ವೇಟ್ಟೈಯನ್ ಡಿಜಿಟಲ್‌ ಹಕ್ಕು ಮಾರಾಟ;‌ ಯಾವ ಒಟಿಟಿಯಲ್ಲಿ ಯಾವಾಗ ಸ್ಟ್ರೀಮ್‌ ಆಗ್ತಿದೆ ರಜನಿಕಾಂತ್‌ ಚಿತ್ರ?
ಕನ್ನಡ ಸುದ್ದಿ  /  ಮನರಂಜನೆ  /  ವೇಟ್ಟೈಯನ್ ಡಿಜಿಟಲ್‌ ಹಕ್ಕು ಮಾರಾಟ;‌ ಯಾವ ಒಟಿಟಿಯಲ್ಲಿ ಯಾವಾಗ ಸ್ಟ್ರೀಮ್‌ ಆಗ್ತಿದೆ ರಜನಿಕಾಂತ್‌ ಚಿತ್ರ?

ವೇಟ್ಟೈಯನ್ ಡಿಜಿಟಲ್‌ ಹಕ್ಕು ಮಾರಾಟ;‌ ಯಾವ ಒಟಿಟಿಯಲ್ಲಿ ಯಾವಾಗ ಸ್ಟ್ರೀಮ್‌ ಆಗ್ತಿದೆ ರಜನಿಕಾಂತ್‌ ಚಿತ್ರ?

ಟಿ.ಜೆ. ಜ್ಞಾನವೇಲ್‌ ನಿರ್ದೇಶನದಲ್ಲಿ ರಜನಿಕಾಂತ್‌, ಐಪಿಎಸ್‌ ಅಧಿಕಾರಿ ಪಾತ್ರದಲ್ಲಿ ನಟಿಸಿರುವ ವೇಟ್ಟೈಯನ್ ಸಿನಿಮಾ ಗುರುವಾರ ತೆರೆ ಕಂಡಿದೆ. ಚಿತ್ರದ ಡಿಜಿಟಲ್‌, ಸ್ಯಾಟಲೈಟ್‌ ಹಕ್ಕುಗಳು ದೊಡ್ಡ ಮೊತ್ತಕ್ಕೆ ಸೇಲ್‌ ಆಗಿದೆ. ಸಿನಿಮಾ ನವೆಂಬರ್‌ ಎರಡನೇ ವಾರದಲ್ಲಿ ಅಮೆಜಾನ್‌ ಪ್ರೈಂ ವಿಡಿಯೋದಲ್ಲಿ ಸ್ಟ್ರೀಮ್‌ ಆಗಲಿದೆ.

ವೇಟ್ಟೈಯನ್‌ ಚಿತ್ರದ ಡಿಜಿಟಲ್‌, ಸ್ಯಾಟಲೈಟ್‌ ಹಕ್ಕುಗಳು 155 ಕೋಟಿ ರೂ. ಮೊತ್ತಕ್ಕೆ ಸೇಲ್‌ ಆಗಿದೆ.  ಸನ್ಸಿ‌ ಟಿವಿ, ಸ್ಯಾಟಲೈಟ್‌ ಹಕ್ಕುಗಳನ್ನು ಖರೀದಿಸಿದೆ. ಸಿನಿಮಾ ನವೆಂಬರ್‌ ಎರಡನೇ ವಾರದಲ್ಲಿ ಅಮೆಜಾನ್‌ ಪ್ರೈಂ ವಿಡಿಯೋದಲ್ಲಿ ಸ್ಟ್ರೀಮ್‌ ಆಗಲಿದೆ.
ವೇಟ್ಟೈಯನ್‌ ಚಿತ್ರದ ಡಿಜಿಟಲ್‌, ಸ್ಯಾಟಲೈಟ್‌ ಹಕ್ಕುಗಳು 155 ಕೋಟಿ ರೂ. ಮೊತ್ತಕ್ಕೆ ಸೇಲ್‌ ಆಗಿದೆ. ಸನ್ಸಿ‌ ಟಿವಿ, ಸ್ಯಾಟಲೈಟ್‌ ಹಕ್ಕುಗಳನ್ನು ಖರೀದಿಸಿದೆ. ಸಿನಿಮಾ ನವೆಂಬರ್‌ ಎರಡನೇ ವಾರದಲ್ಲಿ ಅಮೆಜಾನ್‌ ಪ್ರೈಂ ವಿಡಿಯೋದಲ್ಲಿ ಸ್ಟ್ರೀಮ್‌ ಆಗಲಿದೆ.

