ಕನ್ನಡ ಸುದ್ದಿ  /  ಮನರಂಜನೆ  /  Indian 2 Trailer: ಕಮಲ್‌ ಹಾಸನ್‌ ಫೈಟಿಂಗ್‌, ಸಿದ್ಧಾರ್ಥ ಹೋರಾಟ; ಸಾಹಸ-ದೇಶಭಕ್ತಿಯ ಇಂಡಿಯನ್‌ 2 ಟ್ರೇಲರ್‌ನಲ್ಲಿ ಏನೇನಿದೆ ನೋಡಿ

Indian 2 trailer: ಕಮಲ್‌ ಹಾಸನ್‌ ಫೈಟಿಂಗ್‌, ಸಿದ್ಧಾರ್ಥ ಹೋರಾಟ; ಸಾಹಸ-ದೇಶಭಕ್ತಿಯ ಇಂಡಿಯನ್‌ 2 ಟ್ರೇಲರ್‌ನಲ್ಲಿ ಏನೇನಿದೆ ನೋಡಿ

Indian 2 trailer: ಇಂಡಿಯನ್‌ 2 ಸಿನಿಮಾದ ಟ್ರೇಲರ್‌ ಬಿಡುಗಡೆಯಾಗಿದೆ. ಈಗಾಗಲೇ ಅನ್ನಿಯನ್‌, 2.0 ಸಿನಿಮಾಗಳ ಮೂಲಕ ಸಿನಿಪ್ರೇಕ್ಷಕರ ಮನಗೆದ್ದ ಎಸ್‌. ಶಂಕರ್‌ ಅವರು ಇದೀಗ ಇಂಡಿಯನ್‌ 2 ಸಿನಿಮಾದ ಮೂಲಕ ಪ್ರೇಕ್ಷಕರಿಗೆ ಹೊಸ ಅನುಭವ ನೀಡಲು ಮುಂದಾಗಿದ್ದಾರೆ. ಎಸ್ ಶಂಕರ್ ಮತ್ತು ಕಮಲ್ ಹಾಸನ್ ಅವರ 1996 ರ ಇಂಡಿಯನ್‌ ಸಿನಿಮಾದ ಮುಂದುವರೆದ ಭಾಗ ಇದಾಗಿದೆ.

ಇಂಡಿಯನ್ 2 ಟ್ರೈಲರ್
ಇಂಡಿಯನ್ 2 ಟ್ರೈಲರ್

ಬೆಂಗಳೂರು: ಇಂಡಿಯನ್‌ ಸಿನಿಮಾದ ಮೊದಲ ಭಾಗ ಬಿಡುಗಡೆಯಾದ 18 ವರ್ಷಗಳ ತರುವಾಯ ನಿರ್ದೇಶಕ ಎಸ್ ಶಂಕರ್ ಮತ್ತು ತಮಿಳು ಸೂಪರ್ ಸ್ಟಾರ್ ಕಮಲ್ ಹಾಸನ್ ತಮ್ಮ 1996 ರ ಕಲ್ಟ್ ವಿಜಿಲೆನ್ಸ್ ಚಿತ್ರದ ಮುಂದುವರಿದ ಭಾಗ ಬಿಡುಗಡೆ ಮಾಡಲು ಸಜ್ಜಾಗಿದ್ದಾರೆ. ಈ ಎರಡನೇ ಭಾಗವು ಎರಡನೇ ಭಾಗವೂ ಆಕ್ಷನ್ ಮತ್ತು ದೇಶಭಕ್ತಿಯಿಂದ ತುಂಬಿರುವ ಸುಳಿವು ಟ್ರೇಲರ್‌ನಿಂದ ದೊರಕಿದೆ. ಇದರಲ್ಲಿ ಸಿದ್ಧಾರ್ಥ್ ಮತ್ತು ರಾಕುಲ್ ಪ್ರೀತ್ ಕೂಡ ನಟಿಸಿದ್ದಾರೆ. ಈಗಾಗಲೇ ಅನ್ನಿಯನ್‌, 2.0 ಸಿನಿಮಾಗಳ ಮೂಲಕ ಸಿನಿಪ್ರೇಕ್ಷಕರ ಮನಗೆದ್ದ ಎಸ್‌. ಶಂಕರ್‌ ಅವರು ಇದೀಗ ಇಂಡಿಯನ್‌ 2 ಸಿನಿಮಾದ ಮೂಲಕ ಪ್ರೇಕ್ಷಕರಿಗೆ ಹೊಸ ಅನುಭವ ನೀಡಲು ಮುಂದಾಗಿದ್ದಾರೆ.

