Indian 2 Twitter Review: ಹೊಸದೇನೂ ಕಾಣದ ಹಳೇ ಸರಕು!; ಇಂಡಿಯನ್‌ 2 ಚಿತ್ರವನ್ನು ಮುಳುಗುವ ಹಡಗಿಗೆ ಹೋಲಿಸಿದ ಪ್ರೇಕ್ಷಕ
ಕನ್ನಡ ಸುದ್ದಿ  /  ಮನರಂಜನೆ  /  Indian 2 Twitter Review: ಹೊಸದೇನೂ ಕಾಣದ ಹಳೇ ಸರಕು!; ಇಂಡಿಯನ್‌ 2 ಚಿತ್ರವನ್ನು ಮುಳುಗುವ ಹಡಗಿಗೆ ಹೋಲಿಸಿದ ಪ್ರೇಕ್ಷಕ

Indian 2 Twitter Review: ಹೊಸದೇನೂ ಕಾಣದ ಹಳೇ ಸರಕು!; ಇಂಡಿಯನ್‌ 2 ಚಿತ್ರವನ್ನು ಮುಳುಗುವ ಹಡಗಿಗೆ ಹೋಲಿಸಿದ ಪ್ರೇಕ್ಷಕ

Indian 2 Twitter Review: ಕಮಲ್‌ ಹಾಸನ್‌- ಶಂಕರ್‌ ಕಾಂಬಿನೇಷನ್‌ನ ಇಂಡಿಯನ್‌ 2 ಸಿನಿಮಾ ಇಂದು (ಜುಲೈ 12) ಬಿಡುಗಡೆಯಾಗಿದೆ. ಚಿತ್ರ ನೋಡಿದ ಫ್ಯಾನ್ಸ್‌ ಹಬ್ಬ ಮಾಡುತ್ತಿದ್ದರೆ, ಇನ್ನು ಕೆಲವರು ಚಿತ್ರದ ಅಸಲಿ ವಿಚಾರಗಳನ್ನು, ಬೇಸರವನ್ನು ಸೋಷಿಯಲ್‌ ಮೀಡಿಯಾಗಳಲ್ಲಿ ಹೊರಹಾಕುತ್ತಿದ್ದಾರೆ.

Indian 2 Twitter Review: ಹೊಸದೇನೂ ಕಾಣದ ಹಳೇ ಸರಕು; ಇಂಡಿಯನ್‌ 2 ಚಿತ್ರವನ್ನು ಮುಳುಗುವ ಹಡಗಿಗೆ ಹೋಲಿಸಿದ ಪ್ರೇಕ್ಷಕ
Indian 2 Twitter Review: ಹೊಸದೇನೂ ಕಾಣದ ಹಳೇ ಸರಕು; ಇಂಡಿಯನ್‌ 2 ಚಿತ್ರವನ್ನು ಮುಳುಗುವ ಹಡಗಿಗೆ ಹೋಲಿಸಿದ ಪ್ರೇಕ್ಷಕ

Indian 2 Twitter Review: ಉಳಗನಾಯಗನ್‌ ಕಮಲ್ ಹಾಸನ್ ಅವರ ಬಹು ನಿರೀಕ್ಷಿತ 'ಇಂಡಿಯನ್ 2' ಚಿತ್ರ ಅಂತಿಮವಾಗಿ ಇಂದು (ಜುಲೈ 12) ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ಹೆಚ್ಚು ಪ್ರಚಾರದ ಗೀಳಿಗೆ ಬೀಳದ ಈ ಸಿನಿಮಾತಂಡ, ಟ್ರೇಲರ್‌ ಮೂಲಕವೇ ಸದ್ದು ಮಾಡಿತ್ತು. 26 ವರ್ಷಗಳ ಹಿಂದೆ ಮೂಡಿಬಂದ ಇಂಡಿಯನ್‌ ಚಿತ್ರದ ಸೀಕ್ವೆಲ್‌ ಎಂಬ ಕಾರಣಕ್ಕೂ ಹೈಪ್‌ ತುಸು ಹೆಚ್ಚೇ ಸೃಷ್ಟಿಯಾಗಿತ್ತು. ಅದರಂತೆ ಅಮೆರಿಕ ಮತ್ತು ಭಾರತದಲ್ಲಿ ಏಕಕಾಲದಲ್ಲಿ ಈ ಸಿನಿಮಾ ರಿಲೀಸ್‌ ಆಗಿದೆ. ಅಭಿಮಾನಿಗಳು ಕೂಡ ಸೋಷಿಯಲ್‌ ಮೀಡಿಯಾಗಳಲ್ಲಿ ಸಿನಿಮಾ ಬಗ್ಗೆ ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಹಂಚಿಕೊಳ್ಳಲಾರಂಭಿಸಿದ್ದಾರೆ. ಕಮಲ್ ಹಾಸನ್ ಅವರ ಈ ಚಿತ್ರ ಪ್ರೇಕ್ಷಕನಿಗೆ ಇಷ್ಟವಾಯ್ತಾ?

