ಎಲ್ಲರಿಗೂ ಆಸೆಗಳಿರುತ್ತವೆ, ವೇಶ್ಯಾವಾಟಿಕೆಯನ್ನು ಕಾನೂನುಬದ್ಧಗೊಳಿಸಬೇಕು; ಕಿರಾತಕ ನಟಿ ಓವಿಯಾ
ಲೈಂಗಿಕ ಶಿಕ್ಷಣದಿಂದ ಏನು ಪ್ರಯೋಜನ? ಅದು ಪ್ರಾಕ್ಟಿಕಲ್ ಆಗಿರಲು ಯಾವುದಾದರೂ ಅವಕಾಶ ಬೇಕಲ್ಲವೇ? ಪ್ರಪಂಚದಲ್ಲಿ ಎಲ್ಲರಿಗೂ ಆಸೆಗಳಿರುತ್ತದೆ. ಆದರೆ ಎಲ್ಲರೂ ಮುಖವಾಡ ಹಾಕಿಕೊಂಡು ಬದುಕುತ್ತಿದ್ದಾರೆ. ಎಲ್ಲರಿಗೂ ಫೀಲಿಂಗ್ ಇರುತ್ತದೆ, ಎಲ್ಲರಿಗೂ ಹಾರ್ಮೋನ್ಸ್ ಇರುತ್ತದೆ.
ತಮ್ಮ ಹೇಳಿಕೆ ವಿವಾದಕ್ಕೆ ಎಡೆ ಮಾಡಿಕೊಡುತ್ತದೆ ಎಂದು ಗೊತ್ತಿದ್ದರೂ ಕೆಲವು ನಟಿಯರು ಸೋಷಿಯಲ್ ಮೀಡಿಯಾದಲ್ಲಿ ವಿವಾದಾತ್ಮಕ ಪೋಸ್ಟ್ ಹಂಚಿಕೊಳ್ಳುತ್ತಾರೆ. ಸಾರ್ವಜನಿಕ ಭಾಷಣಗಳಲ್ಲಿ, ಸಂದರ್ಶನಗಳಲ್ಲಿ ಸಂಬಂಧವೇ ಇಲ್ಲದ ವಿಚಾರಕ್ಕೆ ವಿವಾದಾತ್ಮಕ ಹೇಳಿಕೆ ನೀಡಿ ಸುದ್ದಿಯಾಗುತ್ತಾರೆ. ಇದೀಗ ಕಿರಾತಕ ಸಿನಿಮಾ ನಟಿ ಓವಿಯಾ ಕೂಡ ವೇಶ್ಯಾವಾಟಿಕೆಗೆ ಸಂಬಂಧಿಸಿದಂತೆ ಹೇಳಿರುವ ಮಾತುಗಳು ವೈರಲ್ ಆಗುತ್ತಿದೆ.
ತಮಿಳು ವಾಹಿನಿಗೆ ನೀಡಿದ ಸಂದರ್ಶನ
ಇತ್ತೀಚೆಗೆ ಓವಿಯಾ ತಮಿಳಿನ ಗಲಟ್ಟಾ.ಕಾಮ್ ಯೂಟ್ಯೂಬ್ ಚಾನೆಲ್ಗೆ ನೀಡಿದ ಸಂದರ್ಶನದಲ್ಲಿ ತಮ್ಮ ಮದುವೆ ಬಗ್ಗೆ ಮಾತಾಡಿದ್ದರು. ನಾನು ಇನ್ನೂ ಸಿಂಗಲ್ ಆಗಿದ್ದೀನಿ. ಮದುವೆಗಾಗಿ ಆ ವ್ಯಕ್ತಿಯ ನಿರೀಕ್ಷೆಗಳನ್ನು ಪೂರೈಸುತ್ತಾ ಇರಲು ನನಗೆ ಸಾಧ್ಯವಿಲ್ಲ. ಆ ರೀತಿಯ ಕಮಿಟ್ಮೆಂಟ್ಗಳಿಗೆ ಬದ್ಧರಾಗಿರಳು ನನಗೆ ಇಷ್ಟವಿಲ್ಲ. ಸದ್ಯಕ್ಕೆ ಮದುವೆ ಇಷ್ಟವಿಲ್ಲ, ಮುಂದೆ ನೋಡೋಣ ಎಂದಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಜನರು ನೀವು ಸಲಿಂಗಕಾಮಿಯೇ ಎಂದು ಪ್ರಶ್ನಿಸಿದ್ದರು. ಇದಕ್ಕೂ ಉತ್ತರಿಸಿದ್ದ ಆಕೆ ಮದುವೆ ಆಗದಿರುವುದಕ್ಕೆ ನನ್ನದೇ ಕಾರಣಗಳಿವೆ. ಹಾಗಂತ ನಾನು ಖಂಡಿತ ಸಲಿಂಗಕಾಮಿ ಅಲ್ಲ ಎಂದು ಉತ್ತರಿಸಿದ್ದರು.
