ಕನ್ನಡ ಸುದ್ದಿ  /  ಮನರಂಜನೆ  /  ತ್ರಿಶಾ ವಿರುದ್ಧ ಲೈಂಗಿಕ ಕೌರ್ಯದ ಹೇಳಿಕೆ; ಮನ್ಸೂರ್‌ ಆಲಿ ಖಾನ್‌ ವಿರುದ್ಧ ಸುಮೊಟೊ ಕೇಸ್‌ ದಾಖಲಿಸಿಕೊಂಡ ರಾಷ್ಟ್ರೀಯ ಮಹಿಳಾ ಆಯೋಗ

ತ್ರಿಶಾ ವಿರುದ್ಧ ಲೈಂಗಿಕ ಕೌರ್ಯದ ಹೇಳಿಕೆ; ಮನ್ಸೂರ್‌ ಆಲಿ ಖಾನ್‌ ವಿರುದ್ಧ ಸುಮೊಟೊ ಕೇಸ್‌ ದಾಖಲಿಸಿಕೊಂಡ ರಾಷ್ಟ್ರೀಯ ಮಹಿಳಾ ಆಯೋಗ

Suo-moto Case Against Mansoor Ali Khan: ತ್ರಿಶಾ ವಿರುದ್ಧ ಲೈಂಗಿಕ ಕೌರ್ಯದ ಸೀನ್‌ನ ಹೇಳಿಕೆ ನೀಡಿರುವ ಮನ್ಸೂರ್‌ ಆಲಿ ಖಾನ್‌ ವಿರುದ್ಧ ರಾಷ್ಟ್ರೀಯ ಮಹಿಳಾ ಆಯೋಗವು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ಸಂಬಂಧಪಟ್ಟ ಕಾನೂನಿನಡಿ ಕ್ರಮ ಜರುಗಿಸಲು ಪೊಲೀಸ್‌ ಇಲಾಖೆಗೆ ನಿರ್ದೇಶನ ನೀಡಿದೆ.

ಮನ್ಸೂರ್‌ ಆಲಿ ಖಾನ್‌ ವಿರುದ್ಧ ಸುಮೊಟೊ ಕೇಸ್‌ ದಾಖಲಿಸಿಕೊಂಡ ರಾಷ್ಟ್ರೀಯ ಮಹಿಳಾ ಆಯೋಗ
ಮನ್ಸೂರ್‌ ಆಲಿ ಖಾನ್‌ ವಿರುದ್ಧ ಸುಮೊಟೊ ಕೇಸ್‌ ದಾಖಲಿಸಿಕೊಂಡ ರಾಷ್ಟ್ರೀಯ ಮಹಿಳಾ ಆಯೋಗ

ನಟಿ ತ್ರಿಶಾ ವಿರುದ್ಧ ಅವಹೇಳನಕಾರಿ ಲೈಂಗಿಕ ಕೌರ್ಯದ ಸೀನ್‌ ಕುರಿತು ಹೇಳಿಕೆ ನೀಡಿರುವ ಮನ್ಸೂರ್‌ ಆಲಿ ಖಾನ್‌ ವಿರುದ್ಧ ರಾಷ್ಟ್ರೀಯ ಮಹಿಳಾ ಆಯೋಗವು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದೆ. ವಿಜಯ್‌- ತ್ರಿಶಾ ಲಿಯೋ ಸಿನಿಮಾದಲ್ಲಿ ನಟಿಸಿದ್ದ ಮನ್ಸೂರ್‌ ಆಲಿ ಖಾನ್‌ ಅವರು ಇತ್ತೀಚೆಗೆ ಪತ್ರಿಕಾಗೋಷ್ಠಿಯಲ್ಲಿ ಅವಹೇಳನಕಾರಿ ಹೇಳಿಕೆ ನೀಡಿದ್ದರು. ತ್ರಿಶಾ ಅವರ ಜತೆ ಬೆಡ್‌ರೂಂ ಸೀನ್‌ ಇರುವ ನಿರೀಕ್ಷೆ ಇತ್ತು. ಇದರೊಂದಿಗೆ ಕೆಲವು ಲೈಂಗಿಕ ಕೌರ್ಯದ ಸೀನ್‌ನ ಹೇಳಿಕೆಯ ನಿರೀಕ್ಷೆಯನ್ನೂ ಅವರು ಪತ್ರಿಕಾ ಗೋಷ್ಠಿಯಲ್ಲಿ ನೀಡಿದ್ದರು. ಕ್ರೂರ ಮತ್ತು ಸ್ತ್ರೀದ್ವೇಷದ ಈ ಹೇಳಿಕೆಯ ಕುರಿತು ಸಾಕಷ್ಟು ಜನರು ಖಂಡನೆ ವ್ಯಕ್ತಪಡಿಸುತ್ತಿದ್ದಾರೆ. ಇದೀಗ ರಾಷ್ಟ್ರೀಯ ಮಹಿಳಾ ಆಯೋಗವು ಈ ವಿಷಯದ ಕುರಿತು ಸುಮೊಟೊ ಪ್ರಕರಣ ದಾಖಲಿಸಿಕೊಂಡಿದೆ.

