ಈ ಫೋಟೋದಲ್ಲಿನ ಬಾಲಕ ಈಗ ಭಾರತೀಯ ಚಿತ್ರೋದ್ಯಮದ ಹೆಮ್ಮೆಯ ಸ್ಟಾರ್ ನಟ, ಕೋಟಿ ಕುಳ, ದಕ್ಷಿಣ ಭಾರತದ ಮುತ್ತು! ಯಾರಿವರು?
ವೃತ್ತಿ ಬದುಕಿನ ಆರಂಭದ ದಿನಗಳಲ್ಲಿ ಪೋಷಕ ಪಾತ್ರಗಳಲ್ಲಿ ನಟಿಸಿದ್ದ ಈ ನಟ, ಸ್ಟಾರ್ ನಟರ ಸಿನಿಮಾಗಳಲ್ಲಿಯೂ ಸಾಕಷ್ಟು ಸೈಡ್ ರೋಲ್ ಮಾಡಿದ್ದರು. ಇದೀಗ ಅದೇ ಸ್ಟಾರ್ ಹೀರೋಗಳಿಗೆ ಪೈಪೋಟಿ ಕೊಡುತ್ತಿದ್ದಾರೆ. ನಟನೆಯಲ್ಲಿ ತಮ್ಮ ಗತ್ತು ಗಮ್ಮತ್ತಿನ ಮೂಲಕವೇ ಎಲ್ಲರನ್ನು ಆಕರ್ಷಿಸಿದ್ದಾರೆ. ಹಾಗಾದರೆ ಯಾರಿವರು?

Guess The Kid: ಇಲ್ಲಿ ಮೇಲೆ ಕಾಣಿಸುವ ಈ ಬಾಲಕ, ಪಾಸ್‌ಪೋರ್ಟ್ ಸೈಜ್ ಫೋಟೋದಲ್ಲಿ ತೀರಾ ಮುಗ್ಧನಂತೆ ಕಾಣ್ತಾನೆ. ಆದರೆ, ಇದೀಗ ಇದೇ ಬಾಲಕ ಬೆಳೆದು ದೊಡ್ಡವನಾಗಿದ್ದಾನೆ. ದುಬೈನಲ್ಲಿ ಅಕೌಂಟಂಟ್ ಆಗಿ ಕೆಲಸ ಮಾಡಿ, ದಶಕಗಳ ಬಳಿಕ ಅದೇ ದುಬೈನ ಬುರ್ಜ್ ಖಲೀಫಾ ಕಟ್ಟಡದ ಮೇಲೆ ಅವರ ಫೋಟೋ ಸಹ ಬಿತ್ತರವಾಗಿತ್ತು. ಹೌದು, ಭಾರತೀಯ ಚಿತ್ರೋದ್ಯಮದಲ್ಲಿ ನಟನೆಯಲ್ಲಿ ತಮ್ಮದೇ ಆದ ಛಾಪು ಮೂಡಿಸುವ ಮೂಲಕ ಕೋಟ್ಯಂತರ ಸಿನಿಮಾ ಪ್ರೇಮಿಗಳ ಮನಸ್ಸನ್ನೂ ಗೆದ್ದಿದ್ದಾರೆ ಈ ನಟ.
ಸೈಡ್ ರೋಲ್‌ನಿಂದ ಸ್ಟಾರ್ ನಟ..
ವೃತ್ತಿ ಬದುಕಿನ ಆರಂಭದ ದಿನಗಳಲ್ಲಿ ಪೋಷಕ ಪಾತ್ರಗಳಲ್ಲಿ ನಟಿಸಿದ್ದ ಈ ನಟ, ಸ್ಟಾರ್ ನಟರ ಸಿನಿಮಾಗಳಲ್ಲಿಯೂ ಸಾಕಷ್ಟು ಸೈಡ್ ರೋಲ್ ಮಾಡಿದ್ದರು. ಇದೀಗ ಅದೇ ಸ್ಟಾರ್ ಹೀರೋಗಳಿಗೆ ಪೈಪೋಟಿ ಕೊಡುತ್ತಿದ್ದಾರೆ. ನಟನೆಯಲ್ಲಿ ತಮ್ಮ ಗತ್ತು ಗಮ್ಮತ್ತಿನ ಮೂಲಕವೇ ಎಲ್ಲರನ್ನು ಆಕರ್ಷಿಸಿದ್ದಾರೆ. ಬರೀ ನಾಯಕನಾಗಿ ಮಾತ್ರವಲ್ಲ ಖಳನಾಯಕನಾಗಿ, ರೊಮ್ಯಾಂಟಿಕ್ ಹೀರೋ ಆಗಿ, ಆಕ್ಷನ್ ಹೀರೋ ಆಗಿಯೂ ಗಮನ ಸೆಳೆದಿದ್ದಾರೆ.
