Goat Movie Review: ಚಿತ್ರಮಂದಿರಕ್ಕೆ ಗುಮ್ಮುತ್ತಾ ಬಂದ ಗೋಟ್‌; ದಳಪತಿ ವಿಜಯ್‌ ಅಭಿಯನಕ್ಕೆ ಫುಲ್‌ ಮಾರ್ಕ್ಸ್‌ ಕೊಟ್ಟ ಅಭಿಮಾನಿಗಳು-kollywood news thalapathy vijay starring goat tamil movie x review tamil film industry rsm ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  Goat Movie Review: ಚಿತ್ರಮಂದಿರಕ್ಕೆ ಗುಮ್ಮುತ್ತಾ ಬಂದ ಗೋಟ್‌; ದಳಪತಿ ವಿಜಯ್‌ ಅಭಿಯನಕ್ಕೆ ಫುಲ್‌ ಮಾರ್ಕ್ಸ್‌ ಕೊಟ್ಟ ಅಭಿಮಾನಿಗಳು

Goat Movie Review: ಚಿತ್ರಮಂದಿರಕ್ಕೆ ಗುಮ್ಮುತ್ತಾ ಬಂದ ಗೋಟ್‌; ದಳಪತಿ ವಿಜಯ್‌ ಅಭಿಯನಕ್ಕೆ ಫುಲ್‌ ಮಾರ್ಕ್ಸ್‌ ಕೊಟ್ಟ ಅಭಿಮಾನಿಗಳು

ದಳಪತಿ ವಿಜಯ್‌ ಅಭಿನಯದ ಬಹುನಿರೀಕ್ಷಿತ ಗೋಟ್‌ ಸಿನಿಮಾ ತೆರೆ ಕಂಡಿದೆ. ಸಿನಿಮಾ ಬಗ್ಗೆ ಎಕ್ಸ್‌ನಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಇದುವರೆಗೂ ತೆರೆ ಕಂಡ ವಿಜಯ್‌ ಅಭಿನಯದ ಸಿನಿಮಾಗಳಲ್ಲಿ ಇದು ಬೆಸ್ಟ್‌ ಎನ್ನುತ್ತಿದ್ದಾರೆ.

Goat Movie Review: ಚಿತ್ರ ಮಂದಿರಕ್ಕೆ ಗುಮ್ಮುತ್ತಾ ಬಂದ ಗೋಟ್‌; ದಳಪತಿ ವಿಜಯ್‌ ಅಭಿಯನಕ್ಕೆ ಫುಲ್‌ ಮಾರ್ಕ್ಸ್‌ ಕೊಟ್ಟ ಅಭಿಮಾನಿಗಳು
Goat Movie Review: ಚಿತ್ರ ಮಂದಿರಕ್ಕೆ ಗುಮ್ಮುತ್ತಾ ಬಂದ ಗೋಟ್‌; ದಳಪತಿ ವಿಜಯ್‌ ಅಭಿಯನಕ್ಕೆ ಫುಲ್‌ ಮಾರ್ಕ್ಸ್‌ ಕೊಟ್ಟ ಅಭಿಮಾನಿಗಳು (PC: Twitter)

ಗೋಟ್‌ ಸಿನಿಮಾ ರಿವ್ಯೂ; ತಮಿಳು ನಟ ದಳಪತಿ ವಿಜಯ್‌ ಸಿನಿಮಾ ಜೊತೆ ಜೊತೆಗೆ ರಾಜಕೀಯದಲ್ಲೂ ಬ್ಯುಸಿ ಇದ್ದಾರೆ. ಮುಂದಿನ ವಿಧಾನಸಭೆ ಚುನಾವಣೆಗೆ ಸಕಲ ತಯಾರಿ ನಡೆಸಿದ್ದಾರೆ. ಈ ನಡುವೆ ಇಂದು ವಿಜಯ್ ಅಭಿನಯದ ಗೋಟ್‌ ಸಿನಿಮಾ ತೆರೆ ಕಂಡಿದೆ. ಶಿಕ್ಷಕರ ದಿನಾಚರಣೆಯಂದು GOAT ಬೆಳ್ಳಿ ಪರದೆ ಮೇಲೆ ಅಪ್ಪಳಿಸಿದೆ. ವಾರದಿಂದಲೇ ವಿಜಯ್‌ ಅಭಿಮಾನಿಗಳು ಸಿನಿಮಾವನ್ನು ಸ್ವಾಗತಿಸಲು ಸಜ್ಜಾಗಿದ್ದರು. ನಿನ್ನೆ ರಾತ್ರಿಯಿಂದ ಚಿತ್ರಮಂದಿರದ ಮುಂದೆ ಕಿಕ್ಕಿರಿದ ಜನರು ಮೆಚ್ಚಿನ ನಟನ ಸಿನಿಮಾ ನೋಡಿ ಸಂತಸ ವ್ಯಕ್ತಪಡಿಸಿದ್ದಾರೆ.

