ಇಳಯರಾಜ ಮುಂದೆ ಮಂಡಿಯೂರಿದ ಮಂಜುಮ್ಮೆಲ್‌ ಬಾಯ್ಸ್‌; ಕಣ್ಮಣಿ ಹಾಡು ಬಳಸಿದಕ್ಕೆ ದುಬಾರಿ ದಂಡ ತೆತ್ತ ಚಿತ್ರತಂಡ-kollywood news manjummel boys makers pay compensation to music director ilaiyaraaja for using kanmani anbodu song mnk ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  ಇಳಯರಾಜ ಮುಂದೆ ಮಂಡಿಯೂರಿದ ಮಂಜುಮ್ಮೆಲ್‌ ಬಾಯ್ಸ್‌; ಕಣ್ಮಣಿ ಹಾಡು ಬಳಸಿದಕ್ಕೆ ದುಬಾರಿ ದಂಡ ತೆತ್ತ ಚಿತ್ರತಂಡ

ಇಳಯರಾಜ ಮುಂದೆ ಮಂಡಿಯೂರಿದ ಮಂಜುಮ್ಮೆಲ್‌ ಬಾಯ್ಸ್‌; ಕಣ್ಮಣಿ ಹಾಡು ಬಳಸಿದಕ್ಕೆ ದುಬಾರಿ ದಂಡ ತೆತ್ತ ಚಿತ್ರತಂಡ

ಸಂಗೀತ ನಿರ್ದೇಶಕ ಇಳಯರಾಜ ಹಾಗೂ ಮಂಜುಮ್ಮೆಲ್ ಬಾಯ್ಸ್ ಚಿತ್ರತಂಡದ ನಡುವಿನ ಹಾಡಿನ ವಿವಾದ ಕೊನೆಗೂ ಬಗೆಹರಿದಿದೆ. 2 ಕೋಟಿಗೆ ಡಿಮಾಂಡ್‌ ಮಾಡಿದ್ದ ಹಿರಿಯ ಸಂಗೀತ ನಿರ್ದೇಶಕ ಇಳಯರಾಜ ಅವರಿಗೆ 60 ಲಕ್ಷ ಪರಿಹಾರ ನೀಡುವ ಮೂಲಕ ಪ್ರಕರಣ ಸುಖಾಂತ್ಯ ಕಂಡಿದೆ.

ಇಳಯರಾಜಾ ಮುಂದೆ ಮಂಡಿಯೂರಿದ ಮಂಜುಮ್ಮೆಲ್‌ ಬಾಯ್ಸ್‌; ಕಣ್ಮಣಿ ಹಾಡು ಬಳಸಿದಕ್ಕೆ ದುಬಾರಿ ದಂಡ ತೆತ್ತ ಚಿತ್ರತಂಡ
ಇಳಯರಾಜಾ ಮುಂದೆ ಮಂಡಿಯೂರಿದ ಮಂಜುಮ್ಮೆಲ್‌ ಬಾಯ್ಸ್‌; ಕಣ್ಮಣಿ ಹಾಡು ಬಳಸಿದಕ್ಕೆ ದುಬಾರಿ ದಂಡ ತೆತ್ತ ಚಿತ್ರತಂಡ

Manjummel Boys: ಮಾಲಿವುಡ್‌ನ ಬ್ಲಾಕ್‌ ಬಸ್ಟರ್‌ ಮಂಜುಮ್ಮೆಲ್ ಬಾಯ್ಸ್ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಸೂಪರ್‌ಹಿಟ್‌ ಪಟ್ಟ ಪಡೆದುಕೊಂಡಿದೆ. ನೈಜ ಘಟನೆಯಿಂದ ಪ್ರೇರಣೆ ಪಡೆದು ಮೂಡಿಬಂದ ಈ ಸಿನಿಮಾ ಬರೋಬ್ಬರಿ 200 ಕೋಟಿಗೂ ಅಧಿಕ ಕಲೆಕ್ಷನ್‌ ಮಾಡಿ, ಬರೀ ಕೇರಳ ಮಾತ್ರವಲ್ಲದೆ, ಸೌತ್‌ನ ಉಳಿದ ಸಿನಿಮಾ ಇಂಡಸ್ಟ್ರಿಯಲ್ಲಿಯೂ ಸದ್ದು ಮಾಡಿತ್ತು. ಚಿತ್ರಮಂದಿರದ ಬಳಿಕ ಒಟಿಟಿಯಲ್ಲಿ ಬಿಡುಗಡೆಯಾಗಿ ಅಲ್ಲಿಯೂ ಹೆಚ್ಚೆಚ್ಚು ನೋಡುಗರನ್ನು ಸೆಳೆದಿತ್ತು. ಹೀಗೆ ಎಲ್ಲ ಕಡೆಯಿಂದ ಮೆಚ್ಚುಗೆ ಪಡೆದುಕೊಂಡಿದ್ದ ಈ ಸಿನಿಮಾಕ್ಕೆ ಸಂಗೀತ ನಿರ್ದೇಶಕ ಇಳಯರಾಜಾ ಕಡೆಯಿಂದ ಸಂಕಷ್ಟ ಎದುರಾಗಿತ್ತು.

