ಕನ್ನಡ ಸುದ್ದಿ  /  ಮನರಂಜನೆ  /  Rajinikanth: ಹಿಮಾಲಯದಲ್ಲಿದ್ದಾರೆ ರಜನಿಕಾಂತ್‌, ಬದ್ರಿನಾಥ್‌, ಕೇದರನಾಥ ದರ್ಶನ; ವಯಸ್ಸು 73 ವರ್ಷ ಆಗಿದ್ರೂ ದಣಿವರಿಯದ ಸೂಪರ್‌ಸ್ಟಾರ್‌

Rajinikanth: ಹಿಮಾಲಯದಲ್ಲಿದ್ದಾರೆ ರಜನಿಕಾಂತ್‌, ಬದ್ರಿನಾಥ್‌, ಕೇದರನಾಥ ದರ್ಶನ; ವಯಸ್ಸು 73 ವರ್ಷ ಆಗಿದ್ರೂ ದಣಿವರಿಯದ ಸೂಪರ್‌ಸ್ಟಾರ್‌

ಸೂಪರ್‌ಸ್ಟಾರ್‌ ರಜನಿಕಾಂತ್‌ ಹಿಮಾಲಯ ಯಾತ್ರೆ ಕೈಗೊಂಡಿದ್ದಾರೆ. ಇತ್ತೀಚೆಗೆ ಬದ್ರಿನಾಥ್‌, ಕೇದರನಾಥಕ್ಕೆ ಭೇಟಿ ನೀಡುವ ಮುನ್ನ ಡೆಹಡ್ರೂನ್‌ ವಿಮಾನ ನಿಲ್ದಾಣದಲ್ಲಿ ತನ್ನ ಅಧ್ಯಾತ್ಮ ಪ್ರಯಾಣದ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ್ದಾರೆ.

Rajinikanth: ಹಿಮಾಲಯದಲ್ಲಿದ್ದಾರೆ ರಜನಿಕಾಂತ್‌, ಬದ್ರಿನಾಥ್‌, ಕೇದರನಾಥ ದರ್ಶನ
Rajinikanth: ಹಿಮಾಲಯದಲ್ಲಿದ್ದಾರೆ ರಜನಿಕಾಂತ್‌, ಬದ್ರಿನಾಥ್‌, ಕೇದರನಾಥ ದರ್ಶನ (ಸಾಂದರ್ಭಿಕ ಚಿತ್ರ)

ಬೆಂಗಳೂರು: ಸೂಪರ್‌ಸ್ಟಾರ್‌ ರಜನಿಕಾಂತ್‌ ಹಿಮಾಲಯಕ್ಕೆ ಆಗಾಗ ಹೋಗಿ ಬರುತ್ತಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ವರ್ಷಕ್ಕೊಮ್ಮೆಯಾದರೂ ಹಿಮಾಲಯದ ಪ್ರಮುಖ ದೇವಾಲಯಗಳಿಗೆ ಭೇಟಿ ನೀಡಿ ಧ್ಯಾನ ಮಾಡಿ ಬರುವ ಅಭ್ಯಾಸವನ್ನು ರಜನಿಕಾಂತ್‌ ಬೆಳೆಸಿಕೊಂಡಿದ್ದಾರೆ. ಇತ್ತೀಚೆಗೆ ಚೆನ್ನೈನಿಂದ ಉತ್ತರಖಂಡದ ಡೆಹಡ್ರೂನ್‌ಗೆ ವಿಮಾನದಲ್ಲಿ ಆಗಮಿಸಿದ ರಜನಿಕಾಂತ್‌ ಹಿಮಾಲಯ ಪ್ರಯಾಣ ಆರಂಭಿಸಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಡೆಹ್ರಾಡೂನ್‌ ವಿಮಾನ ನಿಲ್ದಾಣದಲ್ಲಿ ಸುದ್ದಿಸಂಸ್ಥೆ ಎಎನ್‌ಐಗೆ ತನ್ನ ಅಧ್ಯಾತ್ಮ ಪ್ರವಾಸಗಳ ಕುರಿತು ಮಾಹಿತಿ ನೀಡಿದ್ದಾರೆ. "ಪ್ರತಿವರ್ಷ ನಾನು ಹೊಸ ಅನುಭವ ಪಡೆಯಲು ಬಯಸುವೆ. ಇದಕ್ಕಾಗಿ ನಾನು ಮತ್ತೆ ಮತ್ತೆ ಅಧ್ಯಾತ್ಮ ಪ್ರವಾಸ ಕೈಗೊಳ್ಳುವೆ. ಈ ಬಾರಿಯೂ ನನಗೆ ಹೊಸ ಅನುಭವ ದೊರಕುವ ನಿರೀಕ್ಷೆಯಲ್ಲಿದ್ದೇನೆ" ಎಂದು ರಜನಿಕಾಂತ್‌ ಹೇಳಿದ್ದಾರೆ.

