ಅಮರನ್ ಚಿತ್ರದಲ್ಲಿ ನಟಿಸಲು ಸಾಯಿ ಪಲ್ಲವಿ ಪಡೆದ ಸಂಭಾವನೆ ಎಷ್ಟು ಗೊತ್ತೆ; ಫಿದಾ ನಟಿಗೆ ಬಹುಭಾಷೆಗಳಲ್ಲಿ ಡಿಮ್ಯಾಂಡ್
Amaran: ತಮಿಳಿನ ಅಮರನ್ ಚಿತ್ರವು ಅಕ್ಟೋಬರ್ 31ರಂದು ತೆರೆಕಾಣುತ್ತಿದೆ. ಚಿತ್ರತಂಡ ಸದ್ಯ ಚಿತ್ರದ ಪ್ರಚಾರದಲ್ಲಿ ತೊಡಗಿದೆ. ನಟಿ ಸಾಯಿ ಪಲ್ಲವಿ ಈ ಚಿತ್ರದಲ್ಲಿ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದು, ತಮಿಳು ಚಿತ್ರದಲ್ಲಿ ನಟಿಸಲು ಇವರು ಭಾರಿ ಸಂಭಾವನೆ ಪಡೆದಿದ್ದಾರೆ.
ಭಾರತ ಚಿತ್ರರಂಗದ ಸ್ಟಾರ್ ನಟಿಗಳಲ್ಲಿ ಸಾಯಿ ಪಲ್ಲವಿ ಕೂಡಾ ಒಬ್ಬರು. ತಮ್ಮದೇ ಆದ ಶೈಲಿಯಲ್ಲಿ ಅಭಿಮಾನಿಗಳಲ್ಲಿ ಮನಸು ಗೆದ್ದವರು. ಹೀರೋಯಿನ್ ಎಂಬ ಸ್ಟಾರ್‌ಡಂಗೆ ಭಿನ್ನವಾಗಿ ತಮ್ಮದೇ ಆದ ಛಾಪು ಮೂಡಿಸಿದ ಸಾಯಿಪಲ್ಲವಿಗೆ ಬಹುಭಾಷೆಗಳ ಚಿತ್ರರಂಗದಲ್ಲಿ ಭಾರಿ ಬೇಡಿಕೆ ಇದೆ. ಅದಕ್ಕೆ ತಕ್ಕನಾಗಿ ಕೋಟ್ಯಂತರ ಅಭಿಮಾನಿಗಳು ಕೂಡಾ ಇದ್ದಾರೆ. ಫಿದಾ, ಲವ್ ಸ್ಟೋರಿ, ವಿರಾಟ ಪರ್ವಂ, ಮಾರಿ, ಗಾರ್ಗಿ ಸೇರಿದಂತೆ ಹಲವಾರು ಚಲನಚಿತ್ರಗಳಲ್ಲಿ ತಮ್ಮದೇ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಡಾನ್ಸರ್ ಆಗಿರುವ ಪಲ್ಲವಿ, ಚಿತ್ರರಂಗದಲ್ಲಿ ಹಲವು ವರ್ಷಗಳ ಅನುಭವಗಳೊಂದಿಗೆ ಭಾರತದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಪ್ರಮುಖ ನಟಿಯರಲ್ಲಿ ಒಬ್ಬರಾಗಿ ತಮ್ಮ ಬ್ರಾಂಡ್ ಸೃಷ್ಟಿಸಿಕೊಂಡಿದ್ದಾರೆ.
ವಿವಿಧ ಭಾಷೆಯ ಚಿತ್ರರಂಗದಲ್ಲಿ ನಟಿಗೆ ಬೇಡಿಕೆ ಹೆಚ್ಚುತ್ತಿದ್ದು, ತಮ್ಮ ಜನಪ್ರಿಯತೆ ಹೆಚ್ಚುವುದರೊಂದಿಗೆ ಅವರು ಈಗ ಪ್ರತಿ ಚಲನಚಿತ್ರಕ್ಕೆ ಭಾರಿ ಮೊತ್ತದ ಸಂಭಾವನೆ ಪಡೆಯುತ್ತಾರೆ. ಸದ್ಯ ನಟಿ ತಮಿಳಿನ ಅಮರನ್ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ನಟ ಶಿವಕಾರ್ತಿಕೇಯನ್ ನಾಯಕ ನಟನಾಗಿ ಅಭಿನಯಿಸಿರುವ ಚಿತ್ರದಲ್ಲಿ ಸಾಯಿ ಪಲ್ಲವಿ ನಾಯಕಿಯಾಗಿದ್ದಾರೆ. ಈ ಚಿತ್ರಕ್ಕೆ ನಟಿ ಪಡೆಯುವ ಸಂಭಾವನೆ ಬಗ್ಗೆ ತಿಳಿಯೋಣ.