ಹೌದು ಕೆಲ ತಿಂಗಳ ಹಿಂದಷ್ಟೇ ಬಿಡುಗಡೆಯಾದ ಮಲಯಾಳಂನ ಮಂಜುಮ್ಮೇಲ್ ಬಾಯ್ಸ್ ಚಿತ್ರವನ್ನು ತಮಿಳು ಅಭಿಮಾನಿಗಳೂ ಸ್ವಾಗತಿಸಿದ್ದರು. ಸಂಭ್ರಮಿಸಿದ್ದರು. ಅದಕ್ಕೆ ಕಾರಣ, ಆ ಚಿತ್ರದಲ್ಲಿ ಬಳಕೆಯಾದ 90ರ ದಶಕದ ಗುಣ ಚಿತ್ರದ ‘ಕಣ್ಮಣಿ ಅನ್ಬೋದು’ ಎಂಬ ಹಾಡು. ಜತೆಗೆ ಈ  ವರ್ಷ ತೆರೆಕಂಡ ಮಲಯಾಳಂ ಸಿನಿಮಾಗಳ ಪೈಕಿ ಅತಿ ಹೆಚ್ಚು ಕಲೆಕ್ಷನ್‌ ಮಾಡಿದ ಸಿನಿಮಾ ಖ್ಯಾತಿಯನ್ನೂ ಪಡೆದುಕೊಂಡಿತ್ತು. ಹಾಡಿನ ವಿಚಾರದಲ್ಲಿ ವಿವಾದವನ್ನೂ ಮೈ ಮೇಲೆ ಎಳೆದುಕೊಂಡಿತ್ತು.

ಸುಖಾಂತ್ಯ ಕಂಡ ಪ್ರಕರಣ

ಮಂಜುಮ್ಮೆಲ್‌ ಬಾಯ್ಸ್ ಸಿನಿಮಾದಲ್ಲಿ ಗುಣ ಚಿತ್ರದ ಕಣ್ಮಣಿ ಅನ್ಬೋದಾ ಹಾಡನ್ನು, ಆ ಚಿತ್ರದ ಸಂಗೀತ ನಿರ್ದೇಶಕ ಇಳಯರಾಜ ಅವರ ಅನುಮತಿ ಪಡೆಯದೇ ಬಳಸಿಕೊಳ್ಳಲಾಗಿತ್ತು. ಈ ಬಗ್ಗೆ ಇಳಯರಾಜಾ ಕಡೆಯಿಂದ ಸಿನಿಮಾ ತಂಡಕ್ಕೆ ನೋಟಿಸ್‌ ರವಾನೆಯಾಗಿತ್ತು. ಅನುಮತಿ ಪಡೆಯದೇ ಹಾಡು ಬಳಸಿಕೊಂಡಿದ್ದಕ್ಕೆ 2 ಕೋಟಿ ನೀಡುವಂತೆ ಪರಿಹಾರ ನೀಡುವಂತೆ ಇಳಯರಾಜ ತಂಡದ ವಿರುದ್ಧ ಕೋರ್ಟ್‌ ಮೆಟ್ಟಿಲೇರಿದ್ದರು . ಅದಾದ ಬಳಿಕ ಚಿತ್ರತಂಡವೂ ಈ ಬಗ್ಗೆ ಕಾನೂನು ಸಮರಕ್ಕೆ ಇಳಿದಿತ್ತು. ಇದೀಗ ಬಹು ದಿನಗಳ ಈ ಕಾನೂನು ಹೋರಾಟ ಕೊನೆಗೊಂಡಿದೆ. ಸುಖಾಂತ್ಯವಾಗಿದೆ. 

