ನವೆಂಬರ್‌ 14ರಂದು ಕಂಗುವಾ ಬಿಡುಗಡೆ: ಸೂರ್ಯ, ದಿಶಾ ಪಟಾನಿ ನಟನೆಯ ಬಿಗ್‌ ಬಜೆಟ್‌ ಚಿತ್ರ ನೋಡಲು ಹೆಚ್ಚಿದ ಕಾತರ
ಕನ್ನಡ ಸುದ್ದಿ  /  ಮನರಂಜನೆ  /  ನವೆಂಬರ್‌ 14ರಂದು ಕಂಗುವಾ ಬಿಡುಗಡೆ: ಸೂರ್ಯ, ದಿಶಾ ಪಟಾನಿ ನಟನೆಯ ಬಿಗ್‌ ಬಜೆಟ್‌ ಚಿತ್ರ ನೋಡಲು ಹೆಚ್ಚಿದ ಕಾತರ

ನವೆಂಬರ್‌ 14ರಂದು ಕಂಗುವಾ ಬಿಡುಗಡೆ: ಸೂರ್ಯ, ದಿಶಾ ಪಟಾನಿ ನಟನೆಯ ಬಿಗ್‌ ಬಜೆಟ್‌ ಚಿತ್ರ ನೋಡಲು ಹೆಚ್ಚಿದ ಕಾತರ

ನವೆಂಬರ್‌ 14ರಂದು ಕಂಗುವಾ ಬಿಡುಗಡೆಯಾಗಲಿದೆ. ಸೂರ್ಯ, ದಿಶಾ ಪಟಾನಿ ನಟನೆಯ ಬಿಗ್‌ಬಜೆಟ್‌ ಚಿತ್ರ ನೋಡಲು ಕಾಯುತ್ತಿರುವ ಎಲ್ಲ ಅಭಿಮಾನಿಗಳಿಗೆ ಇದು ಸಂತಸ ತಂದಿದೆ. ಎಂಟು ಭಾಷೆಗಳಲ್ಲಿ ನೀವು ಈ ಸಿನಿಮಾ ನೋಡಬಹುದು.

ನವೆಂಬರ್‌ 14ರಂದು ಕಂಗುವಾ ಬಿಡುಗಡೆ
ನವೆಂಬರ್‌ 14ರಂದು ಕಂಗುವಾ ಬಿಡುಗಡೆ

ಕಂಗುವಾ ಚಿತ್ರ ಬಿಡುಗಡೆಗೆ ಮುನ್ನವೇ ಸಾಕಷ್ಟು ಸುದ್ದಿಯಾಗಿದೆ. ಅಭಿಮಾನಿಗಳು ಯಾವಾಗ ಕಂಗುವಾ ಚಿತ್ರ ಬಿಡುಗಡೆಯಾಗುತ್ತದೆ ಎಂದು ಕಾತರದಿಂದ ಕಾಯುತ್ತಿದ್ದಾರೆ. ಹೀಗಿರುವಾಗ ಸೂರ್ಯ ಅಭಿಮಾನಿಗಳಿಗೆ ಖುಷಿ ಸಂಗತಿ ಸಿಕ್ಕಿದೆ. ಇದೇ ತಿಂಗಳು ಚಿತ್ರ ತೆರೆಕಾಣಲಿದೆ. ಸೂರ್ಯ ಅಭಿನಯದ ಕಂಗುವ ಚಿತ್ರವು ನವೆಂಬರ್ 14 ರಂದು ಬಿಡುಗಡೆಯಾಗಲಿದೆ. ಚಿತ್ರವನ್ನು ಮೊದಲು ಅಕ್ಟೋಬರ್ 10 ರಂದು ರಜನಿಕಾಂತ್ ಅವರ ವೆಟ್ಟೈಯಾನ್ ಜೊತೆಗೆ ಬಿಡುಗಡೆ ಮಾಡಲು ನಿರ್ಧರಿಸಲಾಗಿತ್ತು. ಆದರೆ ನಂತರದ ದಿನಗಳಲ್ಲಿ ಈ ನಿರ್ಧಾರ ಬದಲಾಯಿತು.

ನವೆಂಬರ್ 14ರಂದು ಬಿಡುಗಡೆ

ನವೆಂಬರ್ 14 ರಂದು ತಮಿಳುನಾಡಿನಲ್ಲಿ ಕಂಗುವ ಸೋಲೋ ಬಿಡುಗಡೆಯಾಗಲಿ ಎಂದು ಚಿತ್ರತಂಡ ಆಶಿಸಿತ್ತು. ಅದರಂತೆ ಈಗ ನವೆಂಬರ್ 14ರಂದೇ ಈ ಚಿತ್ರ ತೆರೆಕಾಣುತ್ತಿದೆ. ಚಲನಚಿತ್ರವು ಪ್ರಪಂಚದಾದ್ಯಂತ 11,000 ಕ್ಕೂ ಹೆಚ್ಚು ಪರದೆಗಳಲ್ಲಿ ಪ್ರದರ್ಶನಗೊಳ್ಳಲಿದೆ. ತಮಿಳು, ಮಲಯಾಳಂ, ತೆಲುಗು, ಕನ್ನಡ, ಹಿಂದಿ, ಇಂಗ್ಲಿಷ್, ಫ್ರೆಂಚ್ ಮತ್ತು ಸ್ಪ್ಯಾನಿಷ್ ಸೇರಿದಂತೆ ಎಂಟು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.

