ರೆಟ್ರೊ ಸಿನಿಮಾ ಒಟಿಟಿ ಬಿಡುಗಡೆ ವಿವರ: ಸೂರ್ಯ- ಪೂಜಾ ಹೆಗ್ಡೆ ನಟನೆಯ ಸಿನಿಮಾ ಆನ್‌ಲೈನ್‌ ಸ್ಟ್ರೀಮಿಂಗ್‌ ಯಾವಾಗ?
ಕನ್ನಡ ಸುದ್ದಿ  /  ಮನರಂಜನೆ  /  ರೆಟ್ರೊ ಸಿನಿಮಾ ಒಟಿಟಿ ಬಿಡುಗಡೆ ವಿವರ: ಸೂರ್ಯ- ಪೂಜಾ ಹೆಗ್ಡೆ ನಟನೆಯ ಸಿನಿಮಾ ಆನ್‌ಲೈನ್‌ ಸ್ಟ್ರೀಮಿಂಗ್‌ ಯಾವಾಗ?

ರೆಟ್ರೊ ಸಿನಿಮಾ ಒಟಿಟಿ ಬಿಡುಗಡೆ ವಿವರ: ಸೂರ್ಯ- ಪೂಜಾ ಹೆಗ್ಡೆ ನಟನೆಯ ಸಿನಿಮಾ ಆನ್‌ಲೈನ್‌ ಸ್ಟ್ರೀಮಿಂಗ್‌ ಯಾವಾಗ?

ರೆಟ್ರೋ ಸಿನಿಮಾ ಒಟಿಟಿ ಬಿಡುಗಡೆ: ಸೂರ್ಯ ಮತ್ತು ಪೂಜಾ ಹೆಗ್ಡೆ ನಟನೆಯ ಬಾಕ್ಸ್‌ ಆಫೀಸ್‌ನಲ್ಲಿ 70.97 ಕೋಟಿ ರೂಪಾಯಿ ಗಳಿಸಿದ ರೆಟ್ರೋ ಸಿನಿಮಾವು ಒಟಿಟಿಯಲ್ಲಿ ಬಿಡುಗಡೆಯಾಗಲು ಸಜ್ಜಾಗಿದೆ.

ರೆಟ್ರೊ ಸಿನಿಮಾ ಒಟಿಟಿ ಬಿಡುಗಡೆ ವಿವರ: ಸೂರ್ಯ- ಪೂಜಾ ಹೆಗ್ಡೆ ನಟನೆಯ ಸಿನಿಮಾ ಆನ್‌ಲೈನ್‌ ಸ್ಟ್ರೀಮಿಂಗ್‌ ಯಾವಾಗ?
ರೆಟ್ರೊ ಸಿನಿಮಾ ಒಟಿಟಿ ಬಿಡುಗಡೆ ವಿವರ: ಸೂರ್ಯ- ಪೂಜಾ ಹೆಗ್ಡೆ ನಟನೆಯ ಸಿನಿಮಾ ಆನ್‌ಲೈನ್‌ ಸ್ಟ್ರೀಮಿಂಗ್‌ ಯಾವಾಗ?

ರೆಟ್ರೋ ಸಿನಿಮಾ ಒಟಿಟಿ ಬಿಡುಗಡೆ: ಸೂರ್ಯ ಮತ್ತು ಪೂಜಾ ಹೆಗ್ಡೆ ನಟನೆಯ ಬಾಕ್ಸ್‌ ಆಫೀಸ್‌ನಲ್ಲಿ 70.97 ಕೋಟಿ ರೂಪಾಯಿ ಗಳಿಸಿದ ರೆಟ್ರೋ ಸಿನಿಮಾವು ಒಟಿಟಿಯಲ್ಲಿ ಬಿಡುಗಡೆಯಾಗಲು ಸಜ್ಜಾಗಿದೆ. ಆದರೆ, ಈ ಸಿನಿಮಾ ಬಾಕ್ಸ್‌ ಆಫೀಸ್‌ನಲ್ಲಿ ನಿರೀಕ್ಷೆ ಮಾಡಿದ್ದಷ್ಟು ಗಳಿಕೆ ಮಾಡಿರಲಿಲ್ಲ. ಆ ಸಮಯದಲ್ಲಿ ರೈಡ್‌ 2 ಮತ್ತು ಹಿಟ್‌ ದಿ ಥರ್ಡ್‌ ಕೇಸ್‌ ಬಿಡುಗಡೆಯಾಗಿತ್ತು. ಇದೀಗ ಥಿಯೇಟರ್‌ನಲ್ಲಿ ಬಿಡುಗಡೆಯಾಗಿ ಒಂದು ತಿಂಗಳು ಆಗುವ ಮೊದಲೇ ಒಟಿಟಿಯತ್ತ ಮುಖ ಮಾಡುತ್ತಿದೆ. ಸೂರ್ಯ ಮತ್ತು ಪೂಜಾ ಹೆಗ್ಡೆ ನಟನೆಯ ಈ ಸಿನಿಮಾ ಭಾರತದ ಬಾಕ್ಸ್‌ ಆಫೀಸ್‌ನಲ್ಲಿ 70.97 ಕೋಟಿ ರೂಪಾಯಿ ಗಳಿಸಿತ್ತು. ಜಾಗತಿಕ ಬಾಕ್ಸ್‌ ಆಫೀಸ್‌ನಲ್ಲಿ 96.97 ಕೋಟಿ ರೂಪಾಯಿ ಗಳಿಸಿತ್ತು.

