ಕನ್ನಡ ಸುದ್ದಿ  /  Entertainment  /  Kollywood News Nayanthara And Vignesh Shivan Dismiss Divorce Rumours, Pose With Sons Uyir And Ulgham During Trip Pcp

ನಯನತಾರಾ ವಿಘ್ನೇಶ್‌ ಶಿವನ್‌ ವಿವಾಹ ವಿಚ್ಛೇದನ ವದಂತಿಗೆ ಬ್ರೇಕ್‌, ಉಯಿರ್‌ ಉಳಗಮ್ ಜತೆ ಎಷ್ಟು ಖುಷಿಯಾಗಿದ್ದಾರೆ ನೋಡಿ

ಬಹುಭಾಷಾ ನಟಿ ನಯನತಾರಾ ಮತ್ತು ವಿಘ್ನೇಶ್‌ ಶಿವನ್‌ ಅವರು 2022ರ ಜೂನ್‌ 9ರಂದು ವಿವಾಹವಾಗಿದ್ದರು. ಇತ್ತೀಚೆಗೆ ಇವರ ನಡುವೆ ಸರಿಯಿಲ್ಲ, ವಿವಾಹ ವಿಚ್ಛೇದನ ನೀಡಲಿದ್ದಾರೆ ಎಂಬೆಲ್ಲ ವದಂತಿ ಹಬ್ಬಿತ್ತು. ಇದೀಗ ಇವರು ಜತೆಯಾಗಿರುವ ಫೋಟೋಗಳು ಇಂತಹ ವದಂತಿಗೆ ಬ್ರೇಕ್‌ ಹಾಕಿದೆ.

ನಯನತಾರಾ ವಿಘ್ನೇಶ್‌ ಶಿವನ್‌ ವಿವಾಹ ವಿಚ್ಛೇದನ ವದಂತಿ
ನಯನತಾರಾ ವಿಘ್ನೇಶ್‌ ಶಿವನ್‌ ವಿವಾಹ ವಿಚ್ಛೇದನ ವದಂತಿ

ಬೆಂಗಳೂರು: ಬಹುಭಾಷಾ ನಟಿ ನಯನತಾರಾ ಮತ್ತು ವಿಘ್ನೇಶ್‌ ಶಿವನ್‌ ಅವರು 2022ರ ಜೂನ್‌ 9ರಂದು ವಿವಾಹವಾಗಿದ್ದರು. ಇತ್ತೀಚೆಗೆ ಇವರ ನಡುವೆ ಸರಿಯಿಲ್ಲ, ವಿವಾಹ ವಿಚ್ಛೇದನ ನೀಡಲಿದ್ದಾರೆ ಎಂಬೆಲ್ಲ ವದಂತಿ ಹಬ್ಬಿತ್ತು. ಇದೀಗ ಇವರು ಜತೆಯಾಗಿರುವ ಫೋಟೋಗಳು ಇಂತಹ ವದಂತಿಗೆ ಬ್ರೇಕ್‌ ಹಾಕಿದೆ.

ನಯನತಾರಾ ವಿಘ್ನೇಶ್‌ ಶಿವನ್‌ ಟ್ರಿಪ್‌ ಫೋಟೋ

ನಯನತಾರಾ ಗುರುವಾರ ಹಲವು ಫೋಟೋಗಳನ್ನು ತನ್ನ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಜತೆಗೆ ಮಕ್ಕಳ ಫೊಟೋಗಳನ್ನೂ ಹಂಚಿಕೊಂಡಿದ್ದಾರೆ. ಈ ಚಿತ್ರದಲ್ಲಿ ನಯನತಾರಾ ಮತ್ತು ವಿಘ್ನೇಶ್‌ ಅಕ್ಕ ಪಕ್ಕ ಕುಳಿತುಕೊಂಡಿದ್ದಾರೆ. ಅವರಿಬ್ಬರ ಕೈಯಲ್ಲಿ ಉಯಿರ್‌ ಮತ್ತು ಉಲ್ಗಂ ಅವರನ್ನು ತಮ್ಮ ಕೈಗಳಲ್ಲಿ ಹಿಡಿದುಕೊಂಡಿದ್ದಾರೆ. ಕ್ಯಾಮೆರಾ ಕಡೆಗೆ ಇವರು ನಗುತ್ತಾ ನೋಡಿದ್ದಾರೆ. ದಂಪತಿ ಪ್ರವಾಸ ಉಡುಗೆ ತೊಟ್ಟಿದ್ದಾರೆ.

ಮಕ್ಕಳ ಜತೆ ಫೋಟೋ

"ನನ್ನ ಹುಡುಗರ ಜತೆ ಪ್ರವಾಸ ಕೈಗೊಂಡಿದ್ದೇನೆ. ಬಹುಸಮಯದ ಬಳಿಕ ಈ ಪ್ರಯಾಣ" ಎಂದು ಇನ್‌ಸ್ಟಾಗ್ರಾಂನಲ್ಲಿ ಕ್ಯಾಪ್ಷನ್‌ ಬರೆದಿದ್ದಾರೆ. ಈ ಫೋಟೋವನ್ನು ವಿಘ್ನೇಶ್‌ ಮರುಹಂಚಿಕೊಂಡಿದ್ದಾರೆ. ಈ ಕುಟುಂಬ ಸೌದಿ ಅರೇಬಿಯಾನ್‌ ಗ್ರ್ಯಾಂಡ್‌ ಪ್ರಿಕ್ಸ್‌ಗೆ ಪ್ರವಾಸ ಕೈಗೊಂಡಿದ್ದಾರೆ. ಜೆಡ್ಡಾದ ಹಲವು ಫೋಟೋಗಳನ್ನು ಇವರು ಹಂಚಿಕೊಂಡಿದ್ದಾರೆ.