ಇಂಡಿಯನ್‌ 2 ಟ್ರೈಲರ್ ನಲ್ಲಿ ಏನಿದೆ?

ದೇಶಾದ್ಯಂತ ನಡೆಯುತ್ತಿರುವ ಅನೇಕ ಅಪರಾಧಗಳು ಮತ್ತು ಹಗರಣಗಳೊಂದಿಗೆ ಟ್ರೈಲರ್ ಪ್ರಾರಂಭವಾಗುತ್ತದೆ. ನಿರುದ್ಯೋಗ, ಭಾರಿ ತೆರಿಗೆ ಹೊರೆಗಳು ಮತ್ತು ಮೂಲಭೂತ ಸೌಲಭ್ಯಗಳ ಕೊರತೆಯಂತಹ ಭಾರತೀಯರು ಪ್ರಸ್ತುತ ಎದುರಿಸುತ್ತಿರುವ ಸಮಸ್ಯೆಗಳನ್ನು ವಿವರಿಸುವ ಪ್ರತಿಭಟನೆಗಳು ಕಾಣಿಸುತ್ತಿವೆ. ಇದಾದ ಬಳಿಕ ಸಿದ್ಧಾರ್ಥ್ ಪಾತ್ರವು ಸಮಸ್ಯೆಗಳನ್ನು ಬಗೆಹರಿಸಲು ಏನು ಮಾಡುತ್ತಿದ್ದೀರಿ? ಇದರಿಂದ ಸಮಸ್ಯೆ ಬಗೆಹರಿಯಬಹುದೇ? ಎಂದೆಲ್ಲ ಪ್ರಶ್ನಿಸುತ್ತಾರೆ. ಇದೇ ಸಮಯದಲ್ಲಿ ಅವರು ತಮ್ಮ ಬಾಲ್ಯದ ನಾಯಕ ಸೇನಾಪತಿ (ಕಮಲ್ ಹಾಸನ್) ಅವರನ್ನು ನೆನಪಿಸಿಕೊಳ್ಳುತ್ತಾರೆ.

ಟ್ರೆಂಡಿಂಗ್​ ಸುದ್ದಿ

ಶೀಘ್ರದಲ್ಲೇ ಇಂಡಿಯನ್‌ ಎಂಟ್ರಿಯಾಗುತ್ತದೆ. ದೇಶವನ್ನು ಹಾಳು ಮಾಡುತ್ತಿರುವ ಶ್ರೀಮಂತ ಉದ್ಯಮಿಗಳು ಮತ್ತು ಇತರರರಿಗೆ ತನ್ನ ಸಾಹಸ ತೋರಿಸುತ್ತಾರೆ. ಶರ್ಟ್ ಲೆಸ್ ಆಕ್ಷನ್ ದೃಶ್ಯಗಳು ಕಾಣಿಸುತ್ತವೆ. ವಿಲನ್‌ಗಳ ಜತೆ ಹೋರಾಡುತ್ತಾರೆ. ಸಿದ್ಧಾರ್ಥನ ಪಾತ್ರವು ಸೇನಾಪತಿಗೆ ಎದುರಾಗುತ್ತದೆ. ತನ್ನ ಸ್ವಂತ ಪ್ರಾಮಾಣಿಕತೆಯ ಆದರ್ಶಗಳಿಗೆ ವಿರುದ್ಧವಾಗಿ ಹೋಗುತ್ತಿದ್ದೇನೆ ಎಂದು ಸಿದ್ಧಾರ್ಥ್‌ ಸೇನಾಪತಿಗೆ ಹೇಳುತ್ತಾನೆ. ದೇಶವನ್ನು ಉಳಿಸಲು ಹೋರಾಡಬೇಕು. ಗಾಂಧಿವಾದಿ ಮಾರ್ಗವನ್ನು ಅನುಸರಿಸಬಹುದು ಎಂದು ಸೇನಾಪತಿ ಹೇಳುತ್ತಾರೆ. ಆದರೆ, ಸೇನಾಪತಿಯು ಸುಭಾಷ್ ಚಂದ್ರ ಬೋಸ್ ಅವರ ಮಾರ್ಗವನ್ನು ಅನುಸರಿಸುತ್ತಾರೆ.