ರೆಟ್ರೋ ಸಿನಿಮಾ ಒಟಿಟಿಯಲ್ಲಿ ಬಿಡುಗಡೆ ಯಾವಾಗ?

ಸೂರ್ಯ ನಟನೆಯ ರೆಟ್ರೋ ಸಿನಿಮಾ ನೆಟ್‌ಫ್ಲಿಕ್ಸ್‌ನಲ್ಲಿ ಮೇ 31ರಂದು ಸ್ಟ್ರೀಮಿಂಗ್‌ ಆಗಲಿದೆಯಂತೆ. ಈ ಕುರಿತು ನೆಟ್‌ಫ್ಲಿಕ್ಸ್‌ ಅಧಿಕೃತವಾಗಿ ಮಾಹಿತಿ ನೀಡಿಲ್ಲ. ಆದರೆ, ನೆಟ್‌ಫ್ಲಿಕ್ಸ್‌ ತನ್ನ ನ್ಯೂ ಆಂಡ್‌ ಹಾಟ್‌ ಕಮ್ಮಿಂಗ್‌ ಸೂನ್‌ ಸಿನಿಮಾಗಳ ಲಿಸ್ಟ್‌ನಲ್ಲಿ ರೆಟ್ರೋವನ್ನು ಸೇರಿಸಿದೆ. ಶೀಘ್ರದಲ್ಲಿ ಆಗಮಿಸುವುದೆಂದರೆ ಮುಂದಿನ ವಾರವೇ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಲಿದೆ ಎಂದು ಸುದ್ದಿಯಾಗಿದೆ. "ಕ್ರಿಮಿನಲ್‌ ಅಪ್ಪ ಬೆಳೆಸಿರುವ ಪಾರಿಯು ತನ್ನ ಕುಟುಂಬಕ್ಕಾಗಿ ಅಪರಾಧ ಬಿಡುತ್ತಾನ? ಅಪರಾಧ ಮುಂದುವರೆಸುತ್ತಾನ? ಆತನ ಹಳೆಯ ಕ್ರೌರ್ಯದ ಜಗತ್ತು ಆತನನ್ನು ಕುಟುಂಬದ ಜತೆ ನೆಮ್ಮದಿಯಾಗಲು ಬಿಡುವುದೇ?" ಎಂದು ನೆಟ್‌ಫ್ಲಿಕ್ಸ್‌ನಲ್ಲಿ ರೆಟ್ರೋ ಸಿನಿಮಾದ ಸಾರಾಂಶ ಬರೆಯಲಾಗಿದೆ.

ರೆಟ್ರೋ ಎಂಬ ತಮಿಳು ಚಿತ್ರವನ್ನು ಕಾರ್ತಿಕ್ ಸುಬ್ಬರಾಜ್ ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ಅಲಾ ವೈಕುಂಠಪುರಂಲೂ ಖ್ಯಾತಿಯ ಪೂಜಾ ಹೆಗ್ಡೆ ನಟಿಸಿದ್ದಾರೆ. ಇವರೊಂದಿಗೆ ಜೋಜು ಜಾರ್ಜ್, ಜಯರಾಮ್, ಕರುಣಾಸ್, ನಾಸರ್ ಮತ್ತು ಇತರರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಆಚಾರ್ಯ, ಕಿಸಿ ಕಿ ಭಾಯ್ ಕಿಸಿ ಕಿ ಜಾನ್, ಮತ್ತು ದೇವಾ ಮುಂತಾದ ಸಿನಿಮಾಗಳ ನಂತರ ಪೂಜಾ ಹೆಗ್ಡೆ ಈ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಕಾಲಿವುಡ್‌ನಲ್ಲಿ ಪೂಜಾ ಹೆಗ್ಡೆಗೆ ದೊಡ್ಡ ಹಿಟ್‌ ಸಿಗುವ ನಿರೀಕ್ಷೆಯನ್ನು ಅಭಿಮಾನಿಗಳಿದ್ದರು. ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿದ ಈ ಸಿನಿಮಾದಲ್ಲಿ ತನ್ನ ಪಾತ್ರಗಳಿಗೆ ಸೂರ್ಯ ಮತ್ತು ಪೂಜಾ ಹೆಗ್ಡೆ ನ್ಯಾಯ ಒದಗಿಸಿದ್ದಾರೆ. ಆದರೆ, ಈ ಸಿನಿಮಾ ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಬಳಿಕ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿತ್ತು.

