ಸಹನಟ ಸಿಂಗಮುತ್ತು ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಿದ ತಮಿಳು ಹಾಸ್ಯನಟ ವಡಿವೇಲು: 5 ಕೋಟಿ ರೂ. ಮಾನನಷ್ಟ ಮೊಕದ್ದಮೆ ದಾಖಲು-kollywood news veteran tamil actor vadivelu filed defamation case against co actor singamuthu for 5 crore rupees rsm ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  ಸಹನಟ ಸಿಂಗಮುತ್ತು ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಿದ ತಮಿಳು ಹಾಸ್ಯನಟ ವಡಿವೇಲು: 5 ಕೋಟಿ ರೂ. ಮಾನನಷ್ಟ ಮೊಕದ್ದಮೆ ದಾಖಲು

ಸಹನಟ ಸಿಂಗಮುತ್ತು ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಿದ ತಮಿಳು ಹಾಸ್ಯನಟ ವಡಿವೇಲು: 5 ಕೋಟಿ ರೂ. ಮಾನನಷ್ಟ ಮೊಕದ್ದಮೆ ದಾಖಲು

Kollywood News: ಖ್ಯಾತ ತಮಿಳು ನಟ ವಡಿವೇಲು, ತಮ್ಮ ಸಹನಟ ಸಿಂಗಮುತ್ತು ಅವರ ವಿರುದ್ದ ಕೋರ್ಟ್‌ ಮೆಟ್ಟಿಲೇರಿದ್ದಾರೆ. ಯೂಟ್ಯೂಬ್‌ವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಸಿಂಗಮುತ್ತು ನನ್ನ ವಿರುದ್ದ ಮಾನ ಹಾನಿಯಾಗುವ ಕಾಮೆಂಟ್‌ಗಳನ್ನು ಮಾಡಿದ್ದಾರೆ ಎಂದು ವಡಿವೇಲು ಆರೋಪಿದ್ದು 5 ಕೋಟಿ ರೂ. ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.

ಸಹನಟ ಸಿಂಗಮುತ್ತು ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಿದ ತಮಿಳು ಹಾಸ್ಯನಟ ವಡಿವೇಲು: 5 ಕೋಟಿ ರೂ. ಮಾನನಷ್ಟ ಮೊಕದ್ದಮೆ ದಾಖಲು
ಸಹನಟ ಸಿಂಗಮುತ್ತು ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಿದ ತಮಿಳು ಹಾಸ್ಯನಟ ವಡಿವೇಲು: 5 ಕೋಟಿ ರೂ. ಮಾನನಷ್ಟ ಮೊಕದ್ದಮೆ ದಾಖಲು

ಒಂದು ಕಾಲದಲ್ಲಿ ತೆರೆ ಮೇಲೆ ಜೊತೆಯಾಗಿ ಮಿಂಚಿದ್ದ, ತೆರೆ ಹಿಂದೆ ಆತ್ಮೀಯರಾಗಿದ್ದ ಎಷ್ಟೋ ಕಲಾವಿದರ ನಡುವೆ ಕಾರಣಾಂತರಗಳಿಂದ ಮನಸ್ತಾಪ ಉಂಟಾಗಿದೆ. ಕೆಲವೊಂದು ಪ್ರಕರಣ ಕೋರ್ಟ್‌ ಮೆಟ್ಟಿಲು ಕೂಡಾ ಏರಿದೆ. ತಮಿಳು ಚಿತ್ರರಂಗ ಕೂಡಾ ಇದರ ಹೊರತಾಗಿಲ್ಲ. ಇದೀಗ ಇಂಥದ್ದೇ ಒಂದು ಪ್ರಕರಣ ಕಾಲಿವುಡ್‌ನಲ್ಲಿ ಸುದ್ದಿಯಾಗಿದೆ.

ಒಂದು ಕಾಲದಲ್ಲಿ ಹಿಟ್‌ ಜೋಡಿಯಾಗಿದ್ದ ವಡಿವೇಲು-ಸಿಂಗಮುತ್ತು

ಖ್ಯಾತ ಹಾಸ್ಯನ ವಡಿವೇಲು, ತಮ್ಮ ಸಹನಟನ ವಿರುದ್ದ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ವಡಿವೇಲು ವಿವಾದಗಳಿಂದಲೇ ಆಗ್ಗಾಗ್ಗೆ ಸುದ್ದಿಯಲ್ಲಿರುತ್ತಾರೆ. ಕಳೆದ ವರ್ಷವಷ್ಟೇ ನಟಿ ಶಕೀಲಾ, ವಡಿವೇಲು ವಿರುದ್ದ ಅಸಮಾಧಾನ ಹೊರ ಹಾಕಿದ್ದರು. ವಡಿವೇಲು ನಮ್ಮಂಥ ನಟಿಯರನ್ನು ಬೆಳೆಯಲು ಬಿಡುತ್ತಿರಲಿಲ್ಲ. ನಮಗೆ ಅಲ್ಲೋ ಇಲ್ಲೋ ಒಂದು ಅವಕಾಶ ಸಿಗುತ್ತಿತ್ತು. ಆದರೆ ವಡಿವೇಲು ಆ ಚಿತ್ರದ ನಿರ್ದೇಶಕರ ಬಳಿ ಹೋಗಿ ನಮಗೆ ಸಿಕ್ಕ ಅವಕಾಶವನ್ನು ಕೂಡಾ ತಪ್ಪಿಸುತ್ತಿದ್ದರು. ನಟಿಯರ ಬಳಿ ಅವರ ವರ್ತನೆಯೂ ಸರಿ ಇರುತ್ತಿರಲಿಲ್ಲ ಎಂದು ದೂರಿದ್ದರು. ಈಗ ಸ್ವತ: ವಡಿವೇಲು ತಮ್ಮ ಸಹನಟ ಸಿಂಗಮುತ್ತು ವಿರುದ್ದ ಕೇಸ್‌ ದಾಖಲಿಸುವ ಮೂಲಕ ಮತ್ತೆ ಸುದ್ದಿಯಲ್ಲಿದ್ದಾರೆ.

