Goat Movie: ದಳಪತಿ ವಿಜಯ್ 2026ರಲ್ಲಿ ತಮಿಳುನಾಡಿನ ಮುಖ್ಯಮಂತ್ರಿಯಾಗಲಿದ್ದಾರೆ, ಭವಿಷ್ಯ ನುಡಿದ ಪ್ರೇಮ್‌ಗಿ
ದಿ ಗ್ರೇಟೆಸ್ಟ್ ಆಫ್ ಆಲ್ ಟೈಮ್ (ಗೋಟ್) ಸಿನಿಮಾದ ಸಹ ನಟ ವಿಜಯ್ ಕುರಿತು ಹಿಂದೂಸ್ತಾನ್ ಟೈಮ್ಸ್‌ನ ಎಕ್ಸ್‌ಕ್ಲೂಸಿವ್ ಸಂದರ್ಶನದಲ್ಲಿ ನಟ ಪ್ರೇಮ್‌ಜಿ ಮಾತನಾಡಿದ್ದಾರೆ. ನಟ ವಿಜಯ್ 2026ರಲ್ಲಿ ತಮಿಳುನಾಡಿನ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಅವರು ಭವಿಷ್ಯ ನುಡಿದಿದ್ದಾರೆ.
ದಿ ಗ್ರೇಟೆಸ್ಟ್ ಆಫ್ ಆಲ್ ಟೈಮ್ (GOAT Movie) ಬಿಡುಗಡೆ ಸಮಯದಲ್ಲಿ ದಳಪತಿ ವಿಜಯ್ ಕುರಿತು ಹಿಂದೂಸ್ತಾನ್ ಟೈಮ್ಸ್‌ನ ಎಕ್ಸ್‌ಕ್ಲೂಸಿವ್ ಸಂದರ್ಶನದಲ್ಲಿ ನಟ ಪ್ರೇಮ್‌ಜಿ ಮಾತನಾಡಿದ್ದಾರೆ. ಈ ಸಿನಿಮಾವು ಬ್ಲಾಕ್‌ಬಸ್ಟರ್ ಆಗಲಿದೆ ಮತ್ತು ಜಾಗತಿಕ ಬಾಕ್ಸ್ ಆಫೀಸ್‌ನಲ್ಲಿ ಎಲ್ಲಾ ಭಾಷೆಗಳಲ್ಲಿ 1500 ಕೋಟಿ ರೂಪಾಯಿಗಳನ್ನು ಗಳಿಸಲಿದೆ ಎಂದು ಅವರು ವಿಶೇಷ ಸಂದರ್ಶನದಲ್ಲಿ ಅಭಿಪ್ರಾಯಪಟ್ಟಿದ್ದಾರೆ.
ಬ್ಲಾಕ್‌ಬಸ್ಟರ್ ಆಗಲಿದೆ ಗೋಟ್ ಸಿನಿಮಾ
ಗೋಟ್ ಸಿನಿಮಾದಲ್ಲಿ ತಮ್ಮ ಪಾತ್ರದ ಬಗ್ಗೆಯೂ ಪ್ರೇಮ್‌ಗಿ ಮಾತನಾಡಿದ್ದಾರೆ. "ನಿಮಗೆ ಗೊತ್ತಿರಬಹುದು. ಈ ಚಿತ್ರದಲ್ಲಿ ವಿಜಯ್ ಎರಡು ಪಾತ್ರಗಳಲ್ಲಿ ನಟಿಸಿದ್ದಾರೆ. ಒಬ್ಬರು ಹಿರಿಯ ವಿಜಯ್ ಮತ್ತೊಬ್ಬರು ಕಿರಿಯ ವಿಜಯ್. ಸೀನಿಯ್ ವಿಜಯ್ ಅವರನ್ನು ನಾನು ಮಾಮಾ (ಚಿಕ್ಕಪ್ಪ) ಎಂದು ಕರೆಯುವೆ. ಕಿರಿಯ ವಿಜಯ್ ನನ್ನನ್ನು ಮಾಮಾ ಎಂದು ಕರೆಯುತ್ತಾರೆ. ನಾನು ಈ ಸಿನಿಮಾದಲ್ಲಿ ಸ್ನೇಹಾಳ ಸಹೋದರನಾಗಿ ನಟಿಸಿದ್ದೇನೆ. ಸ್ನೇಹ ಸೀನಿಯರ್ ವಿಜಯ್‌ನ ಹೆಂಡತಿ. ಖಂಡಿತಾ ಈ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ " ಎಂದು ಪ್ರೇಮ್‌ಗಿ ಮಾಹಿತಿ ನೀಡಿದ್ದಾರೆ.
