ಕನ್ನಡ ಸುದ್ದಿ  /  Entertainment  /  Kollywood News Tamil Hit 96 Movie Adithya Bhaskar Gouri G Kishan Secret Wedding Photos Goes Viral Mnk

ರೀಲ್‌ ಜೋಡಿ ರಿಯಲ್‌ ವಿವಾಹವಾದ್ರಾ? ತಮಿಳಿನ 96 ಚಿತ್ರದ ಗೌರಿ ಮತ್ತು ಆದಿತ್ಯಾ ಮದುವೆ ಪೋಟೋಸ್‌ ವೈರಲ್

2018ರಲ್ಲಿ ತೆರೆಗೆ ಬಂದಿದ್ದ 96 ಸಿನಿಮಾ ಕಾಲಿವುಡ್‌ನಲ್ಲಿ ಸೂಪರ್‌ ಹಿಟ್‌ ಆಗಿತ್ತು. ಅದಾದ ಮೇಲೆ ಇದೇ ಸಿನಿಮಾ ಕನ್ನಡದಲ್ಲೂ 99 ಹೆಸರಿನಲ್ಲಿ ರಿಮೇಕ್‌ ಆಗಿತ್ತು. ಈಗ ಕೇಳಿ ಬರುತ್ತಿರುವ ವಿಚಾರ ಏನೆಂದರೆ, ಇದೇ 96 ಚಿತ್ರದ ಜೋಡಿ ರಿಯಲ್‌ ಆಗಿಯೇ ಮದುವೆಯಾಗಿದ್ದಾರಂತೆ. ಈ ಬಗ್ಗೆ ನಟಿ ಸ್ಪಷ್ಟನೆ ನೀಡಿದ್ದಾರೆ.

ರೀಲ್‌ ಜೋಡಿ ರಿಯಲ್‌ ವಿವಾಹವಾದ್ರಾ? ತಮಿಳಿನ 96 ಚಿತ್ರದ ಗೌರಿ ಮತ್ತು ಆದಿತ್ಯಾ ಮದುವೆ ಪೋಟೋಸ್‌ ವೈರಲ್
ರೀಲ್‌ ಜೋಡಿ ರಿಯಲ್‌ ವಿವಾಹವಾದ್ರಾ? ತಮಿಳಿನ 96 ಚಿತ್ರದ ಗೌರಿ ಮತ್ತು ಆದಿತ್ಯಾ ಮದುವೆ ಪೋಟೋಸ್‌ ವೈರಲ್

Kollywood news: ಕಾಲಿವುಡ್‌ನಲ್ಲಿ ಸೂಪರ್‌ಹಿಟ್‌ ಸಿನಿಮಾ ಎಂಬ ಮನ್ನಣೆ ಪಡೆದುಕೊಂಡಿದೆ 2018ರಲ್ಲಿ ಬಿಡುಗಡೆಯಾಗಿದ್ದ 96 ಸಿನಿಮಾ. ಪ್ರೇಮ್ ಕುಮಾರ್ ನಿರ್ದೇಶನದ ಈ ಸಿನಿಮಾದ ಕಥೆ ಒಂದೆಡೆ ಎಲ್ಲರಿಗೂ ಇಷ್ಟವಾದರೆ, ಅದೇ ರೀತಿ ಸಂಗೀತದ ಮೂಲಕವೂ ಗುಂಗು ಹಿಡಿಸಿತ್ತು. ಬಾಲ್ಯದ ಕಥೆ ಮತ್ತು ಯೌವನದ ಕಥೆಯಲ್ಲಿ ಸಾಗುವ ಶಾಲಾದಿನಗಳ ಈ ಪ್ರೇಮ ಕಥೆಯನ್ನು ತಮಿಳು ಮಂದಿ ಅಪ್ಪಿ ಒಪ್ಪಿದ್ದರು. ಬ್ಲಾಕ್‌ ಬಸ್ಟರ್‌ ಹಿಟ್‌ ಮಾಡಿದ್ದರು. ಮಕ್ಕಳ್‌ ಸೇಲ್ವನ್‌ ವಿಜಯ್ ಸೇತುಪತಿ ಮತ್ತು ತ್ರಿಶಾ ಮುಖ್ಯಭೂಮಿಕೆಯಲ್ಲಿ ನಟಿಸಿದ್ದ ಈ ಸಿನಿಮಾ ಕನ್ನಡ ಸೇರಿ ತೆಲುಗಿಗೂ ರಿಮೇಕ್‌ ಆಗಿತ್ತು.

