ಮುಂದುವರಿದ ‘ಮಹಾರಾಜ’ನ ವರ್ಣನೆ; ‘ವಿಜಯ್‌ ಸೇತುಪತಿಯದ್ದು ನಟನೆಯಲ್ಲ, ಅದು ಉಸಿರಾಟದಷ್ಟೇ ಸಹಜ ಕ್ರಿಯೆ’
ಕನ್ನಡ ಸುದ್ದಿ  /  ಮನರಂಜನೆ  /  ಮುಂದುವರಿದ ‘ಮಹಾರಾಜ’ನ ವರ್ಣನೆ; ‘ವಿಜಯ್‌ ಸೇತುಪತಿಯದ್ದು ನಟನೆಯಲ್ಲ, ಅದು ಉಸಿರಾಟದಷ್ಟೇ ಸಹಜ ಕ್ರಿಯೆ’

ಮುಂದುವರಿದ ‘ಮಹಾರಾಜ’ನ ವರ್ಣನೆ; ‘ವಿಜಯ್‌ ಸೇತುಪತಿಯದ್ದು ನಟನೆಯಲ್ಲ, ಅದು ಉಸಿರಾಟದಷ್ಟೇ ಸಹಜ ಕ್ರಿಯೆ’

ವಿಜಯ್‌ ಸೇತುಪತಿ ನಟನೆಯ 50ನೇ ಸಿನಿಮಾ ಮಹಾರಾಜ ಚಿತ್ರಮಂದಿರಗಳಲ್ಲಿ ಹಿಟ್‌ ಆಗಿ, ಒಟಿಟಿಯಲ್ಲಿಯೂ ಹೊಸ ದಾಖಲೆ ಬರೆದಿದೆ. ಎಲ್ಲೆಡೆಯಿಂದ ಮೆಚ್ಚುಗೆಯ ಸುರಿಮಳೆಯೇ ಹರಿದು ಬರುತ್ತಿವೆ. ಇದೀಗ ಇದೇ ಸಿನಿಮಾ ಬಗ್ಗೆ HT ಕನ್ನಡದ ಅಂಕಣಕಾರ ರಂಗಸ್ವಾಮಿ ಮೂಕನಹಳ್ಳಿ ಬರೆದ ಕಿರು ವಿಮರ್ಶೆ ಇಲ್ಲಿದೆ.

ಮುಂದುವರಿದ ‘ಮಹಾರಾಜ’ನ ವರ್ಣನೆ; ‘ವಿಜಯ್‌ ಸೇತುಪತಿಯದ್ದು ನಟನೆಯಲ್ಲ, ಅದು ಉಸಿರಾಟದಷ್ಟೇ ಸಹಜ ಕ್ರಿಯೆ’
ಮುಂದುವರಿದ ‘ಮಹಾರಾಜ’ನ ವರ್ಣನೆ; ‘ವಿಜಯ್‌ ಸೇತುಪತಿಯದ್ದು ನಟನೆಯಲ್ಲ, ಅದು ಉಸಿರಾಟದಷ್ಟೇ ಸಹಜ ಕ್ರಿಯೆ’

Maharaja OTT response: ಕಾಲಿವುಡ್‌ನಲ್ಲಿ ಕಳೆದ ತಿಂಗಳು ಜೂನ್‌ 14ರಂದು ತೆರೆಗೆ ಬಂದಿತ್ತು ವಿಜಯ್‌ ಸೇತುಪತಿ ನಟನೆಯ ಮಹಾರಾಜ ಸಿನಿಮಾ. ಸೇತುಪತಿಯ 50ನೇ ಸಿನಿಮಾ ಎಂಬ ವಿಶೇಷಣದ ಜತೆಗೆ ತೆರೆಕಂಡಿದ್ದ ಈ ಸಿನಿಮಾ ಬ್ಲಾಕ್‌ ಬಸ್ಟರ್‌ ಹಿಟ್‌ ಆಗಿತ್ತು. ಗಳಿಕೆಯಲ್ಲಿ ನೂರು ಕೋಟಿ ಮೀರಿ ಕಲೆಕ್ಷನ್‌ ಮಾಡಿತ್ತು. ಹಾಗೆಯೇ ಚಿತ್ರಮಂದಿರದಲ್ಲಿ ಮೋಡಿ ಮಾಡಿದ್ದ ಈ ಸಿನಿಮಾ, ಕಳೆದ ವಾರವಷ್ಟೇ ಒಟಿಟಿಗೆ ಎಂಟ್ರಿಕೊಟ್ಟಿತ್ತು. ಅಲ್ಲಿಂದಲೂ ಅತಿ ಹೆಚ್ಚು ನೋಡುಗರನ್ನು ಬರಸೆಳೆದಿತ್ತು ಈ ಮಹಾರಾಜ. ಇದೀಗ ಇದೇ ಚಿತ್ರದ ಬಗ್ಗೆ ಬರಹಗಾರ, HT ಕನ್ನಡದ ಅಂಕಣಕಾರ ರಂಗಸ್ವಾಮಿ ಮೂಕನಹಳ್ಳಿ ತಮ್ಮದೇ ಶೈಲಿಯಲ್ಲಿ ವಿಮರ್ಶೆ ಮಾಡಿದ್ದಾರೆ.

