ವಿಡಿಯೋ ಕಾಲ್‌ ಮೂಲಕ ಯುವ ನಟಿಯ ಆಡಿಷನ್‌, 14 ನಿಮಿಷಗಳ ಖಾಸಗಿ ದೃಶ್ಯಗಳ ಚಿತ್ರೀಕರಣದ ವಿಡಿಯೋ ಲೀಕ್!
ಕನ್ನಡ ಸುದ್ದಿ  /  ಮನರಂಜನೆ  /  ವಿಡಿಯೋ ಕಾಲ್‌ ಮೂಲಕ ಯುವ ನಟಿಯ ಆಡಿಷನ್‌, 14 ನಿಮಿಷಗಳ ಖಾಸಗಿ ದೃಶ್ಯಗಳ ಚಿತ್ರೀಕರಣದ ವಿಡಿಯೋ ಲೀಕ್!

ವಿಡಿಯೋ ಕಾಲ್‌ ಮೂಲಕ ಯುವ ನಟಿಯ ಆಡಿಷನ್‌, 14 ನಿಮಿಷಗಳ ಖಾಸಗಿ ದೃಶ್ಯಗಳ ಚಿತ್ರೀಕರಣದ ವಿಡಿಯೋ ಲೀಕ್!

ನಕಲಿ ಆಡಿಷನ್‌ ನೆಪದಲ್ಲಿ ನಟಿ ಶ್ರುತಿ ನಾರಾಯಣನ್‌ ಅವರನ್ನು ಸಂಪರ್ಕಿಸಿದ್ದ ಗ್ಯಾಂಗ್‌ವೊಂದು, ತಾವು ದೊಡ್ಡ ಬಜೆಟ್‌ನ ಸಿನಿಮಾ ಮಾಡುತ್ತಿದ್ದೇವೆ. ಆ ಚಿತ್ರದಲ್ಲಿ ನಿಮಗೂ ಒಂದು ಪಾತ್ರವನ್ನು ನೀಡಲಿದ್ದೇವೆ ಎಂದು ಫೋನ್‌ ಮೂಲಕ ನಟಿಯನ್ನು ಸಂಪರ್ಕಿಸಿ, ವಿಡಿಯೋ ಕಾಲ್‌ ಮೂಲಕ ಆಡಿಷನ್‌ ಮಾಡಿದೆ. ಬಳಿಕ ಆ ವಿಡಿಯೋಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಲೀಕ್‌ ಮಾಡಿದೆ.

ಆಡಿಷನ್‌ ಹೆಸರಲ್ಲಿ ನಟಿ ಶ್ರುತಿ ನಾರಾಯಣನ್‌ ಅವರ ಖಾಸಗಿ ವಿಡಿಯೋಲೀಕ್‌
ಆಡಿಷನ್‌ ಹೆಸರಲ್ಲಿ ನಟಿ ಶ್ರುತಿ ನಾರಾಯಣನ್‌ ಅವರ ಖಾಸಗಿ ವಿಡಿಯೋಲೀಕ್‌

Shruthi Narayanan: ಯುವ ನಟಿಯೊಬ್ಬರಿಗೆ ಆಡಿಷನ್‌ ನೆಪದಲ್ಲಿ, ಅವರ ಖಾಸಗಿ ವಿಡಿಯೋಗಳನ್ನು ಪಡೆದು ಸೋಷಿಯಲ್‌ ಮೀಡಿಯಾದಲ್ಲಿ ಲೀಕ್‌ ಮಾಡಲಾಗಿದೆ. ತಮಿಳು ಕಿರುತೆರೆಯಲ್ಲಿ ಗುರುತಿಸಿಕೊಂಡಿರುವ 24ರ ಹರೆಯದ ಯುವ ನಟಿ ಶ್ರುತಿ ನಾರಾಯಣನ್‌ ಅವರೇ ವಂಚಕರ ಗ್ಯಾಂಗ್‌ ಬಲೆಗೆ ಬಿದ್ದವರು. ಈ ನಟಿಯ 14 ನಿಮಿಷಗಳ ಖಾಸಗಿ ವಿಡಿಯೋ, ಫೋಟೋ ತುಣುಕುಗಳೀಗ ಟ್ವಿಟ್ಟರ್‌ ಇನ್‌ಸ್ಟಾಗ್ರಾಂಗಳಲ್ಲಿ ಲೀಕ್‌ ಆಗಿದ್ದು, ಬಗೆಬಗೆ ಚರ್ಚೆ ಶುರುವಾಗಿದೆ.

