Annapoorani: ಸುತ್ತಲೂ ಭಕ್ತಿಭಾವ, ಪುಸ್ತಕದೆಡೆಯಲ್ಲಿ ಕಬಾಬ್‌ ಚಿತ್ರವನ್ನು ಆಸೆಯಿಂದ ನೋಡುತ್ತಿರುವ ನಯನತಾರಾ, ಮಜವಾಗಿದೆ ಅನ್ನಪೂರಣಿ ಟೀಸರ್‌-kollywood news nayanatara annapoorani teaser mysterious character reading management book inside meat dish recipe pcp ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  Annapoorani: ಸುತ್ತಲೂ ಭಕ್ತಿಭಾವ, ಪುಸ್ತಕದೆಡೆಯಲ್ಲಿ ಕಬಾಬ್‌ ಚಿತ್ರವನ್ನು ಆಸೆಯಿಂದ ನೋಡುತ್ತಿರುವ ನಯನತಾರಾ, ಮಜವಾಗಿದೆ ಅನ್ನಪೂರಣಿ ಟೀಸರ್‌

Annapoorani: ಸುತ್ತಲೂ ಭಕ್ತಿಭಾವ, ಪುಸ್ತಕದೆಡೆಯಲ್ಲಿ ಕಬಾಬ್‌ ಚಿತ್ರವನ್ನು ಆಸೆಯಿಂದ ನೋಡುತ್ತಿರುವ ನಯನತಾರಾ, ಮಜವಾಗಿದೆ ಅನ್ನಪೂರಣಿ ಟೀಸರ್‌

Nayanatara Annapoorani Teaser: ನಯನತಾರಾ ಅವರು ಅನ್ನಪೂರಣಿ (ಕನ್ನಡದಲ್ಲಿ ಅನ್ನಪೂರ್ಣೆ) ಚಿತ್ರದ ಟೀಸರ್‌ ಅನ್ನು ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಬಿಡುಗಡೆ ಮಾಡಿದ್ದಾರೆ. ಭಕ್ತಿಭಾವದಿಂದ ಆರಂಭವಾಗುವ ಈ ಚಿತ್ರದಲ್ಲಿ ಅನ್ನಪೂರಣಿ ಟೀಸರ್‌ನಲ್ಲೊಂದು ಟ್ವಿಸ್ಟ್‌ ಇದ್ದು, ಇದು ನೋಡುಗರ ಮುಖದಲ್ಲಿ ನಗು ಮೂಡಿಸುತ್ತದೆ.

Annapoorani:  ಪುಸ್ತಕದೆಡೆಯಲ್ಲಿ ಕಬಾಬ್‌ ಚಿತ್ರ, ಅನ್ನಪೂರಣಿ ಟೀಸರ್‌
Annapoorani: ಪುಸ್ತಕದೆಡೆಯಲ್ಲಿ ಕಬಾಬ್‌ ಚಿತ್ರ, ಅನ್ನಪೂರಣಿ ಟೀಸರ್‌

ಬೆಂಗಳೂರು: ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ, ತಮಿಳು ಸೇರಿದಂತೆ ಭಾರತದ ಬಹುತೇಕ ಭಾಷೆಗಳಲ್ಲಿ ನಟಿಸಿ ಸೈ ಎಣಿಸಿಕೊಂಡಿರುವ ನಯನತಾರಾರ 75ನೇ ಚಿತ್ರ ಅನ್ನಪೂರಣಿಯ ಟೀಸರ್‌ ಬಿಡುಗಡೆಯಾಗಿದೆ. ಈ ಟೀಚರ್‌ನಲ್ಲಿ ನಯನಾ ವಿದ್ಯಾರ್ಥಿನಿಯಾಗಿ ಓದುತ್ತಾ ಇರುವ ದೃಶ್ಯವಿದೆ. ಈ ಟೀಸರ್‌ ಕುರಿತು ಅಭಿಮಾನಿಗಳು ಸಾಕಷ್ಟು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದು ಹಾಸ್ಯ ಚಿತ್ರ ಎನ್ನಲಾಗಿದೆ.

