ಕನ್ನಡ ಸುದ್ದಿ  /  ಮನರಂಜನೆ  /  Thug Life: ಥಗ್‌ ಲೈಫ್‌ ಚಿತ್ರಕ್ಕೆ ಎಂಟ್ರಿ ಕೊಟ್ಟ ಸಿಲಂಬರಸನ್‌; ಇದು ಮಣಿರತ್ನಂ -ಕಮಲ್‌ ಹಾಸನ್‌ ಕಾಂಬಿನೇಷನ್‌ ಸಿನಿಮಾ

Thug Life: ಥಗ್‌ ಲೈಫ್‌ ಚಿತ್ರಕ್ಕೆ ಎಂಟ್ರಿ ಕೊಟ್ಟ ಸಿಲಂಬರಸನ್‌; ಇದು ಮಣಿರತ್ನಂ -ಕಮಲ್‌ ಹಾಸನ್‌ ಕಾಂಬಿನೇಷನ್‌ ಸಿನಿಮಾ

ಕಾಲಿವುಡ್‌ ನಟ ಕಮಲ್ ಹಾಸನ್ ಮತ್ತು ನಿರ್ದೇಶಕ ಮಣಿರತ್ನಂ ತಮಿಳಿನ ಸ್ಟಾರ್ ಹೀರೋ ಸಿಂಬು ಅವರ 'ಥಗ್ ಲೈಫ್' ಚಿತ್ರದ ಫಸ್ಟ್ ಲುಕ್ ವಿಡಿಯೋವನ್ನು ಬಿಡುಗಡೆ ಮಾಡಿದ್ದಾರೆ.

Thug Life: ಥಗ್‌ ಲೈಫ್‌ ಚಿತ್ರಕ್ಕೆ ಎಂಟ್ರಿ ಕೊಟ್ಟ ಸಿಲಂಬರಸನ್‌; ಇದು ಮಣಿರತ್ನಂ  -ಕಮಲ್‌ ಹಾಸನ್‌ ಕಾಂಬಿನೇಷನ್‌ ಸಿನಿಮಾ
Thug Life: ಥಗ್‌ ಲೈಫ್‌ ಚಿತ್ರಕ್ಕೆ ಎಂಟ್ರಿ ಕೊಟ್ಟ ಸಿಲಂಬರಸನ್‌; ಇದು ಮಣಿರತ್ನಂ -ಕಮಲ್‌ ಹಾಸನ್‌ ಕಾಂಬಿನೇಷನ್‌ ಸಿನಿಮಾ

Thug Life movie: ವಿಕ್ರಮ್ ಚಿತ್ರದ ಮೂಲಕ ವಿಶ್ವದಾದ್ಯಂತ ಸಂಚಲನ ಸೃಷ್ಟಿಸಿದ ಮತ್ತು ಗಲ್ಲಾಪೆಟ್ಟಿಗೆಯಲ್ಲಿ ಯಶಸ್ಸನ್ನು ಕಂಡ ಉಳಗನಾಯಗನ್ ಕಮಲ್ ಹಾಸನ್ ಮತ್ತೊಂದು ಕ್ರೇಜಿ ಪ್ಯಾನ್ ಇಂಡಿಯಾ ಎಂಟರ್‌ಟೈನರ್ ಥಗ್ ಲೈಫ್ ಚಿತ್ರದ ಜತೆಗೆ ಬರುತ್ತಿದ್ದಾರೆ. ಈ ಕೃತಿಗೆ ತಮಿಳು ನಿರ್ದೇಶಕ ಮಣಿರತ್ನಂ ನಿರ್ದೇಶನ ಮಾಡಿತ್ತಿದ್ದಾರೆ. ಈ ಮೂಲಕ ಮೂರು ದಶಕಗಳ ಬಳಿಕ ಕಮಲ್‌- ಮಣಿ ಜೋಡಿ ಮತ್ತೆ ಒಂದಾಗಿದೆ.

