ಕನ್ನಡ ಸುದ್ದಿ  /  ಮನರಂಜನೆ  /  ತಮಿಳುನಾಡಿನಲ್ಲಿ ಲೋಕಸಭೆ ಚುನಾವಣೆ, ಬೆಳಗ್ಗೆ ಬೇಗ ಬಂದು ಓಟ್‌ ಹಾಕಿದ್ರು ರಜನಿಕಾಂತ್‌, ಅಜಿತ್‌ ಕುಮಾರ್‌, ಶಿವಕಾರ್ತಿಕೇಯನ್‌

ತಮಿಳುನಾಡಿನಲ್ಲಿ ಲೋಕಸಭೆ ಚುನಾವಣೆ, ಬೆಳಗ್ಗೆ ಬೇಗ ಬಂದು ಓಟ್‌ ಹಾಕಿದ್ರು ರಜನಿಕಾಂತ್‌, ಅಜಿತ್‌ ಕುಮಾರ್‌, ಶಿವಕಾರ್ತಿಕೇಯನ್‌

Lok Sabha elections 2024 Tamilnadu: ತಮಿಳುನಾಡಿನಲ್ಲಿ ಲೋಕಸಭಾ ಚುನಾವಣೆ ನಡೆಯುತ್ತಿದ್ದು, ಸೂಪರ್‌ಸ್ಟಾರ್‌ ರಜನಿಕಾಂತ್‌, ಅಜಿತ್‌ ಕುಮಾರ್‌, ಶಿವಕಾರ್ತಿಕೇಯನ್‌ ಸೇರಿದಂತೆ ಕಾಲಿವುಡ್‌ನ ಸೆಲೆಬ್ರಿಟಿಗಳು ಮತದಾನ ಮಾಡಿದ್ದಾರೆ.

ಮತದಾನ ಮಾಡಿದ ರಜನಿಕಾಂತ್‌, ಅಜಿತ್‌ ಕುಮಾರ್‌, ಶಿವಕಾರ್ತಿಕೇಯನ್‌
ಮತದಾನ ಮಾಡಿದ ರಜನಿಕಾಂತ್‌, ಅಜಿತ್‌ ಕುಮಾರ್‌, ಶಿವಕಾರ್ತಿಕೇಯನ್‌

Lok Sabha elections 2024: ತಮಿಳುನಾಡಿನಲ್ಲಿ ಇಂದು ಚುನಾವಣೆ ನಡೆಯುತ್ತಿದೆ. ಚೆನ್ನೈನ ತಮ್ಮ ಮತಗಟ್ಟೆಗಳಿಗೆ ಇಂದು (ಶುಕ್ರವಾರ) ಬೆಳಗ್ಗೆ ಬೇಗನೇ ಬಂದ ರಜನಿಕಾಂತ್‌, ಅಜಿತ್‌ ಕುಮಾರ್‌, ಶಿವ ಕಾರ್ತಿಕೇಯನ್‌ ಆಗಮಿಸಿ ಮತ ಚಲಾಯಿಸಿದ್ದಾರೆ. ಭಾರತದ ಲೋಕ ಸಭಾ ಚುನಾವಣೆಯ ಮೊದಲ ಹಂತದ ಮತದಾನ ಇಂದು ಆರಂಭವಾಗಿದೆ. 102 ಲೋಕಸಭಾ ಸ್ಥಾನಗಳಿಗೆ ಇಂದು ಮತದಾನ ನಡೆಯುತ್ತಿದೆ. 92 ವಿಧಾನಸಭಾ ಸ್ಥಾನಗಳಿಗೂ ಮತದಾನ ನಡೆಯುತ್ತಿದೆ. ಕರ್ನಾಟಕದಲ್ಲಿ ಇದೇ ಏಪ್ರಿಲ್‌ 26ರಂದು ಮತದಾನ ನಡೆಯಲಿದೆ.

ಟ್ರೆಂಡಿಂಗ್​ ಸುದ್ದಿ

ಕಾಲಿವುಡ್‌ ಸೆಲೆಬ್ರಿಟಿಗಳಿಂದ ಮತದಾನ

ಕಾಲಿವುಡ್‌ನ ರಮೇಶ್‌ ಬಾಲಾ ಪ್ರಕಾರ ಇಂದು ಬೆಳಗ್ಗೆ ಬೇಗ ಓಟ್‌ ಮಾಡಿದ ಸೆಲೆಬ್ರಿಟಿಗಳಲ್ಲಿ ಅಜಿತ್‌ ಮೊದಲಿಗರು. "ನಟ ಅಜಿತ್‌ ಕುಮಾರ್‌ ಇಂದು ಬೆಳಗ್ಗೆ 6.45ಗೆ ಮತಗಟ್ಟೆಗೆ ಬಂದು ಮತಚಲಾಯಿಸಿದ್ದಾರೆ. ಈ ಮೂಲಕ ಇಂದು ಬೇಗ ಬಂದ ಸೆಲೆಬ್ರಿಟಿಗಳಲ್ಲಿ ಒಬ್ಬರದಾದರು" ಎಂದು ಎಕ್ಸ್‌ನಲ್ಲಿ ರಮೇಶ್‌ ಬಾಲ ಪೋಸ್ಟ್‌ ಮಾಡಿದ್ದಾರೆ. ಅಜಿತ್‌ ಮತ ಚಲಾವಣೆ ಮಾಡಿದ ವಿಡಿಯೋವನ್ನೂ ಅವರು ಹಂಚಿಕೊಂಡಿದ್ದಾರೆ. ಸುದ್ದಿ ಸಂಸ್ಥೆ ಎಎನ್‌ಐ ಕೂಡ ವಿಡಿಯೋ ಶೇರ್‌ ಮಾಡಿದೆ.

