Upcoming Tamil OTT Movies: ಸೆಪ್ಟೆಂಬರ್‌ ಮಾಸಾಂತ್ಯಕ್ಕೆ ಒಟಿಟಿಗೆ ಎಂಟ್ರಿಕೊಡಲಿರುವ ತಮಿಳಿನ ಬಹುನಿರೀಕ್ಷಿತ ಸಿನಿಮಾಗಳಿವು-kollywood ott news chiyaan vikrams thangalaan demonte colony 2 to vaazhai upcoming tamil ott movies mnk ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  Upcoming Tamil Ott Movies: ಸೆಪ್ಟೆಂಬರ್‌ ಮಾಸಾಂತ್ಯಕ್ಕೆ ಒಟಿಟಿಗೆ ಎಂಟ್ರಿಕೊಡಲಿರುವ ತಮಿಳಿನ ಬಹುನಿರೀಕ್ಷಿತ ಸಿನಿಮಾಗಳಿವು

Upcoming Tamil OTT Movies: ಸೆಪ್ಟೆಂಬರ್‌ ಮಾಸಾಂತ್ಯಕ್ಕೆ ಒಟಿಟಿಗೆ ಎಂಟ್ರಿಕೊಡಲಿರುವ ತಮಿಳಿನ ಬಹುನಿರೀಕ್ಷಿತ ಸಿನಿಮಾಗಳಿವು

Upcoming Tamil OTT Movies: ಕಳೆದ ಆಗಸ್ಟ್‌ನಲ್ಲಿ ತಮಿಳಿನಲ್ಲಿ ಬಿಡುಗಡೆಯಾದ ಸಿನಿಮಾಗಳು ಇದೀಗ ಒಟಿಟಿ ಅಂಗಳಕ್ಕೆ ಬರಲು ರೆಡಿಯಾಗಿವೆ. ಆಕ್ಷನ್‌ ಶೈಲಿಯ ಒಂದಷ್ಟು ಸಿನಿಮಾಗಳಿದ್ದರೆ, ಇನ್ನು ಕೆಲವು ಕ್ಲಾಸ್‌ ಸಿನಿಮಾಗಳೂ ಆಗಮಿಸುತ್ತಿವೆ. ಹಾಗಾದರೆ ಯಾವ್ಯಾವ ಚಿತ್ರಗಳು ಬಿಡುಗಡೆಯಾಗುತ್ತವೆ ಎಂಬುದನ್ನು ಇಲ್ಲಿ ನೋಡೋಣ.

ಈ ತಿಂಗಳಾಂತ್ಯಕ್ಕೆ ಒಟಿಟಿಗೆ ಬರಲಿರುವ ಬಹುನಿರೀಕ್ಷಿತ ತಮಿಳು ಸಿನಿಮಾಗಳಿವು.
ಈ ತಿಂಗಳಾಂತ್ಯಕ್ಕೆ ಒಟಿಟಿಗೆ ಬರಲಿರುವ ಬಹುನಿರೀಕ್ಷಿತ ತಮಿಳು ಸಿನಿಮಾಗಳಿವು. (image\ IMDb)

Tamil OTT Movies: ಕಳೆದ ಆಗಸ್ಟ್‌ ತಿಂಗಳಲ್ಲಿ ತಮಿಳಿನಲ್ಲಿ ಹಲವು ಬಹುನಿರೀಕ್ಷಿತ ಸಿನಿಮಾಗಳು ಬಿಡುಗಡೆಯಾಗಿವೆ. ಪ್ರೇಕ್ಷಕರಿಂದ ಮತ್ತು ವಿಮರ್ಶಕರಿಂದಲೂ ಮೆಚ್ಚುಗೆ ಪಡೆದಿವೆ. ಇದೀಗ ಈ ಸಿನಿಮಾಗಳು ಒಟಿಟಿ ಅಂಗಳಕ್ಕೆ ಬರಲು ರೆಡಿಯಾಗಿವೆ. ಆಕ್ಷನ್‌ ಶೈಲಿಯ ಒಂದಷ್ಟು ಸಿನಿಮಾಗಳಿದ್ದರೆ, ಇನ್ನು ಕೆಲವು ಕ್ಲಾಸ್‌ ಸಿನಿಮಾಗಳೂ ಆಗಮಿಸುತ್ತಿವೆ. ಹಾಗಾದರೆ ಯಾವ್ಯಾವ ಚಿತ್ರಗಳು ಬಿಡುಗಡೆಯಾಗುತ್ತವೆ ಎಂಬ ವಿವರ ಇಲ್ಲಿದೆ.

