Test Movie OTT: ಕ್ರಿಕೆಟ್‌‌ ಪ್ರೇಮಿಗಳನ್ನು ಹುಚ್ಚೆಬ್ಬಿಸುವ ಟೆಸ್ಟ್‌ ಸಿನಿಮಾ ನೇರವಾಗಿ ಒಟಿಟಿಗೆ; ಸಿದ್ದಾರ್ಥ್‌, ನಯನತಾರಾ ನಟನೆ
ಕನ್ನಡ ಸುದ್ದಿ  /  ಮನರಂಜನೆ  /  Test Movie Ott: ಕ್ರಿಕೆಟ್‌‌ ಪ್ರೇಮಿಗಳನ್ನು ಹುಚ್ಚೆಬ್ಬಿಸುವ ಟೆಸ್ಟ್‌ ಸಿನಿಮಾ ನೇರವಾಗಿ ಒಟಿಟಿಗೆ; ಸಿದ್ದಾರ್ಥ್‌, ನಯನತಾರಾ ನಟನೆ

Test Movie OTT: ಕ್ರಿಕೆಟ್‌‌ ಪ್ರೇಮಿಗಳನ್ನು ಹುಚ್ಚೆಬ್ಬಿಸುವ ಟೆಸ್ಟ್‌ ಸಿನಿಮಾ ನೇರವಾಗಿ ಒಟಿಟಿಗೆ; ಸಿದ್ದಾರ್ಥ್‌, ನಯನತಾರಾ ನಟನೆ

Test Movie OTT release: ಸಿದ್ದಾರ್ಥ್‌, ಮಾಧವನ್‌, ನಯನತಾರಾ ಅಭಿನಯದ ಟೆಸ್ಟ್‌ ಸಿನಿಮಾವು ನೇರವಾಗಿ ಒಟಿಟಿಯಲ್ಲಿ ಸ್ಟ್ರೀಮಿಂಗ್‌ ಆಗಲಿದೆ. ಇದು ಕ್ರಿಕೆಟ್‌ ಆಧರಿತ ಕ್ರೀಡಾ ನಾಟಕ. ಈ ಚಿತ್ರವು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುವುದಿಲ್ಲ. ನೇರವಾಗಿ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್‌ ಆಗಲಿದೆ.

Test Movie OTT: ಟೆಸ್ಟ್‌ ಸಿನಿಮಾ ನೇರವಾಗಿ ಒಟಿಟಿಗೆ; ಸಿದ್ದಾರ್ಥ್‌, ನಯನತಾರಾ ನಟನೆ
Test Movie OTT: ಟೆಸ್ಟ್‌ ಸಿನಿಮಾ ನೇರವಾಗಿ ಒಟಿಟಿಗೆ; ಸಿದ್ದಾರ್ಥ್‌, ನಯನತಾರಾ ನಟನೆ

Test Movie OTT release: ಸಿದ್ದಾರ್ಥ್‌, ಮಾಧವನ್‌, ನಯನತಾರಾ ಅಭಿನಯದ ಟೆಸ್ಟ್‌ ಸಿನಿಮಾವು ನೇರವಾಗಿ ಒಟಿಟಿಯಲ್ಲಿ ಸ್ಟ್ರೀಮಿಂಗ್‌ ಆಗಲಿದೆ. ಇದು ಕ್ರಿಕೆಟ್‌ ಆಧರಿತ ಕ್ರೀಡಾ ನಾಟಕ. ಈ ಚಿತ್ರವು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುವುದಿಲ್ಲ. ನೇರವಾಗಿ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್‌ ಆಗಲಿದೆ. ಈ ಚಿತ್ರದಲ್ಲಿ ಸಿದ್ಧಾರ್ಥ್‌ ಅನುಭವಿ ಬ್ಯಾಟ್ಸ್‌ಮನ್ ಪಾತ್ರದಲ್ಲಿ ನಟಿಸಿದ್ದಾರೆ. ಇದಕ್ಕೆ ಸಂಬಂಧಪಟ್ಟ ಟೀಸರ್‌ ಅನ್ನು ಕ್ರಿಕೆಟಿಗ ಅಶ್ವಿನ್‌ ರವಿಚಂದ್ರನ್‌ ಬಿಡುಗಡೆ ಮಾಡಿದ್ದಾರೆ.

