ಕನ್ನಡ ಸುದ್ದಿ  /  ಮನರಂಜನೆ  /  ಸಲಿಂಗಕಾಮಿ ಎಂದ ಮಾಜಿ ಪತ್ನಿ ಸುಚಿತ್ರಾಳಿಗೆ ಕಾರ್ತಿಕ್‌ ಕುಮಾರ್‌ ತಿರುಗೇಟು; ಯಾವುದೇ ಬಗೆಯ ಲೈಂಗಿಕತೆಯ ಕುರಿತು ಹೆಮ್ಮೆ ಇದೆ ಎಂದ ನಟ

ಸಲಿಂಗಕಾಮಿ ಎಂದ ಮಾಜಿ ಪತ್ನಿ ಸುಚಿತ್ರಾಳಿಗೆ ಕಾರ್ತಿಕ್‌ ಕುಮಾರ್‌ ತಿರುಗೇಟು; ಯಾವುದೇ ಬಗೆಯ ಲೈಂಗಿಕತೆಯ ಕುರಿತು ಹೆಮ್ಮೆ ಇದೆ ಎಂದ ನಟ

ಕಾಲಿವುಡ್‌ ನಟ ಧನುಷ್‌ ಮತ್ತು ನನ್ನ ಮಾಜಿ ಗಂಡ ಕಾರ್ತಿಕ್‌ ಕುಮಾರ್‌ ಒಂದೇ ರೂಂನಲ್ಲಿ ಮಲಗುತ್ತಿದ್ದರು. ಕಾರ್ತಿಕ್‌ ಗೇ, ಅವರಿಬ್ಬರು ಅಲ್ಲಿ ಏನು ಮಾಡುತ್ತಿದ್ದರು ಎಂದು ನನಗೆ ಗೊತ್ತಿಲ್ಲ ಎಂದು ಮಾಜಿ ಪತ್ನಿ ಗಾಯಕಿ ಸುಚಿತ್ರಾ ನೀಡಿದ ಹೇಳಿಕೆಗೆ ಕಾರ್ತಿಕ್‌ ಕುಮಾರ್‌ ಪ್ರತಿಕ್ರಿಯೆ ನೀಡಿದ್ದಾರೆ.

ಸಲಿಂಗಕಾಮಿ ಎಂದ ಮಾಜಿಪತ್ನಿ ಸುಚಿತ್ರಾಳಿಗೆ ಕಾರ್ತಿಕ್‌ ಕುಮಾರ್‌ ತಿರುಗೇಟು
ಸಲಿಂಗಕಾಮಿ ಎಂದ ಮಾಜಿಪತ್ನಿ ಸುಚಿತ್ರಾಳಿಗೆ ಕಾರ್ತಿಕ್‌ ಕುಮಾರ್‌ ತಿರುಗೇಟು

ಬೆಂಗಳೂರು: ಕಾಲಿವುಡ್‌ ನಟ ಧನುಷ್‌ ಮತ್ತು ನನ್ನ ಮಾಜಿ ಗಂಡ ಕಾರ್ತಿಕ್‌ ಕುಮಾರ್‌ ಒಂದೇ ರೂಂನಲ್ಲಿ ಮಲಗುತ್ತಿದ್ದರು. ಕಾರ್ತಿಕ್‌ ಗೇ, ಅವರಿಬ್ಬರು ಅಲ್ಲಿ ಏನು ಮಾಡುತ್ತಿದ್ದರು ಎಂದು ನನಗೆ ಗೊತ್ತಿಲ್ಲ ಎಂದು ಮಾಜಿ ಪತ್ನಿ ಗಾಯಕಿ ಸುಚಿತ್ರಾ ನೀಡಿದ ಹೇಳಿಕೆಗೆ ಕಾರ್ತಿಕ್‌ ಕುಮಾರ್‌ ಪ್ರತಿಕ್ರಿಯೆ ನೀಡಿದ್ದಾರೆ. ಈ ಕುರಿತು ಕಾರ್ತಿಕ್‌ ಇನ್‌ಸ್ಟಾಗ್ರಾಂನಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. "ಎಲ್ಲವೂ ಮಾಡುವುದು ಕ್ಲಿಕ್‌ ಪಡೆಯುವ ಸಲುವಾಗಿ. ಕ್ಲಿಕ್‌ ಬೈಟ್‌ಗೆ ಇಲ್ಲಿದೆ ಉತ್ತರ" ಎಂಬ ಕ್ಯಾಪ್ಷನ್‌ನಡಿ "ನಾನು ಸಲಿಂಗಕಾಮಿಯಾಗಿದ್ದರೆ ಹೆಮ್ಮೆ ಪಡುತ್ತೇನೆ. ತಮ್ಮ ಲೈಂಗಿಕತೆಯ ಕುರಿತು ಯಾರೂ ನಾಚಿಕೆಪಡುವ ಅಗತ್ಯವಿಲ್ಲ" ಎಂದು ಮಾತನಾಡಿರುವ ವಿಡಿಯೋ ಹಂಚಿಕೊಂಡಿದ್ದಾರೆ.

