ಕನ್ನಡ ಸುದ್ದಿ  /  ಮನರಂಜನೆ  /  Kubera Movie: ಧನುಷ್‌ ನಟನೆಯ ಕುಬೇರ ಸಿನಿಮಾದಿಂದ ಹೊರಬಿತ್ತು ರಶ್ಮಿಕಾ ಮಂದಣ್ಣ ಫಸ್ಟ್‌ ಲುಕ್‌ ಪೋಸ್ಟರ್‌

Kubera Movie: ಧನುಷ್‌ ನಟನೆಯ ಕುಬೇರ ಸಿನಿಮಾದಿಂದ ಹೊರಬಿತ್ತು ರಶ್ಮಿಕಾ ಮಂದಣ್ಣ ಫಸ್ಟ್‌ ಲುಕ್‌ ಪೋಸ್ಟರ್‌

ಕಾಲಿವುಡ್‌ ನಟ ಧನುಷ್‌ ನಟನೆಯ ಕುಬೇರ ಚಿತ್ರದಲ್ಲಿನ ರಶ್ಮಿಕಾ ಮಂದಣ್ಣ ಅವರ ಫಸ್ಟ್‌ ಲುಕ್‌ ಬಿಡುಗಡೆ ಆಗಿದೆ.

Kubera Movie: ಧನುಷ್‌ ನಟನೆಯ ಕುಬೇರ ಸಿನಿಮಾದಿಂದ ಹೊರಬಿತ್ತು ರಶ್ಮಿಕಾ ಮಂದಣ್ಣ ಫಸ್ಟ್‌ ಲುಕ್‌ ಪೋಸ್ಟರ್‌
Kubera Movie: ಧನುಷ್‌ ನಟನೆಯ ಕುಬೇರ ಸಿನಿಮಾದಿಂದ ಹೊರಬಿತ್ತು ರಶ್ಮಿಕಾ ಮಂದಣ್ಣ ಫಸ್ಟ್‌ ಲುಕ್‌ ಪೋಸ್ಟರ್‌

Kubera Movie Rashmika Mandanna first Look: ಸೂಪರ್ ಸ್ಟಾರ್ ಧನುಷ್ ನಟನೆಯ ತೆಲುಗು ನಿರ್ದೇಶಕ ಶೇಖರ್ ಕಮ್ಮುಲ ಆಕ್ಷನ್ ಕಟ್ ಹೇಳುತ್ತಿರುವ ಕುಬೇರ ಸಿನಿಮಾ ರಶ್ಮಿಕಾ ಮಂದಣ್ಣ ಅವರ ಫಸ್ಟ್‌ ಲುಕ್‌ ಪೋಸ್ಟರ್‌ ಹಂಚಿಕೊಂಡಿದೆ. ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ಶೇಖರ್ ಕಮ್ಮುಲ ಅವರು ಈ ಸಿನಿಮಾಗೆ ಆಕ್ಷನ್‌ ಕಟ್‌ ಹೇಳಲಿದ್ದಾರೆ. ಸೂಪರ್‌ಸ್ಟಾರ್ ಧನುಷ್ ಮತ್ತು ನಾಗಾರ್ಜುನ ಅಭಿನಯದ ಬಹು ನಿರೀಕ್ಷಿತ ಪೌರಾಣಿಕ ಪ್ಯಾನ್- ಇಂಡಿಯನ್ ಕುಬೇರ ಸಿನಿಮಾ ಫಸ್ಟ್‌ ಲುಕ್‌ ಮೂಲಕ ಮತ್ತೆ ಪ್ರೇಕ್ಷರನ್ನು ಸೆಳೆಯಲು ಸಜ್ಜಾಗಿದೆ. ಸಿನಿಮಾದಲ್ಲಿ ನ್ಯಾಶನಲ್‌ ಕ್ರಶ್‌ ರಶ್ಮಿಕಾ ಮಂದಣ್ಣ ಮಹತ್ವದ ಪಾತ್ರ ನಿರ್ವಹಿಸಿದ್ದಾರೆ.

