ಕನ್ನಡ ಸುದ್ದಿ  /  Entertainment  /  Kollywood Star Chiyaan Vikram Attends His Housekeeping Son Marriage

Chiyaan Vikram: ಮನೆಕೆಲಸದಾಕೆ ಮಗನ ಮದುವೆಗೆ ನಟ ವಿಕ್ರಂ ಸರ್ಪ್ರೈಸ್‌ ಎಂಟ್ರಿ; ವಧು ವರರು ಖುಷ್‌, ಜನರ ಉದ್ಘಾರ.. ವಿಡಿಯೋ ಇಲ್ಲಿದೆ..

"ಕೋಬ್ರಾ" ಸಿನಿಮಾ ಮೂಲಕ ಇತ್ತೀಚೆಗಷ್ಟೇ ಜನರ ಮುಂದೆ ಬಂದಿದ್ದ, ನಟ ಚಿಯಾನ್‌ ವಿಕ್ರಂ, ಅಭಿಮಾನಿಗಳನ್ನು ತಮ್ಮ ಬಗೆಬಗೆ ಗೆಟಪ್‌ಗಳಲ್ಲಿಯೇ ರಂಜಿಸಿದ್ದರು. ಇದೀಗ ಇದೇ ನಟ ಮತ್ತೆ ಸುದ್ದಿಯಲ್ಲಿದ್ದಾರೆ. ಮನೆಕೆಲಸದಾಕೆಯ ಪುತ್ರನ ಮದುವೆಗೆ ಅಚ್ಚರಿಯ ಎಂಟ್ರಿಕೊಟ್ಟು, ವಧು ವರರಿಗೆ ಸರ್ಪ್ರೈಸ್‌ ನೀಡಿದ್ದಾರೆ.

ಮನೆಕೆಲಸದಾಕೆ ಮಗನ ಮದುವೆಗೆ ನಟ ವಿಕ್ರಂ ಸರ್ಪ್ರೈಸ್‌ ಎಂಟ್ರಿ; ವಧು ವರರು ಖುಷ್‌, ಜನರ ಉದ್ಘಾರ.. ವಿಡಿಯೋ ಇಲ್ಲಿದೆ..
ಮನೆಕೆಲಸದಾಕೆ ಮಗನ ಮದುವೆಗೆ ನಟ ವಿಕ್ರಂ ಸರ್ಪ್ರೈಸ್‌ ಎಂಟ್ರಿ; ವಧು ವರರು ಖುಷ್‌, ಜನರ ಉದ್ಘಾರ.. ವಿಡಿಯೋ ಇಲ್ಲಿದೆ.. (Twitter/ Vamsi Kaka)

"ಕೋಬ್ರಾ" ಸಿನಿಮಾ ಮೂಲಕ ಇತ್ತೀಚೆಗಷ್ಟೇ ಜನರ ಮುಂದೆ ಬಂದಿದ್ದ, ನಟ ಚಿಯಾನ್‌ ವಿಕ್ರಂ, ಅಭಿಮಾನಿಗಳನ್ನು ತಮ್ಮ ಬಗೆಬಗೆ ಗೆಟಪ್‌ಗಳಲ್ಲಿಯೇ ರಂಜಿಸಿದ್ದರು. ಇದೀಗ ಇದೇ ನಟ ಮತ್ತೆ ಸುದ್ದಿಯಲ್ಲಿದ್ದಾರೆ. ಮನೆಕೆಲಸದಾಕೆಯ ಪುತ್ರನ ಮದುವೆಗೆ ಅಚ್ಚರಿಯ ಎಂಟ್ರಿಕೊಟ್ಟು, ವಧು ವರರಿಗೆ ಸರ್ಪ್ರೈಸ್‌ ನೀಡಿದ್ದಾರೆ.

ಹೌದು, ಚೆನ್ನೈನ ವಿಕ್ರಂ ಅವರ ದೊಡ್ಡ ಮನೆಯಲ್ಲಿ ಹಲವು ಜನ ಕೆಲಸಗಾರರಿದ್ದಾರೆ. ಡ್ರೈವರ್‌ಗಳಿದ್ದಾರೆ. ಹಾಗೇ ಸೋಮವಾರ ಅವರ ಮನೆಯ ಕೆಲಸಗಾರರ ಪೈಕಿ ಮೇರಿ ಎನ್ನುವವರ ಮಗನ ಮದುವೆಗೆ ಹಾಜರಾಗಿ ವಧು ವರರನ್ನು ಹರಸಿ ಬಂದಿದ್ದಾರೆ ವಿಕ್ರಂ. ಆ ಸಪ್ರೈಸ್‌ ಎಂಟ್ರಿ ವಧು ವರರು ಮತ್ತು ಕುಟುಂಬದವರನ್ನಷ್ಟೇ ಅಲ್ಲದೆ ಅಭಿಮಾನಿಗಳಲ್ಲಿಯೂ ಪುಳಕ ತಂದಿದೆ.