ಸಿಂಗಮುತ್ತು ಯೂಟ್ಯೂಬ್‌ ಚಾನೆಲ್‌ಗಳ ಸಂದರ್ಶನದಲ್ಲಿ ನನ್ನ ವಿರುದ್ದ ಇಲ್ಲಸಲ್ಲದ ಹೇಳಿಕೆ ನೀಡುತ್ತಿದ್ದಾರೆ. ನನ್ನ ವೈಯಕ್ತಿಕ ಹಾಗೂ ವೃತ್ತಿ ಜೀವನದ ಬಗ್ಗೆ ನೆಗೆಟಿವ್‌ ಮಾತುಗಳನ್ನು ಆಡುತ್ತಿದ್ದಾರೆ. ಕೂಡಲೇ ಅವರು ನನ್ನ ಬಗ್ಗೆ ಅಸಂಬದ್ಧ ಹೇಳಿಕೆ ನೀಡುವುದನ್ನು ತಪ್ಪಿಸಬೇಕು ಎಂದು ವಡಿವೇಲು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಅಲ್ಲದೆ 5 ಕೋಟಿ ರೂ. ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ವಡಿವೇಲು ಅರ್ಜಿಯನ್ನು ಸ್ವೀಕರಿಸಿರುವ ನ್ಯಾಯಾಲಯವು, ಈ ಆರೋಪಕ್ಕೆ ಪ್ರತಿಕ್ರಿಯಿಸುವಂತೆ ಸಿಂಗಮುತ್ತು ಅವರಿಗೆ ಸೂಚಿಸಿದೆ.

2015 ರಲ್ಲಿ ಸಿಂಗಮುತ್ತು-ವಡಿವೇಲು ನಡುವೆ ಮನಸ್ತಾಪ

ಸಿಂಗಮುತ್ತು ಅವರೊಂದಿಗೆ ನಾನು ಸುಮಾರು ಸಿನಿಮಾಗಳಲ್ಲಿ ನಟಿಸಿದ್ದೇನೆ. ನಮ್ಮಿಬ್ಬರ ಕಾಂಬಿನೇಶನ್‌ ಬಹಳ ಹಿಟ್‌ ಆಗಿತ್ತು. ಆದರೆ 2015ರಲ್ಲಿ ನಮ್ಮಿಬ್ಬರ ನಡುವೆ ಭಿನ್ನಭಿಪ್ರಾಯ ಶುರುವಾಗಿದ್ದರಿಂದ ಅಂದಿನಿಂದ ನಾನು ಅವರೊಂದಿಗೆ ನಟಿಸುವುದನ್ನು ನಿಲ್ಲಿಸಿದ್ದೆ, ಆದರೆ ಆಗಿನಿಂದ ಅವರು ನನ್ನ ಬಗ್ಗೆ ಇಲ್ಲ ಸಲ್ಲದೆ ಹೇಳಿಕೆ ನೀಡುತ್ತಾ ಬಂದಿದ್ದಾರೆ. ನನ್ನನ್ನು ಗುರಿಯಾಗಿಸಿಕೊಂಡು ಆಧಾರ ರಹಿತ ಆರೋಪ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಪ್ರಕರಣದ ಮುಂದಿನ ವಿಚಾರಣೆಯನ್ನು ನ್ಯಾಯಾಲಯ ಎರಡು ವಾರಗಳ ಕಾಲ ಮುಂದೂಡಿದೆ.

1988 ರಲ್ಲಿ ವಡಿವೇಲು ಎನ್‌ ತಂಗಿ ಕಲ್ಯಾಣಿ ಎಂಬ ಚಿತ್ರದ ಮೂಲಕ ತಮಿಳು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಅಂದಿನಿಂದ ಅವರು ಹಿಂತಿರುಗಿ ನೋಡಿದ್ದೇ ಇಲ್ಲ. ರಜನಿಕಾಂತ್‌, ಕಮಲ ಹಾಸನ್‌ನಂಥ ಸ್ಟಾರ್‌ ನಟರು ಕೂಡಾ ನಮ್ಮ ಚಿತ್ರದಲ್ಲಿ ವಡಿವೇಲು ನಟಿಸುವಂತೆ ನಿರ್ಮಾಪಕರಿಗೆ ಮನವಿ ಮಾಡುತ್ತಿದ್ದರಂತೆ. ಆಗೆಲ್ಲಾ ವಡಿವೇಲು ಕಾಲ್‌ಶೀಟ್‌ ಸಿಗುವುದು ಅಷ್ಟು ಸುಲಭವಾಗಿರಲಿಲ್ಲ. ಆದರೆ ವಡಿವೇಲು ಈಗ ಮೊದಲಿನಂತೆ ಹೆಚ್ಚು ಅವಕಾಶಗಳು ಇಲ್ಲದೆ ಆಗೊಮ್ಮೆ ಈಗೊಮ್ಮೆ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.