Shakila on Vadivelu: ಶೂಟಿಂಗ್ ಸೆಟ್ನಲ್ಲಿ ಮಾಜಿ ನೀಲಿತಾರೆ ಶಕೀಲಾರನ್ನೂ ಬಿಡದ ಖ್ಯಾತ ನಟ ವಡಿವೇಲು! ಹಳೇ ಘಟನೆ ನೆನೆದು ಸಿಟ್ಟಿಗೆದ್ದ ನಟಿ
ಮಾಜಿ ನೀಲಿ ತಾರೆ ಶಕೀಲಾ ಇದೀಗ ತಮಿಳಿನ ಖ್ಯಾತ ನಟ ವಡಿವೇಲು ಬಗ್ಗೆ ಮಾತನಾಡಿದ್ದಾರೆ. ತಮ್ಮ ಯೂಟ್ಯೂಬ್ನಲ್ಲಿ ನಟಿ ಪ್ರೇಮ ಪ್ರಿಯಾ ಸಂದರ್ಶನದಲ್ಲಿ ತಮ್ಮ ಅನುಭವಗಳನ್ನೂ ಅವರು ಹೇಳಿಕೊಂಡಿದ್ದಾರೆ. ಶೂಟಿಂಗ್ ಸೆಟ್ನಲ್ಲಿ ಅವರು ಹೇಗಿರುತ್ತಿದ್ದರು ಎಂಬುದನ್ನು ಶಕೀಲಾ ಬಿಚ್ಚಿಟ್ಟಿದ್ದಾರೆ.
Shakila on Vadivelu: 80- 90ರ ದಶಕದಲ್ಲಿ ವಯಸ್ಕರ ಸಿನಿಮಾ ಮೂಲಕವೇ ಹಲ್ಚಲ್ ಸೃಷ್ಟಿಸಿ ಸ್ಟಾರ್ ಪಟ್ಟ ಗಿಟ್ಟಿಸಿಕೊಂಡವರು ನಟಿ ಶಕೀಲಾ. ಅಲ್ಲಿಂದ ಈ ವರೆಗೂ ಸರಿಸುಮಾರು ನೂರಕ್ಕೂ ಅಧಿಕ ಸಿನಿಮಾಗಳಲ್ಲಿ ಶಕೀಲಾ ನಟಿಸಿದ್ದಾರೆ. ಇಂದಿಗೂ ಸಿನಿಮಾರಂಗದಲ್ಲಿ ಸಕ್ರಿಯರಾಗಿದ್ದಾರೆ. ಈ ನಡುವೆ ಇದೇ ಶಕೀಲಾ ಹಳೇ ಘಟನೆಗಳನ್ನು ಮೆಲುಕು ಹಾಕಿದ್ದಾರೆ. ತಮಿಳಿನ ಖ್ಯಾತ ನಟ ವಡಿವೇಲು ಬಗೆಗಿನ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ.
ವಡಿವೇಲು ತಮಿಳು ಚಿತ್ರರಂಗದ ಪ್ರಮುಖ ಹಾಸ್ಯ ನಟ. ತಮ್ಮ ಕಾಮಿಡಿ ಮೂಲಕವೇ ಅಪಾರ ಜನರನ್ನು ಸೆಳೆದು, ಆ ಕಾಲದಲ್ಲಿಯೇ ಸ್ಟಾರ್ ಕಲಾವಿದನಾಗಿ ಗುರುತಿಸಿಕೊಂಡಿದ್ದರು. ನಟಿಸಿದ ಬಹುತೇಕ ಎಲ್ಲ ಸಿನಿಮಾಗಳು ಹಿಟ್ ಪಟ್ಟಿ ಸೇರುತ್ತಿದ್ದವು. ಸ್ಟಾರ್ ಹೀರೋಗಳ ಸಿನಿಮಾಗಳಿಗೂ ಇದೇ ಕಲಾವಿದನೇ ಬೇಕಿತ್ತು. ಇದೆಲ್ಲದರ ಜತೆಗೆ ನಿರ್ಮಾಪಕರ ಜತೆಗಿನ ಒಂದಷ್ಟು ಕಿರಿಕ್ಗಳು ಅವರಿಗೆ ಕೆಟ್ಟ ಹೆಸರನ್ನು ತಂದುಕೊಟ್ಟವು. ಕೆಲ ವರ್ಷಗಳ ಕಾಲ ಸಿನಿಮಾದಿಂದ ದೂರವೇ ಉಳಿದ ಈ ನಟ, ಇತ್ತೀಚೆಗಷ್ಟೇ ಬಿಡುಗಡೆಯಾದ ನಾಯಿಶೇಖರ ರೀಟರ್ಸ್ ಸಿನಿಮಾ ಮೂಲಕ ಆಗಮಿಸಿದ್ದರು. ಇದೀಗ ಮಾಮನನ್ ಚಿತ್ರದ ಗೆಲುವಿನ ಖುಷಿಯಲ್ಲಿದ್ದಾರೆ.
