Indian 2: ಕಮಲ್‌ ಹಾಸನ್‌- ಶಂಕರ್‌ ಕಾಂಬಿನೇಷನ್‌ನ ಇಂಡಿಯನ್‌ ಸಿನಿಮಾ ಹಿಂದಿವೆ ರೋಚಕ ಸಪ್ತ ಸಂಗತಿಗಳು
ಕನ್ನಡ ಸುದ್ದಿ  /  ಮನರಂಜನೆ  /  Indian 2: ಕಮಲ್‌ ಹಾಸನ್‌- ಶಂಕರ್‌ ಕಾಂಬಿನೇಷನ್‌ನ ಇಂಡಿಯನ್‌ ಸಿನಿಮಾ ಹಿಂದಿವೆ ರೋಚಕ ಸಪ್ತ ಸಂಗತಿಗಳು

Indian 2: ಕಮಲ್‌ ಹಾಸನ್‌- ಶಂಕರ್‌ ಕಾಂಬಿನೇಷನ್‌ನ ಇಂಡಿಯನ್‌ ಸಿನಿಮಾ ಹಿಂದಿವೆ ರೋಚಕ ಸಪ್ತ ಸಂಗತಿಗಳು

ಜುಲೈ 12ರಂದು ಹಲವು ಭಾಷೆಗಳಲ್ಲಿ ಇಂಡಿಯನ್‌ 2 ಚಿತ್ರ ತೆರೆಗೆ ಬರಲಿದ್ದು, ಈಗಾಗಲೇ ಟ್ರೇಲರ್‌ ಮೂಲಕ ಕುತೂಹಲ ಕೆರಳಿಸಿದೆ. ಆದರೆ, ಇದೇ ಇಂಡಿಯನ್‌ ಚಿತ್ರದ ಮೊದಲ ಪಾರ್ಟ್‌ ಬಗ್ಗೆ ಎಲ್ಲಿಯೂ ಗೊತ್ತಿರದ ಒಂದಷ್ಟು ಸಂಗತಿಗಳು ಇಲ್ಲಿವೆ.

Indian 2: ಕಮಲ್‌ ಹಾಸನ್‌ -ಶಂಕರ್‌ ಕಾಂಬಿನೇಷನ್‌ನ ಇಂಡಿಯನ್‌ ಸಿನಿಮಾ ಹಿಂದಿವೆ ರೋಚಕ ಸಪ್ತ ಸಂಗತಿಗಳು
Indian 2: ಕಮಲ್‌ ಹಾಸನ್‌ -ಶಂಕರ್‌ ಕಾಂಬಿನೇಷನ್‌ನ ಇಂಡಿಯನ್‌ ಸಿನಿಮಾ ಹಿಂದಿವೆ ರೋಚಕ ಸಪ್ತ ಸಂಗತಿಗಳು

Indian 2: ನಿರ್ದೇಶಕ ಶಂಕರ್ ಮತ್ತು ಕಮಲ್ ಹಾಸನ್ ‌ಜೋಡಿಯ ಇಂಡಿಯನ್‌ ಸಿನಿಮಾ 24 ವರ್ಷಗಳ ಹಿಂದೆಯೇ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಇದೀಗ ಅದೇ ಚಿತ್ರದ ಪಾರ್ಟ್‌ 2 ಸಹ ನಿರೀಕ್ಷೆಗೂ ಮೀರಿದ ಕ್ರೇಜ್‌ ಸೃಷ್ಟಿಸಿದೆ. ಇನ್ನೇನು ಜುಲೈ 12ರಂದು ಹಲವು ಭಾಷೆಗಳಲ್ಲಿ ಈ ಚಿತ್ರ ತೆರೆಗೆ ಬರಲಿದ್ದು, ಈಗಾಗಲೇ ಟ್ರೇಲರ್‌ ಮೂಲಕ ಕುತೂಹಲ ಕೆರಳಿಸಿದೆ. ಆದರೆ, ಇದೇ ಇಂಡಿಯನ್‌ ಚಿತ್ರದ ಮೊದಲ ಪಾರ್ಟ್‌ ಬಗ್ಗೆ ಎಲ್ಲಿಯೂ ಗೊತ್ತಿರದ ಒಂದಷ್ಟು ಸಂಗತಿಗಳು ಇಲ್ಲಿವೆ.