ನಯನತಾರಾ ಮತ್ತು ವಿಘ್ನೇಶ್‌
ನಯನತಾರಾ ಮತ್ತು ವಿಘ್ನೇಶ್‌

ವದಂತಿ ಹಬ್ಬಲು ಕಾರಣವೇನು?

ಕಳೆದ ವಾರ ನಯನತಾರಾ ಅವರು ವಿಘ್ನೇಶ್‌ರನ್ನು ಸೋಷಿಯಲ್‌ ಮೀಡಿಯಾದಲ್ಲಿ ಅನ್‌ಫಾಲೋ ಮಾಡಿದ್ದರು. ಈ ಕುರಿತು ರೆಡ್‌ಇಟ್‌ ಬಳಕೆದಾರರೊಬ್ಬರು ಸ್ಕ್ರಿನ್‌ಶಾಟ್‌ ಹಂಚಿಕೊಂಡಿದ್ದರು. ನಯನತಾರಾ ಫಾಲೋ ಮಾಡುವ ಲಿಸ್ಟ್‌ನಲ್ಲಿ ವಿಘ್ನೇಶ್‌ ಇಲ್ಲ ಎಂದು ಹೇಳಲಾಯಿತು. ಇದು ವೈರಲ್‌ ಆಗಿತ್ತು.

ಹಿಂದೂಸ್ತಾನ್‌ ಟೈಮ್ಸ್‌ ವರದಿ

ಈ ಕುರಿತಂತೆ ಹಿಂದೂಸ್ತಾನ್‌ ಟೈಮ್ಸ್‌ ಈ ಹಿಂದೆ ಹೀಗೆ ವರದಿ ಮಾಡಿತ್ತು. "ವರದಿಗಳು ಏನೇ ಹೇಳಲಿ, ಈ ದಂಪತಿಗಳ ನಡುವೆ ಏನೂ ವಿರಸವಿಲ್ಲ. ಇವರಿಬ್ಬರ ಬಂಧ ಗಟ್ಟಿಯಾಗಿಯೇ ಇದೆ. ನಯನತಾರಾ ಅವರ ಫಾಲೋವರ್‌ ಲಿಸ್ಟ್‌ನಲ್ಲಿ ವಿಘ್ನೇಶ್‌ ಇಲ್ಲದೆ ಇರುವುದು ನಿಜ. ಇದಕ್ಕೆ ಕಾರಣ ಗೊತ್ತಿಲ್ಲ. ಇದು ತಾಂತ್ರಿಕ ತೊಂದರೆಯೂ ಆಗಿರಬಹುದು. ಈ ಸುದ್ದಿ ಹಬ್ಬುತ್ತಿದ್ದಂತೆ ನಯನತಾರಾ ವಿಘ್ನೇಶ್‌ರನ್ನು ಫಾಲೋ ಮಾಡಿದ್ದಾರೆ" ಎಂದು ಮೂಲಗಳನ್ನು ಉಲ್ಲೇಖಿಸಿ ವರದಿ ಮಾಡಲಾಗಿತ್ತು.

"ಅವರಿಬ್ಬರು ಜತೆಯಾಗಿದ್ದಾರೆ. ತುಂಬಾ ಅನ್ಯೋನ್ಯವಾಗಿದ್ದಾರೆ. ಗಂಡ ಮತ್ತು ಹೆಂಡತಿ ಬಾಂಧವ್ಯವನ್ನು ಎಂಜಾಯ್‌ ಮಾಡುತ್ತಿದ್ದಾರೆ. ತಮ್ಮ ಹೆತ್ತವರ ಜತೆಗೆ ಕುಟುಂಬದ ಜನತೆ ಅನ್ಯೋನ್ಯವಾಗಿದ್ದಾರೆ. ಇವರಿಬ್ಬರ ಕೈಯಲ್ಲಿ ಸಾಕಷ್ಟು ಪ್ರಾಜೆಕ್ಟ್‌ಗಳಿವೆ. ತಮ್ಮ ಮಕ್ಕಳ ಜತೆ ಹೆಚ್ಚು ಸಮಯ ಕಳೆಯಲು ಬಯಸುತ್ತಾರೆ" ಎಂದು ಮೂಲಗಳು ತಿಳಿಸಿವೆ.

ನಯನತಾರ ಮತ್ತು ವಿಘ್ನೇಶ್‌ ಕುರಿತು

ನಯನತಾರಾ ಮತ್ತು ವಿಘ್ನೇಶ್‌ ವಿವಾಹವು ಜೂನ್‌ 9, 2022ರಂದು ನಡೆದಿತ್ತು. ವಿವಾಹ ಕಾರ್ಯಕ್ರಮವು ಚೆನ್ನೈ ಹೊರವಲಯದ ಮಹಾಬಲಿಪುರಂನಲ್ಲಿ ನಡೆದಿತ್ತು. ರಜನಿಕಾಂತ್‌, ಶಾರೂಖ್‌ ಖಾನ್‌, ಅಜಿತ್‌ ಕುಮಾರ್‌, ವಿಜಯ್‌ ಸೇತುಪತಿ ಸೇರಿದಂತೆ ಹಲವು ಸೆಲೆಬ್ರಿಟಿಗಳು ಆಗಮಿಸಿ ವಧುವರರಿಗೆ ಹರಸಿದ್ದರು. ಅಕ್ಟೋಬರ್‌ 2022ರಂದು ಬಾಡಿಗೆ ತಾಯ್ತನದ ಮೂಲಕ ಮಕ್ಕಳನ್ನು ಪಡೆದಿದ್ದರು.

IPL_Entry_Point