ಸಾವಿರ ಕೋಟಿ ಸಿನಿಮಾದ ಸರದಾರ
ಇತ್ತೀಚೆಗಷ್ಟೇ ಬಾಲಿವುಡ್‌ನಲ್ಲಿಯೂ ಸಾವಿರ ಕೋಟಿ ಸಿನಿಮಾದ (ಜವಾನ್) ಭಾಗವಾಗಿದ್ದಾರೆ ಈ ಸೌತ್ ನಟ. ಈ ನಡುವೆ ಇತ್ತೀಚಿನ ಕೆಲ ವಾರಗಳ ಹಿಂದಷ್ಟೇ ಬಿಡುಗಡೆಯಾದ ಅವರ ಸಿನಿಮಾ ಇದೀಗ ನೂರು ಕೋಟಿ ಸನಿಹಕೆ ಬಂದು ನಿಂತಿದೆ. ಮೂಲ ತಮಿಳಿಗನಾದರೂ, ಹಿಂದಿ, ತೆಲುಗು, ಮಲಯಾಳಂ ಸಿನಿಮಾಗಳಲ್ಲಿ ನಟಿಸಿ ತಮ್ಮದೇ ಆದ ಫ್ಯಾನ್ ಫಾಲೋವಿಂಗ್ ಹೊಂದಿದ್ದಾರೆ 46 ವರ್ಷ ಪ್ರಾಯದ ಈ ನಟ. ಹಾಗಾದರೆ, ಯಾರು ಆ ನಟ? ಬೇರಾರು ಅಲ್ಲ. ಒನ್ ಅಂಡ್ ಒನ್ಲಿ ವಿಜಯ್ ಸೇತುಪತಿ.
ಹೌದು ನಟ ವಿಜಯ್ ಸೇತುಪತಿ ಅವರ ಶಾಲಾದಿನಗಳ ಫೋಟೋವೊಂದು ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಸೇತುಪತಿ ಫೋಟೋ ನೋಡುತ್ತಿದ್ದಂತೆ, ಅವರ ಫ್ಯಾನ್ಸ್ ದಿಲ್ ಖುಷ್ ಆಗಿದ್ದಾರೆ. ಶಾಲಾದಿನಗಳಲ್ಲಿ ನಾನು ಹೇಗಿದ್ದೆ ಎಂದೂ ಆ ದಿನಗಳನ್ನು ಮೆಲುಕು ಹಾಕುತ್ತಿದ್ದಾರೆ. ಕಾಮೆಂಟ್ ಬಾಕ್ಸ್‌ನಲ್ಲಿ ಸಾವಿರಾರು ಕಾಮೆಂಟ್‌ಗಳು ಹರಿದು ಬರುತ್ತಿವೆ. ಜತೆಗೆ ಮೆಚ್ಚುಗೆಯೂ ವ್ಯಕ್ತವಾಗುತ್ತಿದೆ.
ಗಾಡ್‌ಫಾದರ್ ಹಂಗಿಲ್ಲದೇ ಬಂದ ನಟ
ಚಿತ್ರರಂಗದಲ್ಲಿ ಯಾವುದೇ ಹಿನ್ನೆಲೆ ಇಲ್ಲದೆ ತಮ್ಮ ಪ್ರತಿಭೆಯೊಂದನ್ನೇ ನಂಬಿ ಬಂದವರು ಗಿಜಯ್ ಸೇತುಪತಿ. ಯಾವುದೇ ಗಾಡ್‌ಫಾದರ್ ಇಲ್ಲದೇ ಇದೀಗ ಬಹುಬೇಡಿಕೆಯ ನಟನಾಗಿ ಗುರುತಿಸಿಕೊಂಡಿದ್ದಾರೆ. ತಮ್ಮ ವೃತ್ತಿಬದುಕಿನ ಆರಂಭದಲ್ಲಿ ಧನುಷ್, ಕಾರ್ತಿ ಸೇರಿ ಹಲವು ಸ್ಟಾರ್ ಹೀರೋಗಳ ಸಿನಿಮಾಗಳಲ್ಲಿ ಸೈಡ್ ಆ್ಯಕ್ಟರ್ ಆಗಿ ನಟಿಸಿ ಅದಾದ ಬಳಿಕ, ಹೀರೋ ಆಗಿ ಬದಲಾದರು. ಯಾವಾಗ ಬೇಕಾದರೂ ಖಳನಟನಾಗಿ ಹೆದರಿಸುವ ಬಹುಮುಖ ನಟ ಈ ವಿಜಯ್ ಸೇತುಪತಿ.
ನೂರು ಕೋಟಿ ಸನಿಹಕೆ ಮಹಾರಾಜ
ವಿಜಯ್ ಸೇತುಪತಿ ತಮಿಳಿನ ಮಹಾರಾಜ ಸಿನಿಮಾ ಜೂನ್ 14ರಂದು ಬಿಡುಗಡೆ ಆಗಿತ್ತು. ಭರ್ಜರಿ ಮೆಚ್ಚುಗೆ ಪಡೆದ ಈ ಸಿನಿಮಾ ಸದ್ಯ ಗಳಿಕೆಯ ವಿಚಾರದಲ್ಲಿ ನೂರು ಕೋಟಿಯ ಸನಿಹದಲ್ಲಿದೆ. ಮಂಕಿ ಟಾಯ್ ಚಿತ್ರದ ಮೂಲಕ ಗಮನ ಸೆಳೆದಿದ್ದ ನಿಥಿಲನ್ ಸಾಮಿನಾಥನ್ ಮಹಾರಾಜ ಸಿನಿಮಾವನ್ನು ನಿರ್ದೇಶಿಸಿದ್ದಾರೆ. ಈ ಚಿತ್ರದಲ್ಲಿ ಕ್ಷೌರಿಕನಾಗಿ ವಿಜಯ್ ಸೇತುಪತಿ ಎದುರಾಗಿದ್ದಾರೆ. ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಿದಂತೆ ಮನೋಜ್ಞ ಅಭಿನಯದ ಮೂಲಕವೇ ಗಮನ ಸೆಳೆದಿದ್ದಾರೆ.