ಟ್ರೆಂಡಿಂಗ್​ ಸುದ್ದಿ

"ಎಲ್ಲಾದರೂ ನಾನು ಹೋಮೋಸೆಕ್ಷುವಲ್‌ ಆಗಿದ್ದರೆ, ನಾನು ಅದಕ್ಕೆ ನಾಚಿಕೆ ಪಡಲಾರೆ. ಅಸ್ತಿತ್ವದಲ್ಲಿರುವ ಯಾವುದೇ ಬಗೆಯ ಲೈಂಗಿಕತೆ ಕುರಿತು ನಾನು ಹೆಮ್ಮೆ ಹೊಂದಿದ್ದೇನೆ. ನನ್ನ ನಗರದಲ್ಲಿ ನಾನು ಹೆಮ್ಮೆಯ ಪ್ರೈಡ್‌ ರಾಲಿಯಲ್ಲಿ ಭಾಗವಾಗುವೆ. ಎಲ್ಲಾ ಬಗೆಯ ಲೈಂಗಿಕತೆಗಳನ್ನು ಹೆಮ್ಮೆಯಿಂದ ಹೇಳಿಕೊಳ್ಳಬಹುದು, ಹೆಮ್ಮೆಯಿಂದ ಜಾಥಾ ನಡೆಸಬಹುದು. ಇದರ ಕುರಿತು ಯಾವುದೇ ನಾಚಿಕೆಯಲ್ಲ. ಈ ರೀತಿ ಲೈಂಗಿಕತೆ ಹೊಂದಿರುವವರು ಹೆಮ್ಮೆಯಿಂದ ಇರಿ" ಎಂದು ಕಾರ್ತಿಕ್‌ ಕುಮಾರ್‌ ಹೇಳಿದ್ದಾರೆ.

ಇವರು ನೇರವಾಗಿ ಸುಚಿತ್ರಾ ಸಂದರ್ಶನಕ್ಕೆ ಮಾರುತ್ತರವಾಗಿ ಈ ಉತ್ತರ ನೀಡುತ್ತಿದ್ದೇನೆ ಎಂದು ಹೇಳಿಲ್ಲ. ಆದರೆ, ಕಾರ್ತಿಕ್‌ ಫಾಲೋವರ್‌ಗಳಿಗೆ ಈ ವಿಡಿಯೋದ ಮರ್ಮಾ ಗೊತ್ತಾಗಿದೆ. ಸುಚಿತ್ರಾರಿಗೆ ತಿರುಗೇಟು ನೀಡುವ ಸಲುವಾಗಿಯೇ ಈ ಮಾಹಿತಿ ಹಂಚಿಕೊಂಡಿದ್ದಾರೆ ಎಂದು ಕಾಮೆಂಟ್‌ ಮಾಡಿದ್ದಾರೆ. LGBTQA+ ಸಮುದಾಯದ ಕುರಿತು ಸಕಾರಾತ್ಮಕ ಮನೋಭಾವ ಹೊಂದಿರುವ ಕಾರ್ತಿಕ್‌ಗೆ ಸಾಕಷ್ಟು ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇನ್ನು ಕೆಲವರು "ಲೈಂಗಿಕತೆ ವಿಚಾರಗಳು ಖಾಸಗಿಯಾಗಿರಬೇಕು" ಎಂದಿದ್ದಾರೆ.