ಪ್ರೇಕ್ಷಕರಿಗೆ ಇಷ್ಟವಾಯ್ತಾ ಇಂಡಿಯನ್‌ 2

ಬಿಡುಗಡೆಗೂ ಮುನ್ನವೇ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು ಇಂಡಿಯನ್‌ 2 ಸಿನಿಮಾ. ಶೂಟಿಂಗ್‌ ಹಂತದಲ್ಲಿಯೂ ಸಾಕಷ್ಟು ಸದ್ದು ಸುದ್ದಿಯಲ್ಲಿತ್ತು. ಇದೀಗ 'ಇಂಡಿಯನ್ 2' ಚಿತ್ರ ಅದೆಲ್ಲವನ್ನು ದಾಟಿ ಇಂದು ತೆರೆಗೆ ಬಂದಿದೆ. ಮುಂಗಡ ಬುಕಿಂಗ್‌ನಲ್ಲೂ ದಾಖಲೆ ಬರೆದಿತ್ತು ಶಂಕರ್‌ ನಿರ್ದೇಶನದ ಈ ಸಿನಿಮಾ. ಅದರಂತೆ ಬಾಕ್ಸ್‌ ಆಫೀಸ್‌ನಲ್ಲಿಯೂ ಅದ್ಭುತಗಳನ್ನೇ ಸೃಷ್ಟಿಸಲಿದೆ ಎಂಬ ಸುಳಿವೂ ಕಂಡುಬರುತ್ತಿದೆ. ಈ ನಡುವೆ ಸಿನಿಮಾ ಬಗ್ಗೆ ನೆಗೆಟಿವ್‌ ಕಾಮೆಂಟ್‌ಗಳೂ ಹೆಚ್ಚಾಗಿವೆ. ಸಿನಿಮಾ ನೋಡಿದವರು ಸಾಮಾಜಿಕ ಜಾಲತಾಣಗಳಲ್ಲಿ ವಿಮರ್ಶೆಯನ್ನು ಹಂಚಿಕೊಂಡಿದ್ದಾರೆ. ಅವುಗಳನ್ನು ನೋಡಿದ ಮೇಲೆ ನಿರ್ದೇಶಕ ಶಂಕರ್ 'ಇಂಡಿಯನ್ 2' ವಿಚಾರದಲ್ಲಿ ಕೊಂಚ ಮಂಕಾದರೇ ಎಂದೆನಿಸುತ್ತಿದೆ.

ಇಂಡಿಯನ್‌ 2 ಇದೊಂದು ಮುಳುಗುವ ಹಡಗು

“ನಟ ಕಮಲ್ ಹಾಸನ್ ಕೂಡ ಈ ಮುಳುಗುತ್ತಿರುವ ಹಡಗನ್ನು (ಇಂಡಿಯನ್‌ 2) ಉಳಿಸಲು ಸಾಧ್ಯವಿಲ್ಲ. ಕಮಲ್‌ ಪಾತ್ರವು ಈ ಹಿಂದಿನ ಪಾತ್ರಗಳಂತೆಯೇ ಕಾಣಿಸುತ್ತಿದೆಯೇ ಹೊರತು ಹೊಸದೇನೂ ಕಾಣಿಸದು. ಪೋಷಕ ಕಲಾವಿದರ ಅಭಿನಯವೂ ಉತ್ತಮವಾಗಿಲ್ಲ. ಅವರಿಂದಲೂ ಏನೂ ಪ್ರಯೋಜನವಾಗಿಲ್ಲ ಎಂದು ಟ್ವಿಟ್ಟರ್‌ ಬಳಕೆದಾರರು ಇಂಡಿಯನ್‌ ಸಿನಿಮಾ ನೋಡಿ ತಮ್ಮ ವಿಮರ್ಶೆ ಹಂಚಿಕೊಂಡಿದ್ದಾರೆ.