ಸಿನಿಮಾದಲ್ಲಿ ನಟ ದಳಪತಿ ವಿಜಯ್ ಅವರ ಕಾರಿನ ಸಂಖ್ಯೆ CM2026 ಎಂದಿದೆ. ಇದು 2026 ರಲ್ಲಿ ದಳಪತಿ ವಿಜಯ್ ಅವರ ಪಕ್ಷವಾದ ತಮಿಳಗ ವೆಟ್ರಿ ಕಳಗಂ (TVK)ಮೂಲಕ ರಾಜಕೀಯ ಪ್ರವೇಶಿಸುವುದನ್ನು ಸೂಚಿಸುತ್ತದೆ. ದಳಪತಿ ವಿಜಯ್ 2026ರಲ್ಲಿ ತಮಿಳುನಾಡಿನ ಮುಖ್ಯಮಂತ್ರಿಯಾಗುವ ನಿರೀಕ್ಷೆಯಲ್ಲಿ ಅವರ ಅಭಿಮಾನಿಗಳು ಇದ್ದಾರೆ.
ನೀವು ವಿಜಯ್ ಮತ್ತು ಅವರ ಪಕ್ಷಕ್ಕೆ ಮತ ಹಾಕುತ್ತೀರಾ ಎಂದು ಪ್ರೇಮ್‌ಗಿಯನ್ನು ಕೇಳಿದಾಗ “ಹೌದು, ಖಂಡಿತ! ನಾನು 2026ರಲ್ಲಿ ಅವರಿಗೆ ಮತ ಹಾಕುತ್ತೇನೆ. 2026ರಲ್ಲಿ ವಿಜಯ್ ತಮಿಳುನಾಡಿನ ಮುಖ್ಯಮಂತ್ರಿಯಾಗುವುದು ಗ್ಯಾರಂಟಿ, ಕಾದುನೋಡಿ" ಎಂದು ಹೇಳಿದ್ದಾರೆ.
ವಿಜಯ್ ನಟನೆಯ ಗೋಟ್ ಸಿನಿಮಾವು ಇಂದು ಜಾಗತಿಕವಾಗಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತತಿದೆ. ವಿಜಯ್ ಸಿನಿಮಾ ಕರ್ನಾಟಕದಲ್ಲೂ ಬಿಡುಗಡೆಯಾಗುತ್ತಿದೆ. ಈಗಾಗಲೇ ಬಹುತೇಕ ಚಿತ್ರಮಂದಿರಗಳಲ್ಲಿ ಟಿಕೆಟ್ ಸೋಲ್ಡೌಟ್ ಆಗಿರುವುದನ್ನು ಬುಕ್‌ಮೈ ಶೋನಂತಹ ಆಪ್‌ಗಳು ತೋರಿಸಿವೆ. ಬೆಂಗಳೂರಿನಲ್ಲಿ ಈ ಸಿನಿಮಾದ ಟಿಕೆಟ್ ದರ ಹೆಚ್ಚಿಸಲಾಗಿದೆ. ದಿ ಗ್ರೇಟೆಸ್ಟ್ ಆಫ್ ಆಲ್ ಟೈಮ್ ಸಿನಿಮಾವು ಬೆಂಗಳೂರಿನಲ್ಲಿ ಬಹುತೇಕ ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಿದೆ. ಮುಂಜಾನೆ 4 ಗಂಟೆಗೆ ಶೋ ಆರಂಭವಾಗಿದೆ. ಚೆನ್ನೈಗಿಂತಲೂ ಹೆಚ್ಚು ಶೋಗಳು ಅಂದ್ರೆ ಸುಮಾರು 750 ಶೋಗಳು ಬೆಂಗಳೂರಿನಲ್ಲಿ ಪ್ರದರ್ಶನಗೊಳ್ಳುತ್ತಿವೆ. ಕನ್ನಡದ ಇಬ್ಬನಿ ತಬ್ಬಿದ ಇಳೆಯಲಿ ಸಿನಿಮಾಕ್ಕೆ ಬೆರಳೆಣಿಕೆಯ ಥಿಯೇಟರ್‌ಗಳು ದೊರಕಿವೆ.
