ನೀನ್ಯಾವ ಸೀಮೆ ನಟ, ನಡೀ ಹೊರಕ್ಕೆ; ಸಾವಿರ ರೂಪಾಯಿಗೆ ನಿರ್ಮಾಪಕನಿಂದ ಹೊರದಬ್ಬಿಸಿಕೊಂಡ ಆ ನಟನ ಇಂದಿನ ಸಂಭಾವನೆ 100 ಕೋಟಿ!-kollywood news tamil producer who insulted superstar rajinikanth on the issue of remuneration rajini past life mnk ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  ನೀನ್ಯಾವ ಸೀಮೆ ನಟ, ನಡೀ ಹೊರಕ್ಕೆ; ಸಾವಿರ ರೂಪಾಯಿಗೆ ನಿರ್ಮಾಪಕನಿಂದ ಹೊರದಬ್ಬಿಸಿಕೊಂಡ ಆ ನಟನ ಇಂದಿನ ಸಂಭಾವನೆ 100 ಕೋಟಿ!

ನೀನ್ಯಾವ ಸೀಮೆ ನಟ, ನಡೀ ಹೊರಕ್ಕೆ; ಸಾವಿರ ರೂಪಾಯಿಗೆ ನಿರ್ಮಾಪಕನಿಂದ ಹೊರದಬ್ಬಿಸಿಕೊಂಡ ಆ ನಟನ ಇಂದಿನ ಸಂಭಾವನೆ 100 ಕೋಟಿ!

ಯಾರ ಹಂಗಿಲ್ಲದೇ ಚಿತ್ರೋದ್ಯಮದಲ್ಲಿ ಹೆಮ್ಮರವಾಗಿ ಬೆಳೆದು ನಿಂತಿದ್ದಾರೆ ಆ ಸ್ಟಾರ್‌ ನಟ. ಇವತ್ತು ಅವರು ತಮ್ಮ ಒಂದು ಸಿನಿಮಾಕ್ಕೆ 100 ಕೋಟಿ ಸಂಭಾವನೆ ಪಡೀತಾರೆ. ಆದರೆ, ಇದೇ ನಟ ತಮ್ಮ ವೃತ್ತಿ ಜೀವನದ ಆರಂಭದಲ್ಲಿ ಅನುಭವಿಸಿದ ಅವಮಾನಗಳು ಮಾತ್ರ ಒಂದೆರಡಲ್ಲ. ಯಾರು ಆ ನಟ? ಇಲ್ಲಿದೆ ಓದಿ.

ನೀನ್ಯಾವ ಸೀಮೆ ನಟ, ನಡೀ ಹೊರಕ್ಕೆ; ಸಾವಿರ ರೂಪಾಯಿಗೆ ನಿರ್ಮಾಪಕನಿಂದ ಹೊರದಬ್ಬಿಸಿಕೊಂಡ ಆ ನಟನ ಇಂದಿನ ಸಂಭಾವನೆ 100 ಕೋಟಿ!
ನೀನ್ಯಾವ ಸೀಮೆ ನಟ, ನಡೀ ಹೊರಕ್ಕೆ; ಸಾವಿರ ರೂಪಾಯಿಗೆ ನಿರ್ಮಾಪಕನಿಂದ ಹೊರದಬ್ಬಿಸಿಕೊಂಡ ಆ ನಟನ ಇಂದಿನ ಸಂಭಾವನೆ 100 ಕೋಟಿ! (facebook)

Superstar Rajinikanth: ಭಾರತೀಯ ಚಿತ್ರೋದ್ಯಮದಲ್ಲಿ ಸ್ಟಾರ್‌ ನಟರಿಗೇನು ಕೊರತೆಯಿಲ್ಲ. ನೆಪೋಟಿಸಂ ಜಾಡಿನಿಂದ ಬಾರದೇ, ಗಾಡ್‌ ಫಾದರ್‌ ಹಂಗಿಲ್ಲದೆ ಬೆಳೆದು ನಿಂತವರದ್ದು ಒಂದು ತೂಕ ಜಾಸ್ತಿ. ಆ ಪೈಕಿ ಸೂಪರ್‌ಸ್ಟಾರ್‌ ರಜನಿಕಾಂತ್‌ ಸಹ ಪ್ರಮುಖರು. ಸಾಮಾನ್ಯ ಬಸ್‌ ಕಂಡಕ್ಟರ್‌ ಆಗಿದ್ದ ಈ ನಟ, ಸದ್ಯ ಭಾರತದ ಅತೀ ಹೆಚ್ಚು ಸಂಭಾವನೆ ಪಡೆಯುವ ನಟರ ಸಾಲಿನಲ್ಲಿದ್ದಾರೆ. ವಯಸ್ಸು 70ರ ಮೇಲಾದರೂ, ತೆರೆಮೇಲೆ ಆಕ್ಷನ್‌ ಮೂಲಕವೇ ಹಬ್ಬ ಮಾಡ್ತಾರೆ ಈ ನಟ. ಕೋಟ್ಯಂತರ ಅಭಿಮಾನಿಗಳು ಇಂದಿಗೂ ಇವರನ್ನು ದೇವರಂತೆ ಪೂಜಿಸುವವರಿದ್ದಾರೆ. ಆದರೆ, ಇದೇ ನಟನ ಆರಂಭದ ವೃತ್ತಿ ಜೀವನ ಹೂವಿನ ಹಾಸಿಗೆಯಾಗಿರಲಿಲ್ಲ. ಬದಲಿಗೆ ಅದು ಮುಳ್ಳಿನ ದಾರಿ.