ಅಧ್ಯಾತ್ಮದ ಮಹತ್ವವನ್ನೂ ರಜನಿಕಾಂತ್‌ ಹೇಳಿದ್ದಾರೆ. "ಇಡೀ ಜಗತ್ತಿಗೆ ಅಧ್ಯಾತ್ಮದ ಅವಶ್ಯಕತೆಯಿದೆ. ಪ್ರತಿಯೊಬ್ಬರ ಮನುಷ್ಯರಿಗೂ ಅಧ್ಯಾತ್ಮ ಬೇಕಿದೆ. ಅಧ್ಯಾತ್ಮದ ಅರ್ಥ ಶಾಂತಿ ಮತ್ತು ನೆಮ್ಮದಿ ಪಡೆಯುವುದು. ದೇವರ ಮೇಲಿನ ನಂಬಿಕೆಯನ್ನೂ ಇದು ಒಳಗೊಂಡಿದೆ" ಎಂದು ರಜನಿಕಾಂತ್‌ ಹೇಳಿದ್ದಾರೆ.

ಈ ಬಾರಿ ಬದ್ರಿನಾಥ್‌ ಮತ್ತು ಕೇದರಿನಾಥ ದೇಗುಲಗಳಿಗೆ ಯಾತ್ರೆ ಕೈಗೊಳ್ಳುವುದಾಗಿ 73 ವರ್ಷ ವಯಸ್ಸಿನ ಸೂಪರ್‌ಸ್ಟಾರ್‌ ಹೇಳಿದ್ದಾರೆ. ಈ ಸಂದರ್ಭದಲ್ಲಿ ಅಧ್ಯಾತ್ಮದ ಕುರಿತು ಮಾತನಾಡಿದ್ದಾರೆ. ಲೋಕ ಸಭಾ ಚುನಾವಣೆಯ ಕುರಿತಾದ ಪತ್ರಕರ್ತರ ಪ್ರಶ್ನೆಗಳಿಗೆ "ಅಣ್ಣಾ ನೋ ಕಾಮೆಂಟ್ಸ್‌" ಎಂದಿದ್ದಾರೆ. "ಅಧ್ಯಾತ್ಮ ತುಂಬಾ ಅಗತ್ಯ. ಶಾಂತಿ, ಸಹಬಾಳ್ವೆ ಜತೆಗೆ ದೇವರ ಮೇಲಿನ ನಂಬಿಕೆ ಮೂಲಕ ಅಧ್ಯಾತ್ಮ ಅನುಭವ ಪಡೆಯಬಹುದು. ನನಗೆ ಹಿಮಾಲಯಕ್ಕೆ ಭೇಟಿ ನೀಡುವಾಗ ಪ್ರತಿವರ್ಷ ಹೊಸ ಅನುಭವವಾಗುತ್ತದೆ. ಈ ವರ್ಷವೂ ಹೊಸ ಅನುಭವ ಪಡೆಯಲು ಬಂದಿದ್ದೇನೆ" ಎಂದು ರಜನಿಕಾಂತ್‌ ಹೇಳಿದ್ದಾರೆ. ಕಳೆದ ವರ್ಷವೂ ರಜನಿಕಾಂತ್‌ ಬದ್ರಿನಾಥ್‌ ದೇಗುಲಕ್ಕೆ ಭೇಟಿ ನೀಡಿದ್ದರು.

ರಜನಿಕಾಂತ್‌ ಸಿನಿಮಾಗಳು

ರಜನಿಕಾಂತ್‌ ಇತ್ತೀಚೆಗೆ ವೆಟ್ಟೈಯನ್‌ ಸಿನಿಮಾದ ತನ್ನ ಭಾಗದ ಶೂಟಿಂಗ್‌ ಪೂರ್ಣಗೊಳಿಸಿದ್ದಾರೆ. ಟಿಜೆ ಜ್ಞಾನವೇಲು ನಿರ್ದೇಶನದ ಈ ಸಿನಿಮಾದ ಶೂಟಿಂಗ್‌ ಅನುಭವ "ಸೂಪರ್ಬ್‌" ಎಂದು ರಜನಿಕಾಂತ್‌ ಹೇಳಿದ್ದಾರೆ. ಸದ್ಯ ವೆಟ್ಟೈಯನ್‌ ಸಿನಿಮಾವು ನಿರ್ಮಾಣ ಹಂತದಲ್ಲಿದ್ದು, ಈ ವರ್ಷದ ಅಕ್ಟೋಬರ್‌ ತಿಂಗಳಲ್ಲಿ ಚಿತ್ರಮಂದಿರಗಳಿಗೆ ಆಗಮಿಸಲಿದೆ.