ಇದೇ ಸಮಯದಲ್ಲಿ ಬೆಂಗಳೂರಿನಲ್ಲಿ ದಿ ಗ್ರೇಟೆಸ್ಟ್ ಆಫ್ ಆಲ್ ಟೈಮ್ ಸಿನಿಮಾದ ಟಿಕೆಟ್ ದರವೂ ಹೆಚ್ಚಾಗಿದೆ. ಕೆಲವು ಮಲ್ಟಿಫ್ಲೆಕ್ಸ್‌ಗಳಲ್ಲಿ 2 ಸಾವಿರ ರೂಪಾಯಿವರೆಗೆ ಟಿಕೆಟ್ ದರವಿದೆ. ತಮಿಳುನಾಡಿನಲ್ಲಿಇಂತಹ ಪರಿಸ್ಥಿತಿ ಇಲ್ಲ. ಚೆನ್ನೈನಲ್ಲಿ ಒಂದು ಟಿಕೆಟ್ ದರ 190 ರೂಪಾಯಿ ಇದ್ದರೆ ಬೆಂಗಳೂರಿನಲ್ಲಿ 500 ರೂಪಾಯಿಗಿಂತಲೂ ಹೆಚ್ಚಾಗಿದೆ.
ನಟ ಪ್ರೇಮ್‌ಗಿ ಅವರು ಅಜಿತ್ ಕುಮಾರ್ ಮತ್ತು ದಳಪತಿ ವಿಜಯ್ ಜತೆ ನಟಿಸಿದ್ದಾರೆ. ಇವರಿಬ್ಬರಲ್ಲಿ ನಿಮ್ಮ ಫೇವರಿಟ್ ಯಾರು ಎಂಬ ಪ್ರಶ್ನೆಗೂ ಉತ್ತರಿಸಿದ್ದಾರೆ. “ನನ್ನ ಸಾರ್ವಕಾಲಿಕ ನೆಚ್ಚಿನ ಸೂಪರ್ ಸ್ಟಾರ್ ರಜನಿಕಾಂತ್! ನಾನು ಅಜಿತ್ ಮತ್ತು ವಿಜಯ್ ಅವರನ್ನು ಸಹಜವಾಗಿ ಪ್ರೀತಿಸುತ್ತೇನೆ. ಆದರೆ ಸೂಪರ್ ಸ್ಟಾರ್ ಎಲ್ಲಕ್ಕಿಂತ ಮಿಗಿಲು" ಎಂದು ಹೇಳಿದ್ದಾರೆ. "ಆಶ್ಚರ್ಯಗಳಿಂದ ತುಂಬಿದೆ ಮತ್ತು ಇದು ಅಭಿಮಾನಿಗಳು ಮತ್ತು ಪ್ರೇಕ್ಷಕರಿಗೆ ದೊಡ್ಡ ಸಂಭ್ರಮಾಚರಣೆಯಾಗಲಿದೆ" ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.