Goat Collection; ಬಿಡುಗಡೆಯಾದ ದಿನಕ್ಕಿಂತ 2ನೇ ದಿನ ಬಾಕ್ಸ್‌ ಆಫೀಸಿನಲ್ಲಿ ಕಡಿಮೆ ಸಂಗ್ರಹಿಸಿದ ಗೋಟ್‌; ವಿಜಯ್‌ ಸಿನಿಮಾ ಗಳಿಸಿದೆಷ್ಟು?-kollywood news thalapathy vijay starring goat movie 2nd day collection in box office tamil film industry rsm ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  Goat Collection; ಬಿಡುಗಡೆಯಾದ ದಿನಕ್ಕಿಂತ 2ನೇ ದಿನ ಬಾಕ್ಸ್‌ ಆಫೀಸಿನಲ್ಲಿ ಕಡಿಮೆ ಸಂಗ್ರಹಿಸಿದ ಗೋಟ್‌; ವಿಜಯ್‌ ಸಿನಿಮಾ ಗಳಿಸಿದೆಷ್ಟು?

Goat Collection; ಬಿಡುಗಡೆಯಾದ ದಿನಕ್ಕಿಂತ 2ನೇ ದಿನ ಬಾಕ್ಸ್‌ ಆಫೀಸಿನಲ್ಲಿ ಕಡಿಮೆ ಸಂಗ್ರಹಿಸಿದ ಗೋಟ್‌; ವಿಜಯ್‌ ಸಿನಿಮಾ ಗಳಿಸಿದೆಷ್ಟು?

ಗುರುವಾರ ತೆರೆ ಕಂಡ ವಿಜಯ್‌ ಅಭಿನಯದ ಗೋಟ್‌ ಸಿನಿಮಾ ಎರಡು ದಿನಗಳಲ್ಲಿ ಒಟ್ಟು 67 ಕೋಟಿ ರೂ. ಲಾಭ ಮಾಡಿದೆ. ಆದರೆ ಮೊದಲ ದಿನಕ್ಕೆ ಹೋಲಿಸಿದರೆ ಎಡರನೇ ದಿನ ಕಲೆಕ್ಷನ್‌ನಲ್ಲಿ ಹಿಂದೆ ಬಿದ್ದಿದೆ. ವೀಕೆಂಡ್‌ವರೆಗೂ ಕಾದು ನೋಡಬೇಕು ಎಂದು ಸಿನಿ ವಿಮರ್ಶಕ ತರಣ್‌ ಆದರ್ಶ್‌ ಹೇಳಿದ್ದಾರೆ.

ಬಿಡುಗಡೆಯಾದ ದಿನಕ್ಕಿಂತ 2ನೇ ದಿನ ಬಾಕ್ಸ್‌ ಆಫೀಸಿನಲ್ಲಿ ಕಡಿಮೆ ಸಂಗ್ರಹಿಸಿದ ಗೋಟ್‌; ವಿಜಯ್‌ ಸಿನಿಮಾ ಗಳಿಸಿದೆಷ್ಟು?
ಬಿಡುಗಡೆಯಾದ ದಿನಕ್ಕಿಂತ 2ನೇ ದಿನ ಬಾಕ್ಸ್‌ ಆಫೀಸಿನಲ್ಲಿ ಕಡಿಮೆ ಸಂಗ್ರಹಿಸಿದ ಗೋಟ್‌; ವಿಜಯ್‌ ಸಿನಿಮಾ ಗಳಿಸಿದೆಷ್ಟು?

ಸೆಪ್ಟೆಂಬರ್‌ 5ರಂದು ತೆರೆ ಕಂಡ ದಳಪತಿ ವಿಜಯ್‌ ಅಭಿನಯದ ಗೋಟ್‌ ಸಿನಿಮಾ ದೊಡ್ಡ ಯಶಸ್ಸು ಕಂಡಿದೆ. ಇದುವರೆಗೂ ಬಿಡುಗಡೆ ಆಗಿರುವ ವಿಜಯ್‌ ಸಿನಿಮಾಗಳಲ್ಲಿ ಇದು ಬೆಸ್ಟ್‌ ಎಂದು ಈಗಾಗಲೇ ವಿಜಯ್‌ ಅಭಿಮಾನಿಗಳು ಚಿತ್ರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈಗಾಗಲೇ ಸಿನಿಮಾ ನೋಡಿರುವವರು ಮತ್ತೊಮ್ಮೆ ಕುಟುಂಬದವರು, ಸ್ನೇಹಿತರೊಂದಿಗೆ ತೆರಳಿ ಮೆಚ್ಚಿನ ನಟನ ಸಿನಿಮಾವನ್ನು ಎಂಜಾಯ್‌ ಮಾಡುತ್ತಿದ್ದಾರೆ.

