ಕನ್ನಡ ಸುದ್ದಿ  /  ಮನರಂಜನೆ  /  Thangalaan Movie: ಕೆಜಿಎಫ್‌ನ ನೈಜ ಕಥೆ ಹೇಳಲು ಬಂದ ವಿಕ್ರಮ್‌; ಮೈ ನವಿರೇಳಿಸುವ ತಂಗಲಾನ್ ಟ್ರೇಲರ್‌ ಕನ್ನಡದಲ್ಲಿ ನೋಡಿ

Thangalaan Movie: ಕೆಜಿಎಫ್‌ನ ನೈಜ ಕಥೆ ಹೇಳಲು ಬಂದ ವಿಕ್ರಮ್‌; ಮೈ ನವಿರೇಳಿಸುವ ತಂಗಲಾನ್ ಟ್ರೇಲರ್‌ ಕನ್ನಡದಲ್ಲಿ ನೋಡಿ

Thangalaan Movie Trailer: ಕರ್ನಾಟಕದ ಕೆಜಿಎಫ್‌ ಚಿನ್ನದ ಗಣಿಯನ್ನು ಬ್ರಿಟಿಷರು ಕೊಳ್ಳೆ ಹೊಡೆಯುವ ಸಂದರ್ಭದ ಕಥೆಯನ್ನು ಒಳಗೊಂಡ ತಂಗಲಾನ್‌ ಸಿನಿಮಾದ ಟ್ರೇಲರ್‌ ಬಿಡುಗಡೆಯಾಗಿದೆ. ಚಿಯಾನ್‌ ವಿಕ್ರಮ್‌, ಮಾಳವಿಕ ಮೋಹನನ್‌ ಪ್ರಮುಖ ಪಾತ್ರದಲ್ಲಿ ನಟಿಸಿರುವ ಈ ಟ್ರೇಲರ್‌ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿದೆ.

Thangalaan Movie: ಕೆಜಿಎಫ್‌ನ ನೈಜ ಕಥೆ ಹೇಳಲು ಬಂದ ವಿಕ್ರಮ್‌; ಮೈ ನವಿರೇಳಿಸುವ ತಂಗಲಾನ್ ಟ್ರೇಲರ್‌
Thangalaan Movie: ಕೆಜಿಎಫ್‌ನ ನೈಜ ಕಥೆ ಹೇಳಲು ಬಂದ ವಿಕ್ರಮ್‌; ಮೈ ನವಿರೇಳಿಸುವ ತಂಗಲಾನ್ ಟ್ರೇಲರ್‌

ಬೆಂಗಳೂರು: ತಮಿಳು ನಟ ಚಿಯಾನ್‌ ವಿಕ್ರಮ್‌ ನಟನೆಯ ತಂಗಲಾನ್‌ ಸಿನಿಮಾದ ಟ್ರೇಲರ್‌ ಬಿಡುಗಡೆಯಾಗಿದೆ. ಈ ಪ್ಯಾನ್‌ ಇಂಡಿಯಾ ಸಿನಿಮಾದ ಟ್ರೇಲರ್‌ ತಮಿಳು, ತೆಲುಗು, ಹಿಂದಿ ಮಾತ್ರವಲ್ಲದೆ ಕನ್ನಡದಲ್ಲಿಯೂ ಬಿಡುಗಡೆಯಾಗಿದೆ. 19ನೇ ಶತಮಾನದ ಕೋಲಾರ ಚಿನ್ನದ ಗಣಿಯ ಐತಿಹಾಸಿಕ ಸಾಹಸ ಕಥೆಯನ್ನು ಹೇಳುವ ಭರವಸೆಯನ್ನು ತಂಗಲಾನ್‌ ಸಿನಿಮಾ ನೀಡಿದೆ. ಈಗಾಗಲೇ ಕೆಜಿಎಫ್‌ ಹೆಸರಿನ ಎರಡು ಸಿನಿಮಾಗಳಲ್ಲಿ ಯಶ್‌ ನಟಿಸಿದ್ದಾರೆ. ಇದೀಗ ತಮಿಳು ಸಿನಿಮಾ ನಿರ್ದೇಶಕರು ಇದೇ ಕೆಜಿಎಫ್‌ನ ಇನ್ನೊಂದು ಕಥೆ ಹೇಳಲು ಆಗಮಿಸಿದ್ದಾರೆ. ತಂಗಲಾನ್‌ ಸಿನಿಮಾಕ್ಕೆ ಪಾ ರಂಜಿತ್‌ ಆಕ್ಷನ್‌ ಕಟ್‌ ಹೇಳುತ್ತಿದ್ದಾರೆ. ಇದೇ ಆಗಸ್ಟ್‌ 15ರಂದು ತಂಗಲಾನ್‌ ಸಿನಿಮಾ ರಿಲೀಸ್‌ ಆಗಲಿದೆ.

