Shakila: ದುಡ್ಡಿಗಾಗಿ ಪರ ಪುರುಷನ ಜತೆ ಮಲಗಿಸಿದಳು, ಗಿರಾಕಿಗಳನ್ನು ಹುಡುಕಿದಳು; ಅಮ್ಮ ಎಲ್ಲರ ಪಾಲಿಗೆ ದೇವರು, ನನ್ನ ಪಾಲಿಗಲ್ಲ; ಶಕೀಲಾ-kollywood news ex adult movie actress shakila talks about her mother shakeela interview tamil movie news mnk ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  Shakila: ದುಡ್ಡಿಗಾಗಿ ಪರ ಪುರುಷನ ಜತೆ ಮಲಗಿಸಿದಳು, ಗಿರಾಕಿಗಳನ್ನು ಹುಡುಕಿದಳು; ಅಮ್ಮ ಎಲ್ಲರ ಪಾಲಿಗೆ ದೇವರು, ನನ್ನ ಪಾಲಿಗಲ್ಲ; ಶಕೀಲಾ

Shakila: ದುಡ್ಡಿಗಾಗಿ ಪರ ಪುರುಷನ ಜತೆ ಮಲಗಿಸಿದಳು, ಗಿರಾಕಿಗಳನ್ನು ಹುಡುಕಿದಳು; ಅಮ್ಮ ಎಲ್ಲರ ಪಾಲಿಗೆ ದೇವರು, ನನ್ನ ಪಾಲಿಗಲ್ಲ; ಶಕೀಲಾ

Shakila: ಶಕೀಲಾ ಹುಟ್ಟುತ್ತಲೇ ಶ್ರೀಮಂತ ಕುಟುಂಬದಲ್ಲಿ ಜನಿಸಿದವರಲ್ಲ. ಹಣಕಾಸಿನ ಸಮಸ್ಯೆ ಎದುರಿಸುತ್ತಲೇ ಬಂದವರು. ಆದರೆ ಅದೇ ಹಣಕ್ಕಾಗಿ ಶಕೀಲಾ ಅವರನ್ನು ಪರಪುರುಷನ ಜತೆ ಮಲಗುವಂತೆ ಕಳುಹಿಸಿದ್ದೇ ಅವರ ತಾಯಿ. ಈ ವಿಚಾರವನ್ನು ಸ್ವತಃ ಅವರೇ ತಮ್ಮ ಬಯೋಗ್ರಾಫಿಯಲ್ಲಿ ಬರೆದುಕೊಂಡಿದ್ದಾರೆ.

Shakila: ದುಡ್ಡಿಗಾಗಿ ಪರ ಪುರುಷನ ಜತೆ ಮಲಗಿಸಿದಳು, ಗಿರಾಕಿಗಳನ್ನು ಹುಡುಕಿದಳು; ಅಮ್ಮ ಎಲ್ಲರ ಪಾಲಿಗೆ ದೇವರು, ನನ್ನ ಪಾಲಿಗಲ್ಲ; ಶಕೀಲಾ
Shakila: ದುಡ್ಡಿಗಾಗಿ ಪರ ಪುರುಷನ ಜತೆ ಮಲಗಿಸಿದಳು, ಗಿರಾಕಿಗಳನ್ನು ಹುಡುಕಿದಳು; ಅಮ್ಮ ಎಲ್ಲರ ಪಾಲಿಗೆ ದೇವರು, ನನ್ನ ಪಾಲಿಗಲ್ಲ; ಶಕೀಲಾ (Image/ Open Magzine)

Shakila about her Mother: ವಯಸ್ಕ ಸಿನಿಮಾಗಳ ಮಾಜಿ ನೀಲಿ ತಾರೆ ಶಕೀಲಾ, ಇಂದಿಗೂ ಸಿನಿಮಾರಂಗದಲ್ಲಿ ಸಕ್ರಿಯರಾಗಿದ್ದಾರೆ. ವಯಸ್ಕ ಸಿನಿಮಾಗಳನ್ನು ಬದಿಗಿರಿಸಿ, ತೆಲುಗು, ತಮಿಳು, ಮಲಯಾಳಂ, ಕನ್ನಡ ಸಿನಿಮಾಗಳಲ್ಲಿ ಆಗಾಗ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುತ್ತಾರೆ. ಒಂದು ಕಾಲದಲ್ಲಿ ಇಡೀ ಚಿತ್ರೋದ್ಯಮವನ್ನೇ ಆಳಿದ್ದ ಈ ಮೋಹನಾಂಗಿ, ದೊಡ್ಡ ದೊಡ್ಡ ಸಿನಿಮಾ ಸ್ಟಾರ್‌ಗಳಿಗೇ ಪೈಪೋಟಿ ನೀಡಿದ್ದರು. 80- 90ರ ಕಾಲಘಟ್ಟದಲ್ಲಿ ಆಕೆಯ ಅಡಲ್ಟ್‌ ಸಿನಿಮಾ ಬಿಡುಗಡೆ ಆಗುತ್ತಿದೆ ಎಂದರೆ, ಮಲಯಾಳಂನ ಘಟಾನುಘಟಿ ನಟರಾದ ಮಮ್ಮುಟ್ಟಿ, ಮೋಹನ್‌ಲಾಲ್‌ ಸಿನಿಮಾಗಳೇ ಪೋಸ್ಟ್‌ಪೋನ್‌ ಆಗುತ್ತಿದ್ದವು.

