ಕನ್ನಡ ಸುದ್ದಿ  /  Entertainment  /  Kollywood News Jailer 2 Mirna Menon Confirms Sequel Of Rajinikanth Nelson Dilipkumar Movie, Shiva Rajkumar Pcp

Jailer 2: ರಜನಿಕಾಂತ್‌ ಅಭಿಮಾನಿಗಳಿಗೆ ಸಿಹಿಸುದ್ದಿ, ಜೈಲರ್‌ 2 ಬರೋದು ಖಚಿತಪಡಿಸಿದ ಮಿರ್ನಾ ಮೆನನ್; ಮತ್ತೆ ನರಸಿಂಹನಾಗಿ ಶಿವಣ್ಣ

ಸೂಪರ್‌ಸ್ಟಾರ್‌ ರಜನಿಕಾಂತ್‌ ಅಭಿನಯದ ಜೈಲರ್‌ ಸಿನಿಮಾದ ಸೀಕ್ವೆಲ್‌ ಬರಲಿದೆ ಎಂದು ನಟಿ ಮಿರ್ನಾ ಮೆನನ್‌ ಖಚಿತಪಡಿಸಿದ್ದಾರೆ. ರಜನಿಕಾಂತ್‌ ಜತೆ ಶಿವರಾಜ್‌ ಕುಮಾರ್‌, ಮೋಹನ್‌ ಲಾಲ್‌ ಮುಂತಾದವರ ಪಾತ್ರಗಳೂ ಜೈಲರ್‌ 2ನಲ್ಲಿ ಮುಂದುವರೆಯುವ ನಿರೀಕ್ಷೆಯಿದೆ.

ಜೈಲರ್‌ ಸಿನಿಮಾದಲ್ಲಿ ರಜನಿಕಾಂತ್‌ ಮತ್ತು ಶಿವರಾಜ್‌ಕುಮಾರ್‌
ಜೈಲರ್‌ ಸಿನಿಮಾದಲ್ಲಿ ರಜನಿಕಾಂತ್‌ ಮತ್ತು ಶಿವರಾಜ್‌ಕುಮಾರ್‌

ಬೆಂಗಳೂರು: ಸೂಪರ್‌ಸ್ಟಾರ್‌ ರಜನಿಕಾಂತ್‌ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. ಕಳೆದ ವರ್ಷ ಬಾಕ್ಸ್‌ ಆಫೀಸ್‌ನಲ್ಲಿ ಹಿಟ್‌ ಆಗಿದ್ದ ಜೈಲರ್‌ ಸಿನಿಮಾದ ಫ್ರೀಕ್ವೆಲ್‌ ಆಗಮಿಸುವ ಕುರಿತು ಖಚಿತತೆ ದೊರಕಿರುವುದೇ ಈ ಖುಷಿಗೆ ಕಾರಣ. ಜೈಲರ್‌ ಸಿನಿಮಾದ ಸೀಕ್ವೆಲ್‌ ಆಗಮಿಸಲಿದೆ ಈ ಹಿಂದೆಯೇ ವದಂತಿ ಇತ್ತು. ಇದೀಗ ನಟಿ ಮಿರ್ನಾ ಮೆನನ್‌ ಈ ಕುರಿತು ಖಚಿತಪಡಿಸಿದ್ದಾರೆ.

ಬರ್ತ್‌ಮಾರ್ಕ್‌ ಸಿನಿಮಾದ ಪ್ರಮೋಷನ್‌ ವೇಳೆ ಜೈಲರ್‌ ನಟಿ ಮಿರ್ನಾ ಮೆನನ್‌ "ಜೈಲರ್‌ ಸೀಕ್ವೆಲ್‌" ಆಗಮಿಸಲಿದೆ ಎಂದಿದ್ದಾರೆ. ನೆಲ್ಸನ್‌ ದಿಲೀಪ್‌ ಕುಮಾರ್‌ ಅವರು ಜೈಲರ್‌ 2 ಹೊರತರುವ ಕುರಿತು ಎಕ್ಸೈಟ್‌ಮೆಂಟ್‌ನಲ್ಲಿ ಇದ್ದಾರೆ ಎಂಬ ವಿವರ ಅವರು ನೀಡಿದ್ದಾರೆ.

"ನಾನು ಅವನಲ್ಲಿ (ನೆಲ್ಸನ್‌) ಮತನಾಡಿದ್ದೇನೆ. ಜೈಲರ್‌ ಸೀಕ್ವೆಲ್‌ ಬಿಡುಗಡೆ ಮಾಡುವ ಕುರಿತು ಕಾತರದಿಂದ ಇರುವುದಾಗಿ ಅವರು ಹೇಳಿದ್ದಾರೆ. ಆದರೆ, ಆ ಸಿನಿಮಾದಲ್ಲಿ ನನ್ನ ಕ್ಯಾರೆಕ್ಟರ್‌ ಏನೆಂದು ವಿಚಾರಿಸಿಲ್ಲ. ನನ್ನ ಅಥವಾ ಇತರರ ಪಾತ್ರವು ನಿರ್ದೇಶಕರ ಸೃಜನಶೀಲತೆಗೆ ಬಿಟ್ಟ ವಿಚಾರ" ಎಂದು ಅವರು ಹೇಳಿದ್ದಾರೆ. "ಜೈಲರ್‌ 2 ಸಿನಿಮಾದಲ್ಲಿ ನನ್ನ ಪಾತ್ರ ಮುಂದುವರೆಯಲಿದೆಯೇ ಅಥವಾ ಇರುವುದಿಲ್ಲವೇ ಎನ್ನುವುದು ಸಿನಿಮಾ ತಯಾರಿಕರಿಗೆ ಬಿಟ್ಟದ್ದು. ನನಗೆ ಮತ್ತೊಮ್ಮೆ ಜೈಲರ್‌ 2ನಲ್ಲಿ ನಟಿಸಲು ಅವಕಾಶ ದೊರಕಿದರೆ ಖಂಡಿತವಾಗಿಯೂ ಒಪ್ಪಿಕೊಳ್ಳುವೆ" ಎಂದು ಅವರು ಹೇಳಿದ್ದಾರೆ.