ತಂಗಲಾನ್‌ ಟ್ರೇಲರ್‌ ಕನ್ನಡದಲ್ಲಿಯೂ ಬಿಡುಗಡೆ

ಟ್ರೆಂಡಿಂಗ್​ ಸುದ್ದಿ

ಈ ಟ್ರೇಲರ್‌ನಲ್ಲಿ ಚಿಯಾನ್‌ ವಿಕ್ರಮ್‌ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಬುಡಕಟ್ಟು ನಾಯಕನಂತೆ ಕಾಣಿಸುವ ವಿಕ್ರಮ್‌ ಬ್ರಿಟಿಷರಿಗೆ ತನ್ನ ಗ್ರಾಮದಲ್ಲಿರುವ ಚಿನ್ನದ ಗಣಿಗಳನ್ನು ಪತ್ತೆಹಚ್ಚಲು ನೆರವು ನೀಡುತ್ತಾರೆ. ಚಿನ್ನದ ಹುಡುಕಾಟ ನಡೆಸುವ ಸಂದರ್ಭದಲ್ಲಿ ಹಲವು ಕೊಲೆಗಳು, ಅನಿರೀಕ್ಷಿತ ಘಟನೆಗಳು ನಡೆಯುತ್ತವೆ. ಇದನ್ನೆಲ್ಲ ಮಾಡುತ್ತಿರುವ ಮಾಟಗಾರ ಯಾರು ಎಂಬ ಪ್ರಶ್ನೆಗೆ "ಮಾಟಗಾರ ಅಲ್ಲ, ಮಾಟಗಾರ್ತಿ, ಆರತಿ" ಎನ್ನುವ ಉತ್ತರ ದೊರಕುತ್ತದೆ. ಆ ಮಾಟಗಾರ್ತಿಯನ್ನು ಯಾರು ತಡೆಯುತ್ತಾರೆ? ಇತ್ಯಾದಿ ಪ್ರಶ್ನೆಗೆ ಟ್ರೇಲರ್‌ ಉತ್ತರ ನೀಡಿದೆ. ಮಾಟಗಾರ್ತಿಯಾಗಿ ಮಾಲವಿಕ ಮೋಹನನ್‌ ಅದ್ಭುತವಾಗಿ ನಟಿಸಿರುವುದನ್ನು ಟ್ರೇಲರ್‌ನಲ್ಲಿ ನೋಡಬಹುದು. ಈಕೆಯನ್ನು ತಂಗಲಾನ್‌ ಹೇಗೆ ಎದುರಿಸುತ್ತಾನೆ ಎನ್ನುವ ಕುತೂಹಲ ಎಲ್ಲರಲ್ಲಿಯೂ ಮೂಡಿದೆ.

ಈ ಟ್ರೇಲರ್‌ ನೋಡಿ ಫ್ಯಾನ್ಸ್‌ ಖುಷಿಯಾಗಿದ್ದಾರೆ. ಈ ಸಿನಿಮಾ ಭಾರತದ ಇತಿಹಾಸದಲ್ಲಿಯೇ ಹೊಸ ಇತಿಹಾಸ ಸೃಷ್ಟಿಸಲಿದೆ ಎಂದು ಕೆಲವರು ಹೇಳಿದ್ದಾರೆ. ಇನ್ನು ಕೆಲವರು ಈ ಸಿನಿಮಾಕ್ಕೆ ಆಸ್ಕರ್‌ ಪ್ರಶಸ್ತಿ ಖಾತ್ರಿ ಎಂದಿದ್ದಾರೆ. ಈ ಸಿನಿಮಾದಲ್ಲಿ ಚಿಯಾನ್‌ ವಿಕ್ರಮ್‌ ಮಾತ್ರವಲ್ಲದೆ ಪಾರ್ವತಿ ಥಿರುವೊಟ್ಟು, ಪಶುಪತಿ, ಡೇನಿಯಲ್‌ ಕ್ಲಾಟಿಗೆರನ್‌, ಹರಿಕೃಷ್ಣನ್‌, ವಿಟ್ಟೈ ಮುತ್ತುಕುಮಾರ್‌ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಕರ್ನಾಟಕದ ಕೆಜಿಎಫ್‌ನ ನೈಜ ಕಥೆಯ ಅನ್ವೇಷಣೆ

