಅನೌನ್ಸ್ ಆಗಿಲ್ಲ. ಕನ್ನಡದಲ್ಲಿ ರವಿಶಾಸ್ತ್ರಿ, ಒಗ್ಗರಣೆ ಹಾಗೂ ಕುರುಕ್ಷೇತ್ರ ಸಿನಿಮಾದಲ್ಲಿ ಸ್ನೇಹಾ ನಟಿಸಿದ್ದಾರೆ.