‘ಇನ್ಮೇಲೆ ತಮಿಳುನಾಡು ಜನರಿಗಾಗಿ ಕೆಲಸ ಮಾಡೋಣ’; Tamilaga Vettri Kazhagam ಪಕ್ಷದ ಬಾವುಟ ಅನಾವರಣಗೊಳಿಸಿದ ದಳಪತಿ ವಿಜಯ್‌-kollywood news tamil actor thalapathy vijay unveils tamizhaga vetri kazhagam party flag mnk ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  ‘ಇನ್ಮೇಲೆ ತಮಿಳುನಾಡು ಜನರಿಗಾಗಿ ಕೆಲಸ ಮಾಡೋಣ’; Tamilaga Vettri Kazhagam ಪಕ್ಷದ ಬಾವುಟ ಅನಾವರಣಗೊಳಿಸಿದ ದಳಪತಿ ವಿಜಯ್‌

‘ಇನ್ಮೇಲೆ ತಮಿಳುನಾಡು ಜನರಿಗಾಗಿ ಕೆಲಸ ಮಾಡೋಣ’; Tamilaga Vettri Kazhagam ಪಕ್ಷದ ಬಾವುಟ ಅನಾವರಣಗೊಳಿಸಿದ ದಳಪತಿ ವಿಜಯ್‌

ದಳಪತಿ ವಿಜಯ್, ತಮಿಳಗ ವೆಟ್ರಿ ಕಳಗಂ (Tamilaga Vettri Kazhagam) ಪಕ್ಷದ ಭಾವುಟ ಮತ್ತು ಪಕ್ಷದ ಹಾಡನ್ನು ಇಂದು (ಆಗಸ್ಟ್‌ 22) ಅನಾವರಣಗೊಳಿಸಿದ್ದಾರೆ. ಚೆನ್ನೈನ ಪನೈಯೂರಿನಲ್ಲಿರುವ ಪಕ್ಷದ ಕೇಂದ್ರ ಕಚೇರಿಯಲ್ಲಿ ಪಕ್ಷದ ಚಿಹ್ನೆಯುಳ್ಳ ಬಾವುಟದ ಧ್ವಜಾರೋಹಣವನ್ನೂ ನೆರವೇರಿಸಿದರು.

ದಳಪತಿ ವಿಜಯ್, ತಮಿಳಗ ವೆಟ್ರಿ ಕಳಗಂ (Tamilaga Vettri Kazhagam) ಪಕ್ಷದ ಭಾವುಟ ಮತ್ತು ಪಕ್ಷದ ಹಾಡನ್ನು ಇಂದು (ಆಗಸ್ಟ್‌ 22) ಅನಾವರಣಗೊಳಿಸಿದ್ದಾರೆ.
ದಳಪತಿ ವಿಜಯ್, ತಮಿಳಗ ವೆಟ್ರಿ ಕಳಗಂ (Tamilaga Vettri Kazhagam) ಪಕ್ಷದ ಭಾವುಟ ಮತ್ತು ಪಕ್ಷದ ಹಾಡನ್ನು ಇಂದು (ಆಗಸ್ಟ್‌ 22) ಅನಾವರಣಗೊಳಿಸಿದ್ದಾರೆ.

Tamilaga Vettri Kazhagam: ತಮಿಳು ನಟ, ರಾಜಕಾರಣಿ ದಳಪತಿ ವಿಜಯ್, ತಮಿಳಗ ವೆಟ್ರಿ ಕಳಗಂ (Tamilaga Vettri Kazhagam) ಪಕ್ಷದ ಭಾವುಟ ಮತ್ತು ಪಕ್ಷದ ಹಾಡನ್ನು ಇಂದು (ಆಗಸ್ಟ್‌ 22) ಅನಾವರಣಗೊಳಿಸಿದ್ದಾರೆ. ಚೆನ್ನೈನ ಪನೈಯೂರಿನಲ್ಲಿರುವ ಪಕ್ಷದ ಕೇಂದ್ರ ಕಚೇರಿಯಲ್ಲಿ ಪಕ್ಷದ ಚಿಹ್ನೆಯುಳ್ಳ ಬಾವುಟದ ಧ್ವಜಾರೋಹಣ ನೆರವೇರಿಸಿದರು. ಬಳಿಕ ಪಕ್ಷದ ಮುಖಂಡರನ್ನು ಉದ್ದೇಶಿಸಿ ಮಾತನಾಡಿದ ವಿಜಯ್, ಈಗ ನಾವು ಜನರಿಗಾಗಿ ಕೆಲಸ ಮಾಡುತ್ತೇವೆ, ಇದು ಬರೀ ಪಕ್ಷದ ಬಾವುಟವಲ್ಲ, ಭವಿಷ್ಯದ ಪೀಳಿಗೆಗೆ ವಿಜಯ ಪತಾಕೆ. ಮುಂದಿನ ದಿನಗಳಲ್ಲಿ ಒಳ್ಳೆಯದೇ ಆಗಲಿದೆ. ಗೆಲುವು ಖಚಿತ ಎಂದರು.