ತಲೈವಾ ರಜನಿಕಾಂತ್‌ ಅಭಿನಯದ 170ನೇ ಸಿನಿಮಾ ವೇಟ್ಟೈಯನ್ ರಿಲೀಸ್‌ ಆಗಿದೆ. ತಲೈವಾ ಸಿನಿಮಾ ಅಡ್ವಾನ್ಸ್‌ ಬುಕ್ಕಿಂಗ್‌ನಿಂದಲೇ ಕೋಟ್ಯಂತರ ರೂ. ಲಾಭ ಮಾಡಿದೆ. ಸಿನಿಮಾ ನೋಡಿ ರಜನಿ ಅಭಿಮಾನಿಗಳು ಖುಷಿಯಾಗಿದ್ದಾರೆ. ಟಿ.ಜೆ. ಜ್ಞಾನವೇಲ್‌ ನಿರ್ದೇಶನ, ಚಿತ್ರಕಥೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಈ ನಡುವೆ ಸಿನಿಮಾ ಡಿಜಿಟಲ್‌ ರೈಟ್ಸ್‌ ಹಾಗೂ ಒಟಿಟಿ ಸ್ಟ್ರೀಮಿಂಗ್‌ ಬಗ್ಗೆ ಪ್ರಶ್ನೆ ಎದುರಾಗಿದೆ.

155 ಕೋಟಿ ರೂ.ಗೆ ಡಿಜಿಟಲ್‌, ಸ್ಯಾಟಲೈಟ್‌ ಹಕ್ಕು ಮಾರಾಟ

ಸಾಮಾನ್ಯವಾಗಿ ಯಾವುದೇ ಸಿನಿಮಾ ಚಿತ್ರಮಂದಿರಗಳಲ್ಲಿ ತೆರೆ ಕಂಡು ಒಂದು ತಿಂಗಳ ನಂತರ ಒಟಿಟಿಗೆ ಎಂಟ್ರಿ ಕೊಡಲಿದೆ. ವೇಟ್ಟೈಯನ್ ಸಿನಿಮಾ, ಎಷ್ಟು ಮೊತ್ತಕ್ಕೆ ಸೇಲ್‌ ಆಗಿದೆ, ಡಿಜಿಟಲ್‌ ರೈಟ್ಸ್‌ ಯಾವ ಸಂಸ್ಥೆ ಪಡೆದುಕೊಂಡಿದೆ? ಯಾವ ಒಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಸಿನಿಮಾ ಯಾವಾಗ ಸ್ಟ್ರೀಮಿಂಗ್‌ ಆಗಲಿದೆ ಎಂದು ತಿಳಿಯಲು ರಜನಿಕಾಂತ್‌ ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿದ್ದಾರೆ. ಅಂದಹಾಗೆ ವೇಟ್ಟೈಯನ್ ಸಿನಿಮಾ ಸ್ಯಾಟಲೈಟ್‌ ಹಾಗೂ ಡಿಜಿಟಲ್‌ ಹಕ್ಕುಗಳು ದೊಡ್ಡ ಮೊತ್ತಕ್ಕೆ ಸೇಲ್‌ ಆಗಿದೆ. ಈ ಚಿತ್ರದ ಸ್ಯಾಟಲೈಟ್‌ ಹಕ್ಕನ್ನು ಸನ್‌ ಟಿವಿ ಪಡೆದುಕೊಂಡಿದ್ದರೆ, ಡಿಜಿಟಲ್‌ ಹಕ್ಕುಗಳನ್ನು ಅಮೆಜಾನ್‌ ಪ್ರೈಂ ವಿಡಿಯೋ ಪಡೆದುಕೊಂಡಿದೆ. ಸ್ಯಾಟಲೈಟ್‌ ಹಾಗೂ ಡಿಜಿಟಲ್‌ ಎರಡೂ ಸೇರಿ ಸಿನಿಮಾ 155 ಕೋಟಿ ರೂ.ಗೆ ಮಾರಾಟವಾಗಿದೆ. ನವೆಂಬರ್‌ ಎರಡನೇ ವಾರದಲ್ಲಿ ಸಿನಿಮಾ ಅಮೆಜಾನ್‌ ಪ್ರೈಂ ವಿಡಿಯೋದಲ್ಲಿ ಸ್ಟ್ರೀಮಿಂಗ್‌ ಆರಂಭಿಸಲಿದೆ.

