ಸಿದ್ಧಾರ್ಥ್ 40ನೇ ಸಿನಿಮಾ ತಂಡ ಸೇರಿದ ಚೈತ್ರಾ ಜೆ ಆಚಾರ್; ಶರತ್ ಕುಮಾರ್, ದೇವಯಾನಿ, ಮೀತಾ ರಂಗನಾಥ್‌ಗೂ ಅವಕಾಶ
Siddharth 40 Movie Updates: ನಿರ್ದೇಶಕ ಶ್ರೀ ಗಣೇಶ್ ಅವರು ನಟ ಸಿದ್ಧಾರ್ಥ್ 40ನೇ ಸಿನಿಮಾಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಸಿನಿಮಾ ತಂಡಕ್ಕೆ ಇದೀಗ ಅಧಿಕೃತವಾಗಿ ಸಪ್ತ ಸಾಗರದಾಚೆ ಚೆಲುವೆ ಚೈತ್ರಾ ಜೆ ಆಚಾರ್ ಸೇರ್ಪಡೆಯಾಗಿದ್ದಾರೆ. ಇದೇ ಸಮಯದಲ್ಲಿ ಆರ್ ಶರತ್ ಕುಮಾರ್, ದೇವಯಾನಿ, ಮೀತಾ ರಂಗನಾಥ್ ಕೂಡ ಈ ಸಿನಿಮಾದಲ್ಲಿ ಅವಕಾಶ ಪಡೆದಿದ್ದಾರೆ.

ಬೆಂಗಳೂರು: ನಿರ್ದೇಶಕ ಶ್ರೀ ಗಣೇಶ್ ಅವರು ನಟ ಸಿದ್ಧಾರ್ಥ್ 40ನೇ ಸಿನಿಮಾಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಸಿನಿಮಾ ತಂಡಕ್ಕೆ ಇದೀಗ ಅಧಿಕೃತವಾಗಿ ಸಪ್ತ ಸಾಗರದಾಚೆ ಚೆಲುವೆ ಚೈತ್ರಾ ಜೆ ಆಚಾರ್ ಸೇರ್ಪಡೆಯಾಗಿದ್ದಾರೆ. ಇದೇ ಸಮಯದಲ್ಲಿ ಆರ್ ಶರತ್ ಕುಮಾರ್, ದೇವಯಾನಿ, ಮೀತಾ ರಂಗನಾಥ್ ಕೂಡ ಈ ಸಿನಿಮಾದಲ್ಲಿ ಅವಕಾಶ ಪಡೆದಿದ್ದಾರೆ. 8 ತೊಟ್ಟಕ್ಕಲ್ (2017) ಮತ್ತು ಕುರುತಿ ಆಟಂ (2022) ಮುಂತಾದ ಸಿನಿಮಾಗಳ ನಿರ್ದೇಶನದಿಂದ ಶ್ರೀ ಗಣೇಶ್ ಜನಪ್ರಿಯತೆ ಪಡೆದಿದ್ದಾರೆ.
ಶಾಂತಿ ಟಾಕೀಸ್‌ನ ಅರುಣ್ ವಿಶ್ವ ನಿರ್ಮಾಣದ ಸಿದ್ಧಾರ್ಥ್ ಅವರ 40ನೇ ಸಿನಿಮಾದ ಕುರಿತು ಚಿತ್ರತಂಡ ಅಪ್‌ಡೇಟ್ ನೀಡಿದೆ. , ಶ್ರೀ ಗಣೇಶ್ ಅವರು ಸಿದ್ಧಾರ್ಥ್ ಮತ್ತು ಅರುಣ್ ಜತೆಗಿರುವ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಸಿದ್ಧಾರ್ಥ್ 40 (ಸಿನಿಮಾದ ನಿಜ ಹೆಸರು ಇನ್ನೂ ಘೋಷಿಸಲಾಗಿಲ್ಲ) ಸಿನಿಮಾವು ಯೂನಿವರ್ಸೆಲ್ ಕಂಟೆಂಟ್ ಮತ್ತು ಗಡಿಯುದ್ಧಕ್ಕೂ ಪ್ರತಿನಿಧಿಸುವ ಹಲವು ವಿಷಯಗಳ ಕಥೆಯನ್ನು ಹೊಂದಿರಲಿದೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಚಿತ್ರತಂಡ ಟಿಪ್ಪಣಿ ಬರೆದಿದೆ.
ಶ್ರೀ ಗಣೇಶ್ ಅವರು ಸಾಕಷ್ಟು ಥ್ರಿಲ್ಲರ್ ಸಿನಿಮಾ ಮಾಡಿದ್ದಾರೆ. ಇದಾದ ಬಳಿಕ ಬರಹಗಾರ ಮತ್ತು ನಿರ್ದೇಶಕರಾಗಿ ಹೊಸ ದಿಕ್ಕನ್ನು ಅನ್ವೇಷಿಸಲು ಸಾಹಸ ದೃಶ್ಯಗಳಿಲ್ಲದ ಭಾವನಾತ್ಮಕ ಚಲನಚಿತ್ರವನ್ನು ನಿರ್ಮಿಸುವ ಗುರಿ ಹೊಂದಿದ್ದರು. ಇದೀಗ ಕನ್ನಡದ ಚೈತ್ರಾ ಜೆ ಆಚಾರ್, ಸಿದ್ಧಾರ್ಥ್ ಮುಂತಾದವರ ನಟನೆಯೊಂದಿಗೆ ಹೊಸ ಬಗೆಯ ಕಥೆಯನ್ನು ಹೇಳುವ ನಿರೀಕ್ಷೆಯಿದೆ.