ನಯನತಾರಾ ಅನ್ನಪೂರಣಿ ಚಿತ್ರದ ಟೀಸರ್‌

ಟೀಸರ್‌ ಆರಂಭದಲ್ಲೇ ಪ್ರಮುಖ ದೇವಾಲಯವೊಂದರ (ತಿರುಚಿಯ ಶ್ರೀರಂಗಂ) ಸಮೀಪವಿರುವ ಹಳೆಯ ಮನೆಯೊಳಗೆ (ಅಗ್ರಹಾರ) ಪ್ರೇಕ್ಷಕರನ್ನು ಕರೆದೊಯ್ಯುತ್ತದೆ. ಈ ಚಿತ್ರದಲ್ಲಿ ಹಿರಿಯ ವ್ಯಕ್ತಿಯೊಬ್ಬರು ಪೂಜೆಯಲ್ಲಿ ನಿರತರಾಗಿದ್ದಾರೆ. ಹಿರಿಯ ಮಹಿಳೆಯೊಬ್ಬರು ಜಪಸರವನ್ನು ಹಿಡಿದುಕೊಂಡು ಭಕ್ತಿ ಪರವಶರಾಗಿದ್ದಾರೆ. ಬಹುಶಃ ಈ ಚಿತ್ರದಲ್ಲಿ ನಯನತಾರಾ ತಾಯಿ ಪಾತ್ರದಾರಿಯಾಗಿರುವ ಮಹಿಳೆಯು ಮನೆಯಲ್ಲಿ ಆರತಿ ಬೆಳಗುತ್ತಾ ಇರುತ್ತಾರೆ. ಹಿನ್ನೆಲೆಯಲ್ಲಿ ಭಕ್ತಿಗೀತೆ ಕೇಳಿಸುತ್ತ ಇರುತ್ತದೆ.

ಈ ನಡುವೆ ನಯನತಾರಾ ಬಿಸ್ನೆಸ್‌ ಲಾಜಿಸ್ಟಿಕ್‌, ಸಪ್ಲೈ ಚೈನ್‌ ಮ್ಯಾನೇಜ್‌ಮೆಂಟ್‌ ಪುಸ್ತಕ ಓದುತ್ತಾ ಇರುತ್ತಾರೆ. ಇಷ್ಟೊಂದು ಗಂಭೀರವಾಗಿ ಓದುವ ಇವರ ಕುರಿತು ಯಾವುದೇ ಅನುಮಾನ ಬರುವುದಿಲ್ಲ. ಏಕೆಂದರೆ, ಸುತ್ತಮುತ್ತಲಿನ ಭಕ್ತಿಭಾವ, ಸಂಪ್ರದಾಯಗಳ ನಡುವೆ ಈ ಹುಡುಗಿ ಜಾಣೆಯಂತೆ ಓದುತ್ತಿದ್ದಾಳೆ ಎಂದು ಪ್ರೇಕ್ಷಕರಿಗೆ ಅನಿಸಬಹುದು. ಆದರೆ, ಆಕೆಯ ಪುಸ್ತಕದ ನಡುವೆ ಚಿಕನ್‌ ಕಬಾಬ್‌ ಚಿತ್ರ ಕಾಣಿಸುತ್ತದೆ. ಮಾಂಸಹಾರ ಅಡುಗೆಯ ರೆಸಿಪಿ ಪುಸ್ತಕದಲ್ಲಿ ಆ ಚಿತ್ರವನ್ನು ಆಸೆಯಿಂದ ಇವರು ನೋಡುತ್ತಿರುವ ದೃಶ್ಯವಿದೆ. ಆ ಸಮಯದಲ್ಲಿ ಆಕೆಯ ತಾಯಿ ಆರತಿ ತರುತ್ತಾರೆ, ಪರೀಕ್ಷೆಗೆ ಓದುತ್ತಿದ್ದೀಯಾ, ಚೆನ್ನಾಗಿ ಓದು ಎಂದು ತಲೆ ಸವರಿ ಹೋಗುತ್ತಾರೆ. ಒಟ್ಟಾರೆ, ಈ ಸಿನಿಮಾ ಸಮ್‌ಥಿಂಗ್‌ ಸ್ಪೆಷಲ್‌ ಭಾವ ಮೂಡಿಸುತ್ತದೆ.