ನಮ್ಮನೆ ಹೆಣ್ಮಕ್ಕಳಷ್ಟೇ ಹೆಂಗಸರಾ?

"ಈಗ ನಾನು ಬರೆಯುತ್ತಿರುವ ಸಾಲುಗಳು ಬಹಳಷ್ಟು ಜನ ನನ್ನ ಓದುಗರಿಗೆ ಹೊಸತಲ್ಲ. ಬಹಳಷ್ಟು ಬಾರಿ ಈ ವಿಷಯವನ್ನು ಬರೆದಿದ್ದೇನೆ. ಮುಂದೆಯೂ ಬರೆಯುತ್ತೇನೆ, ಏಕೆಂದರೆ ಕೆಲವು ವಿಷಯಗಳನ್ನು ಎಷ್ಟು ಪುನರಾವರ್ತಿಸಿದರೂ ತಪ್ಪಿಲ್ಲ ಎಂದು ನನ್ನ ಭಾವನೆ.

ಕೇವಲ ನಮ್ಮ ಮನೆಯ ಹೆಣ್ಣು ಮಕ್ಕಳನ್ನು ಗೌರವದಿಂದ ಕಂಡರೆ ಸಾಲದು. ರಸ್ತೆಯಲ್ಲಿ ಹೋಗುತ್ತಿರುವ ಅಪರಿಚಿತ ಮಹಿಳೆ ಕೂಡ ಯಾರಿಗೋ ಒಬ್ಬರಿಗೆ ತಂಗಿ, ಅಕ್ಕ, ಅಮ್ಮ, ಮಗಳು, ಹೆಂಡತಿ, ಸ್ನೇಹಿತೆ ಆಗಿರಬಹುದು. ನನ್ನ ತಂಗಿಗೆ ಮಾತ್ರ , ನನ್ನ ಮಗಳಿಗೆ ಮಾತ್ರ ಜಗತ್ತಿನ ಒಳಿತೆಲ್ಲವೂ ಬೇಕು ಎಂದು ಬಯಸುವ ನಾವು ಇತರ ಹೆಣ್ಣು ಮಗಳು ಕೂಡ ಥೇಟ್ ನನ್ನಂತಹ ವ್ಯಕ್ತಿಯೊಬ್ಬನಿಗೆ ತಂಗಿ, ಮಗಳು ಆಗಿರಬಹುದು ಅಲ್ಲವೇ ? ಎನ್ನುವ ಸಾಮಾನ್ಯ ಜ್ಞಾನ ಗಂಡು ಪ್ರಾಣಿ ಕಲಿತು ಬಿಟ್ಟರೆ ಸಾಕು. ನಾವಿರುವ ಪ್ರಪಂಚ ಇನ್ನಷ್ಟು ಬದುಕಲು ಯೋಗ್ಯವಾಗುತ್ತದೆ.