ಸದ್ಯ ಅಮರನ್ ಚಿತ್ರವು ದೀಪಾವಳಿಯ ಸಂಭ್ರಮದ ನಡುವೆ ಪರದೆಗೆ ಅಪ್ಪಳಿಸುತ್ತಿದೆ. ಅಕ್ಟೋಬರ್ 31ರಂದು ಅಮರನ್ ಚಿತ್ತ ಬಿಡುಗಡೆಯಾಗುತ್ತಿದ್ದು, ಸದ್ಯ ಚಿತ್ರತಂಡ ಚಿತ್ರದ ಪ್ರಚಾರದಲ್ಲಿ ತೊಡಗಿದೆ. ಸಾಯಿ ಪಲ್ಲವಿಯ ಈ ಚಿತ್ರದಲ್ಲಿ ನಟಿಸಲು ಪಡೆದಿರುವ ಸಂಭಾವನೆ ಕೇಳಿದರೆ ನಿಮಗೆ ಅಚ್ಚರಿಯಾಗಬಹುದು. ವರದಿಗಳ ಪ್ರಕಾರ, ಅಮರನ್ ಚಿತ್ರಕ್ಕಾಗಿ ಸಾಯಿ ಪಲ್ಲವಿ ಬರೋಬ್ಬರಿ 3 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ.
ಅಮರನ್ ಚಿತ್ರ
ರಾಜ್‌ಕುಮಾರ್ ಪೆರಿಯಸ್ವಾಮಿ ನಿರ್ದೇಶನದ ಅಮರನ್ ಚಿತ್ರದಲ್ಲಿ ಶಿವಕಾರ್ತಿಕೇಯನ್ ಹೀರೋ. ಭುವನ್ ಅರೋರಾ, ರಾಹುಲ್ ಬೋಸ್, ಶ್ರೀಕುಮಾರ್, ಸುರೇಶ್ ಚಕ್ರವರ್ತಿ ಮತ್ತು ಲಲ್ಲು ಪ್ರಸಾದ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರವು ಅಕ್ಟೋಬರ್ 31 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಕಮಲ್ ಹಾಸನ್, ಆರ್ ಮಹೇಂದ್ರನ್ ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಈಗಾಗಲೇ ಟ್ರೇಲರ್ ಮೂಲಕವೇ ಅಭಿಮಾನಿಗಳಲ್ಲಿ ಈ ಚಿತ್ರ ಸಾಕಷ್ಟು ಹೈಪ್ ಸೃಷ್ಟಿಸಿದೆ. ಪ್ಯಾನ್ ಇಂಡಿಯಾ ಸಿನಿಮಾಗೆ ಭರ್ಜರಿ ಬೆಂಬಲ ವ್ಯಕ್ತವಾಗುವ ನಿರೀಕ್ಷೆ ಇದೆ.
ಈ ಸಿನಿಮಾ ಭಾರತೀಯ ಸೇನೆಯ ಸೈನಿಕನ ಹಿನ್ನೆಲೆಯ ನೈಜ ಕಥೆಯನ್ನಾಧರಿಸಿದೆ. 2014ರಲ್ಲಿ ಕಾಶ್ಮೀರದ ಶೋಪಿಯಾನ್‌ನಲ್ಲಿ ನಡೆದ ಖಾಜಿಪತ್ರಿ ಕಾರ್ಯಾಚರಣೆಗೆ ಕಥೆಯನ್ನು ಹೊಂದಿಸಲಾಗಿದೆ. ಮೇಜರ್ ಮುಕುಂದ್ ವರದರಾಜನ್ ಅವರ ಜೀವನ ಮತ್ತು ದೇಶಕ್ಕಾಗಿ ಅವರು ಮಾಡಿದ ತ್ಯಾಗದ ಬಗ್ಗೆ ಚಿತ್ರದಲ್ಲಿ ಹೇಳಲಾಗಿದೆ.
ತಮಿಳು ಚಿತ್ರರಂಗದ ಇನ್ನಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ | ‘ಬಘೀರ’ ಟು ‘ಭೂಲ್ ಭುಲ್ಲಯ್ಯಾ 3’; ಬೆಳಕಿನ ಹಬ್ಬ ದೀಪಾವಳಿಗೆ ಚಿತ್ರಮಂದಿರಕ್ಕೆ ಬರ್ತಿವೆ ಬಹುನಿರೀಕ್ಷಿತ ಸಿನಿಮಾಗಳು