400 ವರ್ಷ ಹಿಂದಿನ ಪುರಾತನ ದೇವಾಲಯದಲ್ಲಿ ಮನ ಮೆಚ್ಚಿದ ಹುಡುಗಿ ಅದಿತಿ ರಾವ್‌ ಹೈದರಿ ಕೈ ಹಿಡಿಯಲಿದ್ದಾರೆ ತಮಿಳು ನಟ ಸಿದ್ದಾರ್ಥ್‌-kollywood news tamil actor siddharth aditi rao hydari get married in 400 year old temple in telangana rsm ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  400 ವರ್ಷ ಹಿಂದಿನ ಪುರಾತನ ದೇವಾಲಯದಲ್ಲಿ ಮನ ಮೆಚ್ಚಿದ ಹುಡುಗಿ ಅದಿತಿ ರಾವ್‌ ಹೈದರಿ ಕೈ ಹಿಡಿಯಲಿದ್ದಾರೆ ತಮಿಳು ನಟ ಸಿದ್ದಾರ್ಥ್‌

400 ವರ್ಷ ಹಿಂದಿನ ಪುರಾತನ ದೇವಾಲಯದಲ್ಲಿ ಮನ ಮೆಚ್ಚಿದ ಹುಡುಗಿ ಅದಿತಿ ರಾವ್‌ ಹೈದರಿ ಕೈ ಹಿಡಿಯಲಿದ್ದಾರೆ ತಮಿಳು ನಟ ಸಿದ್ದಾರ್ಥ್‌

ಬಾಲಿವುಡ್‌ ನಟಿ ಅದಿತಿ ರಾವ್‌ ಹೈದರಿ ಹಾಗೂ ತಮಿಳು ನಟ ಸಿದ್ದಾರ್ಥ್‌ ಶೀಘ್ರದಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಇದೇ ವರ್ಷ ಮಾರ್ಚ್‌ನಲ್ಲಿ ಈ ಜೋಡಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಈ ವರ್ಷಾಂತ್ಯದಲ್ಲಿ ತೆಲಂಗಾಣದ 400 ವರ್ಷ ಹಳೆಯ ದೇವಸ್ಥಾನದಲ್ಲಿ ಇಬ್ಬರೂ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ.

400 ವರ್ಷ ಪುರಾತನ ದೇವಾಲಯದಲ್ಲಿ ಮನ ಮೆಚ್ಚಿದ ಹುಡುಗಿ ಅದಿತಿ ರಾವ್‌ ಹೈದರಿ ಕೈ ಹಿಡಿಯಲಿದ್ದಾರೆ ತಮಿಳು ನಟ ಸಿದ್ದಾರ್ಥ್‌
400 ವರ್ಷ ಪುರಾತನ ದೇವಾಲಯದಲ್ಲಿ ಮನ ಮೆಚ್ಚಿದ ಹುಡುಗಿ ಅದಿತಿ ರಾವ್‌ ಹೈದರಿ ಕೈ ಹಿಡಿಯಲಿದ್ದಾರೆ ತಮಿಳು ನಟ ಸಿದ್ದಾರ್ಥ್‌

ಇದೇ ವರ್ಷ ಮಾರ್ಚ್‌ನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದ ಬಾಲಿವುಡ್‌ ನಟಿ ಅದಿತಿ ರಾವ್‌ ಹೈದರಿ ಹಾಗೂ ತಮಿಳು ನಟ ಸಿದ್ದಾರ್ಥ್‌ ಶೀಘ್ರದಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಈ ಜೋಡಿ ಎಂಗೇಜ್‌ಮೆಂಟ್‌ ಮಾಡಿಕೊಳ್ಳುತ್ತಿದ್ದಂತೆ ಇವರು ಎಲ್ಲಿ ಮದುವೆ ಆಗಬಹುದು? ಸರಳವಾಗಿ ಮದುವೆ ಆಗಲಿದ್ದಾರಾ? ಚಿತ್ರರಂಗದ ಸೆಲಬ್ರಿಟಿಗಳನ್ನು ಆಹ್ವಾನಿಸಿ ಅವರ ಸಮ್ಮುಖದಲ್ಲೆ ಮದುವೆ ಆಗಲಿದ್ದಾರಾ? ಭಾರತದಲ್ಲೇ ಮದುವೆ ಆಗುತ್ತಾರಾ? ವಿದೇಶಕ್ಕೆ ಹೋಗುತ್ತಾರಾ ಎಂದು ಅಭಿಮಾನಿಗಳು ಚರ್ಚಿಸುತ್ತಿದ್ದಾರೆ.