ನಕಲಿ ಆಡಿಷನ್‌ ನೆಪದಲ್ಲಿ ನಟಿ ಶ್ರುತಿ ನಾರಾಯಣನ್‌ ಅವರನ್ನು ಸಂಪರ್ಕಿಸಿದ್ದ ಗ್ಯಾಂಗ್‌ವೊಂದು, ತಾವು ದೊಡ್ಡ ಬಜೆಟ್‌ನ ಸಿನಿಮಾ ಮಾಡುತ್ತಿದ್ದೇವೆ. ಆ ಚಿತ್ರದಲ್ಲಿ ನಿಮಗೂ ಒಂದು ಪಾತ್ರವನ್ನು ನೀಡಲಿದ್ದೇವೆ ಎಂದು ಫೋನ್‌ ಮೂಲಕ ನಟಿಯನ್ನು ಸಂಪರ್ಕಿಸಿದ್ದಾರೆ. ಬಳಿಕ ವಿಡಿಯೋ ಕಾಲ್‌ ಮೂಲಕವೇ ನಟಿಯನ್ನು ಆಡಿಷನ್‌ ಮಾಡಿದ್ದಾರೆ.

ಪೊಲೀಸ್‌ ಠಾಣೆಯಲ್ಲಿ ದೂರು

ಸ್ಕ್ರಿಪ್ಟ್‌ ಪ್ರಕಾರ ಕ್ಯಾಮರಾ ಮುಂದೆ ಒಂದಷ್ಟು ದೃಶ್ಯಗಳಲ್ಲಿ ನಟಿಸುವಂತೆ ಒತ್ತಾಯಿಸಿದ್ದಾರೆ. ಕೆಲ ಸಮಯದ ಬಳಿಕ ಕೆಲವು ವೆಬ್‌ಸೈಟ್‌ಗಳಲ್ಲಿ ಆ ವಿಡಿಯೋ ಕಾಣಿಸಿಕೊಳ್ಳುತ್ತಿದ್ದಂತೆ, ಇದೊಂದು ಫ್ರಾಡ್‌ ಆಡಿಷನ್‌ ಎಂದು ಶ್ರುತಿ ನಾರಾಯಣನ್‌ಗೂ ತಿಳಿದಿದೆ. ತಕ್ಷಣ, ಪೊಲೀಸರಿಗೂ ಅವರು ದೂರು ನೀಡಿದ್ದಾರೆ.