ಟ್ರೆಂಡಿಂಗ್​ ಸುದ್ದಿ

1987ರಲ್ಲಿ ಕಮಲ್ ಹಾಸನ್ ಮತ್ತು ಮಣಿರತ್ನಂ ನಟ, ನಿರ್ದೇಶಕ ಜೋಡಿಯ ನಾಯಕನ್ ಸಿನಿಮಾ ತೆರೆಕಂಡಿತ್ತು. ಈಗ ಮತ್ತೆ ಈ ಜೋಡಿ ಕೈ ಜೋಡಿಸಿದೆ. ಥಗ್ ಲೈಫ್ ಸಿನಿಮಾದಲ್ಲಿ ಸ್ಟಾರ್‌ ತಾರಾಗಣವೇ ಇರಲಿದ್ದು, ಬಹುಕೋಟಿ ವೆಚ್ಚದಲ್ಲಿ ಸಿನಿಮಾ ನಿರ್ಮಾಣವಾಗಲಿದೆ. ಟೈಟಲ್ ಟೀಸರ್ ಮೂಲಕ ನಿರೀಕ್ಷೆ ಹೆಚ್ಚಿಸಿದ್ದ ಈ ಚಿತ್ರಕ್ಕೀಗ ತಮಿಳಿನ ಖ್ಯಾತ ನಟ ಸಿಲಂಬರಸನ್ ಎಂಟ್ರಿ ಕೊಟ್ಟಿದ್ದಾರೆ.

ಥಗ್‌ ಲೈಫ್‌ ಚಿತ್ರದಲ್ಲಿ ಕಾಲಿವುಡ್ ಸ್ಟಾರ್ ಹೀರೋ ಸಿಲಂಬರಸನ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇದೀಗ ಸಿಂಬು ಅವರ ಆಕ್ಷನ್ ಪ್ಯಾಕ್ಡ್ ಟೀಸರ್ ಸಹ ಬಿಡುಗಡೆ ಆಗಿದ್ದು, ಕುತೂಹಲ ಮೂಡಿಸಿದೆ. ಮರುಭೂಮಿಯಲ್ಲಿ ಕಾರ್ ಚೇಸಿಂಗ್ ಮಾಡುತ್ತಾ ಬುಲೆಟ್ ಫೈರ್ ಮಾಡುವ ಸಿಲಂಬರಸನ್ ಝಲಕ್ ಬಿಡುಗಡೆ ಮಾಡಿದೆ ಚಿತ್ರತಂಡ. ಇನ್ನು, ನಟಿ ತ್ರಿಶಾ, ಮತ್ತು ಜಯರಾಮ್‌ ರವಿ ಸಹ ಈ ಸಿನಿಮಾ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.

ಈ ಚಿತ್ರವನ್ನು ಕಮಲ್‌ ಹಾಸನ್‌, ಮಣಿರತ್ನಂ, ಆರ್‌ ಮಹೇಂದ್ರನ್‌ ಮತ್ತು ಶಿವ ಅನಂತ್‌ ಜಂಟಿಯಾಗಿ ರಾಜ್‌ ಕಮಲ್‌ ಫಿಲ್ಮ್ಸ್‌ ಇಂಟರ್‌ನ್ಯಾಷನಲ್‌ ಹೆಸರಿನಲ್ಲಿ ನಿರ್ಮಿಸುತ್ತಿದ್ದಾರೆ. ಎಆರ್‌ ರೆಹಮಾನ್‌ ಈ ಚಿತ್ರಕ್ಕೆ ಸಂಗೀತ ನೀಡಲಿದ್ದಾರೆ. ಶ್ರೀಕರ್‌ ಪ್ರಸಾದ್‌ ಸಂಕಲನದ ಜವಾಬ್ದಾರಿ ಹೊತ್ತಿದ್ದಾರೆ. ರವಿ ಕೆ. ಚಂದ್ರನ್‌ ಅವರ ಕೊರಿಯೊಗ್ರಫಿ ಥಗ್ ಲೈಫ್ ಸಿನಿಮಾಕ್ಕಿದೆ.

ಈಗಾಗಲೇ ಬಿಡುಗಡೆಯಾಗಿರುವ ಥಗ್ ಲೈಫ್ ಚಿತ್ರದ ಟೀಸರ್‌ನಲ್ಲಿ ಕಮಲ್ ಹಾಸನ್ ಕಂಪ್ಲೀಟ್‌ ಬೇರೆಯ ಲುಕ್‌ನಲ್ಲಿಯೇ ಅಭಿಮಾನಿಗಳನ್ನು ಸೆಳೆದಿದ್ದಾರೆ. ಥಗ್ ಲೈಫ್ ಸಿನಿಮಾ ಏಪ್ರಿಲ್ ಕೊನೆಯ ವಾರದಿಂದ ದೆಹಲಿಯಲ್ಲಿ ಚಿತ್ರೀಕರಣ ನಡೆಸುತ್ತಿದೆ. ಮುಂದಿನ ದಿನಗಳಲ್ಲಿ ಚೆನ್ನೈನಲ್ಲಿ ಶೂಟಿಂಗ್‌ ನಡೆಯಲಿದೆ.

IPL_Entry_Point