ರಜನಿಕಾಂತ್‌ಗೆ ಮಾಡಿದ ಕಥೆ

ಇಂಡಿಯನ್‌ ಸಿನಿಮಾದ ಕಥೆಯನ್ನು ನಿರ್ದೇಶಕ ಶಂಕರ್ ಮೊದಲಿಗೆ ರಜನಿಕಾಂತ್‌ಗೆ ಹೇಳಿದ್ದರು. ಆದರೆ ಆ ಸಮಯದಲ್ಲಿ ರಜನಿ ಬೇರೆ ಚಿತ್ರಗಳಿಗೆ ಕಮಿಟ್ ಆಗಿದ್ದರಿಂದ ಇಂಡಿಯನ್‌ ಕಥೆಯಲ್ಲಿ ನಟಿಸಲು ಸಾಧ್ಯವಾಗಲಿಲ್ಲ. ಆ ನಂತರ ಕಮಲ್ ಹಾಸನ್‌ ಅವರನ್ನು ಅಪ್ರೋಚ್‌ ಮಾಡಿ, ಅವರಿಂದ ಒಪ್ಪಿಗೆ ಪಡೆದಿದ್ದರು ಶಂಕರ್. ಬಹುಶಃ ಕಮಲ್ ಈ ಕಥೆಯಲ್ಲಿ ನಟಿಸಲು ನಿರಾಕರಿಸಿದರೆ, ವೆಂಕಟೇಶ್‌ ದಗ್ಗುಬಾಟಿ ಜತೆಗೆ ಸಿನಿಮಾ ಮಾಡುವ ಪ್ಲಾನ್‌ನಲ್ಲಿದ್ದರು.

1996ರಲ್ಲಿ ಸೂಪರ್‌ ಹಿಟ್‌: ಎ. ಆರ್ ರೆಹಮಾನ್ ಸಂಗೀತದೊಂದಿಗೆ ಎ.ಎಂ. ರತ್ನಂ ನಿರ್ಮಿಸಿದ ಇಂಡಿಯನ್‌ ಸಿನಿಮಾ 1996ರಲ್ಲಿ ಬಿಡುಗಡೆಯಾಗಿ ಬ್ಲಾಕ್‌ ಬಸ್ಟರ್‌ ಹಿಟ್‌ ಆಗಿತ್ತು. ಜಂಟಲ್‌ಮೆನ್ ಮತ್ತು ವಲಂತನ್ ಎಂಬ ಎರಡು ಬ್ಯಾಕ್ ಟು ಬ್ಯಾಕ್ ಹಿಟ್ ಚಿತ್ರಗಳನ್ನು ನೀಡಿದ ಶಂಕರ್, ರಜನಿ ಜತೆ ಇಂಡಿಯನ್‌ ಸಿನಿಮಾ ಮಾಡಲು ಪ್ಲಾನ್‌ ಹಾಕಿದ್ದರು. ಆದರೆ, ಅದು ಕಮಲ್‌ ಪಾಲಾಯ್ತು.

ಕಥೆ ಕೇಳಿ ಓಕೆ ಅಂದ್ರು ಕಮಲ್‌ ಹಾಸನ್

ರಜನಿ ಕಾಲ್‌ ಶೀಟ್‌ ಸಿಗದ ಕಾರಣ, ಕಮಲ್ ಹಾಸನ್‌ಗೆ ಇಂಡಿಯನ್‌ ಕಥೆ ಹೇಳಿದ್ರು ಶಂಕರ್‌. ಅವರಿಗೆ ನಿರ್ದೇಶಕರು ಹೇಳಿದ ಕಥೆ ತುಂಬಾ ಇಷ್ಟವಾಯ್ತು. ಬಳಿಕ ಚಿತ್ರದಲ್ಲಿ ನಟಿಸಲು ಕಮಲ್‌ ಒಪ್ಪಿಕೊಂಡರು. ಇದಾದ ನಂತರ ಕಮಲ್ ಎದುರು ಐಶ್ವರ್ಯಾ ರೈ ಅವರನ್ನು ನಾಯಕಿಯಾಗಿ ಹಾಕಿಕೊಳ್ಳಲು ಕಮಲ್ ಪ್ರಯತ್ನಿಸಿದ್ದರು. ಆದರೆ ಆ ವೇಳೆ ಐಶ್ವರ್ಯಾ ಕಾಲ್ ಶೀಟ್ ಸಿಗದ ಕಾರಣ ಚಿತ್ರತಂಡ ಮನೀಶಾ ಕೊಯಿರಾಲಾ ಅವರನ್ನು ಆಯ್ಕೆ ಮಾಡಿತು.‌

ಮರೆತ ಮೀಸೆಯೇ ಅಂತಿಮವಾಯ್ತು..