ತಂಗಲಾನ್ (Thangalaan)

ಪಾ. ರಂಜಿತ್ ನಿರ್ದೇಶನದ ಮತ್ತು ಸ್ಟುಡಿಯೋ ಗ್ರೀನ್ ಮತ್ತು ನೀಲಂ ಪ್ರೊಡಕ್ಷನ್ಸ್ ಬ್ಯಾನರ್‌ ಅಡಿಯಲ್ಲಿ ಜ್ಞಾನವೇಲ್ ರಾಜ ನಿರ್ಮಿಸಿದ ಸಿನಿಮಾ ತಂಗಲಾನ್. ಚಿಯಾನ್ ವಿಕ್ರಮ್ ಅವರ 61ನೇ ಚಿತ್ರವಿದು. ಚಿತ್ರದಲ್ಲಿ ಪಾರ್ವತಿ ತಿರುವೋತ್ತು, ಮಾಳವಿಕಾ ಮೋಹನ್, ಪಶುಪತಿ ಮುಂತಾದವರು ನಟಿಸಿದ್ದಾರೆ. ಜಿ. ವಿ. ಪ್ರಕಾಶ್ ಸಂಗೀತ ಈ ಚಿತ್ರಕ್ಕಿದೆ. ಭಾರತದಲ್ಲಿ ಬ್ರಿಟಿಷರ ಆಳ್ವಿಕೆಯಲ್ಲಿ ಚಿನ್ನದ ಗಣಿಗಾರಿಕೆಗಾಗಿ ಭೂಮಿಯನ್ನು ವಶಪಡಿಸಿಕೊಳ್ಳಲು ಮುಂದಾಗಿದ್ದ ಬ್ರಿಟಿಷರ ವಿರುದ್ಧ ಆದಿವಾಸಿಗಳು ನಡೆಸಿದ ಕೆಚ್ಚೆದೆಯ ಹೋರಾಟವೇ ಚಿತ್ರದ ಕಥಾವಸ್ತು. ಈ ಸಿನಿಮಾ ಆಗಸ್ಟ್ 15ರ ಸ್ವಾತಂತ್ರ್ಯ ದಿನದಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿತ್ತು. ಇದೀಗ ಈ ಸಿನಿಮಾ ಸೆಪ್ಟೆಂಬರ್ 20ರಂದು ನೆಟ್‌ಫ್ಲಿಕ್ಸ್ ಒಟಿಟಿಯಲ್ಲಿ ಬಿಡುಗಡೆ ಆಗಲಿದೆ ಎಂಬ ಮಾಹಿತಿ ಇದೆ.

ವಾಳೈ (Vaazhai OTT)

ನಿರ್ದೇಶಕ ಮರಿ ಸೆಲ್ವರಾಜ್ ನಿರ್ಮಿಸಿ ನಿರ್ದೇಶಿಸಿರುವ ಚಿತ್ರ ವಾಳೈ. ಈ ಸಿನಿಮಾವನ್ನು ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌, ನವ್ವಿ ಸ್ಟುಡಿಯೋ, ಫಾರ್ಮರ್ಸ್ ಮಸುದರ್ ಪ್ಲಾನ್ ಪ್ರೊಡಕ್ಷನ್ ಸಂಸ್ಥೆಗಳು ಜಂಟಿಯಾಗಿ ಈ ಸಿನಿಮಾವನ್ನು ನಿರ್ಮಾಣ ಮಾಡಿವೆ. ನಟ ಕಲೈಯರಸನ್, ನಿಖಿಲಾ ವಿಮಲ್, ಜೆ. ಸತೀಶ್ ಕುಮಾರ್, ದಿವ್ಯಾ ದುರೈಸಾಮಿ, ಜಾನಕಿ, ನಿವೇದಿತಾ ರಾಜಪ್ಪನ್ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ. ಆಗಸ್ಟ್‌ 23ರಂದು ಚಿತ್ರಮಂದಿರಗಳಲ್ಲಿ ತೆರೆಕಂಡಿದ್ದ ಈ ಸಿನಿಮಾ ಪ್ರೇಕ್ಷಕರಿಂದ ಮೆಚ್ಚುಗೆ ಪಡೆದಿತ್ತು. ಇದೀಗ ಇದೇ ಸಿನಿಮಾ ಸೆಪ್ಟೆಂಬರ್ 27 ರಂದು ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ಒಟಿಟಿ ಅಂಗಳಕ್ಕೆ ಆಗಮಿಸಲಿದೆ.