ಸುಚ್ಚಿ ಲೀಕ್ಸ್‌ ವಿವಾದದಿಂದ ಸುಚಿತ್ರಾ ಸಾರ್ವಜನಿಕರ ಕೆಂಗಣ್ಣಿಗೆ ಒಳಗಾಗಿದ್ದಾರೆ. ಇತ್ತೀಚೆಗೆ ತಮಿಳು ಯೂಟ್ಯೂಬ್‌ ಚಾನೆಲ್‌ ಕುಮುಧಮ್‌ಗೆ ಸಂದರ್ಶನ ನೀಡಿದ್ದರು. ಆ ಸಂದರ್ಶನದಲ್ಲಿ ಖಚಿತತೆ ಇಲ್ಲದ ಮಾತನ್ನು ಹೇಳಿದ್ದರು. ಕಾರ್ತಿಕ್‌ ಕುಮಾರ್‌, ಧನುಷ್‌ ಮತ್ತು ಐಶ್ವರ್ಯಾ ರಜನಿಕಾಂತ್‌ ಕುರಿತು ತಮ್ಮ ಅಭಿಪ್ರಾಯ ಹೇಳಿದ್ದರು. ಕಾರ್ತಿಕ್‌ನನ್ನು ಮದುವೆಯಾಗಿ ಅಮೃತಾ ತಪ್ಪು ಮಾಡಿದ್ದಾಳೆ ಎಂದು ಹೇಳಿದ್ದಾರೆ. ಜತೆಗೆ, ಕಾರ್ತಿಕ್‌ ಸಲಿಂಗಕಾಮಿ. ಆತ ಮತ್ತು ಧನುಷ್‌ ಒಂದೇ ಕೊಠಡಿಯಲ್ಲಿರುತ್ತಿದ್ದರು. ಅವರು ಏನು ಮಾಡುತ್ತಿದ್ದರು ಎಂದು ತಿಳಿದಿಲ್ಲ ಎಂದು ಹೇಳಿದ್ದರು. ಈಕೆಯ ಅಭಿಪ್ರಾಯಕ್ಕೆ ಸಂಬಂಧಪಟ್ಟ ಯಾರೂ ನೇರವಾಗಿ ಪ್ರತಿಕ್ರಿಯೆ ನೀಡಿಲ್ಲ (ಒಟಿಟಿಯಲ್ಲಿ ಬ್ಲಿಂಕ್‌ ಮೂವಿ ನೋಡಿ)

ಜನಪ್ರಿಯ ಹಿನ್ನಲೆಗಾಯಕಿ ಮತ್ತು ರೇಡಿಯೋ ಜಾಕಿಯಾಗಿರುವ ಸುಚಿತ್ರಾ ಅವರು ಈ ಹೇಳಿಕೆ ಮೂಲಕ ಕಳೆದ ಹಲವು ದಿನಗಳಿಂದ ಸುದ್ದಿಯಲ್ಲಿದ್ದಾರೆ. ಇವರು ಇತ್ತೀಚೆಗೆ ಬಿಗ್‌ಬಾಸ್‌ ತಮಿಳು ಸೀಸನ್‌ 4ರಲ್ಲಿ ಕಾಣಿಸಿಕೊಂಡಿದ್ದರು. ಕಾರ್ತಿಕ್‌ ಕುಮಾರ್‌ ಸ್ಟಾಂಡಪ್‌ ಕಾಮಿಡಿಯನ್‌ ಆಗಿ ಜನಪ್ರಿಯತೆ ಪಡೆದಿದ್ದಾರೆ.

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

IPL_Entry_Point