ಅಳಿಸುತ್ತಲೇ ಕೆರಳಿಸುತ್ತಾನೆ ಈ ಮಹಾರಾಜ

ಈ ಮಾತುಗಳನ್ನು ಇವತ್ತು ಮತ್ತೆ ರಿಪೀಟ್ ಮಾಡಲು ಕಾರಣವಿದೆ. ನಿನ್ನೆ ರಾತ್ರಿ, ಮತ್ತು ಇಂದು ಮಧ್ಯಾಹ್ನ ಸಮಯ ಮಾಡಿಕೊಂಡು ಒಂದು ತಮಿಳು ಚಿತ್ರ ನೋಡಿದೆ. ಚಿತ್ರದ ಹೆಸರು ಮಹಾರಾಜ. ಚಿತ್ರದ ಕಥೆಯನ್ನು ಹೇಳಲು ಹೋಗುವುದಿಲ್ಲ. ಅದ್ಭುತ ಚಿತ್ರಕಥೆ, ಸಂಭಾಷಣೆ , ಬದುಕಿಗೆ ಹತ್ತಿರವಾಗುವ ನಿರೂಪಣೆ. ಚಿತ್ರವನ್ನು ನೋಡಿ, ಆದರೆ ಸೂಕ್ಷ್ಮ ಸಂವೇದಿಗಳು ನೀವಾಗಿದ್ದರೆ ನೋಡುವುದಕ್ಕೆ ಸ್ವಲ್ಪ ಕಷ್ಟವಾಗುತ್ತದೆ. ಅತ್ತು ಅತ್ತು ಸಾಕಾಯ್ತು.

ಸೇತುಪತಿ ನಟನೆ ಉಸಿರಾಟದಷ್ಟು ಸಹಜ ಕ್ರಿಯೆ

ಚಿತ್ರದ ಕೊನೆ ಅದ್ಭುತವಾಗಿಸಿದ್ದಾರೆ. ಕೊನೆಯ ಕ್ಷಣದವರೆಗೂ ಅಂತ್ಯ ಹೀಗಾಗಬಹುದು ಎನ್ನುವ ಕಲ್ಪನೆ ಕೂಡ ನೋಡುಗನಿಗೆ ಉಂಟಾಗುವುದಿಲ್ಲ. ಒಂದೆರೆಡು ನಿಮಿಷ ಮುಂಚೆ ಗೊತ್ತಾಗುತ್ತದೆ. ಅದರಿಂದ ಚಿತ್ರದ ಓಘಕ್ಕೆ ತೊಂದರೆಯಾಗುವುದಿಲ್ಲ. ಒಟ್ಟಾರೆ ಮನೆ ಮಂದಿಯೆಲ್ಲಾ ಕುಳಿತು ನೋಡಬಹುದಾದ ಚಿತ್ರ. ಯಾವ ಕೆಟ್ಟ ನೋಟಗಳನ್ನು ಇಲ್ಲಿ ತುರುಕಿಲ್ಲ. ಚಿತ್ರದಲ್ಲಿ ಹಾಡುಗಳಿಲ್ಲ. ಸಹಜವಾಗಿ ಮೂಡಿ ಬಂದಿದೆ. ಸೇತುಪತಿಯದು ನಟನೆಯಲ್ಲ. ಅದು ಸಹಜ , ಉಸಿರಾಟದಷ್ಟು ಸಹಜ ಕ್ರಿಯೆ ಅವರ ಪಾಲಿಗೆ.

ಚಿತ್ರವನ್ನು ಮೂಲ ಭಾಷೆಯಲ್ಲೇ ವೀಕ್ಷಿಸುವುದು ನನಗೆ ಇಷ್ಟ . ತಮಿಳು ನನಗೆ ಚೆನ್ನಾಗಿ ಅರ್ಥ ಆಗುವ ಕಾರಣ ತಮಿಳಿನಲ್ಲೇ ಚಿತ್ರ ವೀಕ್ಷಿಸಿದೆ. ಕನ್ನಡದಲ್ಲೂ ಲಭ್ಯವಿದೆ. ನೆಟ್ ಫ್ಲಿಕ್ಸ್ನಲ್ಲಿದೆ. ಸಾಮಾನ್ಯವಾಗಿ ಚಿತ್ರ ನೋಡುವಷ್ಟು ಪುರುಸೊತ್ತು , ಸಂಯಮ ಎರಡೂ ನನಗಿಲ್ಲ. ಹೀಗಾಗಿ ರಿವ್ಯೂ ಬರೆಯುವುದು ಕೂಡ ಕಡಿಮೆ. ಈ ಚಿತ್ರ ನೋಡಿ ಇಷ್ಟು ಬರೆಯದೆ ಇರಲು ಸಾಧ್ಯವಾಗಲಿಲ್ಲ. ರೇಟಿಂಗ್ ಕೊಡಬೇಕು ಅಂತ ಏನಾದರು , ಯಾರಾದರೂ ಕೇಳಿದರೆ ನನ್ನ ರೇಟಿಂಗ್ 9/10"

Whats_app_banner