ನಟ ಸೂರ್ಯನ ಮುಂದಿನ ಸಿನಿಮಾಗಳು

ಸೂರ್ಯ ಈಗ ತಮ್ಮ ಮುಂದಿನ ಎರಡು ಹೆಸರಿಡದ ಚಿತ್ರಗಳಾದ ಸೂರ್ಯ45 ಮತ್ತು ಸೂರ್ಯ46ರ ಕೆಲಸದಲ್ಲಿ ನಿರತರಾಗಿದ್ದಾರೆ. ಅವರ 45ನೇ ಚಿತ್ರವನ್ನು ಆರ್ ಜೆ ಬಾಲಾಜಿ ನಿರ್ದೇಶಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ತ್ರಿಶಾ ಕೃಷ್ಣನ್, ಸ್ವಾಸಿಕಾ, ಇಂದ್ರನ್ಸ್, ಯೋಗಿ ಬಾಬು ಮತ್ತು ಶಿವದಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಚಿತ್ರಕ್ಕೆ ಸಾಯಿ ಅಭ್ಯಂಕರ್ ಸಂಗೀತ ಸಂಯೋಜಿಸಿದ್ದಾರೆ. ಅವರ 46 ನೇ ಚಿತ್ರ ದ್ವಿಭಾಷಾ ಚಿತ್ರವಾಗಿದ್ದು, ವೆಂಕಿ ಅಟ್ಲೂರಿ ನಿರ್ದೇಶನ ಮಾಡಲಿದ್ದಾರೆ. ಮಮಿತಾ ಬೈಜು ಮತ್ತು ರವೀನಾ ಟಂಡನ್ ಸಹನಟರಾಗಿ ನಟಿಸಲಿದ್ದಾರೆ. ಚಿತ್ರದ ಬಗ್ಗೆ ಹೆಚ್ಚಿನ ವಿವರಗಳನ್ನು ತಯಾರಕರು ಇನ್ನೂ ಬಹಿರಂಗಪಡಿಸಿಲ್ಲ.

ಪ್ರವೀಣ್ ಚಂದ್ರ ಪುತ್ತೂರು: 'ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ'ದಲ್ಲಿ ಸಹಾಯಕ ಸುದ್ದಿ ಸಂಪಾದಕ. ಒನ್‌ ಇಂಡಿಯಾ, ವಿಜಯ ಕರ್ನಾಟಕದಲ್ಲಿ ಒಟ್ಟು 16 ವರ್ಷಗಳ ಅನುಭವ. ಆನ್‌ಲೈನ್‌ ಪತ್ರಿಕೋದ್ಯಮದಲ್ಲಿ ಎತ್ತರದ ಸಾಧನೆ ಮಾಡುವ ಕನಸು. ಡಿಜಿಟಲ್‌ ಜಗತ್ತಿನಲ್ಲಿ ಹೊಸತನ್ನು ಕಲಿಯುವ ಆಸಕ್ತಿ. ಮನರಂಜನೆ, ಶಿಕ್ಷಣ, ಉದ್ಯೋಗ, ತಂತ್ರಜ್ಞಾನ, ವಾಣಿಜ್ಯ, ಕರ್ನಾಟಕ, ದೇಶ- ವಿದೇಶ, ಸಿನಿಮಾ, ಷೇರುಪೇಟೆ, ಜೀವನಶೈಲಿ... ಹಲವು ವಿಚಾರಗಳ ಬಗ್ಗೆ ತಳಸ್ಪರ್ಶಿಯಾಗಿ ಬರೆಯಬಲ್ಲರು. ಎಸ್‌ಇಒ ತಂತ್ರಗಳನ್ನು ಪತ್ರಿಕೋದ್ಯಮದ ಹದಕ್ಕೆ ಪಳಗಿಸುವ ಸಾಮರ್ಥ್ಯ ರೂಢಿಸಿಕೊಂಡವರು. ಇಮೇಲ್: praveen.chandra@htdigital.in