ಮೂರನೇ ಪತಿ ಪೀಟರ್‌ ಪೌಲ್‌ ನಿಧನರಾಗಿ ವರ್ಷ ತುಂಬುತ್ತಿದ್ದಂತೆ 4ನೇ ಮದುವೆಗೆ ಸಿದ್ಧರಾದ್ರಾ ಖ್ಯಾತ ನಟಿ ವನಿತಾ ವಿಜಯ್‌ ಕುಮಾರ್?‌-kollywood news tamil actress vanitha vijaykumar getting ready for 4th marriage with choreographer robert rsm ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  ಮೂರನೇ ಪತಿ ಪೀಟರ್‌ ಪೌಲ್‌ ನಿಧನರಾಗಿ ವರ್ಷ ತುಂಬುತ್ತಿದ್ದಂತೆ 4ನೇ ಮದುವೆಗೆ ಸಿದ್ಧರಾದ್ರಾ ಖ್ಯಾತ ನಟಿ ವನಿತಾ ವಿಜಯ್‌ ಕುಮಾರ್?‌

ಮೂರನೇ ಪತಿ ಪೀಟರ್‌ ಪೌಲ್‌ ನಿಧನರಾಗಿ ವರ್ಷ ತುಂಬುತ್ತಿದ್ದಂತೆ 4ನೇ ಮದುವೆಗೆ ಸಿದ್ಧರಾದ್ರಾ ಖ್ಯಾತ ನಟಿ ವನಿತಾ ವಿಜಯ್‌ ಕುಮಾರ್?‌

ತಮಿಳಿನ ಖ್ಯಾತ ನಟಿ ವನಿತಾ ವಿಜಯ್‌ ಕುಮಾರ್‌ ಅಕ್ಟೋಬರ್‌ 5 ರಂದು ಕೊರಿಯೋಗ್ರಾಫರ್‌ ರಾಬರ್ಟ್‌ ಜೊತೆ ನಾಲ್ಕನೇ ಮದುವೆ ಆಗುತ್ತಿದ್ದಾರೆ ಎಂಬ ಸುದ್ದಿ ಕಾಲಿವುಡ್‌ನಲ್ಲಿ ಹರಿದಾಡುತ್ತಿದೆ. ಸೋಷಿಯಲ್‌ ಮೀಡಿಯಾದಲ್ಲಿ ವನಿತಾ-ರಾಬರ್ಟ್‌ ಇರುವ ಫೋಟೋ ಹರಿದಾಡುತ್ತಿದ್ದು ಇವರಿಬ್ಬರೂ ಮದುವೆ ಆಗೋದು ಪಕ್ಕಾ ಎನ್ನಲಾಗುತ್ತಿದೆ.

ಮೂರನೇ ಪತಿ ಪೀಟರ್‌ ಪೌಲ್‌ ನಿಧನರಾಗಿ ವರ್ಷ ತುಂಬುತ್ತಿದ್ದಂತೆ 4ನೇ ಮದುವೆಗೆ ಸಿದ್ಧರಾದ್ರಾ ಖ್ಯಾತ ನಟಿ ವನಿತಾ ವಿಜಯ್‌ ಕುಮಾರ್?‌
ಮೂರನೇ ಪತಿ ಪೀಟರ್‌ ಪೌಲ್‌ ನಿಧನರಾಗಿ ವರ್ಷ ತುಂಬುತ್ತಿದ್ದಂತೆ 4ನೇ ಮದುವೆಗೆ ಸಿದ್ಧರಾದ್ರಾ ಖ್ಯಾತ ನಟಿ ವನಿತಾ ವಿಜಯ್‌ ಕುಮಾರ್?‌

ಖ್ಯಾತ ತಮಿಳು ನಟ ವಿಜಯ್‌ ಕುಮಾರ್‌ ಪುತ್ರಿ ವನಿತಾ, ನಟನೆಯಿಂದ ಅಲ್ಲ, ತಮ್ಮ ವೈಯಕ್ತಿಕ ಜೀವನದಿಂದಲೇ ಬಹಳ ಸುದ್ದಿಯಾಗುತ್ತಿದ್ದಾರೆ. ಅವರು ನೀಡುವ ಕೆಲವೊಂದು ವಿವಾದಾತ್ಮಕ ಹೇಳಿಕೆಗಳು ವಿವಾದಕ್ಕೆ ಒಳಗಾದರೆ, ಆಕೆ ಮದುವೆ ವಿಚಾರದಿಂದಲೂ ಸದಾ ಸುದ್ದಿಯಲ್ಲಿರುತ್ತಾರೆ. ಅಕ್ಟೋಬರ್‌ 5 ರಂದು ವನಿತಾ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ ಎನ್ನಲಾಗುತ್ತಿದೆ, ಅದರೆ ಇದು ವನಿತಾಗೆ 4ನೇ ಮದುವೆ.