ಆದರೆ, ಅದೇ ನಟಿಯ ಬದುಕು ಹೂವಿನ ಹಾಸಿಗೆ ಆಗಿರಲಿಲ್ಲ. ಬದಲಿಗೆ ಅದು ಮುಳ್ಳಿನ ಹಾಸಿಗೆಯಾಗಿತ್ತು! ಮೇಲ್ನೋಟಕ್ಕೆ ಸ್ಟಾರ್‌ ನಟಿಯೆನಿಸಿದರೂ, ಮಾನಸಿಕವಾಗಿ ನೆಮ್ಮದಿ ಇರಲಿಲ್ಲ. ಹಣ ಗಳಿಸಬೇಕು ಎಂಬ ಒಂದೇ ಕಾರಣಕ್ಕೆ, ವಯಸ್ಕ ಸಿನಿಮಾಗಳಲ್ಲಿ ಮುಂದುವರಿದರು. ಅಷ್ಟೇ ಚೆನ್ನಾಗಿ ಹಣವನ್ನೂ ಗಳಿಸಿದರು. ಅದೆಲ್ಲವೂ ನಟಿಯ ಕೈ ಸೇರಿತೆ? ಇಲ್ಲ ಎಂದು ಸ್ವತಃ ಶಕೀಲಾ ಹೇಳಿಕೊಂಡಿದ್ದಾರೆ. ಆ ಕಾಲದಲ್ಲಿ ಶಕೀಲಾಗೆ ಹಣದ ಹೊಳೆಯೇ ಹರಿದು ಬರುತ್ತಿತ್ತು. ಒಂದು ಸಿನಿಮಾಕ್ಕೆ 3 ಲಕ್ಷ ಸಂಭಾವನೆ ಕೊಡುತ್ತಿದ್ದರು. ಆ ಸಮಯದಲ್ಲಿ ಅದು 3 ಕೋಟಿಗೆ ಸಮವಾಗಿತ್ತು. ಹಾಗಾದರೆ, ಅಂದು ದುಡಿದ ದುಡ್ಡು ಎಲ್ಲಿ ಹೋಯಿತು? ಆ ದುಡ್ಡು ನನ್ನಕ್ಕನ ಬಳಿ ಇದೆ ಎಂಬುದು ಶಕೀಲಾ ಮಾತು.

ತನ್ನ ಬಯೋಗ್ರಾಫಿಯಲ್ಲಿ ಈ ಘಟನೆ ಉಲ್ಲೇಖಿಸಿದ ಶಕೀಲಾ

ಆದರೆ, ನಿಮಗೆ ಗೊತ್ತಿರಲಿ, ಶಕೀಲಾ ಅಡಲ್ಟ್‌ ಸಿನಿಮಾ ಲೋಕಕ್ಕೆ ಬರಲು ನೇರ ಕಾರಣವೇ ಅವರ ತಾಯಿ. ಹಾಗಂತ ಸ್ವತಃ ಶಕೀಲಾ ಅವರೇ ತಮ್ಮ ಬಯೋಗ್ರಾಫಿಯಲ್ಲಿ ಬರೆದುಕೊಂಡಿದ್ದಾರೆ. ಮನೆಯಲ್ಲಿ ಹಣಕಾಸಿನ ಸಮಸ್ಯೆ ಇದ್ದ ಕಾರಣಕ್ಕೆ, ಪರಪುರುಷನ ಜತೆಗೂ ಮಲಗುವಂತೆ ಹೇಳಿದ್ದೂ ಅವರ ಅಮ್ಮನೇ ಅಂತೆ. ಈ ವಿಚಾರವನ್ನು ಇತ್ತೀಚೆಗಷ್ಟೇ ನಡೆದ ಸಂದರ್ಶನದಲ್ಲಿ ಅವರೇ ಹೇಳಿಕೊಂಡಿದ್ದಾರೆ. ಹೀಗಿದೆ ಶಕೀಲಾ ಮಾತು.

ಪರಪುರುಷನ ಜತೆ ಮಲಗಿಸಿದ್ದೇ ನನ್ನಮ್ಮ..