ವೆಂಕಟ್‌ ಪ್ರಭು ನಿರ್ದೇಶನದ ಚಿತ್ರಕ್ಕೆ ಸಿನಿಮಾಭಿಮಾನಿಗಳು, ವಿಮರ್ಶಕರು ಉತ್ತಮ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಮೆಚ್ಚಿನ ನಟನ ಸಿನಿಮಾ ಬಗ್ಗೆ ಅಭಿಮಾನಿಗಳು ಟ್ವಿಟ್ಟರ್‌ನಲ್ಲಿ ಬರೆದುಕೊಂಡಿದ್ದಾರೆ. ತಮಿಳು ಚಿತ್ರರಂಗದ ಅತ್ಯುತ್ತುಮ ನಟರಲ್ಲಿ ತಾನೂ ಕೂಡಾ ಒಬ್ಬ ಎಂದು ವಿಜಯ್‌ ಈ ಚಿತ್ರದ ಮೂಲಕ ಮತ್ತೆ ಸಾಬೀತು ಮಾಡಿದ್ದಾರೆ. ಆಕ್ಟಿಂಗ್‌, ಸಂಭಾಷಣೆ ಬಗ್ಗೆ ಫ್ಯಾನ್ಸ್‌ ಹೊಗಳಿಕೆಯ ಮಾತುಗಳನ್ನಾಡಿದ್ದಾರೆ. ಬಹುತೇಕ ಟ್ವೀಟ್‌ಗಳು GOAT ಚಿತ್ರದಲ್ಲಿ ವಿಜಯ್‌ ವೃತ್ತಿ ಜೀವನದಲ್ಲಿ ಅತ್ಯುತ್ತಮ ಅಭಿನಯ ನೀಡಿದ್ದು, ಇದು ಸಿನಿಮಾಭಿಮಾನಿಗಳು ನೋಡಲೇಬೇಕಾದ ಸಿನಿಮಾ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇದುವರೆಗೂ ನಾನು ನೋಡಿದ ವಿಜಯ್‌ ಸಿನಿಮಾಗಳಲ್ಲಿ ಗೋಟ್‌ ಒಂದು ಶುದ್ಧವಾದ , ಪರಿಪೂರ್ಣ ಪ್ಯಾಕೇಜ್‌ ಹೊಂದಿರುವ ಸಿನಿಮಾ. ಚಿತ್ರದಲ್ಲಿ ಸಾಕಷ್ಟು ಫನ್‌ ಇದೆ. ಹೀರೋಯಿಸಂ, ಎಮೋಷನ್‌ ಇದೆ, ಬಹಳ ಟ್ವಿಸ್ಟ್‌ ಇದೆ. ಚಿತ್ರದ ಎರಡನೇ ಭಾಗ ಬಹಳ ಚೆನ್ನಾಗಿದೆ ಎಂದು ScootyPep ಎಂಬ ಎಕ್ಸ್‌ ಯೂಸರ್‌ ಬರೆದುಕೊಂಡಿದ್ದಾರೆ.

MahilMass ಎಂಬ ಎಕ್ಸ್‌ ಯೂಸರ್‌, ಚಿತ್ರದ ಮೊದಲ ಭಾಗಕ್ಕೆ ಫೈರ್‌ ಎಮೋಜಿ ಜೊತೆಗೆ 5 ಕ್ಕೆ 4.5 ಹಾಗೂ ಎರಡನೇ ಭಾಗಕ್ಕೆ 5ಕ್ಕೆ 5 ಅಂಕಗಳನ್ನು ನೀಡುವ ಮೂಲಕ ಚಿತ್ರದ ಬಗ್ಗೆ ಉತ್ತಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸಿನಿಮಾ ಬ್ಲಾಕ್‌ ಬಸ್ಟರ್‌ ಆಗೋದು ಪಕ್ಕಾ ಎಂದಿದ್ದಾರೆ.

ಗೋಟ್‌ ಚಿತ್ರವನ್ನು ಎಲ್ಲಾ ಸಿನಿಪ್ರಿಯರು ತಪ್ಪದೆ ನೋಡಲೇಬೇಕು. ಮೊದಲ ಭಾಗವು ಬಹಳ ಕುತೂಹಲದಿಂದ ಕೂಡಿದೆ. ಆದರೆ ಎರಡನೇ ಭಾಗ, ಅದರಲ್ಲೂ ಕ್ಲೈಮಾಕ್ಸ್‌ ಬಹಳ ಚೆನ್ನಾಗಿದೆ, ಸಿನಿಮಾ ನಿರೀಕ್ಷೆಗೂ ಮೀರಿದೆ. ಒಟ್ಟಿನಲ್ಲಿ ಇದು ದಳಪತಿ ವಿಜಯ್‌ ಶೋ ಎಂದು Thalaye Saranam Ethirthal Maranam ಎಂಬ ಅಭಿಮಾನಿ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.