ಎಲ್ಲರಿಗೂ ಆಸೆಗಳಿರುತ್ತವೆ
ಅದೇ ಇಂಟರ್ವ್ಯೂನಲ್ಲಿ ಓವಿಯ್ ವೇಶ್ಯಾವಾಟಿಕೆ ಬಗ್ಗೆ ಮಾತನಾಡಿದ್ದಾರೆ. ಲೈಂಗಿಕ ಶಿಕ್ಷಣದ ಬಗ್ಗೆ ನಿರೂಪಕಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಓವಿಯಾ. ಲೈಂಗಿಕ ಶಿಕ್ಷಣದಿಂದ ಏನು ಪ್ರಯೋಜನ? ಅದು ಪ್ರಾಕ್ಟಿಕಲ್ ಆಗಿರಲು ಯಾವುದಾದರೂ ಅವಕಾಶ ಬೇಕಲ್ಲವೇ? ಪ್ರಪಂಚದಲ್ಲಿ ಎಲ್ಲರಿಗೂ ಆಸೆಗಳಿರುತ್ತದೆ. ಆದರೆ ಎಲ್ಲರೂ ಮುಖವಾಡ ಹಾಕಿಕೊಂಡು ಬದುಕುತ್ತಿದ್ದಾರೆ. ಎಲ್ಲರಿಗೂ ಫೀಲಿಂಗ್ ಇರುತ್ತದೆ, ಎಲ್ಲರಿಗೂ ಹಾರ್ಮೋನ್ಸ್ ಇರುತ್ತದೆ. ಅದೊಂದು ನೈಸರ್ಗಿಕ ಪ್ರಕ್ರಿಯೆ. ಆದ್ದರಿಂದ ವೇಶ್ಯಾವಾಟಿಕೆಯನ್ನು ಕಾನೂನುಬದ್ಧಗೊಳಿಸುವ ಅವಶ್ಯಕತೆ ಇದೆ. ಹಾಗೆ ಮಾಡಿದರೆ ಅತ್ಯಾಚಾರಗಳೂ ಕಡಿಮೆ ಆಗುತ್ತದೆ ಎಂದು ಓವಿಯಾ ಹೇಳಿದ್ದಾರೆ.
ಪರ-ವಿರೋಧ ಕಾಮೆಂಟ್
ಓವಿಯಾ ನೇರಾ ನೇರ ಮಾತುಗಳಿಗೆ ಕೆಲವರು ಮೆಚ್ಚುಗೆ ವ್ಯಕ್ತಪಡಿಸಿದರೆ, ನಾಯಕಿಯಾಗಿ ಇಂಟರ್ವ್ಯೂನಲ್ಲಿ ಮಾತನಾಡುವಾಗ ಹೇಗೆ ಇರಬೇಕು ಎಂಬುದನ್ನು ಮೊದಲು ನೀವು ಕಲಿಯಿರಿ. ನಿಮ್ಮನ್ನು ಲಕ್ಷಾಂತರ ಜನರು ಫಾಲೋ ಮಾಡುತ್ತಿರುತ್ತಾರೆ ಎಂಬುದನ್ನು ಮರೆಯಬೇಡಿ ಎಂದು ಕಾಮೆಂಟ್ ಮಾಡುತ್ತಿದ್ದಾರೆ.
ಕೇರಳ ಮೂಲದ ನಟಿ
ಓವಿಯಾ ಮೂಲತ: ಕೇರಳಕ್ಕೆ ಸೇರಿದವರು. 2007ರಲ್ಲಿ ತೆರೆ ಕಂಡ ಕಾಂಗರೂ ಮಲಯಾಳಂ ಸಿನಿಮಾ ಮೂಲಕ ಚಿತ್ರರಂಗಕ್ಕೆ ಬಂದರು. ತಮಿಳು, ತೆಲುಗು, ಮಲಯಾಳಂ, ಕನ್ನಡ ಸಿನಿಮಾಗಳಲ್ಲಿ ಓವಿಯಾ ನಟಿಸಿದ್ದಾರೆ. 2011ರಲ್ಲಿ ತೆರೆ ಕಂಡ ಕಿರಾತಕ ಚಿತ್ರದಲ್ಲಿ ಯಶ್ ಜೋಡಿಯಾಗಿ ನಟಿಸಿದ್ದರು. ಮತ್ತೆ 2016ರಲ್ಲಿ ರಿಲೀಸ್ ಆದ ಮಿ. ಮೊಮ್ಮಗ ಚಿತ್ರದಲ್ಲಿ ಕೂಡಾ ನಟಿಸಿದ್ದರು. ಸದ್ಯಕ್ಕೆ ಓವಿಯಾ ರಾಜಾ ಭೀಮ, ಸಂಭವಮ್, ಭೂಮರ್ ಅಂಕಲ್ ಎಂಬ 3 ತಮಿಳು ಸಿನಿಮಾಗಳಲ್ಲಿ ಬ್ಯುಸಿ ಇದ್ದಾರೆ.