ಎರಡನೇ ದಿನದ ಕಲೆಕ್ಷನ್‌ ಎಷ್ಟು?

ಇಷ್ಟೆಲ್ಲಾ ಕ್ರೇಜ್‌ ಸೃಷ್ಟಿಸಿರುವ ಗೋಟ್‌ ಸಿನಿಮಾ 2 ದಿನಗಳಲ್ಲಿ ಎಷ್ಟು ಸಂಗ್ರಹ ಮಾಡಿರಬಹುದು ಎಂಬ ಕುತೂಹಲ ಎಲ್ಲರಿಗೂ ಕಾಡುತ್ತಿದೆ. ಕರ್ನಾಟಕ ಸೇರಿದಂತೆ ಗೋಟ್‌, ಬಾಕ್ಸ್‌ ಆಫೀಸ್‌ ಕೊಳ್ಳೆ ಹೊಡೆಯುತ್ತಿದೆ. ಕನ್ನಡಿಗರೂ ವಿಜಯ್‌ ಸಿನಿಮಾ ನೋಡಿ ಮೆಚ್ಚಿದ್ದಾರೆ. ಮೊದಲ ದಿನವೇ ದೇಶದಲ್ಲಿ ಸುಮಾರು 43 ಕೋಟಿ ರೂನಷ್ಟು ಕಲೆಕ್ಷನ್‌ ಮಾಡಿದೆ. ಅದರಲ್ಲಿ ತಮಿಳುನಾಡು ಪಾಲು ಹೆಚ್ಚಾಗಿದೆ. ತಮಿಳುನಾಡಿನಲ್ಲಿ ಮೊದಲ ದಿನ ಈ ಚಿತ್ರಕ್ಕೆ 38.3 ಕೋಟಿ ಸಿಕ್ಕಿದೆ. ಹಿಂದಿ ವರ್ಷನ್‌ನಿಂದ ಉತ್ತರ ಭಾರತದಲ್ಲಿ 1.7 ಕೋಟಿ, ತೆಲುಗು ವರ್ಷನ್‌ನಿಂದ 3 ಕೋಟಿ ರೂಪಾಯಿ ಕಲೆಕ್ಷನ್‌ ಮಾಡಿದೆ. ಬಿಡುಗಡೆಗೂ ಮುನ್ನವೇ ಗೋಟ್‌ ಸಿನಿಮಾ ಅಡ್ವಾನ್ಸ್‌ ಬುಕ್ಕಿಂಗ್‌ನಿಂದಲೇ ಭಾರೀ ಲಾಭ ಮಾಡಿತ್ತು.