ಟ್ರೆಂಡಿಂಗ್​ ಸುದ್ದಿ

ಮನ್ಸೂರ್‌ ಆಲಿ ಖಾನ್‌ ವಿರುದ್ಧ ಕೇಸ್‌

ಮನ್ಸೂರ್‌ ಆಲಿ ಖಾನ್‌ ವಿರುದ್ಧ ಭಾರತೀಯ ದಂಡಸಂಹಿತೆ ಸೆಕ್ಷನ್‌ 509ಬಿ ಮತ್ತು ಇತರೆ ಸಂಬಂಧಪಟ್ಟ ಕಾನೂನುಗಳಡಿ ಪ್ರಕರಣ ದಾಖಲಿಸಲು ಡೆಪ್ಯೂಟಿ ಜನರಲ್‌ ಆಫ್‌ ಪೊಲೀಸ್‌ಗೆ ನಿರ್ದೇಶನ ನೀಡಲಾಗಿದೆ ಎಂದು ಭಾರತೀಯ ರಾಷ್ಟ್ರೀಯ ಮಹಿಳಾ ಆಯೋಗವು ಟ್ವೀಟ್‌ ಮಾಡಿದೆ. ಎಲೆಕ್ಟ್ರಾನಿಕ್‌ ಮೋಡ್‌ನಲ್ಲಿ ಹೇಳಿಕೆಗಳ ಮೂಲಕ ಮಹಿಳೆಗೆ ಅಶ್ಲೀಲ, ಕಾಮಪ್ರಚೋದಕ, ಹೊಲಸು ಅಥವಾ ಅಸಭ್ಯ ವಿಷಯಗಳ ಮೂಲಕ ಕಿರುಕುಳ, ಮಾನಸಿಕ ಸಂಕಟ ನೀಡಿದರೆ ಅಂತಹ ಅಪರಾಧಿಗಳಿಗೆ ಆರು ತಿಂಗಳಿಗಿಂತ ಕಡಿಮೆ ಇಲ್ಲದಂತೆ ಜೈಲು ಶಿಕ್ಷೆ ವಿಧಿಸಲು ಅವಕಾಶವಿದೆ. ಜತೆಗೆ ಇವರು ದಂಡವನ್ನೂ ಪಾವತಿಸಬೇಕಿರುತ್ತದೆ ಎಂದು ವರದಿಗಳು ತಿಳಿಸಿವೆ.

ಮನ್ಸೂರ್‌ ಆಲಿಖಾನ್‌ ಹೇಳಿಕೆಗೆ ವ್ಯಾಪಕ ಖಂಡನೆ

ಸಿನಿಮಾಗಳಲ್ಲಿ ಖಳನಟನಾಗಿಯೇ ಹೆಚ್ಚು ಗುರುತಿಸಿಕೊಂಡಿದ್ದಾರೆ ಮನ್ಸೂರ್‌ ಅಲಿಖಾನ್‌. ಲಿಯೋ ಸಿನಿಮಾದಲ್ಲೂ ಖಳನ ಪಾತ್ರದಲ್ಲಿಯೇ ಕಾಣಿಸಿಕೊಂಡಿದ್ದಾರೆ. ಖಳನ ಪಾತ್ರದಲ್ಲಿ ನಟಿಸುತ್ತಿದ್ದಾಗ ನಾಯಕಿಯರ ಜತೆಗೆ ಅತ್ಯಾಚಾರ ದೃಶ್ಯಗಳಲ್ಲೂ ಇವರು ಹೆಚ್ಚು ನಟಿಸಿದ್ದಾರೆ. ಇದೀಗ ಆ ಬಯಕೆ ಲಿಯೋ ಸಿನಿಮಾದಲ್ಲಿ ಸಿಗಲಿಲ್ಲ ಎಂದಿದ್ದಾರೆ. ತ್ರಿಷಾ ಅವರನ್ನೇ ಗುರಿಯಾಗಿಸಿಕೊಂಡು ಮನ್ಸೂರ್‌ ಅಲಿಖಾನ್‌ ಆಡಿದ ಮಾತಿಗೆ ಸಾಕಷ್ಟು ಜನರು ವಿರೋಧ, ಖಂಡನೆ ವ್ಯಕ್ತಪಡಿಸಿದ್ದರು.