ಟೆಸ್ಟ್‌ ಸಿನಿಮಾ- ಸಿದ್ಧಾರ್ಥ್‌ ಕ್ಯಾರೆಕ್ಟರ್‌ ಟೀಸರ್‌ ಬಿಡುಗಡೆ

ನಟರಾದ ಮಾಧವನ್, ನಯನತಾರಾ ಮತ್ತು ಸಿದ್ಧಾರ್ಥ್ ಅವರೊಂದಿಗೆ ನಟಿ 'ಅಮಿಲ್' ಕೂಡ ಈ ಚಿತ್ರದಲ್ಲಿ ನಟಿಸಿದ್ದಾರೆ. ಈ ಟೆಸ್ಟ್‌ ಸಿನಿಮಾವು ನೇರವಾಗಿ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಲಿದೆ. ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟಿಗ ಆರ್. ಅಶ್ವಿನ್ ಅವರು ಸಿದ್ಧಾರ್ಥ್‌ ಅವರ ಪಾತ್ರದ ಪ್ರೋಮೊವನ್ನು ಬಿಡುಗಡೆ ಮಾಡಿದ್ದಾರೆ.

ಈ ಟೀಸರ್‌ನಲ್ಲಿ ಸಿದ್ದಾರ್ಥ್‌ ಅರ್ಜುನ್‌ ಪಾತ್ರದಲ್ಲಿ ನಟಿಸಿದ್ದಾರೆ. ಅರ್ಜುನ್‌ ಒಬ್ಬ ಅನುಭವಿ ಬ್ಯಾಟ್ಸ್‌ಮೆನ್‌ ಆಗಿ ಕಾಣಿಸಿಕೊಂಡಿದ್ದಾರೆ. ಆದರೆ, ಅರ್ಜುನ್‌ ಇತ್ತೀಚೆಗೆ ಯಾಕೋ ಫಾರ್ಮ್‌ನಲ್ಲಿಲ್ಲ. ಆತ ಕ್ರಿಕೆಟ್‌ಗೆ ವಿದಾಯ ಹೇಳಲು ಇದು ಸೂಕ್ತ ಸಮಯ ಎಂದು ಎಲ್ಲರೂ ಹೇಳುತ್ತಾರೆ. ಈ ಸಮಯದಲ್ಲಿ ಸಿದ್ಧಾರ್ಥ್‌ ಸಿದ್ಧಾರ್ಥ್ ಭಾವನಾತ್ಮಕ ಪ್ರಕ್ಷುಬ್ಧತೆಯನ್ನು ಎದುರಿಸುತ್ತಾನೆ. ಆಟದ ವಿಷಯ ಬಂದಾಗ ನಾನೊಬ್ಬ ಸೈನಿಕ ಎಂದು ಹೇಳುತ್ತಾನೆ. ಇವಿಷ್ಟು ಅಂಶ ಟೀಸರ್‌ನಲ್ಲಿದೆ.

ಅರ್ಜುನ್‌ಗೆ ಕ್ರಿಕೆಟ್‌ ಕೇವಲ ಆಟವಲ್ಲ. ಅದು ಅವನ ಗುರುತು, ಅದು ಅವನ ಬದುಕು. ಆದರೆ, ವೈಯಕ್ತಿಕ ಬದುಕಿನ ಸವಾಲುಗಳು, ವೃತ್ತಿಪರ ವೈಭವದ ನಡುವೆ ಈತ ತೊಳಲಾಡುತ್ತಾನೆ. ಆತನ ಬದುಕಿನ ನಿಜವಾದ ಪರೀಕ್ಷೆ ಅಥವಾ ಟೆಸ್ಟ್‌ ಕಂಡುಕೊಳ್ಳಬೇಕಾಗುತ್ತದೆ. ಭಾರತದಲ್ಲಿ ಈಗಾಗಲೇ ಕ್ರಿಕೆಟ್‌ಗೆ ಸಂಬಂಧಪಟ್ಟ ಹಲವು ಸಿನಿಮಾಗಳು ಬಿಡುಗಡೆಯಾಗಿವೆ. ಇದಕ್ಕೆ ಟೆಸ್ಟ್‌ ಹೊಸ ಸೇರ್ಪಡೆಯಾಗಿದೆ.

ನಟ ಸಿದ್ಧಾರ್ಥ್‌ ತನ್ನ ಪಾತ್ರದ ಬಗ್ಗೆ ಹೀಗೆ ಹೇಳಿದ್ದಾರೆ. "ಅರ್ಜುನ್‌ ಸಿನಿಮಾದ ಕಥೆಯು ಲವಲವಿಕೆಯಿಂದ ಕೂಡಿದೆ. ಇದರಲ್ಲಿ ತ್ಯಾಗವೂ ಇದೆ. ಅವನು ಕೇವಲ ತನಗಾಗಿ ಆಡುವುದಲ್ಲ. ದೇಶಕ್ಕಾಗಿ ಆಡುತ್ತಾನೆ. ನಿರೀಕ್ಷೆಗಳ ಭಾರವೂ ಆತನ ಮೇಲಿದೆ. ಟೆಸ್ಟ್‌ ಕೇವಲ ಕ್ರೀಡಾ ಚಿತ್ರವಲ್ಲ. ಅದಕ್ಕಿಂತಲೂ ಹೆಚ್ಚಿನದು. ಇದು ನಮ್ಮನ್ನು ನಾವು ವ್ಯಾಖ್ಯಾನಿಸುವ ಸಿನಿಮಾವಾಗಿದೆ" ಎಂದು ಅವರು ಹೇಳಿದ್ದಾರೆ.