ಸೋಷಿಯಲ್‌ ಮೀಡಿಯಾದಲ್ಲಿ ಟ್ರೆಂಡಿಂಗ್‌

ಖಾಸಗಿ ವಿಡಿಯೋ ಲೀಕ್‌ ಆದ ಬೆನ್ನಲ್ಲೇ, ಸೋಷಿಯಲ್‌ ಮೀಡಿಯಾದಲ್ಲಿ #ShruthiNarayananLeaked ಹ್ಯಾಷ್‌ಟ್ಯಾಗ್‌ ಟ್ರೆಂಡಿಂಗ್‌ನಲ್ಲಿದೆ. ಈ ವರೆಗೂ ಈ ಹ್ಯಾಷ್‌ಟ್ಯಾಗ್‌ ಅಡಿಯಲ್ಲಿ 240,000 ಕ್ಕೂ ಹೆಚ್ಚು ಮೆನ್ಷನ್‌ಗಳಾಗಿವೆ. ಸೋಷಿಯಲ್‌ ಮೀಡಿಯಾದಲ್ಲಿ ಡೌನ್‌ಲೋಡ್ ಲಿಂಕ್‌ಗಳು ಹರಿದಾಡುತ್ತಿದ್ದು, ಕೆಲವು ತಾಣಗಳಲ್ಲಿಯೂ ವಿಡಿಯೋ ಅಪ್‌ಲೋಡ್‌ ಆಗಿದೆ. ಆದರೆ, ಹೀಗೆ ವಿಡಿಯೋ ಲೀಕ್‌ ಆಗಿದ್ದೇ ತಡ, ಶ್ರುತಿ ನಾರಾಯಣನ್‌ ಅವರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಕೆಲವರು ಇದು ಡೀಫ್‌ ಫೇಕ್‌ ಇರಬಹುದು ಎಂದರೆ, ಇನ್ನು ಕೆಲವರು ಇದು ಪಕ್ಕಾ ಶ್ರುತಿ ನಾರಾಯಣನ್‌ ಅವರೇ ಎಂದೂ ಕಾಮೆಂಟ್‌ ಹಾಕುತ್ತಿದ್ದಾರೆ.

ಸಿರಿಗಡಿಕ್ಕ ಆಸೈ ಸೀರಿಯಲ್‌ ನಟಿ

ಹೀಗೆ ವಿಡಿಯೋ, ಫೋಟೋಗಳು ಲೀಕ್‌ ಆಗುತ್ತಿದ್ದಂತೆ ಯಾರು ಈ ಶ್ರುತಿ ನಾರಾಯಣನ್‌ ಎಂಬ ಹುಡುಕಾಟವೂ ಸೋಷಿಯಲ್‌ ಮೀಡಿಯಾದಲ್ಲಿ ಹೆಚ್ಚಾಗಿದೆ. 24ರ ಹರೆಯದ ಶ್ರುತಿ, ಸದ್ಯ ತಮಿಳು ಸಿನಿಮಾರಂಗ ಮತ್ತು ತಮಿಳು ಕಿರುತೆರೆಯಲ್ಲಿ ಗುರುತಿಸಿಕೊಂಡಿದ್ದಾರೆ. ತಮಿಳಿನ "ಸಿರಿಗಡಿಕ್ಕ ಆಸೈ" ಧಾರಾವಾಹಿಯಲ್ಲಿ ಪೋಷಕ ಪಾತ್ರದಲ್ಲಿದ್ದಾರೆ.

Manjunath B Kotagunasi

TwittereMail
ಮಂಜುನಾಥ ಕೊಟಗುಣಸಿ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಚೀಫ್‌ ಕಂಟೆಂಟ್‌ ಪ್ರೊಡ್ಯೂಸರ್‌, ಮನರಂಜನೆ ವಿಭಾಗದಲ್ಲಿ ಕಾರ್ಯನಿರ್ವಹಣೆ. ಈ ಮೊದಲು ವಿಜಯವಾಣಿ, ವಿಶ್ವವಾಣಿ ಪತ್ರಿಕೆಗಳು ಮತ್ತು ಟಿವಿ9 ಸುದ್ದಿವಾಹಿನಿಯ ವಿವಿಧ ವಿಭಾಗಗಳಲ್ಲಿ ಒಟ್ಟು 12 ವರ್ಷ ಕೆಲಸ ಮಾಡಿದ ಅನುಭವ. ಸಿನಿಮಾ ಮೋಹಿ, ಕ್ರಿಕೆಟ್‌ ಪ್ರಿಯ. ಧಾರವಾಡ ಜಿಲ್ಲೆಯ ಕಲಘಟಗಿ ನಿವಾಸಿ.
Whats_app_banner