ಇಂಡಿಯನ್‌ ಸಿನಿಮಾ ಶೂಟಿಂಗ್‌ ಸಂದರ್ಭದಲ್ಲಿ ಕಮಲ್‌ ಹಾಸನ್‌ ಲುಕ್‌ ಟೆಸ್ಟ್‌ ವೇಳೆ ಮೀಸೆಯೂ ಇತ್ತು. ಆದರೆ, ಮೇಕಪ್‌ ಟೆಸ್ಟ್‌ ವೇಳೆ ಮೀಸೆ ಹಾಕುವುದನ್ನೇ ಮರೆತಿದ್ದರು ಕಮಲ್.‌ ಆ ಲುಕ್‌ ಚೆನ್ನಾಗಿದ್ದ ಕಾರಣ, ಅದನ್ನೇ ಫೈನಲ್‌ ಮಾಡಿದರು.

ಚಿತ್ರಕ್ಕಾಗಿ ವರ್ಮ ಕಲೈ: ಇಂಡಿಯನ್‌ ಚಿತ್ರಕ್ಕಾಗಿ ಕಮಲ್ ನಿಜವಾಗಿಯೂ ವರ್ಮ ಕಲೈ ಕಲಿತರು. ಮಾಸ್ಟರ್ ಆಸಾನ್‌ ರಾಜೇಂದ್ರನ್ ಅವರಿಂದ ವರ್ಮ ಕಲೈ ಕಲಿತು, ಚಿತ್ರದಲ್ಲಿಯೂ ಅದನ್ನು ಪ್ರದರ್ಶಿಸಿ ಮೆಚ್ಚುಗೆ ಪಡೆದಿದ್ದರು. ಇದೀಗ ಅದು ಎರಡನೇ ಭಾಗದಲ್ಲಿಯೂ ಮುಂದುವರಿಯಲಿದೆ. ‌

ನೇತಾಜಿ ಜತೆಗೆ ಕಮಲ್‌ ಹಾಸನ್

ಇಂಡಿಯನ್‌ ಚಿತ್ರದ ಫ್ಲ್ಯಾಷ್ ಬ್ಯಾಕ್ ಭಾಗದಲ್ಲಿ ಸೇನಾ ಕಮಾಂಡರ್ ನೇತಾಜಿ ಅವರಿಂದ ತರಬೇತಿ ಪಡೆಯುತ್ತಿರುವ ದೃಶ್ಯಗಳಿವೆ. ಈ ದೃಶ್ಯಗಳಲ್ಲಿ ಶಂಕರ್ ನೇತಾಜಿಯ ನೈಜ ವಿಡಿಯೋಗಳನ್ನು ಬಳಸಿ ಅದರಲ್ಲಿ ಕಮಲ್ ಹಾಸನ್‌ ಅವರ ಗ್ರಾಫಿಕ್ಸ್ ಸೇರ್ಪಡೆ ಮಾಡಿದ್ದರು. ಆ ಅವಧಿಯಲ್ಲಿ ಈ ಗ್ರಾಫಿಕ್ಸ್ ಪ್ರದರ್ಶನಗಳು ಹೆಚ್ಚು ಮೆಚ್ಚುಗೆ ಪಡೆದಿದ್ದವು.

ನೈಜ ಘಟನೆ ಆಧರಿತ ಸಿನಿಮಾ: ನಿರ್ದೇಶಕ ಶಂಕರ್ ತಮ್ಮ ಜೀವನದಲ್ಲಿ ನಡೆದ ಕೆಲವು ಸಂಗತಿಗಳು ಹಾಗೂ ಗೆಳೆಯರ ಜೀವನದಲ್ಲಿ ನಡೆದ ಘಟನೆಗಳನ್ನು ಆಧರಿಸಿ ಚಿತ್ರದ ಕಥೆಯನ್ನು ಬರೆದಿದ್ದಾರೆ. ಇದೀಗ ಎರಡನೇ ಭಾಗವೂ ಅದೇ ರೀತಿಯ ಒಂದಷ್ಟು ಸತ್ಯಕಥೆಗಳನ್ನು ಆಧರಿಸಿ ನಿರ್ಮಾಣವಾಗಿದೆ.

Whats_app_banner