ರೇಷ್ಮೇ ಪಂಚೆ, ರೇಷ್ಮೇ ಅಂಗಿ ಧರಿಸಿ, ತಲೆಗೆ ಹೇರ್‌ ಬ್ಯಾಂಡ್‌ ಹಾಕಿ, ಗಡ್ಡಧಾರಿಯಾಗಿ ದೇವಸ್ಥಾನಕ್ಕೆ ಎಂಟ್ರಿಕೊಡುತ್ತಿದ್ದಂತೆ, ಜನರಿಗೆ ಅಚ್ಚರಿ ಕಾದಿತ್ತು. ಯಾರೂ ಊಹಿಸದ ರೀತಿಯಲ್ಲಿ ವಿಕ್ರಂ ಆಗಮಿಸಿ, ನೇರವಾಗಿ ಮದುವೆ ಮಂಟಪಕ್ಕೆ ತೆರಳಿ ವಧು ವರರನ್ನು ಭೇಟಿ ಮಾಡಿದ್ದಾರೆ. ಮುಹೂರ್ತದ ಸಮಯಕ್ಕೆ ತೆರಳಿ, ಮಾಂಗಲ್ಯವನ್ನು ವರನ ಕೈಗೆ ಅವರೇ ನೀಡಿದ್ದಾರೆ. ಅಕ್ಷತೆ ಹಾಕಿ ಆಶೀರ್ವದಿಸಿದ್ದಾರೆ. ಇದೇ ವೇಳೆ ವಧು ವರರು ವಿಕ್ರಂ ಅವರ ಪಾದ ಮುಟ್ಟಿ ನಮಸ್ಕರಿಸಿದ್ದಾರೆ.

ಅಂದಹಾಗೆ, ವಿಕ್ರಂ ಅವರ ಮನೆಯಲ್ಲಿ ಒಲಿಮಾರನ್‌ ಅವರು ಕಳೆದ 40 ವರ್ಷಗಳಿಂದ ಕೆಲಸ ಮಾಡುತ್ತಿದ್ದರು. ಇತ್ತೀಚೆಗಷ್ಟೇ ಅವರ ನಿಧನವಾಗಿತ್ತು. ಅವರೊಂದಿಗೆ ಪತ್ನಿ ಮೇರಿ ಸಹ ವಿಕ್ರಂ ಮನೆಯಲ್ಲಿಯೇ ಕೆಲಸಗಾರರಾಗಿದ್ದರು. ಆ ನಾಲ್ಕು ದಶಕಗಳ ಸುದೀರ್ಘ ಬಾಂಧವ್ಯಕ್ಕೆ ಸಾಕ್ಷಿ ಎಂಬಂತೆ, ಕೆಲಸದಾಕೆಯ ಮಗನ ಮದುವೆಗೆ ಭೇಟಿ ನೀಡಿ ಬಂದಿದ್ದಾರೆ. ಹೀಗೆ ಮನೆ ಕೆಲಸದಾಕೆಯ ಪುತ್ರನ ಮದುವೆಗೆ ವಿಕ್ರಂ ಆಗಮಿಸುತ್ತಿದ್ದಂತೆ ಸೋಷಿಯಲ್‌ ಮೀಡಿಯಾದಲ್ಲಿ ನಟನ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

ಇನ್ನು ಸಿನಿಮಾ ವಿಚಾರಕ್ಕೆ ಬರುವುದಾದರೆ, "ಕೋಬ್ರಾ" ಬಿಡುಗಡೆ ಬಳಿಕ ವಿಕ್ರಂ ನಟನೆಯ ಮಣಿರತ್ನಂ ನಿರ್ದೇಶನದ "ಪೊನ್ನಿಯನ್‌ ಸೇಲ್ವನ್‌ 1" ಸಿನಿಮಾದಲ್ಲಿಯೂ ವಿಕ್ರಂ ನಟಿಸಿದ್ದಾರೆ. ಈ ಚಿತ್ರವೂ ಇದೇ ತಿಂಗಳಾಂತ್ಯಕ್ಕೆ ತೆರೆಗೆ ಬರಲಿದೆ. ಚೋಳ ಪರಂಪರೆಯ ಹಿನ್ನೆಲೆಯಲ್ಲಿ ಸಾಗುವ ಈ ಚಿತ್ರದಲ್ಲಿ ಐಶ್ವರ್ಯಾ ರೈ, ತ್ರಿಶಾ, ಕಾರ್ತಿ, ಜಯಂ ರವಿ ಸೇರಿ ಬಹುತಾರಾಗಣವೇ ಇದೆ. ಹಲವು ಭಾಷೆಗಳಲ್ಲಿಯೂ ಈ ಸಿನಿಮಾ ಬಿಡುಗಡೆ ಆಗುತ್ತಿದೆ.

IPL_Entry_Point

ವಿಭಾಗ