ವಡಿವೇಲು ವರ್ತನೆ ಬಗ್ಗೆ ನಟಿಯರ ಅಸಮಾಧಾನ
ಇದೀಗ ವಿಚಾರ ಏನೆಂದರೆ, ಇದೇ ವಡಿವೇಲು ಬಗ್ಗೆ ತಮಿಳಿನ ಒಂದಷ್ಟು ನಟಿಯರು ಅಸಮಾಧಾನ ಹೊರಹಾಕಿದ್ದಾರೆ. ಆಗಿನ ದಿನಗಳಲ್ಲಿ ಸಿನಿಮಾ ಅವಕಾಶಗಳು ಸಿಕ್ಕಾಗ ಇದೇ ವಡಿವೇಲು ತಪ್ಪಿಸಿದ್ದರು ಎಂದು ತಮಿಳಿನ ನಟಿ ಆರೋಪಿಸಿದ್ದಾರೆ. ಆ ಪೈಕಿ ಶಕೀಲಾ ಸಹ ತಮ್ಮ ಹಳೇ ದಿನಗಳನ್ನು ಅವರ ಜತೆಗೆ ನೆನಪು ಮಾಡಿಕೊಂಡಿದ್ದಾರೆ. ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ತಮಿಳು ನಟಿ ಪ್ರೇಮಾ ಪ್ರಿಯಾ ಅವರ ಸಂದರ್ಶನ ಮಾಡುತ್ತಿದ್ದ ವೇಳೆ ಈ ವಿಚಾರ ಚರ್ಚೆಯಾಗಿದೆ.
ವಡಿವೇಲು ವಿರುದ್ಧ ಪ್ರೇಮ ಪ್ರಿಯಾ ದೂರೇನು?
"ವಡಿವೇಲು ಅವರು ನನ್ನ ಸಿನಿಮಾ ಬೆಳವಣಿಗೆಯನ್ನು ನಿಲ್ಲಿಸಿದವರು. ನನಗೆ ಚಿತ್ರಗಳಲ್ಲಿ ನಟಿಸಲು ಸಾಕಷ್ಟು ಅವಕಾಶಗಳು ಬಂದವು. ಆಗ ನಾನು ಶೂಟಿಂಗ್ಗೆ ಹೋದರೆ, ಆ ಹುಡುಗಿ ಬೇಡ ಎಂದು ನಿರ್ದೇಶಕರಿಗೆ ಹೇಳಿ ನನ್ನನ್ನು ವಾಪಾಸ್ ಕಳುಹಿಸುತ್ತಿದ್ದರು. ಒಂದಲ್ಲ ಎರಡಲ್ಲ ಹಲವು ಸಿನಿಮಾಗಳಿಗೆ ಹೀಗೇ ಮುಂದುವರಿಯಿತು. ಇದೇ ವಿಚಾರವನ್ನು ನಾನು ಯೂಟ್ಯೂಬ್ ಸಂದರ್ಶನದಲ್ಲಿ ಹೇಳಿದಾಗ ಕ್ಷಮೆಯಾಚಿಸಬೇಕು ಎಂಬ ಅವರ ಸಹಚರರಿಂದ ಬೆದರಿಕೆ ಕರೆಗಳು ಬಂದವು. ನಾನು ನನ್ನ ಅನುಭವವನ್ನು ಹೇಳಿದ್ದೇನೆ. ಅದೆಲ್ಲವೂ ಸತ್ಯ, ನಾನೇಕೆ ಕ್ಷಮೆ ಕೇಳಲಿ ಎಂದಿದ್ದೆ" ಎಂದರು ಪ್ರೇಮ ಪ್ರಿಯಾ.
ವಡಿವೇಲು ಬಗ್ಗೆ ನನಗೆ ಎಲ್ಲವೂ ಗೊತ್ತು
ಬಳಿಕ ಆಗ ನಿಮಗೆ ಮೀಟೂ ರೀತಿಯ ಸಮಸ್ಯೆ ಎದುರಾಯಿತೆ ಎಂಬ ಪ್ರಶ್ನೆ ಮುಂದಿಟ್ಟ ಶಕೀಲಾ, "ಇಲ್ಲ ಅದು ಮೀಟೂ ಸಮಸ್ಯೆಯಲ್ಲ. ಬೇರೆಯದೇ ಸಮಸ್ಯೆ" ಎನ್ನುತ್ತಿದ್ದಂತೆ ಮಧ್ಯ ಪ್ರವೇಶಿಸಿದ ಶಕೀಲಾ, "ನನಗೆ ವಡಿವೇಲು ಹೇಗೆ ಎಂಬುದು ಚೆನ್ನಾಗಿ ಗೊತ್ತು. ಶೂಟಿಂಗ್ ಸೆಟ್ನಲ್ಲಿ ಅವರು ಹೇಗಿರುತ್ತಿದ್ದರು ಎಂಬುದನ್ನೂ ನಾನು ಬಲ್ಲೆ. ಅವರು ಏನು ಹೇಳುತ್ತಾರೋ ಅದಕ್ಕೆ ಯೆಸ್ ಎಂದಷ್ಟೇ ನಾವು ಹೇಳಬೇಕು. ಬೇರೆ ಮಾತು ಹೇಳುವ ಹಾಗಿರಲಿಲ್ಲ. ಶೂಟಿಂಗ್ ಸೆಟ್ನಲ್ಲಿ ವಡಿವೇಲು ಹೇಗಿರುತ್ತಿದ್ದರು? ನಟಿಯರ ಜತೆಗೆ ಅವರ ವರ್ತನೆ ಹೇಗಿರುತ್ತಿತ್ತು? ಒಬ್ಬ ನಟಿ ಅವಳ ಬಳಿ ಸಿಕ್ಕರೆ ಏನೆನೆಲ್ಲ ಕೇಳುತ್ತಿದ್ದ ಎಂಬುದು ನನಗೂ ಅನುಭವವಾಗಿದೆ" ಎಂದಿದ್ದಾರೆ ಶಕೀಲಾ.
ಮನರಂಜನೆ ಕುರಿತು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