ಸೈನ್ಸ್‌ ಫಿಕ್ಷನ್ ಸಿನಿಮಾ ಪ್ರಿಯರಿಗೆ ಇಲ್ಲಿದೆ ಮತ್ತೊಂದು ಹೊಸ ಅಪ್ಡೇಟ್‌; ಅಮೆಜಾನ್‌ ಪ್ರೈಮ್ ಓಟಿಟಿಗೆ ಬಂದಿದೆ ಕಡೈಸಿ ಉಳಗ ಪೋರ್
ಕನ್ನಡ ಸುದ್ದಿ  /  ಮನರಂಜನೆ  /  ಸೈನ್ಸ್‌ ಫಿಕ್ಷನ್ ಸಿನಿಮಾ ಪ್ರಿಯರಿಗೆ ಇಲ್ಲಿದೆ ಮತ್ತೊಂದು ಹೊಸ ಅಪ್ಡೇಟ್‌; ಅಮೆಜಾನ್‌ ಪ್ರೈಮ್ ಓಟಿಟಿಗೆ ಬಂದಿದೆ ಕಡೈಸಿ ಉಳಗ ಪೋರ್

ಸೈನ್ಸ್‌ ಫಿಕ್ಷನ್ ಸಿನಿಮಾ ಪ್ರಿಯರಿಗೆ ಇಲ್ಲಿದೆ ಮತ್ತೊಂದು ಹೊಸ ಅಪ್ಡೇಟ್‌; ಅಮೆಜಾನ್‌ ಪ್ರೈಮ್ ಓಟಿಟಿಗೆ ಬಂದಿದೆ ಕಡೈಸಿ ಉಳಗ ಪೋರ್

ಕಡೈಸಿ ಉಳಗ ಪೋರ್ ಸಿನಿಮಾ ಇದೊಂದು ಸೈನ್ಸ್‌ ಫಿಕ್ಷನ್ ಸಿನಿಮವಾಗಿದ್ದು, ಸೈನ್ಸ್‌ ಫಿಕ್ಷನ್ ಸಿನಿಮಾ ಪ್ರಿಯರಿಗೆ ಖಂಡಿತ ಇದು ಇಷ್ಟವಾಗುತ್ತದೆ. ಅಮೆಜಾನ್‌ ಪ್ರೈಮ್ ಓಟಿಟಿಯಲ್ಲಿ ನೀವು ಈ ಸಿನಿಮಾವನ್ನು ನೋಡಬಹುದು.

ಕಡೈಸಿ ಉಳಗ ಪೋರ್ ಸಿನಿಮಾ ಈಗ ಓಟಿಟಿಯಲ್ಲಿ ವೀಕ್ಷಿಸಿ
ಕಡೈಸಿ ಉಳಗ ಪೋರ್ ಸಿನಿಮಾ ಈಗ ಓಟಿಟಿಯಲ್ಲಿ ವೀಕ್ಷಿಸಿ

ಇತ್ತೀಚಿನ ತಮಿಳು ಸೈನ್ಸ್‌ ಫಿಕ್ಷನ್ ಸಿನಿಮಾಗಳು ಜನರಿಗೆ ತುಂಬಾ ಇಷ್ಟವಾಗುತ್ತಿದೆ. ಕಡೈಸಿ ಉಳಗ ಪೋರ್ ಸಿನಿಮಾವೂ ಸೈನ್ಸ್‌ ಫಿಕ್ಷನ್ ಕಥೆಯನ್ನೇ ಹೊಂದಿದ್ದು ಈ ಸಿನಿಮಾದಲ್ಲಿ ತಮಿಳಿನ ಹಿಪ್‌ಹಾಪ್‌ ತಮೀಝಾ ಆದಿ ನಾಯಕನಾಗಿ, ಧ್ರುವ ಸಂಗೀತ ನಿರ್ದೇಶನ ಮಾಡಿದ್ದಾರೆ. ಅವರೇ ಈ ಸಿನಿಮಾವನ್ನು ನಿರ್ದೇಶನ ಮಾಡಿ ನಿರ್ಮಾಣ ಮಾಡಿದ್ದಾರೆ. ಅನಘಾ ನಾಯಕಿಯಾಗಿ ನಟಿಸಿರುವ ಈ ಸಿನಿಮಾದಲ್ಲಿ ನಾಜರ್ ಮತ್ತು ನಟರಾಜ ಸುಬ್ರಮಣಿಯನ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. 15 ಕೋಟಿ ಬಜೆಟ್‌ನಲ್ಲಿ ತಯಾರಾದ ಈ ಚಿತ್ರ 10 ಕೋಟಿ ಕಲೆಕ್ಷನ್ ಮಾಡಿ ನಷ್ಟ ಉಂಟಾಗಿದೆ.