ಈ ಚಿತ್ರದಲ್ಲಿ ರಾಕುಲ್ ಪ್ರೀತ್ ಸಿಂಗ್, ಕಾಜಲ್ ಅಗರ್ವಾಲ್, ಎಸ್.ಜೆ.ಸೂರ್ಯ, ಪ್ರಿಯಾ ಭವಾನಿ ಶಂಕರ್, ನೆಡುಮುಡಿ ವೇಣು, ವಿವೇಕ್, ಕಾಳಿದಾಸ್ ಜಯರಾಮ್, ಗುಲ್ಶನ್ ಗ್ರೋವರ್, ಸಮುದ್ರಕಣಿ, ಬಾಬಿ ಸಿಂಹ, ಬ್ರಹ್ಮಾನಂದಂ, ವೆನ್ನೆಲಾ ಕಿಶೋರ್, ಜಾಕಿರ್ ಹುಸೇನ್, ಪಿಯೂಷ್ ಮಿಶ್ರಾ, ಗುರು ಸೋಮಸುಂದರಂ, ದೆಹಲಿ ಗಣೇಶ್, ಜಯಪ್ರಕಾಶ್, ಮನೋಬಾಲಾ ಮತ್ತು ಅಶ್ವಿನಿ ತಂಗರಾಜ್ ಮುಂತಾದವರು ನಟಿಸಿದ್ದಾರೆ.

ಲೈಕಾ ಪ್ರೊಡಕ್ಷನ್ಸ್ ಮತ್ತು ರೆಡ್ ಜೈಂಟ್ ಮೂವೀಸ್ ನಿರ್ಮಿಸಿರುವ ಇಂಡಿಯನ್ 2 ಜುಲೈ 12 ರಂದು ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಕನ್ನಡದಲ್ಲಿ ಬಿಡುಗಡೆಯಾಗುತ್ತಿಲ್ಲ. ಈಗಾಗಲೇ ಟ್ರೇಲರ್‌ ಕೂಡ ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಬಿಡುಗಡೆಯಾಗಿದೆ. ಕನ್ನಡಿಗರು ಇತರೆ ಭಾಷೆಗಳಲ್ಲಿಯೇ ನೋಡಬೇಕಿದೆ.

ಇಂಡಿಯನ್ 2 ಗಿಂತ ಮೊದಲು, ಕಮಲ್ ಹಾಸನ್ ನಾಗ್ ಅಶ್ವಿನ್ ಅವರ ಡಿಸ್ಟೋಪಿಯನ್ ವೈಜ್ಞಾನಿಕ ಫ್ಯಾಂಟಸಿ ಚಿತ್ರ ಕಲ್ಕಿ 2898 ಎಡಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ, ಇದು ಈ ಗುರುವಾರ ಅಂದರೆ ನಾಳೆ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. 1987 ರಲ್ಲಿ ತೆರೆಕಂಡ ನಾಯಕನ್ ಚಿತ್ರದ 37 ವರ್ಷಗಳ ನಂತರ ಕಮಲ್ ಅವರು ಮಣಿರತ್ನಂ ಅವರೊಂದಿಗೆ ಥಗ್ ಲೈಫ್ ಎಂಬ ಆಕ್ಷನ್ ಚಿತ್ರಕ್ಕಾಗಿ ಮತ್ತೆ ಒಂದಾಗಲಿದ್ದಾರೆ.