ಹೀಗೆ ಎಲ್ಲೆಡೆ ಸದ್ದು ಮಾಡಿದ್ದ ಇದೇ ಸಿನಿಮಾದಲ್ಲಿ ಕಥಾನಾಯಕ ಮತ್ತು ನಾಯಕಿಯ ಬಾಲ್ಯದ ವರ್ಷನ್‌ ರಾಮ್‌ - ಜಾನು ಪಾತ್ರಕ್ಕೆ ಆದಿತ್ಯ ಭಾಸ್ಕರ್‌ ಮತ್ತು ಗೌರಿ ಕಿಶನ್‌ ಬಣ್ಣ ಹಚ್ಚಿದ್ದರು. ಮುಖ್ಯ ಪಾತ್ರಧಾರಿಗಳಿಗಿಂತ ಇವರಿಬ್ಬರ ಕಾಂಬಿನೇಷನ್‌ ಎಲ್ಲರ ಅಚ್ಚುಮೆಚ್ಚಾಗಿತ್ತು. ಆ ಒಂದು ಸಿನಿಮಾದಿಂದ ಜನಮನ್ನಣೆ ಜತೆಗೆ ಸಾಕಷ್ಟು ಸಿನಿಮಾ ಆಫರ್‌ಗಳನ್ನೂ ಪಡೆದುಕೊಂಡಿತ್ತು ಈ ಜೋಡಿ. ಸೋಷಿಯಲ್‌ ಮೀಡಿಯಾದಲ್ಲೂ ಗೌರಿ ಮತ್ತು ಆದಿತ್ಯಾ ಜತೆಗಿನ ಫೋಟೋಗಳೂ ವೈರಲ್‌ ಆಗಿ, ಒಳ್ಳೆಯ ಜೋಡಿ ನೀವಿಬ್ಬರು ಮದುವೆಯಾದ್ರೆ ಚೆನ್ನಾಗಿರುತ್ತೆ ಎಂಬ ಕಾಂಪ್ಲಿಮೆಂಟ್‌ ಸಹ ಸಿಕ್ಕಿತ್ತು.

ಸೋಷಿಯಲ್‌ ಮೀಡಿಯಾದಲ್ಲಿ ಫೋಟೋ ವೈರಲ್

ಈ ಸಿನಿಮಾ ಬಳಿಕ ಒಂದಾದ ಮೇಲೊಂದು ಸಿನಿಮಾಗಳಲ್ಲಿ ಗೌರಿ ಬಿಜಿಯಾಗಿದ್ದಾರೆ. ತಮಿಳು ಮಾತ್ರವಲ್ಲ ತೆಲುಗಿನಲ್ಲೂ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದಿತ್ಯಾ ಸಹ ನಟನೆಯಲ್ಲಿಯೇ ತೊಡಗಿಸಿಕೊಂಡಿದ್ದಾರೆ. ಹೀಗಿರುವಾಗಲೇ ಇದೇ ಗೌರಿ ಮತ್ತು ಆದಿತ್ಯ ಜೋಡಿಯ ಮದುವೆ ಫೋಟೋಗಳೀಗ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿವೆ. ಪೋಟೋಗಳನ್ನು ನೋಡಿದ ಅವರ ಫ್ಯಾನ್ಸ್‌ ಈ ಜೋಡಿ ಗಪ್‌ಚುಪ್‌ ಆಗಿ ರಹಸ್ಯವಾಗಿ ಮದುವೆ ಆಗಿರಬಹುದೇ? ಎಂದೂ ಊಹಿಸುತ್ತಿದ್ದಾರೆ. ಯಾವುದೇ ಆಡಂಬರವಿಲ್ಲದೆ ರೇಷ್ಮೆ ಪಂಚೆ ಅಂಗಿಯಲ್ಲಿ ಆದಿತ್ಯ ಕಂಡರೆ, ಹಸಿರು ಬಣ್ಣದ ಸೀರೆಯಲ್ಲಿ ಗೌರಿ ಕಂಗೊಳಿಸಿದ್ದಾರೆ.