ಟೆಸ್ಟ್‌ ಸಿನಿಮಾದ ಒಟಿಟಿ ಬಿಡುಗಡೆ ದಿನಾಂಕ

ಟೆಸ್ಟ್‌ ಸಿನಿಮಾವು ಯಾವುದೇ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗದೆ ನೇರವಾಗಿ ಒಟಿಟಿಯಲ್ಲಿ ಸ್ಟ್ರೀಮಿಂಗ್‌ ಆರಂಭಿಸಲಿದೆ. ಮುಂದಿನ ತಿಂಗಳು ಏಪ್ರಿಲ್‌ 4ರಂದು ಈ ಚಿತ್ರವು ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಲಿದೆ. ಈ ಸಿನಿಮಾ ಬರವಣಿಗೆ ಮತ್ತು ನಿರ್ದೇಶನ ಎಸ್‌ ಶಶಿಕಾಂತ್‌ ಅವರದು. ಇದು ಇವರ ಚೊಚ್ಚಲ ನಿರ್ದೇಶನದ ಸಿನಿಮಾ. ವೈನಾಟ್‌ ಸ್ಟುಡಿಯೋಸ್‌ನಡಿ ಎಸ್‌ ಶಶಿಕಾಂತ್‌ ಮತ್ತು ಚಕ್ರವರ್ತಿ ರಾಮಚಂದ್ರ ಈ ಸಿನಿಮಾ ನಿರ್ಮಿಸಿದ್ದಾರೆ.

ಇದು ಈ ವರ್ಷ ನೆಟ್‌ಫ್ಲಿಕ್ಸ್‌ ಹೊರತರುತ್ತಿರುವ ಮೊದಲ ತಮಿಳು ಸಿನಿಮಾ. ಈ ಸಿನಿಮಾ ಕನ್ನಡದಲ್ಲಿಯೂ ಸ್ಟ್ರೀಮಿಂಗ್‌ ಆಗಲಿದೆ.

Praveen Chandra B

TwittereMail
ಪ್ರವೀಣ್ ಚಂದ್ರ ಪುತ್ತೂರು: 'ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ'ದಲ್ಲಿ ಸಹಾಯಕ ಸುದ್ದಿ ಸಂಪಾದಕ. ಒನ್‌ ಇಂಡಿಯಾ, ವಿಜಯ ಕರ್ನಾಟಕದಲ್ಲಿ ಒಟ್ಟು 16 ವರ್ಷಗಳ ಅನುಭವ. ಆನ್‌ಲೈನ್‌ ಪತ್ರಿಕೋದ್ಯಮದಲ್ಲಿ ಎತ್ತರದ ಸಾಧನೆ ಮಾಡುವ ಕನಸು. ಡಿಜಿಟಲ್‌ ಜಗತ್ತಿನಲ್ಲಿ ಹೊಸತನ್ನು ಕಲಿಯುವ ಆಸಕ್ತಿ. ಮನರಂಜನೆ, ಶಿಕ್ಷಣ, ಉದ್ಯೋಗ, ತಂತ್ರಜ್ಞಾನ, ವಾಣಿಜ್ಯ, ಕರ್ನಾಟಕ, ದೇಶ- ವಿದೇಶ, ಸಿನಿಮಾ, ಷೇರುಪೇಟೆ, ಜೀವನಶೈಲಿ... ಹಲವು ವಿಚಾರಗಳ ಬಗ್ಗೆ ತಳಸ್ಪರ್ಶಿಯಾಗಿ ಬರೆಯಬಲ್ಲರು. ಎಸ್‌ಇಒ ತಂತ್ರಗಳನ್ನು ಪತ್ರಿಕೋದ್ಯಮದ ಹದಕ್ಕೆ ಪಳಗಿಸುವ ಸಾಮರ್ಥ್ಯ ರೂಢಿಸಿಕೊಂಡವರು. ಇಮೇಲ್: praveen.chandra@htdigital.in
Whats_app_banner