ಇದಾದ ಕೆಲವು ನಿಮಿಷಗಳ ಬಳಿಕ ರಜನಿಕಾಂತ್‌ ಮತ್ತು ಶಿವಕಾರ್ತಿಕೇಯನ್‌ ಕೂಡ ಮಮತ ಚಲಾಯಿಸಿದ್ದಾರೆ. ಮತಗಟ್ಟೆಗೆ ಬಂದು ಸಾಲಿನಲ್ಲಿ ನಿಂತು ಮತ ಚಲಾಯಿಸಿದ್ದಾರೆ. ಇದಾದ ಬಳಿಕ ಇವರು ಮಾಧ್ಯಮಗಳ ಮುಂದೆ ತಮ್ಮ ಕೈ ಬೆರಳಿನ ಶಾಯಿ ಗುರುತನ್ನು ತೋರಿಸಿದ್ದಾರೆ.

ರಜನಿಕಾಂತ್‌, ಅಜಿತ್‌ ಮತ್ತು ಶಿವ ಕಾರ್ತಿಕೇಯನ್‌ ಅವರು ಮತ ಚಲಾಯಿಸಿದ ಬಳಿಕ ಮಾಧ್ಯಮದವರ ಮುಂದೆ ಸಂಕ್ಷಿಪ್ತವಾಗಿ ಮಾತನಾಡಿದ್ದಾರೆ. "ಎಲ್ಲರೂ ತಪ್ಪದೇ ಮತದಾನ ಮಾಡಿ. ಇದು ಪ್ರಜೆಗಳ ಕರ್ತವ್ಯ" ಎಂದು ಹೇಳಿದ್ದಾರೆ. ಕಾಲಿವುಡ್‌ನ ಇನ್ನಿತರ ನಟಿಯರು, ನಟರು ಕೂಡ ಮತದಾನ ಮಾಡಿದ್ದಾರೆ.

ನಟ ಅಜಿತ್‌ ಅವರು 2023ರ ತುನಿವು ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಈಗ ಇವರು ವಿದಾ ಮ್ಯೂರಚಿ ಸಿನಿಮಾದ ಶೂಟಿಂಗ್‌ನಲ್ಲಿ ಬಿಝಿಯಾಗಿದ್ದಾರೆ. ಇದು ಮಾಘಿಯಾ ತಿರುಮೇನಿ ನಿರ್ದೇಶನದ ಸಿನಿಮಾ. ತ್ರಿಶಾ, ಅರ್ಜುನ್ ಸರ್ಜಾ, ರೆಜಿನಾ ಕಸಾಂಡ್ರಾ ಮತ್ತು ಆರವ್ ಈ ಚಿತ್ರದಲ್ಲಿ ನಟಿಸುತ್ತಿದಾರೆ.

ಸೂಪರ್‌ಸ್ಟಾರ್‌ ರಜನಿಕಾಂತ್ ಇತ್ತೀಚೆಗೆ ಲಾಲ್ ಸಲಾಮ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಶೀಘ್ರದಲ್ಲೇ ಟಿಜೆ ಜ್ಞಾನವೇಲ್ ನಿರ್ದೇಶನದ ವೆಟ್ಟೈಯಾನ್ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ, ಇದರಲ್ಲಿ ಅಮಿತಾಬ್ ಬಚ್ಚನ್, ರಾಣಾ ದಗ್ಗುಬಾಟಿ ಮತ್ತು ಫಹದ್ ಫಾಸಿಲ್ ಕೂಡ ನಟಿಸಿದ್ದಾರೆ. ಎರಡೂ ಚಿತ್ರಗಳು ಈ ವರ್ಷ ಬಿಡುಗಡೆಯಾಗಲಿವೆ.

ನಟ ಶಿವಕಾರ್ತಿಕೇಯನ್ ಇತ್ತೀಚೆಗೆ ಅಯಾಲನ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಎಆರ್ ಮುರುಗದಾಸ್ ನಿರ್ದೇಶನದ ಅಮರನ್ ಚಿತ್ರದಲ್ಲಿ ಮತ್ತು ಇನ್ನೂ ಹೆಸರಿಡದ ಚಿತ್ರದಲ್ಲಿ ನಟಿಸಲಿದ್ದಾರೆ. ಅಮರನ್ ಚಿತ್ರವನ್ನು ರಾಜಕುಮಾರ್ ಪೆರಿಯಸಾಮಿ ನಿರ್ದೇಶಿಸುತ್ತಿದ್ದಾರೆ. ಈ ಚಿತ್ರದಲ್ಲಿ ಸಾಯಿ ಪಲ್ಲವಿ, ಭುವನ್ ಅರೋರಾ, ರಾಹುಲ್ ಬೋಸ್, ಲಲ್ಲು, ಹನುನ್ ಬಾವ್ರಾ, ಅಜೇಯ್ ನಾಗ ರಾಮನ್, ಮೀರ್ ಸಲ್ಮಾನ್, ಗೌರವ್ ವೆಂಕಟೇಶ್ ಮತ್ತು ಶ್ರೀಕುಮಾರ್ ನಟಿಸಿದ್ದಾರೆ. ಈ ಚಿತ್ರವು ಮುಕುಂದ್ ವರದರಾಜನ್ ಅವರ ಶಿವ ಆರೂರ್ ಮತ್ತು ರಾಹುಲ್ ಸಿಂಗ್ ಅವರ ಇಂಡಿಯಾಸ್ ಮೋಸ್ಟ್ ಫಿಯರ್‌ಲೆಸ್‌ನ ರೂಪಾಂತರವಾಗಿದೆ.

IPL_Entry_Point