Actor Siddharth: ಶಿವರಾಜ್ ಕುಮಾರ್, ಪ್ರಕಾಶ್‌ ರಾಜ್‌ ಕ್ಷಮೆ ಕೇಳಿದನ್ನು ಸ್ವೀಕರಿಸುವುದಿಲ್ಲ; ನಟ ಸಿದ್ದಾರ್ಥ್-kollywood news tamil actor siddharth said he will not accept shiva rajkumar prakash raj apologies rsm ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  Actor Siddharth: ಶಿವರಾಜ್ ಕುಮಾರ್, ಪ್ರಕಾಶ್‌ ರಾಜ್‌ ಕ್ಷಮೆ ಕೇಳಿದನ್ನು ಸ್ವೀಕರಿಸುವುದಿಲ್ಲ; ನಟ ಸಿದ್ದಾರ್ಥ್

Actor Siddharth: ಶಿವರಾಜ್ ಕುಮಾರ್, ಪ್ರಕಾಶ್‌ ರಾಜ್‌ ಕ್ಷಮೆ ಕೇಳಿದನ್ನು ಸ್ವೀಕರಿಸುವುದಿಲ್ಲ; ನಟ ಸಿದ್ದಾರ್ಥ್

Siddharth on Shiva Rajkumar and Prakash Raj: ಆ ಘಟನೆ ನಂತರ ಶಿವರಾಜ್ ಕುಮಾರ್ ಹಾಗೂ ಪ್ರಕಾಶ್ ರಾಜ್‌, ಟ್ವೀಟ್ ಹಾಗೂ ವಿಡಿಯೋ ಮೂಲಕ ನನಗೆ ಕ್ಷಮೆ ಕೇಳಿದ್ದರು. ಆದರೆ ಅವರು ಕ್ಷಮೆ ಕೇಳಿದ್ದನ್ನು ನಾನು ಸ್ವೀಕರಿಸುವುದಿಲ್ಲ ಎಂದು ನಟ ಸಿದ್ದಾರ್ಥ್ ಹೇಳಿದ್ದಾರೆ.

ಶಿವರಾಜ್ ಕುಮಾರ್-ಸಿದ್ದಾರ್ಥ್-ಪ್ರಕಾಶ್‌ ರಾಜ್‌
ಶಿವರಾಜ್ ಕುಮಾರ್-ಸಿದ್ದಾರ್ಥ್-ಪ್ರಕಾಶ್‌ ರಾಜ್‌

ಕಾವೇರಿ ನೀರಿನ ವಿವಾದಕ್ಕೆ ಸಂಬಂಧಿಸಿದಂತೆ ಕಳೆದ ಕೆಲವು ದಿನಗಳಿಂದ ರಾಜ್ಯಾದ್ಯಂತ ಪ್ರತಿಭಟನೆ ನಡೆಯುತ್ತಿದೆ. ವಿವಿಧ ಕನ್ನಡಪರ ‌ಸಂಘಟನೆಗಳು, ಸಿನಿಮಾ ಮಂದಿ, ರೈತರಿಗೆ ಬೆಂಬಲ ಸೂಚಿಸಿದ್ದರು.

ಕರ್ನಾಟಕದಲ್ಲಿ ಕಾವೇರಿ ಗಲಾಟೆ ‌ನಡೆಯುತ್ತಿರುವಾಗ‌ ತಮಿಳು ನಟ ಸಿದ್ದಾರ್ಥ್, ತಮ್ಮ ಚಿತ್ತ ತಮಿಳು ಸಿನಿಮಾ ಪ್ರಮೋಷನ್ ಮಾಡಲು ಬೆಂಗಳೂರಿಗೆ ಆಗಮಿಸಿದ್ದು, ಕನ್ನಡಪರ‌ ಸಂಘಟನೆಗಳು ಅವರನ್ನು ಪ್ರೆಸ್ ಮೀಟ್ನಿಂದ ಹೊರಗೆ ಕಳಿಸಿದ್ದು ಗೊತ್ತೇ ಇದೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ನಟರಾದ ಶಿವರಾಜ್ ಕುಮಾರ್, ಪ್ರಕಾಶ್ ರಾಜ್ ಹಾಗೂ ಇನ್ನಿತರರು ಸಿದ್ದಾರ್ಥ್ ಬಳಿ ಕ್ಷಮೆ ಕೇಳಿದ್ದರು. ಅದರೆ ಇದೀಗ‌ ಸಿದ್ದಾರ್ಥ್, ಅವರಿಬ್ಬರ ಕ್ಷಮೆಯನ್ನು ನಾನು ಸ್ವೀಕರಿಸಿಸುವುದಿಲ್ಲ ಎಂದಿದ್ದಾರೆ.