2 ಕೋಟಿ ಬದಲು 60 ಲಕ್ಷಕ್ಕೆ ಒಪ್ಪಿಗೆ 

ಸಂಗೀತ ನಿರ್ದೇಶಕ ಇಳಯರಾಜ ಹಾಗೂ ಮಂಜುಮ್ಮೆಲ್ ಬಾಯ್ಸ್ ಚಿತ್ರತಂಡದ ನಡುವಿನ ಹಾಡಿನ ವಿವಾದ ಕೊನೆಗೂ ಬಗೆಹರಿದಿದೆ. 2 ಕೋಟಿಗೆ ಡಿಮಾಂಡ್‌ ಮಾಡಿದ್ದ ಹಿರಿಯ ಸಂಗೀತ ನಿರ್ದೇಶಕ ಇಳಯರಾಜ ಅವರಿಗೆ 60 ಲಕ್ಷ ಪರಿಹಾರ ನೀಡುವ ಮೂಲಕ ಪ್ರಕರಣ ಸುಖಾಂತ್ಯ ಕಂಡಿದೆ. ಕೋರ್ಟ್‌ ಮೆಟ್ಟಿಲೇರಿದ್ದ ಈ ಪ್ರಕರಣ, ಕೋರ್ಟ್‌ ಅಂಗಳದಲ್ಲಿ ಕೊನೆಗೊಳ್ಳದೆ, ಮಾತುಕತೆಯ ಮೂಲಕವೇ ಬಗೆಹರಿದಿದೆ. ಈ ಮೂಲಕ ಈ ಕಾನೂನು ಹೋರಾಟದಲ್ಲಿ ಇಳಯರಾಜ ಗೆದ್ದಿದ್ದಾರೆ.

ಟ್ರೆಂಡ್‌ ಸೃಷ್ಟಿಸಿದ್ದ ಕಣ್ಮಣಿ ಅನ್ಬೋದು ಹಾಡು..

2006ರಲ್ಲಿ ಕೇರಳದ ಮಂಜುಮ್ಮೆಲ್‌ ಊರಿನ ಯುವಕರು ಕೊಡೈಕೆನಾಲ್‌ಗೆ ಪ್ರವಾಸಕ್ಕೆಂದು ಹೋದ ಸಂದರ್ಭದಲ್ಲಿ ನಡೆದ ಘಟನೆಯನ್ನೇ ಸಿನಿಮಾ ರೂಪದಲ್ಲಿ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕ ಚಿದಂಬರಂ. ಆ ಗುಣ ಗುಹೆಗೆ ಬಿದ್ದವನನ್ನು ಹೇಗೆ ಮೇಲೆತ್ತಲಾಯ್ತು? ಎದುರಾದ ಕಷ್ಟಗಳೇನು? ಈ ಎಲ್ಲ ಅಂಶಗಳನ್ನು ಕಣ್ಣಿಗೆ ಕಟ್ಟಿದಂತೆ ತೆರೆಗೆ ತಂದಿದ್ದರು ನಿರ್ದೇಶಕರು. ಸಿನಿಮಾದ ಕೊನೆಯಲ್ಲಿ ಗುಣ ಚಿತ್ರದ "ಕಣ್ಮಣಿ ಅನ್ಬೋದು" ಹಾಡನ್ನು ಚಿತ್ರತಂಡ ಬಳಸಿಕೊಂಡಿತ್ತು. ಆ ಒಂದು ಹಾಡಿನಿಂದಲೇ ಸೋಷಿಯಲ್‌ ಮೀಡಿಯಾದಲ್ಲಿಯೂ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿ, ಮತ್ತೆ ಗುನುಗುವಂತೆ ಮಾಡಿತ್ತು. ಹೀಗೆ ಅನುಮತಿ ಪಡೆಯದೇ ಬಳಸಿಕೊಂಡು, ಪೇಚಿಗೆ ಸಿಲುಕಿತ್ತು.