ಶಿವಣ್ಣ ಇರ್ತಾರ?

ಜೈಲರ್‌ ಸಿನಿಮಾದ ಫ್ರೀಕ್ವೆಲ್‌ ಆಗಿರುವ ಕಾರಣ ಕನ್ನಡ ನಟ ಹ್ಯಾಟ್ರಿಕ್‌ ಹೀರೋ ಶಿವರಾಜ್‌ ಕುಮಾರ್‌ ಅವರು ಜೈಲರ್‌ 2ನಲ್ಲಿ ಇರುತ್ತಾರ ಇಲ್ವ ಎನ್ನುವ ಸಂಗತಿ ಅಧಿಕೃತವಾಗಿ ಬಹಿರಂಗವಾಗಿಲ್ಲ. ಜೈಲರ್‌ ಸಿನಿಮಾದಲ್ಲಿ ನರಸಿಂಹ ಇದ್ದರೆ ಮಾತ್ರ ವಿಶೇಷ ಗತ್ತು ಎನ್ನುವುದು ಅಭಿಮಾನಿಗಳ ಅಭಿಪ್ರಾಯ. ಜೈಲರ್‌ ಸಿನಿಮಾದಲ್ಲಿ ಮುತ್ತುವೇಲು ಪಾಂಡಿಯನ್‌ ಸ್ನೇಹಿತರಿಗೆ ವಿಶೇಷ ಮಹತ್ವವಿದೆ. ಹೀಗಾಗಿ, ಪ್ರೀಕ್ವೆಲ್‌ನಲ್ಲೂ ಇವರೆಲ್ಲರೂ ಮುಂದುವರೆಯಲಿದ್ದಾರೆ ಎನ್ನಲಾಗಿದೆ.

ಜೈಲರ್‌ ಸಿನಿಮಾದಲ್ಲಿ ಸ್ಯಾಂಡಲ್‌ವುಡ್‌ ನಟ ಶಿವರಾಜ್‌ ಕುಮಾರ್‌ ಅವರು ಮೋಹನ್‌ಲಾಲ್‌ ಮತ್ತು ಜಾಕಿ ಶ್ರಾಫ್‌ ಜತೆಗೆ ನರಸಿಂಹನಾಗಿ ಅತಿಥಿ ಪಾತ್ರದಲ್ಲಿ ಮಿಂಚಿದ್ದರು. ಸುಧಾರಣೆ ಕಂಡ ಅಪರಾಧಿ ನರಸಿಂಹ ಪಾತ್ರದಲ್ಲಿ ಶಿವಣ್ಣ ಪ್ರೇಕ್ಷಕರ ಮೆಚ್ಚುಗೆ ಗಳಿಸಿದ್ದರು. ರಜನಿಕಾಂತ್‌ ಪಾತ್ರ ಟೈಗರ್‌ ಮುತ್ತುವೇಲ್‌ ಪಾಂಡಿಯನ್‌ಗೆ ಸಹಾಯ ಮಾಡುವ ಪಾತ್ರ ಅದಾಗಿತ್ತು. ಸಣ್ಣ ಪಾತ್ರದಲ್ಲಿಯೂ ಶಿವಣ್ಣನ ಗತ್ತು ಪ್ರೇಕ್ಷಕರಿಗೆ ಇಷ್ಟವಾಗಿತ್ತು. ನರಸಿಂಹ ಹೆಸರಿನಲ್ಲಿ ಪ್ರತ್ಯೇಕ ಸಿನಿಮಾವನ್ನೂ ಮಾಡಬಹುದೆಂಬ ಅಭಿಪ್ರಾಯ ಇತ್ತೀಚೆಗೆ ವ್ಯಕ್ತವಾಗಿತ್ತು.

ರಜನಿಕಾಂತ್‌ ಮಾತ್ರವಲ್ಲದೆ ಶಿವರಾಜ್‌ ಕುಮಾರ್‌, ಮೋಹನ್‌ ಲಾಲ್‌, ಜಾಆಕಿ ಶ್ರಾಫ್‌, ಸುನಿಲ್‌, ರಮ್ಯಾ ಕೃಷ್ಣನ್‌, ಮಿರ್ನಾ ಮೆನನ್‌ ಮತ್ತು ತಮನ್ನಾ ಭಾಟಿಯಾ ಕೂಡ ಜೈಲರ್‌ನಲ್ಲಿ ನಟಿಸಿದ್ದರು. ವಸಂತ ರವಿ, ನಾಗಾ ಬಾಬು, ಯೋಗಿ ಬಾಬು, ಜಾಫರ್‌ ಸಾಧಿಕ್‌, ಕಿಶೋರ್‌, ಬಿಲ್ಲಿ ಮುರಾಳಿ, ಸುರಂಥನ್‌, ಕರಾಟಿ ಕಾರ್ತಿ, ಮಿಥುನ್‌, ಅರ್ಷಾದ್‌, ಮಾರಿಮುತ್ತು, ರಿತ್ವಿಕ್‌, ಶರವಣನ್‌, ಮಹಾನದಿ ಶಂಕರ್‌ ಮುಂತಾದವರು ಜೈಲರ್‌ ಸಿನಿಮಾದಲ್ಲಿ ನಟಿಸಿದ್ದಾರೆ. ಕನ್ನಡ ನಟ ಕಿಶೋರ್‌ ಕೂಡ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.