ಎನ್‌ಕೌಂಟರ್‌ ಸ್ಪೆಷಲಿಸ್ಟ್‌ ಅಥಿಯಾನ್‌ ಪಾತ್ರದಲ್ಲಿ ರಜನಿಕಾಂತ್‌

ವೇಟ್ಟೈಯನ್ ಚಿತ್ರದಲ್ಲಿ ರಜನಿಕಾಂತ್, ಅಥಿಯನಾನ್‌ ಎಂಬ ಎನ್‌ಕೌಂಟರ್ ಸ್ಪೆಷಲಿಸ್ಟ್ ಪಾತ್ರದಲ್ಲಿ ನಟಿಸಿದ್ದು, ಬಾಲಿವುಡ್‌ ಹಿರಿಯ ನಟ ಅಮಿತಾಬ್‌ ಬಚ್ಚನ್‌, ಪೋಲೀಸರ ಎನ್‌ಕೌಂಟರನ್ನು ವಿರೋಧಿಸುವ ಸತ್ಯದೇವ್‌ ಹೆಸರಿನ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಸಿನಿಮಾ, ತಮಿಳು ಮಾತ್ರವಲ್ಲದೆ ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಸೇರಿ ಒಟ್ಟು 5 ಭಾಷೆಗಳಲ್ಲಿ ರಿಲೀಸ್‌ ಆಗಿದೆ. ತಮಿಳುನಾಡಿನಲ್ಲಿ ರಜನಿಕಾಂತ್‌ ಸಿನಿಮಾಗೆ ಬಹಳ ಕ್ರೇಜ್‌ ಇದೆ. ಇದೇ ಕಾರಣಕ್ಕೆ ತಮಿಳುನಾಡಿನ ಖಾಸಗಿ ಕಂಪನಿಯೊಂದು ವೇಟ್ಟೈಯನ್‌ ಸಿನಿಮಾ ನೋಡಲು ತಮ್ಮ ಸಿಬ್ಬಂದಿಗೆ ಸಾಮೂಹಿಕ ರಜೆ ಘೋಷಿಸಿದೆ.

ಲೈಕಾ ಪ್ರೊಡಕ್ಷನ್ಸ್‌ ನಿರ್ಮಾಣದ ಸಿನಿಮಾ

ವೇಟ್ಟೈಯನ್ ಚಿತ್ರವನ್ನು ಲೈಕಾ ಪ್ರೊಡಕ್ಷನ್ಸ್‌ ಬ್ಯಾನರ್‌ ಅಡಿ ಸುಭಾಸ್ಕರನ್‌ ನಿರ್ಮಿಸಿದ್ದಾರೆ. ಜೈ ಭೀಮ್‌, ಒರುವನ್‌ ಖ್ಯಾತಿಯ ನಿರ್ದೇಶಕ ಟಿಜೆ ಜ್ಞಾನವೇಲ್ ಚಿತ್ರಕ್ಕೆ ಆಕ್ಷನ್‌ ಕಟ್‌ ಹೇಳಿದ್ದಾರೆ. ಚಿತ್ರದ ಹಾಡುಗಳಿಗೆ ಅನಿರುದ್ಧ್‌ ರವಿಚಂದರ್ ಸಂಗೀತ ನೀಡಿದ್ದಾರೆ. ಜೊತೆಗೆ ಒಂದು ಹಾಡಿನಲ್ಲಿ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರದಲ್ಲಿ ಕನ್ನಡ ನಟ ಕಿಶೋರ್‌, ಮಲಯಾಳಂ ನಟ ಫಹಾದ್‌ ಫಾಸಿಲ್‌, ತೆಲುಗಿನ ರಾವ್‌ ರಮೇಶ್‌, ರಾಣಾ ದಗ್ಗುಬಾಟಿ, ಮಂಜು ವಾರಿಯರ್, ರಿತಿಕಾ ಸಿಂಗ್‌ ಹಾಗೂ ಇನ್ನಿತರ ಕಲಾವಿದರು ನಟಿಸಿದ್ದಾರೆ.

ರಜನಿಕಾಂತ್‌ ‘ಕೂಲಿ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಉಪೇಂದ್ರ, ಅಕ್ಕಿನೇನಿ ನಾಗಾರ್ಜುನ ಕೂಡಾ ಪ್ರಮುಖ ಪಾತ್ರಗಳಲಿದ್ದಾರೆ. ಸಿನಿಮಾ ಚಿತ್ರೀಕರಣ ನಡೆಯುತ್ತಿದ್ದು ಮುಂದಿನ ವರ್ಷ ಚಿತ್ರ ತೆರೆ ಕಾಣಲಿದೆ.