2000 ರಲ್ಲಿ ಮೊದಲ ಮದುವೆ

ವನಿತಾ ವಿಜಯ್‌ ಕುಮಾರ್‌ ಮೊದಲ ಬಾರಿಗೆ ಸೆಪ್ಟೆಂಬರ್‌ 2000 ರಲ್ಲಿ ಆಕಾಶ್‌ ಎಂಬುವರನ್ನು ಮದುವೆ ಆದರು. ಈ ದಂಪತಿಗೆ ಒಂದು ಗಂಡು, ಒಂದು ಹೆಣ್ಣು ಮಗು ಆಯ್ತು. ಆದರೆ ಮಕ್ಕಳಾದ ನಂತರ ಇವರ ನಡುವೆ ಮನಸ್ತಾಪ ಉಂಟಾಯ್ತು. ಕೆಲವು ವರ್ಷಗಳ ನಂತರ ಈ ಜೋಡಿ ಡಿವೋರ್ಸ್‌ ಮೂಲಕ ತಮ್ಮ ಸಂಬಂಧಕ್ಕೆ ಅಂತ್ಯ ಹಾಡಿದರು. 7 ವರ್ಷಗಳ ಕಾಲ ಒಬ್ಬಂಟಿಯಾಗಿದ್ದ ವನಿತಾ, 2007ರಲ್ಲಿ ಬ್ಯುಸ್ನೆಸ್‌ ಮ್ಯಾನ್‌ ಆನಂದ್‌ ಜೈ ರಾಜನ್‌ ಎಂಬುವರನ್ನು ಪ್ರೀತಿಸಿ ಮದುವೆ ಆದರು. ಈ ದಂಪತಿಗೆ ಕೂಡಾ ಒಬ್ಬಳು ಮಗಳಿದ್ಧಾಳೆ. ಆದರೆ ಈ ಮದುವೆ ಕೂಡಾ ಹೆಚ್ಚು ದಿನ ಉಳಿಯಲಿಲ್ಲ. 2012ರಲ್ಲಿ ವಿಚ್ಛೇದನ ಪಡೆದು ದೂರ ಆದರು. ಆನಂದ್‌ ಜೈ ರಾಜನ್‌ನಿಂದ ದೂರಾದ ನಂತರ ವನಿತಾ, ಕೊರಿಯೋಗ್ರಾಫರ್‌ ರಾಬರ್ಟ್‌ ಜೊತೆ ರಿಲೇಷನ್‌ಶಿಪ್‌ನಲ್ಲಿದ್ದರು. ಈ ಜೋಡ್ ಶೀಘ್ರದಲ್ಲೇ ಮದುವೆ ಆಗುತ್ತಿದ್ದಾರೆ ಎಂಬ ಸುದ್ದಿ ಹರಡಿತ್ತು. ಇಬ್ಬರೂ ಜೊತೆ ಸೇರಿ ಒಂದು ಸಿನಿಮಾವನ್ನೂ ನಿರ್ಮಿಸಿದ್ದರು. ಆದರೆ 2017ರಲ್ಲಿ ಇಬ್ಬರಿಗೂ ಬ್ರೇಕ್‌ ಅಪ್‌ ಆಯ್ತು.