'ಕಡೈಸಿ ಉಳಗ ಪೋರ್' ಸೆಪ್ಟೆಂಬರ್ 20 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು.ವೈಜ್ಞಾನಿಕ ಕಾಲ್ಪನಿಕ ಆಕ್ಷನ್ ಥ್ರಿಲ್ಲರ್ ಸಿನಿಮಾ ಸಕಾರಾತ್ಮಕ ವಿಮರ್ಶೆಗಳನ್ನು ಪಡೆದುಕೊಂಡಿತು. ಆದರೆ ಅಷ್ಟಾಗಿ ಥಿಯೇಟರ್‌ನಲ್ಲಿ ಪ್ರದರ್ಶನ ನೀಡಲಿಲ್ಲ. ಸಿನಿಮಾಗೆ ಹಾಕಿದ ಮೊತ್ತವೂ ವಾಪಸ್ ಬರಲಿಲ್ಲ.

2028ರಲ್ಲಿ ಮೂರನೇ ಮಹಾಯುದ್ಧ ಆದರೆ ಏನಾಗುತ್ತದೆ ಎಂಬ ಅಂಶದೊಂದಿಗೆ ಈ ಸಿನಿಮಾದ ಕಥೆ ಬರೆದಿದ್ದಾರೆ. ಹಿಪ್ ಹಾಪ್ ಆದಿ ಅವರ ಅಭಿನಯದ ಜೊತೆಗೆ ನಿರ್ಮಾಣ ಉತ್ತಮವಾಗಿದ್ದರೂ, ಕಥೆಯು ಗೊಂದಲಮಯವಾಗಿದೆ ಆ ಕಾರಣದಿಂದಲೇ ಈ ಸಿನಿಮಾ ಅಷ್ಟೊಂದು ಹಿಟ್ ಆಗಲು ಸಾಧ್ಯವಾಗಲಿಲ್ಲ ಎಂದು ಹೇಳುತ್ತಿದ್ದಾರೆ. ಮಹಾಯುದ್ಧ ಆದರೆ ಹೇಗಿರಬಹುದು ಎಂಬ ಕಲ್ಪನೆಯನ್ನು ಇಲ್ಲಿ ಹೊಟ್ಟು ಹಾಕಲಾಗಿದ್ದು ಕುತೂಹಲವನ್ನಂತು ಸೃಷ್ಟಿ ಮಾಡಿತ್ತು. ಆದರೆ ಕಥೆಯ ನಿರೂಪಣೆ ಸರಿಯಾಗಿ ಆಗದೇ ಗೊಂದಲ ಸೃಷ್ಟಿಯಾಗಿ ಸೋತಿತು.

ಚೀನಾ, ರಷ್ಯಾ ಮತ್ತು ಇತರ ಕೆಲವು ದೇಶಗಳು ವಿಶ್ವಸಂಸ್ಥೆಗೆ ಪೈಪೋಟಿ ನೀಡಲು ರಿಪಬ್ಲಿಕ್ ಎಂಬ ಹೊಸ ಸಂಘಟನೆಯನ್ನು ರಚಿಸುತ್ತವೆ. ನಟರಾಜ್ (ನಟರಾಜ ಸುಬ್ರಮಣಿಯನ್) ತಮಿಳುನಾಡು ಮುಖ್ಯಮಂತ್ರಿ ಜಿಎನ್‌ಆರ್ (ನಾಜರ್) ಅವರನ್ನು ಗಣರಾಜ್ಯದ ಸದಸ್ಯರಾಗಿ ಪದಚ್ಯುತಗೊಳಿಸಲು ಪಿತೂರಿ ಮಾಡುತ್ತಾರೆ. ತಮಿಳು (ಹಿಪ್‌ಹಾಪ್‌ ತಮೀಝಾ ಆದಿ) ತನ್ನ ಗ್ಯಾಂಗ್‌ನೊಂದಿಗೆ ಮುಖ್ಯಮಂತ್ರಿ ಜಿಎನ್‌ಆರ್‌ ಕಡೆಗೆ ನಿಲ್ಲುತ್ತಾರೆ ಈ ರೀತಿಯಾದ ಕಥೆ ಇದೆ.

ಯಾವ ಓಟಿಟಿಯಲ್ಲಿ ಸ್ಟ್ರೀಮ್ ಆಗಲಿದೆ?

ಗಮನಾರ್ಹ ಅಂಶವೇನೆಂದರೆ ಈ ಚಿತ್ರದಲ್ಲಿ ಒಟ್ಟೂ ಹನ್ನೊಂದು ಹಾಡುಗಳಿವೆ. ಈ ಎಲ್ಲ ಹಾಡುಗಳನ್ನು ಹಿಪ್‌ಹಾಪ್‌ ತಮೀಝಾ ಅವರೇ ಸಂಗೀತ ಸಂಯೋಜನೆ ಮಾಡಿದ್ದಾರೆ. ಅಮೆಜಾನ್ ಪ್ರೈಮ್ OTTಯಲ್ಲಿ ಈ ಸಿನಿಮಾವನ್ನು ನೀವು ನೋಡಬಹುದು.

Whats_app_banner