ತೆಲಂಗಾಣ ವನಪರ್ತಿಯಲ್ಲಿರುವ ಪುರಾತನ ದೇವಾಲಯ

ಆದರೆ ಇದೀಗ ನಟಿ ಅದಿತಿ ರಾವ್ ಹೈದರಿ ಮದುವೆ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಶೀಘ್ರದಲ್ಲೇ ಮದುವೆ ದಿನಾಂಕ ಹಾಗೂ ಸ್ಥಳವನ್ನು ಅನೌನ್ಸ್‌ ಮಾಡಲಿದ್ದೇವೆ ಎಂದಿದ್ದಾರೆ. ಇತ್ತೀಚೆಗೆ ವೋಗ್ ಇಂಡಿಯಾಗೆ ನೀಡಿದ ಸಂದರ್ಶನದಲ್ಲಿ, "ನೀವು ರಾಜಸ್ಥಾನದಲ್ಲಿ ಮದುವೆಯಾಗಲು ಬಯಸುತ್ತೀರಾ ಅಥವಾ ಡೆಸ್ಟಿನೇಶನ್ ವೆಡ್ಡಿಂಗ್ ಮಾಡಿಕೊಳ್ಳುತ್ತಿದ್ದೀರಾ?" ಎಂದು ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅದಿತಿ, ತೆಲಂಗಾಣ ರಾಜ್ಯದ ವನಪರ್ತಿಯಲ್ಲಿ 400 ವರ್ಷಗಳಷ್ಟು ಹಳೆಯದಾದ ದೇವಾಲಯ ಎಂದರೆ ನನಗೂ ನಮ್ಮ ಕುಟುಂಬದವರಿಗೂ ಬಹಳ ಇಷ್ಟ. ನಾವು ಅಲ್ಲಿಯೇ ಮದುವೆ ಆದರೂ ಆಗಬಹುದು ಎಂದು ಹೇಳಿದ್ದಾರೆ.

ನನಗೆ ಹೆಚ್ಚಿನ ಜನರ ಪರಿಚಯವಿಲ್ಲ. ನಾನು ಯಾರನ್ನಾದರೂ ನೋಡಿದರೆ ಅವರು ನನ್ನವನು ಎಂದು ನನಗೆ ಫೀಲ್‌ ಅಗಬೇಕು. ಬೇರೆ ಯಾರನ್ನು ನೋಡಿದರೂ ನನಗೆ ಆ ಭಾವನೆ ಬರುತ್ತಿರಲಿಲ್ಲ. ಆದರೆ ಸಿದ್ದಾರ್ಥ್‌ ನೋಡಿದ ಕೂಡಲೇ ಅವನು ನನ್ನವನೇ ಎಂದು ಮನಸ್ಸು ಹೇಳಿತು. ಅದರಲ್ಲಿ ಯಾವುದೇ ಸಂದೇಹವಿಲ್ಲ. ಆದ್ದರಿಂದಲೇ ನಾನು ಸಿದ್ದಾರ್ಥ್‌ನನ್ನು ಪ್ರೀತಿಸುತ್ತಿದ್ದೇನೆ ಎಂದು ಅದಿತಿ ಹೇಳಿದ್ದಾರೆ. ಅಜಯ್ ಭೂಪತಿ ನಿರ್ದೇಶನದ, 2021 ರಲ್ಲಿ ತೆರೆ ಕಂಡ ಮಹಾ ಸಮುದ್ರಂ ಸೆಟ್‌ನಲ್ಲಿ ಅದಿತಿ ಮತ್ತು ಸಿದ್ಧಾರ್ಥ್ ಮೊದಲ ಬಾರಿಗೆ ಭೇಟಿಯಾದರು. ಶರ್ವಾನಂದ್ ಕೂಡಾ ನಟಿಸಿರುವ ಈ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ದೊರೆತಿದೆ. 