ಈ ಸಿನಿಮಾಕ್ಕೆ ನಟಿಯರಾಗಿ ಮೀತಾ ರಂಗನಾಥ್ ಮತ್ತು ಚೈತ್ರಾ ಆಚಾರ್ ಸೇರಿದ್ದಾರೆ. ಇದರೊಂದಿಗೆ ಹಿರಿಯ ನಟರಾದ ಆರ್ ಶರತ್ ಕುಮಾರ್ ಮತ್ತು ದೇವಯಾನಿಯೂ ಆನ್‌ಬೋರ್ಡ್ ಆಗಿದ್ದಾರೆ. ಶರತ್ ಕುಮಾರ್ ಅವರ ಇತ್ತೀಚಿನ ಸಿನಿಮಾ ಸರ್ಫಿರಾ. ಅಕ್ಷಯ್ ಕುಮಾರ್ ನಟನೆಯ ಸರ್ಫಿರಾದಲ್ಲಿ ಶರತ್ ನಟಿಸಿದ್ದಾರೆ. ದೇವಯಾನಿ ಅವರು 2018ರಲ್ಲಿ ಬಿಡುಗಡೆಯಾದ ಕಲವಾನಿ ಮಾಪಿಲೈನಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದರು.
ವಿಶೇಷವೆಂದರೆ ಶರತ್‌ಕುಮಾರ್ ಮತ್ತು ದೇವಯಾನಿ ಅವರು 1990 ರ ದಶಕದ ಉತ್ತರಾರ್ಧದಲ್ಲಿ ಮತ್ತು 2000 ರ ದಶಕದ ಆರಂಭದಲ್ಲಿ ಹಲವು ಸಿನಿಮಾಗಳಲ್ಲಿ ಜತೆಯಾಗಿ ನಟಿಸಿದ್ದರು. ಇವರು ನಟಿಸಿರುವ ಸಿನಿಮಾಗಳು ಫೇಮಸ್ ಆಗಿದ್ದವು. ಸೂರ್ಯ ವಂಶಮ್ (1997), ಮೂವೇಂಧರ್ (1998), ಪಟಲಿ (1999), ಒರುವನ್ (1999), ವಿನ್ನುಕುಮ್ ಮನ್ನುಕುಮ್ (2001), ತೆಂಕಶಿಪಟ್ಟಣಂ (2001), ತೆಂಕಶಿಪಟ್ಟಣಂ ಮುಂತಾದ ಯಶಸ್ವಿ ಸಹಯೋಗಗಳಿಗೆ ಹೆಸರುವಾಸಿಯಾಗಿದ್ದರು. 2002), ಮತ್ತು ಸಮಸ್ಥಾನಂ (2002) ಮುಂತಾದ ಸಿನಿಮಾಗಳಲ್ಲಿ ಜತೆಯಾಗಿ ನಟಿಸಿದ್ದರು.
ಮೀತಾ ಅವರು 2023ರ ರೋಮ್ಯಾಂಟಿಕ್ ಕಾಮಿಡಿ ಸಿನಿಮಾ "ಗುಡ್‌ನೈಟ್"ನಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದರು. ಚೈತ್ರಾ ಜೆ ಆಚಾರ್ ಅವರು ಇದೇ ಮೊದಲ ಬಾರಿಗೆ ತಮಿಳು ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ. ಕನ್ನಡದಲ್ಲಿ ಇತ್ತೀಚೆಗೆ ಬ್ಲಿಂಕ್ ಸಿನಿಮಾದಲ್ಲಿ ಚೈತ್ರಾ ಆಚಾರ್ ಕಾಣಿಸಿಕೊಂಡಿದ್ದರು. ಸಪ್ತ ಸಾಗರದಾಚೆ ಎಲ್ಲೋ ಸೈಡ್ ಬಿಯಲ್ಲಿ ರಕ್ಷಿತ್ ಶೆಟ್ಟಿ ಪ್ರೇಯಸಿಯಾಗಿ ನಟಿಸಿದ್ದರು.
ಸಿದ್ಧಾರ್ಥ್ 40 ಎನ್ನುವುದು ಶಾಂತಿ ಟಾಕೀಸ್‌ನಡಿ ನಿರ್ಮಾಣವಾಗುತ್ತಿರುವ ಎರಡನೇ ಸಿನಿಮಾ. ಈ ಮೊದಲು ಮಾವೀರನ್ ಸಿನಿಮಾವನ್ನು ನಿರ್ಮಿಸಲಾಗಿತ್ತು. ಸಿದ್ಧಾರ್ಥ್ ಅವರು ಇತ್ತೀಚೆಗೆ ಕಮಲ್ ಹಾಸನ್ ನಟನೆಯ ಇಂಡಿಯನ್ 2ನಲ್ಲಿ ಕಾಣಿಸಿಕೊಂಡಿದ್ದರು. ಸಿದ್ಧಾರ್ಥ್ ಅವರು ಮಿಸ್ ಯು ಎಂಬ ಸಿನಿಮಾದಲ್ಲಿಯೂ ನಟಿಸುತ್ತಿದ್ದಾರೆ. ಮಿಸ್ ಯು ಸಿನಿಮಾದಲ್ಲಿ ಕನ್ನಡದ ಆಶಿಕಾ ರಂಗನಾಥ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.
