Actor Vishal Health: ನಡುಗುವ ಕೈಗಳು, ತೊದಲು ಮಾತು, ಕೃಶ ದೇಹ; ಏನಾಯ್ತು ತಮಿಳಿನ ಸ್ಟಾರ್‌ ನಟ ವಿಶಾಲ್‌ಗೆ, ಆರೋಗ್ಯವಾಗಿದ್ದಾರಾ?
ಕನ್ನಡ ಸುದ್ದಿ  /  ಮನರಂಜನೆ  /  Actor Vishal Health: ನಡುಗುವ ಕೈಗಳು, ತೊದಲು ಮಾತು, ಕೃಶ ದೇಹ; ಏನಾಯ್ತು ತಮಿಳಿನ ಸ್ಟಾರ್‌ ನಟ ವಿಶಾಲ್‌ಗೆ, ಆರೋಗ್ಯವಾಗಿದ್ದಾರಾ?

Actor Vishal Health: ನಡುಗುವ ಕೈಗಳು, ತೊದಲು ಮಾತು, ಕೃಶ ದೇಹ; ಏನಾಯ್ತು ತಮಿಳಿನ ಸ್ಟಾರ್‌ ನಟ ವಿಶಾಲ್‌ಗೆ, ಆರೋಗ್ಯವಾಗಿದ್ದಾರಾ?

ತಮಿಳು ನಟ ವಿಶಾಲ್ ಮದಗಜ ರಾಜ ಫ್ರೀ ರಿಲೀಸ್‌ ಕಾರ್ಯಕ್ರಮದಲ್ಲಿ ಅಸ್ವಸ್ಥರಾಗಿದ್ದರು. ಮಾತನಾಡುವಾಗ ಅವರ ಕೈಗಳು ನಡುಗುತ್ತಿತ್ತು. ಇದಕ್ಕೆ ಕಾರಣ ಏನು ಎಂಬುದನ್ನು ನಾವಿಲ್ಲಿ ನೀಡಿದ್ದೇವೆ ಗಮನಿಸಿ.

ತಮಿಳಿನ ಸ್ಟಾರ್‌ ನಟ ವಿಶಾಲ್‌ಗೆ ಏನಾಗಿದೆ?
ತಮಿಳಿನ ಸ್ಟಾರ್‌ ನಟ ವಿಶಾಲ್‌ಗೆ ಏನಾಗಿದೆ?

ತಮಿಳು ನಟ ವಿಶಾಲ್ ಮದಗಜ ರಾಜ ಫ್ರೀ ರಿಲೀಸ್‌ ಕಾರ್ಯಕ್ರಮದಲ್ಲಿ ಮಾತನಾಡುತ್ತಿರುವಾಗ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿದೆ. ಅಲ್ಲಿ ನೆರೆದಿದ್ದ ಎಲ್ಲರಿಗೂ ಇದು ಆತಂಕ ತಂದಿತ್ತು. ಅಷ್ಟೇ ಅಲ್ಲ ಅವರ ಅಸ್ವಸ್ಥತೆಯನ್ನು ಕಂಡು ಕೆಲವರು ಹೆದರಿದ್ದರು. ಕಾರ್ಯಕ್ರಮದಲ್ಲಿ ಮಾತನಾಡುತ್ತಿರುವ ಸಂದರ್ಭದಲ್ಲೇ ಅವರ ಕೈ ನಡುಗಲು ಆರಂಭವಾಗಿತ್ತು. ಈ ದೃಶ್ಯ ಎಲ್ಲೆಡೆ ವೈರಲ್ ಆಗುತ್ತಿದ್ದಂತೆ ಸಾಕಷ್ಟು ಜನ ಅವರಿಗೆ ಏನೋ ತೊಂದರೆ ಆಗಿದೆ ಅವರು ಬೇಗ ಗುಣಮುಖವಾಗಲಿ ಎಂದು ಕಾಮೆಂಟ್‌ ಮಾಡಲು ಆರಂಭಿಸಿದ್ದರು. ಹಾಗಾದರೆ ವೇದಿಕೆ ಮೇಲೆ ಆಗಿದ್ದೇನು ಎಂಬ ಮಾಹಿತಿ ಇಲ್ಲಿದೆ ಗಮನಿಸಿ. 

ನಟ ವಿಶಾಲ್‌ಗೆ ಏನಾಯ್ತು?