ಅಷ್ಟಕ್ಕೂ ಇದು ನಿಜವಾದ ಮದುವೆಯೇ?

ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿರುವ ಸುದ್ದಿಗೆ ಮದುವೆಯ ಫೋಟೋಗಳನ್ನು ಶೇರ್‌ ಮಾಡಿರುವ ಗೌರಿ, ಹರಿದಾಡುತ್ತಿರುವ ವದಂತಿಗಳಿಗೆ ಪ್ರತಿಕ್ರಿಯಿಸಿದ್ದಾರೆ. ಇದರ ಹಿಂದಿನ ಅಸಲಿ ವಿಚಾರವನ್ನೂ ಹೇಳಿಕೊಂಡಿದ್ದಾರೆ. ಹಾಗಾದರೆ, ಅಷ್ಟಕ್ಕೂ ಆಗಿದ್ದೇನು? ಈ ಮದುವೆ ನಿಜವಾ? ಅಂದಹಾಗೆ, ಗೌರಿ ಮತ್ತು ಆದಿತ್ಯ 96 ಸಿನಿಮಾ ಬಳಿಕ ಹಾಟ್‌ಸ್ಪಾಟ್‌ ಹೆಸರಿನ ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದಾರೆ. ಈ ಸಿನಿಮಾ ಮಾ. 29ರಂದು ತೆರೆಕಂಡಿದೆ. ಈ ಸಿನಿಮಾ ಪ್ರಚಾರದ ನಿಮಿತ್ತ, ಸಿನಿಮಾದಲ್ಲಿನ ಮದುವೆ ದೃಶ್ಯದ ಮೇಕಿಂಗ್‌ ಫೋಟೋಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.

ನೆಟ್ಟಿಗರು ಏನಂದ್ರು?

“ರಾಮ್ ಮತ್ತು ಜಾನು ಮತ್ತೆ ಒಂದಾಗಿದ್ದಾರೆ.. ನಾಳೆ ಹಾಟ್ ಸ್ಪಾಟ್ ಬಿಡುಗಡೆಯಾಗಲಿದೆ" ಎಂದು ಪೋಸ್ಟ್‌ ಹಂಚಿಕೊಂಡಿದ್ದಾರೆ ಗೌರಿ. ಆದರೆ ಇದ್ಯಾವುದನ್ನು ಗಮನಿಸಿದ ಜನ, ರಾಮ್ ಮತ್ತು ಜಾನು ಮದುವೆಯಾದ್ರಾ? ಏನೇ ಆಗಲಿ ಇಬ್ಬರಿಗೂ ಆಶೀರ್ವಾದಗಳು ಎಂದು ಕೆಲವರು ಕಾಮೆಂಟ್‌ ಮಾಡಿದ್ದಾರೆ. ಇನ್ನು ಕೆಲವರು ಇಬ್ಬರದ್ದೂ ಒಳ್ಳೆಯ ಜೋಡಿ, ಒಳ್ಳೆಯ ಕಲಾವಿದರೂ ಹೌದು, ನಿಮಗೆ ಶುಭವಾಗಲಿ ಎಂದಿದ್ದಾರೆ. ರಿಯಲ್ ಲೈಫ್‌ನಲ್ಲೂ ನೀವಿಬ್ಬರೂ ಒಂದಾಗಲಿ ಎಂದೂ ಹಾರೈಸುತ್ತಿದ್ದಾರೆ. ಇನ್ನು ಕೆಲವರು ಇದೊಂದು ಸಿನಿಮಾ ಪ್ರಮೋಷನ್ ಅಷ್ಟೇ ಎಂದಿದ್ದಾರೆ. ಹೀಗೆ ಬಗೆಬಗೆ ರೀತಿಯಲ್ಲಿ ಈ ಜೋಡಿಯನ್ನು ವರ್ಣಿಸುತ್ತಿದ್ದಾರೆ ಜನ. ಇನ್ನು ಹಾಟ್‌ಸ್ಪಾಟ್‌ ಸಿನಿಮಾಕ್ಕೆ ಒಳ್ಳೆಯ ರೆಸ್ಪಾನ್ಸ್‌ ಸಿಗುತ್ತಿದೆ.