ಬಹು ನಿರೀಕ್ಷಿತ ಸಿನಿಮಾ

ಕಂಗುವಾ ಸಿನಿಮಾ 2D, 3D and IMAX ಫಾರ್ಮಾಟ್‌ಗಳಲ್ಲಿ ಸುಮಾರು 10 ಭಾಷೆಗಳಲ್ಲಿ ತೆರೆ ಕಾಣಲಿದೆ. ಚಿತ್ರಕ್ಕೆ 350 ಕೋಟಿ ರೂ. ಖರ್ಚು ಮಾಡಲಾಗಿದ್ದು ಇದು ಈ ವರ್ಷ ತೆರೆ ಕಾಣುತ್ತಿರುವ ಬಹು ನಿರೀಕ್ಷಿತ ಸಿನಿಮಾಗಳಲ್ಲಿ ಒಂದಾಗಿದೆ. ನವೆಂಬರ್‌ 14 ರಂದು ಸಿನಿಮಾ ತೆರೆಗೆ ಬರಲಿದೆ. ಕಳೆದ ವರ್ಷ ಜುಲೈ 23 ರಂದು ಚಿತ್ರದ ಮೊದಲ ಟೀಸರ್‌ ರಿಲೀಸ್‌ ಮಾಡಲಾಗಿತ್ತು. ಟೀಸರ್‌ ರಿಲೀಸ್‌ ಆಗಿ 24 ಗಂಟೆಗಳ ಅವಧಿಯಲ್ಲಿ 30 ಮಿಲಿಯನ್‌ ವೀಕ್ಷಣೆ ಕಂಡು ದಾಖಲೆ ಬರೆದಿತ್ತು. ಇದೇ ವರ್ಷ ಆಗಸ್ಟ್ 12 ರಂದು ಬಿಡುಗಡೆಯಾಗಿದ್ದ ಥಿಯೇಟ್ರಿಕಲ್ ಟ್ರೈಲರ್ ಕೂಡಾ ಉತ್ತಮ ಪ್ರಶಂಸೆ ಗಳಿಸಿತ್ತು ಎಂದು ಈ ಹಿಂದೆ ಸುದ್ದಿಯಾಗಿದೆ.

ಕನ್ನಡದಲ್ಲಿ ಕಂಗುವಾ

ಕನ್ನಡದಲ್ಲಿ ಕಂಗುವಾ ಸಿನಿಮಾ ಹಕ್ಕುಗಳನ್ನು ಕೆವಿಎನ್‌ ಪ್ರೊಡಕ್ಷನ್ಸ್‌ ಖರೀದಿಸಿದೆ. ಚಿತ್ರದ ಡಿಜಿಟಲ್ ಸ್ಟ್ರೀಮಿಂಗ್ ಹಕ್ಕುಗಳನ್ನು ದಕ್ಷಿಣದಲ್ಲಿ ಅಮೆಜಾನ್‌ ಪ್ರೈಂ ಪಡೆದುಕೊಂಡಿದೆ. ಕಂಗುವಾ ಕೂಡಾ 2 ಭಾಗಗಳಲ್ಲಿ ತಯಾರಾಗುತ್ತಿದ್ದು ಎರಡನೇ ಭಾಗವು 2017ರ ಅಂದಾಜು ಮೇ ತಿಂಗಳಿನಲ್ಲಿ ತೆರೆ ಕಾಣಲಿದೆ. ಇದನ್ನು ಹೊರತುಪಡಿಸಿ ನಟ ಸೂರ್ಯ, ಕಾರ್ತಿಕ್‌ ಸುಬ್ಬರಾಜು ನಿರ್ದೇಶನದ ಮತ್ತೊಂದು ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

ಕಂಗುವಾ ಫ್ಯಾಂಟಸಿ ಆಕ್ಷನ್‌ ಸಿನಿಮಾವಾಗಿದ್ದು ಚಿತ್ರವನ್ನು ಸ್ಟುಡಿಯೋ ಗ್ರೀನ್‌, ಯುವಿ ಕ್ರಿಯೇಷನ್ಸ್‌ ಬ್ಯಾನರ್‌ ಅಡಿ ನಿರ್ಮಾಣವಾಗಿದೆ. ಈ ಚಿತ್ರಕ್ಕೆ ಸಿರುತೈ ಶಿವ ಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರದ ಹಾಡುಗಳಿಗೆ ದೇವಿ ಶ್ರೀ ಪ್ರಸಾದ್‌ ಸಂಗೀತ ನೀಡಿದ್ದಾರೆ. ಚಿತ್ರದಲ್ಲಿ ಸೂರ್ಯ, ಬಾಬಿ ಡಿಯೋಲ್‌, ದಿಶಾ ಪಟಾನಿ, ಕಿಚ್ಚ ಸುದೀಪ್‌, ಜಗಪತಿ ಬಾಬು, ಯೋಗಿ ಬಾಬು ಹಾಗೂ ಇನ್ನಿತರರು ನಟಿಸಿದ್ದಾರೆ.

Whats_app_banner