ಕಳೆದ ವರ್ಷ ಸಾವನ್ನಪ್ಪಿದ್ದ 3ನೇ ಪತಿ ಪೀಟರ್‌ ಪೌಲ್

ಇದೆಲ್ಲದರ ಬಳಿಕ ವನಿತಾಗೆ ಪೀಟರ್‌ ಪೌಲ್‌ ಪರಿಚಯವಾಯ್ತು. ಪೀಟರ್‌ ಪೌಲ್‌ಗೆ ಆಗಲೇ ಮದುವೆ ಆಗಿ ಇಬ್ಬರು ಮಕ್ಕಳಿದ್ದರು. ಜೂನ್‌ 2020 ಲಾಕ್‌ಡೌನ್‌ನಲ್ಲಿ ಇಬ್ಬರೂ ಕ್ರೈಸ್ತ ಸಂಪ್ರದಾಯದ ಪ್ರಕಾರ ಮದುವೆ ಆದರು. ಆದರೆ ಪೀಟರ್‌ ಜೊತೆಗಿನ ಸಂಬಂಧ ಕೂಡಾ ಹೆಚ್ಚು ದಿನಗಳ ಕಾಲ ಉಳಿಯಲಿಲ್ಲ. ಪೀಟರ್‌ ಪೌಲ್‌ ಮೊದಲ ಪತ್ನಿ ಎಲಿಜಬೆತ್‌, ನನಗೆ ಅಧಿಕೃತವಾಗಿ ಡಿವೋರ್ಸ್‌ ನೀಡದೆ ಪೀಟರ್‌ ಮತ್ತೊಂದು ಮದುವೆ ಆಗಿದ್ದಾರೆ ಎಂದು ಪತಿ ಹಾಗೂ ವನಿತಾ ವಿರುದ್ಧ ದೂರು ನೀಡಿದ್ದರು. 2020 ಅಕ್ಟೋಬರ್‌ನಲ್ಲಿ ಪೀಟರ್‌ ಪೌಲ್‌ ಜೊತೆಗಿನ ಸಂಬಂಧವೂ ಮುರಿದುಬಿತ್ತು. ವನಿತಾ ಅವರಿಂದ ದೂರಾದ ನಂತರ ಪೀಟರ್‌ ಪೌಲ್‌ ಬಹಳ ಖಿನ್ನತೆಯಲ್ಲಿದ್ದು ಕುಡಿತದ ಚಟ ಹೆಚ್ಚಿಸಿಕೊಂಡಿದ್ದರು. ಕಳೆದ ವರ್ಷ ಪೀಟರ್‌ ಪೌಲ್‌ ನಿಧನರಾದರು.‌

ಬ್ರೇಕಪ್‌ ಆಗಿದ್ದ ರಾಬರ್ಟ್‌ ಜೊತೆ ಮತ್ತೆ ಮದುವೆ

ಮೂರನೇ ಪತಿ ಸಾವನ್ನಪ್ಪಿ ವರ್ಷ ತುಂಬುತ್ತಿದ್ದಂತೆ, ಇದೀಗ ಮತ್ತೆ ವನಿತಾ ರಾಬರ್ಟ್‌ ಜೊತೆಗಿನ ರಿಲೇಶನ್‌ಶಿಪ್‌ ಮತ್ತೆ ಆರಂಭಿಸಿದ್ದಾರೆ. ಅಷ್ಟೇ ಅಲ್ಲ ಕೊರಿಯೋಗ್ರಾಫರ್‌ ರಾಬರ್ಟ್‌ ಜೊತೆ ವನಿತಾ ಅಕ್ಟೋಬರ್‌ 5 ರಂದು ಮದುವೆ ಆಗುತ್ತಿದ್ದಾರೆ ಎನ್ನಲಾಗುತ್ತಿದೆ. ಇದೆಲ್ಲಾ ವದಂತಿ ಎನ್ನಲಾದರೂ ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿರುವ ಫೋಟೋ ನೋಡಿದರೆ ವನಿತಾ ಹಾಗೂ ವಿಜಯ್‌ ಮದುವೆ ಆಗ್ತಿರೋದು ಫಿಕ್ಸ್‌ ಎನ್ನಲಾಗುತ್ತಿದೆ. ಈ ಫೋಟೋದಲ್ಲಿ ವನಿತಾ ಕಡಲ ತೀರದಲ್ಲಿ ರಾಬರ್ಟ್‌ ಕೈ ಹಿಡಿದು ಮುಂದೆ ಮಂಡಿಊರಿ ಕುಳಿತಿದ್ದಾರೆ. ಅಕ್ಟೋಬರ್‌ 5, 2024 Save The Date ಎಂದು ಇಂಗ್ಲೀಷ್‌ ಅಕ್ಷರಗಳಿಂದ ಬರೆಯಲಾಗಿದೆ. ಜೊತೆಗೆ ಅವರಿಬ್ಬರ ಹೆಸರಿನ ನಡುವೆ ಲವ್‌ ಎಮೋಜಿ ಇದೆ. ಹಾಗಾದರೆ ವನಿತಾ ನಾಲ್ಕನೇ ಮದುವೆ ಆಗ್ತಿರೋದು ಕನ್ಫರ್ಮ್‌ ಎನ್ನಲಾಗ್ತಿದೆ.

mysore-dasara_Entry_Point