ನಾಯಕಿ ಪ್ರಧಾನ ಚಿತ್ರ

ಅನ್ನಪೂರಣಿಯಲ್ಲಿ ನಯನತಾರ ನಾಯಕಿಯಾಗಿದ್ದಾರೆ. ಇದು ನಾಯಕಿಪ್ರಧಾನ ಚಿತ್ರ ಎನ್ನಲಾಗಿದೆ. ಇದು ನಯನತಾರಾ ಅವರ 75ನೇಯ ಸಿನಿಮಾವಾಗಿದೆ. ಮದುವೆ, ಮಕ್ಕಳಾದ ಬಳಿಕವೂ ನಯನತಾರಾ ನಟನೆಯಲ್ಲಿ ಹೆಚ್ಚು ಗಮನ ಸೆಳೆಯುತ್ತಾರೆ. ಇಲ್ಲಿಯವರೆಗೆ 74 ಚಿತ್ರಗಳಲ್ಲಿ ನಟಿಸಿ ಈಗ ನಾಯಕಿಪ್ರಧಾನ ಸಿನಿಮಾದಲ್ಲಿ ಮಿಂಚುವ ಸೂಚನೆ ನೀಡಿದ್ದಾರೆ. ಈ ಚಿತ್ರದಲ್ಲಿ ಸೆಂಟಿಮೆಂಟ್‌ ಜತೆಗೆ ಹಾಸ್ಯವೂ ಇರುವ ಸೂಚನೆಯಿದೆ.

ಅನ್ನಪೂರಣಿ ಚಿತ್ರದ ತಾರಾಗಣ

ಅಚ್ಯುತ್‌ ಕುಮಾರ್‌, ಸತ್ಯರಾಜ್‌, ಕಾರ್ತಿಕ್‌ ಕುಮಾರ್‌, ಸುರೇಶ್‌ ಚಕ್ರವರ್ತಿ, ಕೆಎಸ್‌ ರವಿಕುಮಾರ್‌, ರೇಣುಕಾ ಸೇರಿದಂತೆ ಪ್ರಮುಖ ತಾರಾಗಣ ಈ ಚಿತ್ರಕ್ಕಿದೆ. ನೀಲೇಶ್‌ ಕೃಷ್ಣ ನಿರ್ದೇಶನದ ಈ ಚಿತ್ರಕ್ಕೆ ಥಮನ್‌ ಎಸ್‌ ಅವರ ಸಂಗೀತವಿದೆ. ಸತ್ಯನ್‌ ಸೂರ್ಯನ್‌ ಛಾಯಾಗ್ರಹಣವಿದೆ. ಶಾರೂಖ್‌ ಖಾನ್‌ ಜತೆ ಇತ್ತೀಚೆಗೆ ಇವರು ಜವಾನ್‌ ಚಿತ್ರದಲ್ಲಿ ಮಿಂಚಿದ್ದರು. ಲೇಡಿ ಪೊಲೀಸ್‌ ಪಾತ್ರದಲ್ಲಿ ಇವರ ನಟನೆ ಎಲ್ಲರ ಗಮನ ಸೆಳೆದಿತ್ತು.

ನಯನತಾರಾ ಅವರು 2003ರಲ್ಲಿ ಮಲಯಾಳಂ ಚಿತ್ರ ಮನಸ್ಸಿನಕ್ಕರೆಯಲ್ಲಿ ನಟಿಸಿದ್ದರು. ಬಳಿಕ ತಮಿಳಿನಲ್ಲಿ ಅಯ್ಯ, ತೆಲುಗಿನಲ್ಲಿ ಲಕ್ಷ್ಮಿ ಚಿತ್ರದಲ್ಲಿ ಕಾಣಿಸಿದ್ದರು. ಚಂದ್ರಮುಖಿ , ದುಬೈ ಸೀನು, ತುಲಿಯಾಸಿ, ಬಿಲ್ಲಾ, ಯಾರಡಿ ನೀ ಮೊಹಿನಿ, ಆಧವನ್, ಅಡರ್ಸ್ , ರಾಜಾ ರಾಣಿ, ಅರಂಬಮ್, ಥನಿ ಒರುವಾನ್, ಮಾಯಾ, ನಾನು ರೌಡಿ ಧಾನ್, ಬಾಬು ಬಂಗಾರಮ್ ಮತ್ತು ಇರು ಮುಗಾನ್ ಇತ್ಯಾದಿ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಉಪೇಂದ್ರ ಅವರ ಸೂಪರ್‌ ಸಿನಿಮಾದಲ್ಲೂ ನಟಿಸಿದ್ದಾರೆ.

mysore-dasara_Entry_Point