ಮೊದಲ ದಿನಕ್ಕೆ ಹೋಲಿಸಿದರೆ ಎರಡನೇ ದಿನ ಗೋಟ್‌ ಸಿನಿಮಾ ಬಾಕ್ಸ್‌ ಆಫೀಸಿನಲ್ಲಿ ಕಡಿಮೆ ಲಾಭ ಗಳಿಸಿದೆ. ಗುರುವಾರ 43 ಕೋಟಿ ರೂ ಗಳಿಸಿದರೆ ಶುಕ್ರವಾರ ಭಾರತದಲ್ಲಿ 24 ಕೋಟಿ ರೂ. ಲಾಭ ಮಾಡಿದೆ. ಅದರಲ್ಲಿ ತಮಿಳುನಾಡಿನಿಂದಲೇ 22 ಕೋಟಿ ರೂ ಬಂದಿದೆ. ಶುಕ್ರವಾರ ತಮಿಳಿನಲ್ಲಿ ಈ ಚಿತ್ರದ ಆಕ್ಯುಪೆನ್ಸಿ ಶೇಕಡ 60.38 ಇತ್ತು. ಒಟ್ಟಿನಲ್ಲಿ ಸಿನಿಮಾ, ಎರಡೂ ದಿನಗಳಲ್ಲಿ ಒಟ್ಟು 67 ಕೋಟಿ ರೂ. ಸಂಗ್ರಹಿಸಿದೆ. ಅಮೆರಿಕದಲ್ಲಿ ಕೂಡಾ ಬಿಡುಗಡೆ ಆಗಿರುವ ಸಿನಿಮಾ 2 ದಿನಗಳಲ್ಲಿ 1.85 ಮಿಲಿಯನ್‌ ಡಾಲರ್‌ ಕಲೆಕ್ಷನ್‌ ಮಾಡಿದೆ ಎಂದು ತಮಿಳು ಸಿನಿ ವಿಮರ್ಶಕ ರಮೇಶ್‌ ಬಾಲಾ ತಮ್ಮ ಅಧಿಕೃತ ಎಕ್ಸ್‌ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ವೀಕೆಂಡ್‌ವರೆಗೂ ಕಾಯಬೇಕು

ಸಿನಿಮಾ ಬಿಹಾರ್‌, ಗುಜರಾತ್‌, ಒಡಿಶಾ, ಪಶ್ಚಿಮ ಬಂಗಾಳ, ಅಸ್ಸಾಂನಲ್ಲಿ ಕೂಡಾ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಎರಡನೇ ದಿನ ಕಲೆಕ್ಷನ್‌ ಕಡಿಮೆ ಆಗಿದೆ. ಆದರೆ ವೀಕೆಂಡ್‌ನಲ್ಲಿ ಖಂಡಿತ ಹೆಚ್ಚು ಲಾಭ ಮಾಡಲಿದೆ ಎಂದು ಸಿನಿ ವಿರ್ಮಶಕ ತರಣ್‌ ಆದರ್ಶ್‌ ತಮ್ಮ ಎಕ್ಸ್‌ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

Goat (The Greatest of All Time) ಚಿತ್ರವನ್ನು ಎಜಿಎಸ್‌ ಎಂಟರ್‌ಟೈನ್ಮೆಂಟ್‌ ಬ್ಯಾನರ್‌ ಅಡಿ, ಕಲ್ಪತಿ ಅಗೋರಂ, ಕಲ್ಪತಿ ಗಣೇಶ್‌ ಹಾಗೂ ಕಲ್ಪತಿ ಸುರೇಶ್‌ ಜೊತೆ ಸೇರಿ ನಿರ್ಮಿಸಿದ್ದಾರೆ. ಚಿತ್ರಕ್ಕಾಗಿ 400 ಕೋಟಿ ರೂ. ಖರ್ಚು ಮಾಡಲಾಗಿದೆ. ವೆಂಕಟ್‌ ಪ್ರಭು, ಈ ಚಿತ್ರಕ್ಕೆ ನಿರ್ದೇಶನ ಮಾಡಿರುವುದು ಮಾತ್ರವಲ್ಲದೆ ಡೈಲಾಗ್‌ ಬರೆದು ಚಿತ್ರಕಥೆ ರಚಿಸಿದ್ದಾರೆ. ಚಿತ್ರದ ಹಾಡುಗಳಿಗೆ ಯುವನ್‌ ಶಂಕರ್‌ ರಾಜಾ ಸಂಗೀತ ನೀಡಿದ್ದಾರೆ. ಚಿತ್ರದಲ್ಲಿ ವಿಜಯ್‌ ಡಬಲ್‌ ರೋಲ್‌ನಲ್ಲಿ ನಟಿಸಿದ್ದಾರೆ. ಪಾರ್ವತಿ ನಾಯರ್‌, ಪ್ರಭುದೇವ, ಜಯರಾಮ್‌, ಮೀನಾಕ್ಷಿ ಚೌಧರಿ, ಪ್ರಶಾಂತ್‌, ಯೋಗಿ ಬಾಬು ಹಾಗೂ ಇನ್ನಿತರ ಕಲಾವಿದರು ನಟಿಸಿದ್ದಾರೆ.

mysore-dasara_Entry_Point