ಸದ್ದಿಲ್ಲದೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ಜೋಡಿ

ಪ್ರೇಕ್ಷಕರು ಅದಿತಿ ಮತ್ತು ಸಿದ್ಧಾರ್ಥ್ ನಡುವಿನ ಕೆಮಿಸ್ಟ್ರಿ ತೆರೆ ಮೇಲೆ ಬಹಳ ಚೆನ್ನಾಗಿ ವರ್ಕೌಟ್‌ ಆಗಿತ್ತು. ಆದರೆ ಈ ಜೋಡಿ ತೆರೆ ಹಿಂದೆ ಕೂಡಾ ಪ್ರೀತಿಸುತ್ತಿದ್ದರು ಎಂಬ ವಿಚಾರ ಬಹಳ ಜನರಿಗೆ ಗೊತ್ತಿರಲಿಲ್ಲ. ತಮ್ಮ ಪ್ರೀತಿ ವಿಚಾರವನ್ನು ಬಹಳ ದಿನಗಳಿಂದ ಗೌಪ್ಯವಾಗಿಟ್ಟಿದ್ದರು. ಶೂಟಿಂಗ್‌ ಬಿಡುವಿನ ಸಮಯದಲ್ಲಿ ಇಬ್ಬರೂ ಒಟ್ಟಿಗೆ ಸಮಯ ಕಳೆಯುತ್ತಿದ್ದರು. 2023 ರಲ್ಲಿ ಅವರು ಸೂಪರ್‌ ಹಿಟ್‌ ಹಾಡೊಂದಕ್ಕೆ ಒಟ್ಟಿಗೆ ನೃತ್ಯ ಮಾಡಿ ಈ ವಿಡಿಯೋವನ್ನು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡ ನಂತರ ಇವರ ಬಗ್ಗೆ ಅನುಮಾನ ಉಂಟಾಗಿತ್ತು.

ತಮ್ಮ ಮದುವೆಯ ಬಗ್ಗೆ ಮಾಧ್ಯಮಗಳು ಮತ್ತು ಸಾಮಾಜಿಕ ಮಾಧ್ಯಮದಲ್ಲಿ ಹರಡುತ್ತಿರುವ ವದಂತಿಗಳಿಗೆ ಪ್ರತಿಕ್ರಿಯಿಸದೆ ಈ ವರ್ಷ ಇದ್ದಕ್ಕಿದ್ದಂತೆ ನಿಶ್ಚಿತಾರ್ಥ ಮಾಡಿಕೊಂಡಿದ್ದೇವೆ ಎಂದು ಘೋಷಿಸಿದ್ದರು. ನಾವು ಯಾರಿಗೂ ಹೇಳದಂತೆ ರಹಸ್ಯವಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದೇವೆ ಎಂದು ಹಲವರು ಕಾಮೆಂಟ್ ಮಾಡಿದ್ದಾರೆ. ಆದರೆ ಕುಟುಂಬ ಸದಸ್ಯರೊಂದಿಗೆ ಕಾರ್ಯಕ್ರಮ ಮಾಡುವುದಕ್ಕೂ ಗುಟ್ಟಾಗಿ ಮಾಡುವುದಕ್ಕೂ ಬಹಳ ವ್ಯತ್ಯಾಸವಿದೆ. ಕಾರ್ಯಕ್ರಮಕ್ಕೆ ನಾವು ಆಹ್ವಾನಿಸದವರು ಇದು ರಹಸ್ಯ ಎಂದು ಭಾವಿಸಿದ್ದರು. ಆದರೆ ನಿಶ್ಚಿತಾರ್ಥಕ್ಕೆ ಬಂದವರಿಗೆ ನಮ್ಮ ಬಗ್ಗೆ ಎಲ್ಲವೂ ಗೊತ್ತಿತ್ತು ಎಂದು ಸಿದ್ದಾರ್ಥ್‌ ಹೇಳಿದ್ದರು.

ಸಿದ್ದಾರ್ಥ್‌ ಸಿನಿಮಾಗಳ ಬಗ್ಗೆ ಹೇಳುವುದಾದರೆ ಇತ್ತೀಚೆಗೆ ತೆರೆ ಕಂಡ 2 ಸಿನಿಮಾಗಳು ಬಾಕ್ಸ್‌ ಆಫೀಸಿನಲ್ಲಿ ಸೋಲು ಕಂಡಿದೆ. ತೆಲುಗಿನಲ್ಲಿ ಕೂಡಾ ನಟಿಸುತ್ತಿದ್ದು ಬ್ರೇಕ್‌ಗಾಗಿ ಕಾಯುತ್ತಿದ್ದಾರೆ.