ಸೂಪರ್‌ಸ್ಟಾರ್‌ ರಜನಿಕಾಂತ್‌ ಜೈಲರ್‌ ಸಿನಿಮಾ ಬಳಿಕ ಬಂದ ಲಾಲ್‌ ಸಲಾಂ ಹೆಚ್ಚು ಮೋಡಿ ಮಾಡಲಿಲ್ಲ. ಈ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡರೂ, ಸಿನಿಮಾ ಹಿಟ್‌ ಆಗಲಿಲ್ಲ. ಮಗಳ ನಿರ್ದೇಶನ ಸಿನಿಮಾ ಆದರೂ, ಹೇಳಿಕೊಳ್ಳುವ ಕಲೆಕ್ಷನ್‌ ಮಾಡಲಿಲ್ಲ. ಅದ್ಯಾವ ಮಟ್ಟಿಗೆ ಎಂದರೆ, ಯಾವ ಒಟಿಟಿಯೂ ಲಾಲ್‌ ಸಲಾಮ್‌ ಸಿನಿಮಾದ ಡಿಜಿಟಲ್‌ ಹಕ್ಕನ್ನು ಖರೀದಿ ಮಾಡಿಲ್ಲ! ಹಾಗಂತ ರಜನಿಕಾಂತ್‌ ಅವರೇನು ಖಾಲಿ ಕೂತಿಲ್ಲ. ವೆಟ್ಟೈಯನ್‌ ಮತ್ತು ಕೂಲಿ ಎಂಬ ಎರಡು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಈ ವರ್ಷವೇ ಈ ಸಿನಿಮಾಗಳು ತೆರೆಗೆ ಬರುವ ಸಾಧ್ಯತೆ ಇದೆ.

1970ರಲ್ಲಿ ನಡೆದ ಘಟನೆ..

ಆದರೆ, ಇದೇ ರಜನಿಕಾಂತ್‌ಗೆ ತಮ್ಮ ವೃತ್ತಿ ಜೀವನದ ಆರಂಭದಲ್ಲಿ ಸಾಕಷ್ಟು ಅವಮಾನಗಳನ್ನು ಎದುರಿಸಿದ್ದರು. ಆ ಪೈಕಿ ಒಂದನ್ನು ಈ ಹಿಂದೆ ನೆನಪಿಸಿಕೊಂಡಿದ್ದರು. ಏನದು? ಯಾವಾಗ ನಡೆದಿದ್ದು? ಇಲ್ಲಿದೆ ನೋಡಿ. ಅದು 1970ರ ಸಮಯ. ಪ್ರಾಜೆಕ್ಟ್ವೊಂದಕ್ಕೆ ರಜನಿಕಾಂತ್ ಆಯ್ಕೆಯಾಗಿದ್ದರು. ಚಿತ್ರದಲ್ಲಿ ಒಳ್ಳೆಯ ಪಾತ್ರವೂ ಸಿಕ್ಕಿತ್ತು. ಸಂಭಾವನೆ ರೂಪದಲ್ಲಿ ಆಗಿನ ಕಾಲದಲ್ಲಿಯೇ 6 ಸಾವಿರ ನೀಡುವುದಾಗಿ ನಿರ್ಮಾಪಕರು ಒಪ್ಪಿದ್ದರು. ಆ 6 ಸಾವಿರ ಸಂಭಾವನೆಯಲ್ಲಿ ಒಂದಷ್ಟು ಅಡ್ವಾನ್ಸ್‌ ಕೊಡುವಂತೆ ಮನವಿ ಮಾಡಿದ್ದರು ರಜನಿ.

ಸಾವಿರ ಅಡ್ವಾನ್ಸ್‌ ಕೇಳಿದ್ರೂ ಕೊಟ್ಟಿರಲಿಲ್ಲ..