ಡಿಮೊಂಟೆ ಕಾಲೋನಿ 2 (Demonte Colony 2)

ಅಜಯ್ ಜ್ಞಾನಮುತ್ತು ನಿರ್ದೇಶನದಲ್ಲಿ 2015 ರಲ್ಲಿ ತಮಿಳಿನಲ್ಲಿ ಮೂಡಿಬಂದಿತ್ತು ಡಿಮಾಂಡಿ ಕಾಲೋನಿ. ಅದೇ ಚಿತ್ರದ ಸೀಕ್ವೆಲ್‌ ಇದೀಗ ಒಟಿಟಿಗೆ ಆಗಮಿಸುತ್ತಿದೆ. ವೆಂಕಿ ವೇಣುಗೋಪಾಲ್ ನಿರ್ದೇಶನದ ಈ ಸಿನಿಮಾ, ಆಗಸ್ಟ್‌ 15ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿತ್ತು. ಚಿತ್ರವು ಥಿಯೇಟರ್‌ಗಳಲ್ಲಿ ಉತ್ತಮ ಪ್ರತಿಕ್ರಿಯೆ ಪಡೆಯಿತು. ಕಲೆಕ್ಷನ್‌ ವಿಚಾರದಲ್ಲಿಯೂ ಕಮಾಯಿ ಮಾಡಿತು. ಇದೀಗ ಸೆಪ್ಟೆಂಬರ್ 27 ರಂದು Zee5 ಒಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಈ ಸಿನಿಮಾ ಸ್ಟ್ರೀಮಿಂಗ್‌ ಆರಂಭಿಸಲಿದೆ.

ಜೀ5ನಲ್ಲಿ ನೋಡಿ ರಘು ತಾತಾ

ಕೀರ್ತಿ ಸುರೇಶ್ ಅಭಿನಯದ ರಘು ತಾತ ಸಿನಿಮಾ ಆಗಸ್ಟ್‌ 15ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು. ಸುಮನ್ ಕುಮಾರ್ ನಿರ್ದೇಶನದಲ್ಲಿ ಮೂಡಿಬಂದಿ ಈ ಸಿನಿಮಾದಲ್ಲಿ ಕೀರ್ತಿ ಸುರೇಶ್‌ ಜತೆಗೆ ಎಂ.ಎಸ್. ಭಾಸ್ಕರ್, ರವೀಂದ್ರ ವಿಜಯ್, ದೇವದರ್ಶಿನಿ, ಆನಂದ ಸಾಮಿ ಮುಂತಾದವರು ನಟಿಸಿದ್ದಾರೆ. ಈ ಚಿತ್ರವನ್ನು ಹೊಂಬಾಳೆ ಫಿಲಂಸ್ ನಿರ್ಮಾಣ ಮಾಡಿದೆ. ರಾಜಕೀಯ ಮತ್ತು ಹಾಸ್ಯದ ಹಿನ್ನೆಲೆಯಲ್ಲಿ ಸಿನಿಮಾ ಮೂಡಿಬಂದಿದೆ. ಈ ಸಿನಿಮಾ ಸದ್ಯ Zee5 ಒಟಿಟಿಯಲ್ಲಿ ಸೆಪ್ಟೆಂಬರ್ 13ರಿಂದ ಸ್ಟ್ರೀಮಿಂಗ್‌ ಆಗುತ್ತಿದೆ.

mysore-dasara_Entry_Point