ದಳಪತಿ ವಿಜಯ್ ವೃತ್ತಿ ಬದುಕಿನ ಕೊನೇ ಚಿತ್ರಕ್ಕೆ ಪಡೆದ ಸಂಭಾವನೆ ಎಷ್ಟು, ರೆಮ್ಯೂನರೇಷನ್ ವಿಚಾರದಲ್ಲಿ ರಜನಿಯನ್ನೂ ಮೀರಿಸಿದ್ರಾ?
Thalapathy 69: ದಳಪತಿ ವಿಜಯ್ ವೃತ್ತಿ ಬದುಕಿನ ಕೊನೇ ಚಿತ್ರ ದಳಪತಿ 69 ಸಿನಿಮಾದಲ್ಲಿ ಅಭಿನಯಿಸಲು ಪಡೆದ ಸಂಭಾವನೆ ಎಷ್ಟು ಎಂದು ತಿಳಿದರೆ ನೀವು ಶಾಕ್ ಆಗ್ತೀರಾ. ಶಾರುಕ್ ಖಾನ್ ಹಾಗೂ ರಜನಿಕಾಂತ್ ಕೂಡ ಇದುವರೆಗೆ ಇಷ್ಟು ಸಂಭಾವನೆ ಪಡೆದಿಲ್ಲ.
ತಮಿಳಿನ ಸ್ಟಾರ್ ನಟ ದಳಪತಿ ವಿಜಯ್ ದಳಪತಿ ಅವರ ವೃತ್ತಿಜೀವನದ ಕೊನೆಯ ಚಿತ್ರದ ಅಧಿಕೃತವಾಗಿ ಘೋಷಣೆಯಾಗಿದೆ. ಆ ಪ್ರಕಾರ ರಾಜಕೀಯ ಅಖಾಡಕ್ಕೆ ಧುಮುಕಿರುವ ವಿಜಯ್ ಇನ್ನು ಮುಂದಿನ ದಿನಗಳಲ್ಲಿ ಯಾವುದೇ ಸಿನಿಮಾ ಮಾಡುವುದಿಲ್ಲ ಎಂದಿದ್ದಾರೆ. ಇತ್ತೀಚಿನ ವರದಿಯ ಪ್ರಕಾರ ವಿಜಯ್ ಅವರ ಅಂತಿಮ ಚಿತ್ರ ದಳಪತಿ 69 ಗಾಗಿ 275 ಕೋಟಿ ಸಂಭಾವನೆ ಪಡೆದುಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ರಜನಿಕಾಂತ್, ಶಾರುಖ್ ಖಾನ್ ಮತ್ತು ಹಾಲಿವುಡ್ ಸ್ಟಾರ್ ರಾಬರ್ಟ್ ಡೌನಿ ಜೂನಿಯರ್ ಇವರೆಲ್ಲರ ಸಂಭಾವನೆಗಿಂತ ಹೆಚ್ಚಿನ ಸಂಭಾವನೆ ಇದಾಗಿದೆ. ಇದು ನಿಜವೇ ಆಗಿದ್ದರೆ ಭಾರತದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟ ವಿಜಯ್ ಎನ್ನಲಾಗಿದೆ.
ವಿಜಯ್ ಅವರ ಅಂತಿಮ ಚಿತ್ರವಾದ ದಳಪತಿ 69 ರ ಸುತ್ತ ನಿರೀಕ್ಷೆಗಳು ಹೆಚ್ಚಾಗಿದೆ. ವಿಜಯ್ ದಳಪತಿ 69 ಗಾಗಿ ರೆಕಾರ್ಡ್ ಬ್ರೇಕಿಂಗ್ ಸಂಭಾವನೆ ಪಡೆದಿದ್ದಾರೆ ಎನ್ನಲಾಗುತ್ತಿದೆ. ಬಾಲಿವುಡ್ ಮಾತ್ರವಲ್ಲದೆ, ವಿಜಯ್ ಹಾಲಿವುಡ್ ನಟ ರಾಬರ್ಟ್ ಡೌನಿ ಜೂನಿಯರ್ ಅವರ ಸಂಭಾವನೆಗಿಂತಲೂ ಅಧಿಕ ಸಂಭಾವನೆ ಪಡೆದವರಾಗುತ್ತಾರೆ. ವಿಜಯ್ ತಮ್ಮ ರಾಜಕೀಯ ಮಹತ್ವಾಕಾಂಕ್ಷೆಯನ್ನು ಮುಂದುವರಿಸಲು ತಮ್ಮ ಚಲನಚಿತ್ರ ವೃತ್ತಿಜೀವನವನ್ನು ತ್ಯಜಿಸಲು ಸಿದ್ಧರಾಗಿದ್ದಾರೆ. ಅವರ ಅಂತಿಮ ಚಿತ್ರಕ್ಕಾಗಿ, ಬೆಂಗಳೂರು ಮೂಲದ ವಿತರಣಾ ಸಂಸ್ಥೆ ಕೆವಿಎನ್ ಪ್ರೊಡಕ್ಷನ್ಸ್ ರೆಡಿಯಾಗಿದೆ.
ಚೆನ್ನೈನಲ್ಲಿ ದಳಪತಿ 69 ಚಿತ್ರದ ಅದ್ಧೂರಿ ಮುಹೂರ್ತ ಈಗಾಲೇ ನೆರವೇರಿದೆ. ನಾಯಕಿಯಾಗಿ ಪೂಜಾ ಹೆಗ್ಡೆ ಅಭಿನಯಿಸಿದ್ದಾರೆ. ಕನ್ನಡದ ಕೆವಿಎನ್ ನಿರ್ಮಾಣ ಸಂಸ್ಥೆ ಈ ಬಹುನಿರೀಕ್ಷಿತ ಚಿತ್ರಕ್ಕೆ ಬಂಡವಾಳ ಹೂಡುತ್ತಿದೆ.ಇಬ್ಬರೂ ಈ ಹಿಂದೆ 'ಬೀಸ್ಟ್' ಚಿತ್ರದಲ್ಲಿ ಒಟ್ಟಿಗೆ ನಟಿಸಿದ್ದರು. ಇದೀಗ ಮತ್ತೆ ಒಂದಾಗಿದ್ದಾರೆ. ಸೌತ್ ಸಿನಿಮಾಗಳಲ್ಲಿ ಖಡಕ್ ವಿಲನ್ ಆಗಿ ಮೋಡಿ ಮಾಡುತ್ತಿರುವ ಬಾಲಿವುಡ್ ನಟ ಬಾಬಿ ಡಿಯೋಲ್, ಈ ಸಿನಿಮಾದಲ್ಲಿ ನೆಗೆಟಿವ್ ಶೇಡ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ವೆಂಕಟ್ ನಾರಾಯಣ್ ಈ ಚಿತ್ರದ ನಿರ್ಮಾಪಕರಾಗಿದ್ದಾರೆ.
ಎಚ್ ವಿನೋದ್ ನಿರ್ದೇಶನದ ಈ ಸಿನಿಮಾದಲ್ಲಿ ಮಲಯಾಳಿ ನಟಿ ಮಮಿತಾ ಬೈಜು ಸಹ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ. ನಿರ್ದೇಶಕ ಎಚ್ ವಿನೋದ್ ಕೂಡ ಈ ಚಿತ್ರದ ಬಗ್ಗೆ ಬಹಳ ನಿರೀಕ್ಷೆ ಇಟ್ಟುಕೊಂಡಿದ್ಧಾರೆ.