ನಿರ್ಮಾಪಕರು ಹ್ಞೂಂ ಎನ್ನುತ್ತಲೆ ಬಂದರು. ಸಿನಿಮಾ ಶೂಟಿಂಗ್‌ ದಿನವೂ ಬಂದೇ ಬಿಡ್ತು. ಆದರೂ ರಜನಿಕಾಂತ್‌ಗೆ ಮಾತ್ರ ಅಡ್ವಾನ್ಸ್‌ ಹಣ ಸಿಗಲೇ ಇಲ್ಲ. ಅದಕ್ಕಾಗಿ ನಿರ್ಮಾಪಕರಿಗೆ ಫೋನ್‌ ಮಾಡಿ, ಅಡ್ವಾನ್ಸ್‌ ಬಗ್ಗೆ ಮತ್ತೆ ಕೇಳಿದ್ದಾರೆ. ಶೀಘ್ರದಲ್ಲಿ ಕೊಡುವೆ ಎಂದು ಮತ್ತೆ ಅದೇ ಉತ್ತರ ಬಂತು. ಒಂದು ಹೆಜ್ಜೆ ಮುಂದೆ ಹೋಗಿ ನನಗೆ ಮುಂಗಡ ಹಣ ಸಿಗುವ ವರೆಗೂ ನಾನು ಮೇಕಪ್‌ ಮಾಡಿಕೊಳ್ಳಲ್ಲ ಎಂದು ರಜನಿಕಾಂತ್‌ ಪಟ್ಟು ಹಿಡಿಯುತ್ತಾರೆ. ಹೀರೋ ಬಂದಿದ್ದಾರೆ. ನೀವು ಬೇಗ ಬನ್ನಿ, ನಿಮ್ಮ ಮೇಕಪ್‌ ಮುಗಿದ ಬಳಿಕ ಹೀರೋ ಅವರ ಮೇಕಪ್‌ ಮಾಡಬೇಕು ಎನ್ನುತ್ತಾನೆ ಪ್ರೋಡಕ್ಷನ್‌ ಮ್ಯಾನೇಜರ್. ನನಗೆ ಸಾವಿರ ರೂಪಾಯಿ ಬೇಕು, ಅದು ಸಿಕ್ಕ ಮೇಲೆಯೇ ನಾನು ಮೇಕಪ್‌ ಮಾಡಿಸಿಕೊಳ್ಳುತ್ತೇನೆ ಎನ್ನುತ್ತಾರೆ.

ಇದೀಗ ನೂರು ಕೋಟಿ ಸಂಭಾವನೆ..

ಅಡ್ವಾನ್ಸ್‌ ಹಣಕ್ಕೆ ಪಟ್ಟು ಹಿಡಿದ ರಜನಿಕಾಂತ್‌ ವರ್ತನೆಗೆ ನಿರ್ಮಾಪಕ ಗರಂ ಆಗಿದ್ದರು. ನೇರವಾಗಿ ಅಂಬಾಸಿಡರ್‌ ಕಾರಿನಲ್ಲಿ, ಸೆಟ್‌ಗೆ ಬಂದು ರಜನಿಕಾಂತ್‌ಗೆ ಎಲ್ಲರ ಮುಂದೆ ಹಿಗ್ಗಾ ಮುಗ್ಗಾ ಅವಮಾನ ಮಾಡ್ತಾರೆ. ನೀನೇನು ದೊಡ್ಡ ಸ್ಟಾರ್‌ ನಟನಾ? ನೀನ್ಯಾವ ಸೀಮೆ ನಟ? ಮುಂಗಡ ಹಣ ಕೊಡದಿದ್ದರೆ ನೀನು ಮೇಕಪ್‌ ಮಾಡಿಸಿಕೊಳ್ಳುವುದಿಲ್ಲವೇ? ಹಾಗಾದರೆ ಈ ಸಿನಿಮಾದಲ್ಲಿ ನಿನಗೆ ಯಾವುದೇ ಪಾತ್ರವಿಲ್ಲ. ಹೊರನಡೀ ಇಲ್ಲಿಂದ.. ಎಂದು ನಿರ್ಮಾಪಕರು ರಜನಿಯನ್ನು ಹೊರಕಳಿಸಿದ್ದರು. ಅವರಿಗೆ ಡ್ರಾಪ್‌ ನೀಡುವುದಕ್ಕೂ ಕಾರ್‌ ಸಿಗಲಿಲ್ಲ. ಕಾಲ್ನಡಿಗೆಯಲ್ಲಿಯೇ ರಜನಿಕಾಂತ್‌ ಹೊರಬಂದರು. ಈ ಘಟನೆಯನ್ನು ದರ್ಬಾರ್‌ ಸಿನಿಮಾದ ಆಡಿಯೋ ಲಾಂಚ್‌ ವೇಳೆ ವೇದಿಕೆ ಮೇಲೆ ನೆನಪಿಸಿಕೊಂಡಿದ್ದರು ರಜನಿಕಾಂತ್‌. ಇದೀಗ ಇದೇ ರಜನಿಕಾಂತ್‌ ಒಂದು ಸಿನಿಮಾಕ್ಕೆ 100 ಕೋಟಿ ಸಂಭಾವನೆ ಪಡೆಯುತ್ತಿದ್ದಾರೆ!