ನಟ ವಿಶಾಲ್‌ಗೆ ಜ್ವರ ಬಂದಿತ್ತು. ತೀವ್ರ ಜ್ವರದಿಂದ ಬಳಲುತ್ತಿದ್ದ ವಿಶಾಲ್ ಕಾರ್ಯಕ್ರಮದ ವೇಳೆ ಅಸ್ವಸ್ಥರಾಗಿ ಅವರಿಗೆ ನಡೆಯಲು ಸಹ ಸಾಧ್ಯವಾಗುತ್ತಿರಲಿಲ್ಲ. ಅವರು ಮೈಕ್ ಹಿಡಿದು ಮಾತನಾಡುತ್ತಿದ್ದಾಗ ಅವರ ಎಡಗೈ ನಡುಗುತ್ತಿದ್ದ ದೃಶ್ಯ ಸೆರೆಯಾಗಿದೆ. ಚಿತ್ರದ ಬಗ್ಗೆ ಅವರು ಮಾತನಾಡುತ್ತಾ ವೇದಿಕೆಯ ಮುಂಭಾಗದಲ್ಲಿ ನಿಂತುಕೊಂಡಿರುತ್ತಾರೆ. ಆದರೆ ಅವರ ಬಳಿ ನಿಲ್ಲಲೂ ಶಕ್ತಿ ಇಲ್ಲ ಎಂಬುದು ಎಲ್ಲರಿಗೂ ತಿಳಿಯುವಂತಿರುತ್ತದೆ. ಅವರು ಮಾತನಾಡುವಾಗ ಅವರ ಧ್ವನಿಯಲ್ಲಿ ಬದಲಾವಣೆ ಕಾಣಿಸುತ್ತಿದೆ. ಮೈಕ್ ಹಿಡಿದುಕೊಳ್ಳಲೂ ಅವರಿಗೆ ಸಾಧ್ಯ ಆಗುವುದಿಲ್ಲ. ಅಷ್ಟರ ಮಟ್ಟಿಗೆ ಅವರು ನಿಶ್ಯಕ್ತರಾಗಿದ್ದರು. ಆ ನಂತರ ಎಲ್ಲರೂ ಅವರಿಗೆ ಕಾಳಜಿ ತೋರಿದ್ದಾರೆ. ನಂತರ ಅವರು ಕುಳಿತುಕೊಂಡೇ ಮಾತನಾಡಿದ್ದಾರೆ. ಆದರೆ ಅವರಿಗೆ ಹೆಚ್ಚಿನ ಆರೋಗ್ಯ ಸಮಸ್ಯೆ ಏನೂ ಇಲ್ಲ ವೈರಲ್ ಫೀವರ್‌ನಿಂದ ಅವರು ಬಳಲುತ್ತಿದ್ದರು ಎಂದು ಹೇಳಲಾಗಿದೆ. ಆದರೆ ವಿಡಿಯೋ ಗಮನಿಸಿದ ಎಲ್ಲರಿಗೂ ಆತಂಕವಾಗಿ ಬೇಗ ಗುಣಮುಖರಾಗಿ ವಿಶಾಲ್ ಎಂದು ಕಾಮೆಂಟ್ ಮಾಡುತ್ತಿದ್ದಾರೆ

ಮದಗಜ ರಾಜ ತಮಿಳು ಹಾಸ್ಯ ಚಿತ್ರವಾಗಿದ್ದು, ಇದು 2012 ರಲ್ಲಿ ನಿರ್ಮಾಣವಾದಾಗಿನಿಂದ ಡಬ್ಬಿಂಗ್ ಕೆಲಸ ನಡೆಯುತ್ತಿತ್ತು, ಆದರೆ ಬಿಡುಗಡೆಯಾಗಿರಲಿಲ್ಲ. ಈಗ ಬಿಡುಗಡೆಗೆ ಸಿದ್ಧವಾಗಿದೆ. ಜನವರಿ 12, 2025ರಂದು ಈ ಸಿನಿಮಾ ತೆರೆ ಕಾಣಲಿದೆ. ಚಿತ್ರವು 2013 ರ ಹೊತ್ತಿಗೆ ಪೂರ್ಣಗೊಂಡಿದ್ದರೂ, ಹಣಕಾಸಿನ ತೊಂದರೆಗಳಿಂದಾಗಿ ಚಿತ್ರದ ಬಿಡುಗಡೆಯು ಮುಂದೂಡಲ್ಪಟ್ಟಿತ್ತು. ಚಿತ್ರದ ಮೊದಲ ಅಧಿಕೃತ ಟ್ರೈಲರ್ ಸುಮಾರು 11 ವರ್ಷಗಳ ಹಿಂದೆ ಯೂಟ್ಯೂಬ್‌ನಲ್ಲಿ ಬಿಡುಗಡೆಯಾಗಿತ್ತು.

ಪಾತ್ರವರ್ಗ

ಮದಗಜ ರಾಜ ಚಿತ್ರದಲ್ಲಿ ವಿಶಾಲ್ ಮುಖ್ಯ ಪಾತ್ರದಲ್ಲಿ ನಟಿಸಿದ್ದು, ಸಂತಾನಂ, ವರಲಕ್ಷ್ಮಿ ಶರತ್‌ಕುಮಾರ್, ಅಂಜಲಿ ಮತ್ತು ಇತರರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಕಮರ್ಷಿಯಲ್ ಎಂಟರ್‌ಟೈನರ್ ಎಂದು ಹೇಳಲಾದ ಈ ಸಿನಿಮಾ ಬಗ್ಗೆ ಎಲ್ಲರಿಗೂ ಕುತೂಹಲವಿದೆ. ಈ ಸಿನಿಮಾ ರೆಡಿಯಾಗಿ ಸುಮಾರು ವರ್ಷಗಳಾದ ಕಾರಣ ಆಗಿನ ಫ್ಲೇವರ್ ಈ ಚಿತ್ರದಲ್ಲಿದೆ ಎಂದು ಎಲ್ಲರೂ ಕಾಯುತ್ತಿದ್ದಾರೆ.

Whats_app_banner