ಸೆಪ್ಟೆಂಬರ್‌ ಕೊನೆಯಲ್ಲಿ ವಿಲ್ಲುಪುರಂ ಜಿಲ್ಲೆಯ ವಿಕ್ರವಾಂಡಿಯಲ್ಲಿ ಬೃಹತ್‌ ಜನ ಸಮಾವೇಶ ನಡೆಯಲಿದೆ. ಇದಕ್ಕೂ ಮುನ್ನ ಪಕ್ಷದ ಧ್ವಜವನ್ನು ಪರಿಚಯಿಸಲು ವಿಜಯ್ ನಿರ್ಧರಿಸಿದ್ದರು. ಅದರಂತೆ ಇಂದು ಬೆಳಗ್ಗೆ ಚೆನ್ನೈನ ಪನೈಯೂರಿನಲ್ಲಿರುವ ಪಕ್ಷದ ಪ್ರಧಾನ ಕಚೇರಿಯಲ್ಲಿ ನಟ ವಿಜಯ್ ತಮಿಳುನಾಡು ವೆಟ್ರಿ ಕಳಗಂ ಪಕ್ಷದ ಅಧಿಕೃತ ಧ್ವಜ ಅನಾವರಣಗೊಳಿಸಿದರು.

ಈಗಾಗಲೇ ಒಪ್ಪಿಕೊಂಡಿರುವ ಸಿನಿಮಾ ಮುಗಿಸಿ ಪೂರ್ಣಾವಧಿ ರಾಜಕೀಯಕ್ಕೆ ಸೇರಲಿದ್ದೇನೆ ಎಂದು ನಟ ವಿಜಯ್‌ ಈ ಹಿಂದೆಯೇ ಘೋಷಿಸಿದ್ದರು. ಅದರಂತೆ, ಇದೀಗ ಬಾವುಟ ಅನಾವರಣ ಮಾಡಿ, 2026ರ ವಿಧಾನಸಭೆ ಚುನಾವಣೆಯೇ ನಮ್ಮ ಪಕ್ಷದ ಗುರಿ ಎಂದು ವಿಜಯ್ ಹೇಳಿದ್ದಾರೆ. ಪಕ್ಷದ ಸದಸ್ಯತ್ವ, ಆಡಳಿತಾಧಿಕಾರಿಗಳ ನೇಮಕ, ಬೃಹತ್‌ ರ್ಯಾಲಿ ಸೇರಿ ಪಕ್ಷ ಕಟ್ಟುವ ಕೆಲಸಗಳಿಗೂ ಇನ್ನೇನು ಶೀಘ್ರದಲ್ಲಿ ಚಾಲನೆ ಸಿಗಲಿದೆ ಎಂದಿದ್ದಾರೆ.

ಪಕ್ಷದ ಚಿಹ್ನೆಯ ವಿಶೇಷತೆ ಏನು?

ಅನಾವರಣಗೊಂಡ ಪಕ್ಷದ ಚಿಹ್ನೆಯಲ್ಲಿ ಎರಡು ಆನೆಗಳು ಎದುರು ಬದುರು ನಿಂತಿವೆ. ಕೆಂಪು ಹಳದಿ ಕೆಂಪು ವರ್ಣದ ಧ್ವಜದ ಮಧ್ಯದಲ್ಲಿ ಹೂವೊಂದು ಅರಳಿದೆ. ಆ ಹೂವಿನ ಎಡ ಬಲದಲ್ಲಿ ಎರಡು ಆನೆಗಳು ವಿಜಯದ ಸಂಕೇತವೆಂಬಂತೆ ಮುಂದಿನ ಎರಡೂ ಕಾಲನ್ನು ಮೇಲಕ್ಕೆತ್ತಿವೆ.

ಕಾರ್ಯಕರ್ತರನ್ನುದ್ದೇಶಿಸಿ ವಿಜಯ ಭಾಷಣ

ಪಕ್ಷದ ಅಧ್ಯಕ್ಷ ವಿಜಯ್, ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು. "ನನ್ನ ಹೃದಯದಲ್ಲಿ ವಾಸಿಸುವ ಒಡನಾಡಿಗಳೇ, ನನ್ನ ಹೃದಯದಲ್ಲಿರುವ ತಮಿಳುನಾಡಿನ ಜನರ ಮುಂದೆ ಪಕ್ಷದ ಧ್ವಜವನ್ನು ಹಾರಿಸಲು ನನಗೆ ಹೆಮ್ಮೆ ಅನಿಸುತ್ತದೆ. ನಮ್ಮ ಪಕ್ಷದ ಧ್ವಜವನ್ನು ಪರಿಚಯಿಸಲು ಹೆಮ್ಮೆಯಾಗುತ್ತಿದೆ. ಈ ಉದಯವನ್ನು ಸಂಭ್ರಮಿಸೋಣ. ಮತ್ತು ನಮ್ಮ ಧ್ವಜವನ್ನು ಏರಿಸೋಣ. ಸ್ವಯಂಸೇವಕರು ಸೂಕ್ತ ಅನುಮತಿ ಪಡೆದು ತಮ್ಮ ನಿವಾಸದಲ್ಲಿ ಪಕ್ಷದ ಧ್ವಜಾರೋಹಣ ನೆರವೇರಿಸಿ. ಇಷ್ಟು ದಿನ ನಮಗಾಗಿ ನಾವು ದುಡಿದಿದ್ದೇವೆ. ಈಗ ಜನರಿಗಾಗಿ ಕೆಲಸ ಮಾಡುತ್ತೇವೆ. ತಮಿಳುನಾಡು ಮತ್ತು ತಮಿಳುನಾಡಿನ ಜನರಿಗಾಗಿ ಕೆಲಸ ಮಾಡೋಣ. ಒಳ್ಳೆಯದೇ ಆಗುತ್ತದೆ, ಗೆಲುವು ಖಚಿತ" ಎಂದಿದ್ದಾರೆ ವಿಜಯ್.