ಅಷ್ಟಕ್ಕೂ ಸಿದ್ದಾರ್ಥ್ ಈ ಮಾತುಗಳನ್ನು ಕೋಪದಿಂದ ಹೇಳಿಲ್ಲ. ಕರ್ನಾಟಕದಲ್ಲಿ ಪ್ರೆಸ್ ಮೀಟ್ ಹೋಗುವಾಗ ನಾನು‌ ಅಲ್ಲಿ ಮಾತನಾಡಲು ಕನ್ನಡ ಕಲಿತು ಹೋಗಿದ್ದೆ. ಸಿನಿಮಾಗೆ‌ ಕೂಡಾ ನಾನೇ ಡಬ್ ಮಾಡಿದ್ದೆ. ಆದರೆ ಅಲ್ಲಿದ್ದವರು ನನ್ನನ್ನು ಅರ್ಥ ಮಾಡಿಕೊಳ್ಳಲಿಲ್ಲ. ಆ ಘಟನೆ ನಂತರ ಶಿವರಾಜ್ ಕುಮಾರ್ ಹಾಗೂ ಪ್ರಕಾಶ್ ರಾಜ್‌, ಟ್ವೀಟ್ ಹಾಗೂ ವಿಡಿಯೋ ಮೂಲಕ ನನಗೆ ಕ್ಷಮೆ ಕೇಳಿದ್ದರು. ಆದರೆ ಅವರು ಕ್ಷಮೆ ಕೇಳಿದ್ದನ್ನು ನಾನು ಸ್ವೀಕರಿಸುವುದಿಲ್ಲ.

ಏಕೆಂದರೆ ಈ ಘಟನೆಯಲ್ಲಿ ಅವರ ತಪ್ಪು ಏನೂ ಇಲ್ಲ. ಅವರು‌ ನನಗಿಂತ ದೊಡ್ಡವರು, ಯಾರೋ ಮಾಡಿದ ತಪ್ಪಿಗೆ ಅವರು ಏಕೆ‌ ಕ್ಷಮೆ ಕೇಳಬೇಕು. ನನ್ನ ಸಿನಿಮಾವನ್ನು‌ ಕರ್ನಾಟಕ‌ ಜನರು ಕೂಡಾ ನೋಡುತ್ತಿದ್ದಾರೆ. ಅಲ್ಲಿ ನನ್ನ ಅಭಿಮಾನಿಗಳಿದ್ದಾರೆ‌.‌ ನಮಗೆ ಸಿನಿಮಾ‌ ಮುಖ್ಯ. ಅದನ್ನು ಕನ್ನಡಿಗರು ಮೆಚ್ಚಿದ್ದಾರೆ ಎಂದು‌ ಸಿದ್ದಾರ್ಥ್ ಚೆನ್ನೈನಲ್ಲಿ ನಡೆದ ಚಿತ್ತ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

ಚಿತ್ತ ಸಿನಿಮಾ‌ ಕನ್ನಡದಲ್ಲಿ ಚಿಕ್ಕು ಹೆಸರಿನಲ್ಲಿ ರಿಲೀಸ್ ಆಗಿದೆ. ಈ ಚಿತ್ರವನ್ನು ಸಿದ್ದಾರ್ಥ್ ನಿರ್ಮಿಸಿದ್ದು ಅರುಣ್ ಕುಮಾರ್ ಆಕ್ಷನ್ ಕಟ್ ಹೇಳಿದ್ದಾರೆ.

mysore-dasara_Entry_Point