ಈ ಚಿತ್ರತಂಡವು ತಂಗಲಾನ್‌ ಸಿನಿಮಾವು ಕರ್ನಾಟಕದ ಕೆಜಿಎಫ್‌ನ ನೈಜ ಕಥೆಯನ್ನು ಅನ್ವೇಷಿಸಲಿದೆ ಎಂದಿದ್ದಾರೆ. ಬ್ರಿಟಿಷರು ಭಾರತವನ್ನು ಲೂಟಿ ಹೊಡೆಯುವ ಮೊದಲು ಇದು ಭಾರತದ ಚಿನ್ನದ ಹಕ್ಕಿಯಾಗಿತ್ತು. ನೈಜ ಕಥೆ ಆಧರಿತ ಕಥೆಯಾಗಿರುವುದರಿಂದ ಈ ಸಿನಿಮಾದಲ್ಲಿ ಬ್ರಿಟಿಷರಿಂದ ಚಿನ್ನದ ಗಣಿಯನ್ನು ರಕ್ಷಿಸಲು ಕೆಜಿಎಫ್‌ನ ಜನರು ಹೇಗೆ ಕಷ್ಟಪಟ್ಟರು ಎಂಬ ವಿವರ ದೊರಕುವ ನಿರೀಕ್ಷೆಯಿದೆ. 19ನೇ ಶತಮಾನದಲ್ಲಿ ಬ್ರಿಟಿಷರ ಕಾನೂನುಬಾಹಿರ ಚಟುವಟಿಕೆಯ ಕುರಿತೂ ಈ ಸಿನಿಮಾ ಬೆಳಕು ಚೆಲ್ಲುವ ನಿರೀಕ್ಷೆಯಿದೆ.

ಎರಡು ನಿಮಿಷದ ಈ ಟ್ರೇಲರ್‌ನಲ್ಲಿ ಬ್ರಿಟಿಷ್‌ ಆಫೀಸರ್‌ಗೆ ಗ್ರಾಮಸ್ಥರು ಚಿನ್ನದ ಹುಡುಕಾಟಕ್ಕೆ ಸಹಾಯ ಮಾಡಲು ಪ್ರಯತ್ನಿಸುತ್ತಾರೆ. ಆಗ ಅಲ್ಲಿನ ನಿಗೂಢ ಶಕ್ತಿಧಾರಿಣಿ ಆರತಿ ಕಾಣಿಸಿಕೊಳ್ಳುತ್ತಾಳೆ. ಯಾರು ಈ ಆರತಿ? ಈಕೆ ಚಿನ್ನ ಹುಡುಕದಂತೆ ಗ್ರಾಮಸ್ಥರನ್ನು ತಡೆಯುವುದೇಕೆ? ವಿಕ್ರಮ್‌ಗೆ ಆರತಿ ಬಗ್ಗೆ ಏನು ಗೊತ್ತು? ಮುಂತಾದ ಪ್ರಶ್ನೆಗಳನ್ನು ಈ ಟ್ರೇಲರ್‌ ಉಳಿಸಿದೆ.

ಈ ಸಿನಿಮಾ ಈ ವರ್ಷದ ಆರಂಭದಲ್ಲಿ ಅಂದರೆ ಜನವರಿಯಲ್ಲಿ ರಿಲೀಸ್‌ ಆಗಬೇಕಿತ್ತು. ಬಳಿಕ ಇದನ್ನು ಏಪ್ರಿಲ್‌ಗೆ ಪೋಸ್ಟ್‌ ಪೋನ್‌ ಮಾಡಲಾಗಿತ್ತು. ಇದೀಗ ಈ ವರ್ಷದ ಸ್ವಾತಂತ್ರ್ಯ ದಿನದಂದು ಅಂದರೆ, ಆಗಸ್ಟ್‌ 15ರಂದು ರಿಲೀಸ್‌ ಆಗಲಿದೆ. ಈ ಸಿನಿಮಾ ಕನ್ನಡದ ಕೆಜಿಎಫ್‌ನಂತೆ ಬ್ಲಾಕ್‌ ಬಸ್ಟರ್‌ ಸಿನಿಮಾವಾಗುವುದೇ ಎಂಬ ನಿರೀಕ್ಷೆಯನ್ನು ಟ್ರೇಲರ್‌ ಹುಟ್ಟುಹಾಕಿದೆ.