ನಾನು ವಿಜಯ್‌ ನಟನೆಯ ಲಿಯೋ ಚಿತ್ರದಲ್ಲಿ ನಟಿಸುವೆ ಎಂದಾಗ ತ್ರಿಶಾ ಜತೆ *** ದೃಶ್ಯ ಇರಬಹುದು ಎಂಬ ನಿರೀಕ್ಷೆಯಲ್ಲಿದ್ದೆ. ಅವರನ್ನು ನನ್ನ ತೋಳುಗಳಲ್ಲಿ ಎತ್ತಿಕೊಂಡು ಬರುವ ದೃಶ್ಯ ಇರಬಹುದು ಎಂದುಕೊಂಡೆ. ಜತೆಗೆ, ಬೆಡ್‌ರೂಂ ದೃಶ್ಯಗಳ ನಿರೀಕ್ಷೆಯಲಿದ್ದೆ. ಆದರೆ, ನಿರ್ದೇಶಕರು ನನಗೆ ತ್ರಿಶಾರನ್ನೂ ತೋರಿಸಲೇ ಇಲ್ಲ. ನಾನು ಈಗಾಗಲೇ ಇಂತಹ ಹಲವು ಸೀನ್‌ಗಳಲ್ಲಿ ಭಾಗವಹಿಸಿರುವೆ" ಎಂದು ಅವರು ಹೇಳಿಕೆ ನೀಡಿದ್ದರು.

ತ್ರಿಶಾ ಪ್ರತಿಕ್ರಿಯೆ

ಸೋಷಿಯಲ್‌ ಮೀಡಿಯಾದಲ್ಲಿ ಮನ್ಸೂರ್‌ ಆಲಿಖಾನ್‌ ಅವರು ನೀಡಿದ ಹೇಳಿಕೆ ವೈರಲ್‌ ಆದಾಗ ಅದು ತ್ರಿಶಾ ಗಮನಕ್ಕೂ ಬಂದಿತ್ತು. ಅದಕ್ಕೆ ಅವರು ಖಾರವಾದ ಪ್ರತಿಕ್ರಿಯೆ ನೀಡಿದ್ದರು. ನಾನು ಇನ್ಮುಂದೆ ಈ ವ್ಯಕ್ತಿಯ ಜತೆ ನಟಿಸಲಾರೆ ಎಂದಿದ್ದಾಎರೆ. "ಮನ್ಸೂರ್ ಅಲಿ ಖಾನ್ ನನ್ನ ಬಗ್ಗೆ ಅಸಹ್ಯವಾಗಿ ಮತ್ತು ಕೆಟ್ಟದಾಗಿ ಮಾತನಾಡಿರುವ ವೀಡಿಯೊವನ್ನು ನಾನು ನೋಡಿದ್ದೇನೆ. ಆ ಮಾತುಗಳನ್ನು ನಾನು ಖಂಡಿಸುತ್ತೇನೆ. ಇದು ಕೆಟ್ಟತನದ ಪರಮಾವಧಿ, ಅಗೌರವ, ಸ್ತ್ರೀದ್ವೇಷ ಮತ್ತು ಅಷ್ಟೇ ಅಸಹ್ಯಕರ. ಇನ್ಮೇಲೆ ನಾನು ಎಂದಿಗೂ ಆ ನೀಚ ವ್ಯಕ್ತಿಯೊಂದಿಗೆ ತೆರೆ ಹಂಚಿಕೊಳ್ಳುವುದಿಲ್ಲ. ಅವರಂಥವರು ಮನುಕುಲಕ್ಕೇ ಕೆಟ್ಟ ಹೆಸರು" ಎಂದು ಅವರು ಪ್ರತಿಕ್ರಿಯೆ ನೀಡಿದ್ದರು.

IPL_Entry_Point