ಇದೇ ಸಮಯದಲ್ಲಿ ರಜನಿಕಾಂತ್‌ ನಟನೆಯ ಕೂಲಿ ಸಿನಿಮಾಕ್ಕೂ ಅಭಿಮಾನಿಗಳು ಕಾಯುತ್ತಿದ್ದಾರೆ. ಲೋಕೇಶ್‌ ಕನಕರಾಜು ಅವರ ಕೂಲಿ ಸಿನಿಮಾದ ಕುರಿತು ಚಿತ್ರತಂಡ ಇತ್ತೀಚೆಗೆ ಅಪ್‌ಡೇಟ್‌ ನೀಡಿತ್ತು. ಲೋಕೇಶ್‌ ಕನಕರಾಜು ನಿರ್ದೇಶನದಲ್ಲಿ ರಜನಿಕಾಂತ್‌ ನಟಿಸುತ್ತಿರುವ ಮೊದಲ ಸಿನಿಮಾವಾಗಿದೆ. ಸನ್‌ ಫಿಕ್ಚರ್ಸ್‌ ನಿರ್ಮಾಣದ ಈ ಸಿನಿಮಾವನ್ನು ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಘೋಷಿಸಲಾಗಿತ್ತು. ಇತ್ತೀಚೆಗೆ ಈ ಸಿನಿಮಾದ ಟೀಸರ್‌ ರಿಲೀಸ್‌ ಆಗಿತ್ತು. ಇತ್ತೀಚೆಗೆ ರಜನಿಕಾಂತ್‌ ನಟನೆಯ ಲಾಲ್‌ ಸಲಾಮ್‌ ಸಿನಿಮಾ ರಿಲೀಸ್‌ ಆಗಿತ್ತು. ತನ್ನ ಮಗಳ ನಿರ್ದೇಶನದ ಸಿನಿಮಾದಲ್ಲಿ ರಜನಿಕಾಂತ್‌ ನಟಿಸಿದ್ದರು.

ಸೂಪರ್‌ಸ್ಟಾರ್‌ ರಜನಿಕಾಂತ್‌ ಅವರು ನಟರಾಗುವ ಮುನ್ನ ಬಸ್‌ ಕಂಡಕ್ಟರ್‌ ಆಗಿದ್ದರು. ಇದಕ್ಕೂ ಮೊದಲು ಇವರು ಕೂಲಿ ಮತ್ತು ಕಾರ್ಪೆಂಟರ್‌ ಆಗಿಯೂ ದುಡಿದಿದ್ದರು.

ಸೂಪರ್‌ಸ್ಟಾರ್‌, ಸೂಪರ್‌ಹೀರೋ ಆಗಿ ಈಗ ಜನಪ್ರಿಯತೆ ಪಡೆದಿರುವ ರಜನಿಕಾಂತ್‌ ಅವರು ಆರಂಭದಲ್ಲಿ ವಿಲನ್‌ ರೋಲ್‌ಗಳಲ್ಲಿ ನಟಿಸುತ್ತಿದ್ದರು. 1977ರಲ್ಲಿ ಇವರಿಗೆ ಭುವನ ಒರು ಕೆಲ್ವಿಕುರಿಯಲ್ಲಿ ಸಕಾರಾತ್ಮಕ ಪಾತ್ರ ದೊರಕಿತ್ತು. ರಜನಿಕಾಂತ್‌ ಅವರಿಗೆ ಪದ್ಮವಿಭೂಷಣ ಮತ್ತು ದಾದಾ ಸಾಹೇಬ್‌ ಫಾಲ್ಕೆ ಅವಾರ್ಡ್‌ ದೊರಕಿದೆ. 2020ರಲ್ಲಿ ಇವರಿಗೆ ಫೋರ್ಬ್ಸ್‌ ಪತ್ರಿಕೆಯು "ಮೋಸ್ಟ್‌ ಇನ್‌ಫ್ಲ್ಯೂಯೆನ್ಸಲ್‌ ಇಂಡಿಯನ್‌" ಎಂಬ ಬಿರುದು ನೀಡಿತ್ತು.

ಟಿ20 ವರ್ಲ್ಡ್‌ಕಪ್ 2024