ಚಿತ್ರದಲ್ಲಿ ಕಥೆಯೇ ಇಲ್ಲ

ಮತ್ತೊಬ್ಬರು, "ಇದು ಎವರೇಜ್‌ಗಿಂತ ಕೆಳಗಿರುವ ಚಿತ್ರ, ಇದರಲ್ಲಿ ಯಾವುದೇ ಕಥೆಯಿಲ್ಲ, ಇದು ಇಂಡಿಯನ್ 3 ಸೆಟ್‌ನಂತೆಯೇ ಇದೆ" ಎಂದು ಬರೆದಿದ್ದಾರೆ. ಅಂದರೆ, ಇಂಡಿಯನ್ 3 ಟ್ರೈಲರ್ ಅನ್ನು ಚಿತ್ರದ ಕೊನೆಯಲ್ಲಿ ಕಾಣಬಹುದಾಗಿದೆ. ಇಂಡಿಯನ್ 3 ಸಾಕಷ್ಟು ಆಸಕ್ತಿದಾಯಕವಾಗಿದೆ. ಆ ಚಿತ್ರಕ್ಕಾಗಿ ನಾವು ಕಾಯಬಹುದು ಎಂದು ನಾನು ಭಾವಿಸುತ್ತೇನೆ. ಇನ್ನು ಇಂಡಿಯನ್ 2 ಚಿತ್ರದ ಬಗ್ಗೆ ಹೇಳುವುದಾದರೆ, ಮೊದಲ ಭಾಗದಷ್ಟೂ ಗಟ್ಟಿ ಕಥೆ ಪಾರ್ಟ್‌ 2 ಚಿತ್ರದಲ್ಲಿ ಇಲ್ಲದಿರುವುದು ಅಚ್ಚರಿ ಮೂಡಿಸಿದೆ" ಎಂದಿದ್ದಾರೆ.

‘ಇಂಡಿಯನ್‌ 2’ ತಾರಾ ಬಳಗ

ಕಮಲ್ ಹಾಸನ್ ಹೊರತಾಗಿ, ಸಮುದ್ರಕನಿ, ಬಾಬಿ ಸಿಂಹ, ಕಾಜಲ್ ಅಗರ್ವಾಲ್, ಸಿದ್ಧಾರ್ಥ್, ರಾಕುಲ್ ಪ್ರೀತ್ ಸಿಂಗ್ ಮತ್ತು ಪ್ರಿಯಾ ಭವಾನಿ ಶಂಕರ್ ಅವರಂತಹ ನಟರು 'ಇಂಡಿಯನ್ 2' ನಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಇಂಡಿಯನ್ 2 ಗೆ ಅನಿರುದ್ಧ್ ರವಿಚಂದರ್ ಅವರ ಸಂಗೀತವಿದೆ. ಜಯಮೋಹನ್, ಕಬಿಲನ್ ವೈರಮುತ್ತು ಮತ್ತು ಲಕ್ಷ್ಮಿ ಸರವಣಕುಮಾರ್ ಹಾಡುಗಳಿಗೆ ಸಾಹಿತ್ಯ ಬರೆದಿದ್ದಾರೆ. ಈ ಚಿತ್ರವನ್ನು ಲೈಕಾ ಪ್ರೊಡಕ್ಷನ್ಸ್ ನಿರ್ಮಿಸಿದೆ. ಹಿಂದಿಯಲ್ಲಿ ಹಿಂದೂಸ್ಥಾನಿ 2, ತೆಲುಗಿನಲ್ಲಿ ಭಾರತೀಯಡು 2 ಶೀರ್ಷಿಕೆಯೊಂದಿಗೆ ಈ ಸಿನಿಮಾ ಬಿಡುಗಡೆಯಾಗಿದೆ.

Whats_app_banner