"ತಾಯಿಗೆ ಕಣ್ಣಿಗೆ ತನ್ನ ಎಲ್ಲ ಮಕ್ಕಳೂ ಒಂದೇ. ಆದರೆ ಚಿಕ್ಕಂದಿನಿಂದಲೇ ನನ್ನನ್ನು ಬೇರೆ ರೀತಿಯಲ್ಲಿಯೇ ಟ್ರೀಟ್‌ ಮಾಡುತ್ತಿದ್ದಳು. ಅದು ನನ್ನ ಗಮನಕ್ಕೂ ಬಂದಿತ್ತು. ಕೈತುಂಬ ಹಣ ಗಳಿಸುತ್ತಿರುವಾಗಲೂ ಅದು ಹಾಗೆಯೇ ಮುಂದುವರಿದಿತ್ತು. ನಾನು ಆಗಿನ್ನೂ ಸಿನಿಮಾಕ್ಕೆ ಬಂದಿರಲಿಲ್ಲ. ಒಂದಷ್ಟು ಸಿನಿಮಾಗಳ ಮಾತುಕತೆ ನಡೆದಿತ್ತು ಅಷ್ಟೇ. ಆ ಸಮಯದಲ್ಲಿ ಮನೆಯಲ್ಲಿ ಹಣಕಾಸಿನ ಸಮಸ್ಯೆ ಇತ್ತು. ಹಾಗಾಗಿಯೇ ಹೊಟೇಲ್‌ಗೆ ಕರೆದೊಯ್ದು, ಪರಪುರುಷನ ಜತೆ ಮಲಗು ಎಂದು ಕೋಣೆಗೆ ಕಳಿಸಿದ್ದಳು"

ಮುಂದುವರಿದು, "ನಾನು ಕೋಣೆವೊಳಗೆ ಹೋದೆ ನಿಜ. ಆದರೆ, ನನ್ನ ಪಾಲಿಗೆ ಆ ಪ್ರಯತ್ನವೇ ಫೇಲ್‌ ಆಯಿತು. ಅಮ್ಮನ ಪಾಲಿಗೆ ಪಾಸ್‌ ಆಯಿತು. ಅಂದರೆ, ಒಳಗಿದ್ದ ವ್ಯಕ್ತಿಯ ಬಳಿ ನನ್ನ ಸಮಸ್ಯೆ ಎಲ್ಲವನ್ನೂ ಹೇಳಿಕೊಂಡೆ. ಪ್ಲೀಸ್‌ ಪ್ಲೀಸ್‌ ಎಂದು ಬೇಡಿಕೊಂಡೆ. ಆಗ ಆ ವ್ಯಕ್ತಿ, ನಾನು ನಿನಗೀಗ ಹಣ ನೀಡುವೆ. ನಿನ್ನ ಅಮ್ಮನ ಬಳಿಯೂ ಎಲ್ಲವೂ ಆಯಿತು ಎಂದೇ ಹೇಳುವೆ. ಆದರೆ, ನಾನು ಮುಂದಿನ ಸಲ ನಿನ್ನನ್ನು ಭೇಟಿಯಾಗಲು ಬಂದಾಗ ನೀನು ವರ್ಜಿನ್‌ (ಕನ್ಯೆ) ಆಗಿಯೇ ಇರಬೇಕು" ಎಂದಿದ್ದ"

ಅದಕ್ಕೆ ನಾನೂ ಸಹ ಹ್ಞೂಂ ಎಂದಿದ್ದೆ. ಅಚ್ಚರಿ ಏನೆಂದರೆ, ಮೊದಲನೇಯದ್ದು ಮುಗೀತು ಎನ್ನುತ್ತಿದ್ದಂತೆ, ಎರಡನೇ ಗಿರಾಕಿ ಹುಡುಕಲು ಅಮ್ಮ ಶುರು ಮಾಡಿದಳು. ಅದು ನಿಧಾನಕ್ಕೆ ಹೆಚ್ಚಾಗುತ್ತಲೇ ಹೋಯಿತು. ಆದರೆ, ಯಾವಾಗ ಸಿನಿಮಾ ಅವಕಾಶಗಳು ಹೆಚ್ಚಾಗುತ್ತ ಹೋದವೋ ಇವೆಲ್ಲವೂ ಕಡಿಮೆ ಆದವು. ಇನ್ನೊಂದು ವಿಚಾರ ಏನೆಂದರೆ, ಯಾರೊಂದಿಗೆ ನಾನು ಕನ್ಯೆಯಾಗಿರಬೇಕು ಎಂದು ಬಯಸಿದ್ದೆನೋ, ಆ ವ್ಯಕ್ತಿ ನನ್ನ ಜತೆಗಿದ್ದಾಗ ಆ ಕನ್ಯತ್ವ ನನ್ನ ಬಳಿ ಇರಲಿಲ್ಲ. ಆಗಲೇ ನಾನು ಅದನ್ನು ಕಳೆದುಕೊಂಡಿದ್ದೆ. ಅದು ಬೇಸರದ ಸಂಗತಿ " ಎಂದು ಐಡ್ರೀಮ್‌ ವುಮನ್‌ (iDream Women) ಯೂಟ್ಯೂಬ್‌ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಶಕೀಲಾ ಹೇಳಿಕೊಂಡಿದ್ದಾರೆ.

mysore-dasara_Entry_Point