ಇದೀಗ ಚಿತ್ರತಂಡ ರಶ್ಮಿಕಾ ಅವರ ಫಸ್ಟ್ ಲುಕ್ ಮತ್ತು ಪಾತ್ರದ ಪರಿಚಯವನ್ನು ವಿಡಿಯೊ ಮೂಲಕ ಮೂಲಕ ಶೇರ್‌ ಮಾಡಿಕೊಂಡಿದೆ. ರಶ್ಮಿಕಾ ವಿಭಿನ್ನ ಅವತಾರದಲ್ಲಿ ಕಾಣಿಸಿಕೊಂಡಿದ್ದು, ಅವರ ಪಾತ್ರ ಪ್ರೇಕ್ಷಕರಲ್ಲಿ ಭಾರೀ ನಿರೀಕ್ಷೆ ಹುಟ್ಟುಹಾಕಿದೆ. ನಟರಾದ ಧನುಷ್ ಮತ್ತು ನಾಗಾರ್ಜುನ ಜತೆಗೆ ಈ ಸಿನಿಮಾದಲ್ಲಿ ರಶ್ಮಿಕಾ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಫಸ್ಟ್ ಲುಕ್ ಥ್ರಿಲ್ಲಿಂಗ್ ಮತ್ತು ಇಂಟ್ರೆಸ್ಟಿಂಗ್ ಆಗಿದೆ.

ರಶ್ಮಿಕಾ ಫಸ್ಟ್‌ ಲುಕ್‌ ಜತೆಗೆ ಕ್ಯಾರಕ್ಟರ್‌ ಗ್ಲಿಂಪ್ಸ್‌ ಕೂಡ ಚಿತ್ರತಂಡ ರಿವೀಲ್‌ ಮಾಡಿದೆ. ಒಂದು ನಿಮಿಷದಲ್ಲಿರುವ ಈ ವಿಡಿಯೊದಲ್ಲಿ ರಶ್ಮಿಕಾ ಪಾತ್ರದ ಝಲಕ್‌ ಇದೆ. ದೇವಿ ಶ್ರೀ ಪ್ರಸಾದ್ ಅವರ ಸಂಗೀತ ಇನ್ನಷ್ಟು ಕಿಕ್‌ ಕೊಡುವಂತಿದೆ. ಶೇಖರ್ ಕುಮ್ಮಲ ಅವರ ಕುಬೇರ ಬಹು ನಿರೀಕ್ಷಿತ ಪ್ಯಾನ್-ಇಂಡಿಯನ್ ಚಲನಚಿತ್ರಗಳಲ್ಲಿ ಒಂದಾಗಿದೆ. ಸದ್ಯ ಈ ಹೈ ಬಜೆಟ್ ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಆಗುತ್ತಿವೆ.

ಟ್ರೆಂಡಿಂಗ್​ ಸುದ್ದಿ

ಶ್ರೀ ವೆಂಕಟೇಶ್ವರ ಸಿನಿಮಾಸ್ ಎಲ್‌ಎಲ್‌ಪಿ ಮತ್ತು ಅಮಿಗೋಸ್ ಕ್ರಿಯೇಷನ್ಸ್ ಪ್ರೈವೇಟ್ ಲಿಮಿಟೆಡ್ ಬ್ಯಾನರ್‌ನಡಿಯಲ್ಲಿ ಸುನೀಲ್ ನಾರಂಗ್ ಮತ್ತು ಪುಸ್ಕುರ್ ರಾಮ್ ಮೋಹನ್ ರಾವ್ ಈ ಚಿತ್ರವನ್ನು ಜಂಟಿಯಾಗಿ ನಿರ್ಮಿಸಿದ್ದಾರೆ. ಶೇಖರ್ ಕಮ್ಮುಲ ಅವರ ಕುಬೇರ ಒಂದು ಪ್ಯಾನ್-ಇಂಡಿಯಾ ಬಹುಭಾಷಾ ಚಿತ್ರವಾಗಿದ್ದು, ತಮಿಳು, ತೆಲುಗು ಮತ್ತು ಹಿಂದಿಯಲ್ಲಿ ಏಕಕಾಲದಲ್ಲಿ ಚಿತ್ರೀಕರಿಸಲಾಗಿದೆ. ಸದ್ಯ ಚಿತ್ರದ ಚಿತ್ರೀಕರಣ ಹೈದರಾಬಾದ್‌ನಲ್ಲಿ ನಡೆಯುತ್ತಿದೆ.