ಗೋಟ್‌ ಚಿತ್ರದಲ್ಲಿ ರಜನಿಕಾಂತ್‌ ಅಭಿನಯದ ಸಿನಿಮಾವೊಂದರ ಹಾಡನ್ನು ಬಳಸಿಕೊಳ್ಳಲಾಗಿದೆ, ಅದು ಬಹಳ ಚೆನ್ನಾಗಿದೆ ಎಂದು ತಲೈವಾ ಅಭಿಮಾನಿಯೊಬ್ಬರು ದಳಪತಿ ವಿಜಯ್‌ ಗೋಟ್‌ ಚಿತ್ರವನ್ನು ಹೊಗಳಿದ್ದಾರೆ.

ಆದರೆ ಕೆಲವರು ಚಿತ್ರದ ಬಗ್ಗೆ ನೆಗೆಟಿವ್‌ ರಿವ್ಯೂ ಕೂಡಾ ನೀಡಿದ್ದಾರೆ. ವಿಜಯ್‌ ಅಭಿನಯದ ಎಲ್ಲಾ ಸಿನಿಮಾಗಳಿಗಿಂತ ಈ ಸಿನಿಮಾ ಅತ್ಯಂತ ಕೆಟ್ಟ ಸಿನಿಮಾ. ಬಹಳಷ್ಟ ಕಡೆ ಅನಾವಶ್ಯಕ ದೃಶ್ಯಗಳಿವೆ, ಚಿತ್ರಕಥೆ ಇನ್ನಷ್ಟು ಉತ್ತಮವಾಗಿರಬೇಕಿತ್ತು. ಕ್ಲೈಮಾಕ್ಸ್‌ ಅಂದುಕೊಂಡಂತೆ ಚೆನ್ನಾಗಿ ಬಂದಿಲ್ಲ. ಸಿನಿಮಾ ವಿಜಯ್‌ ಅಭಿಮಾನಿಗಳಿಗೆ ಮಾತ್ರ ಇಷ್ಟವಾಗಬಹುದು, ಬೇರೆಯವರಿಗಲ್ಲ ಎಂದು MakSelva ಎಂಬ ರಜನಿಕಾಂತ್‌ ಅಭಿಮಾನಿಯೊಬ್ಬರು ಎಕ್ಸ್‌ನಲ್ಲಿ ಅಭಿಪ್ರಾಯ ಹಂಚಿಕೊಂಡಿದ್ದಾರೆ.

Goat (The Greatest of All Time) ಚಿತ್ರವನ್ನು ಎಜಿಎಸ್‌ ಎಂಟರ್‌ಟೈನ್ಮೆಂಟ್‌ ಪ್ರೊಡಕ್ಷನ್‌ ಕಂಪನಿ ಅಡಿ ಕಲ್ಪತಿ ಅಗೋರಂ, ಕಲ್ಪತಿ ಗಣೇಶ್‌ ಹಾಗೂ ಕಲ್ಪತಿ ಸುರೇಶ್‌ ಜೊತೆ ಸೇರಿ ನಿರ್ಮಿಸಿದ್ದಾರೆ. ಸಿನಿಮಾಗೆ ವೆಂಕಟ್‌ ಪ್ರಭು ಡೈಲಾಗ್‌, ಚಿತ್ರಕಥೆ ಬರೆದು ಸಂಭಾಷಣೆ ಬರೆದಿದ್ದಾರೆ. ಯುವನ್‌ ಶಂಕರ್‌ ರಾಜಾ ಸಂಗೀತ ನಿರ್ದೇಶನದ ಈ ಚಿತ್ರದಲ್ಲಿ ದಳಪತಿ ವಿಜಯ್‌ ದ್ವಿಪಾತ್ರದಲ್ಲಿ ನಟಿಸಿದ್ದಾರೆ. ಜೊತೆಗೆ ಪ್ರಶಾಂತ್‌, ಪ್ರಭುದೇವ, ಜಯರಾಮ್‌, ಸ್ನೇಹ, ಮೀನಾಕ್ಷಿ ಚೌಧರಿ, ಯೋಗಿ ಬಾಬು ಹಾಗೂ ಇನ್ನಿತರರು ನಟಿಸಿದ್ದಾರೆ. 400 ಕೋಟಿ ರೂ ವೆಚ್ಚದಲ್ಲಿ ಸಿನಿಮಾ ತಯಾರಾಗಿದೆ.