Jana Nayagan: ದಳಪತಿ ವಿಜಯ್‌ ನಟನೆಯ ಕೊನೆಯ ಸಿನಿಮಾದ ಹೆಸರು ಬಹಿರಂಗ; ಇಲ್ಲಿದೆ ಜನ ನಾಯಗನ್‌ ಫಸ್ಟ್‌ ಲುಕ್‌
ಕನ್ನಡ ಸುದ್ದಿ  /  ಮನರಂಜನೆ  /  Jana Nayagan: ದಳಪತಿ ವಿಜಯ್‌ ನಟನೆಯ ಕೊನೆಯ ಸಿನಿಮಾದ ಹೆಸರು ಬಹಿರಂಗ; ಇಲ್ಲಿದೆ ಜನ ನಾಯಗನ್‌ ಫಸ್ಟ್‌ ಲುಕ್‌

Jana Nayagan: ದಳಪತಿ ವಿಜಯ್‌ ನಟನೆಯ ಕೊನೆಯ ಸಿನಿಮಾದ ಹೆಸರು ಬಹಿರಂಗ; ಇಲ್ಲಿದೆ ಜನ ನಾಯಗನ್‌ ಫಸ್ಟ್‌ ಲುಕ್‌

Jana Nayagan: ತಮಿಳು ನಟ ದಳಪತಿ ವಿಜಯ್‌ ಅಭಿಮಾನಿಗಳಿಗೆ ಖುಷಿಯ ಸುದ್ದಿ. ಈ ಹಿಂದೆ ದಳಪತಿ 69 (Thalapathy 69) ಎಂಬ ಹೆಸರಿನಲ್ಲಿ ವಿಜಯ್‌ನ 69ನೇ ಸಿನಿಮಾವನ್ನು ಘೋಷಿಸಲಾಗಿತ್ತು. ಇದೀಗ ಈ ಸಿನಿಮಾದ ಹೆಸರು ಘೋಷಿಸಲಾಗಿದೆ. ಈ ಸಿನಿಮಾಕ್ಕೆ ಜನ ನಾಯಗನ್‌ ಎಂದು ಹೆಸರಿಡಲಾಗಿದೆ.

Jana Nayagan: ದಳಪತಿ ವಿಜಯ್‌ ನಟನೆಯ ಕೊನೆಯ ಸಿನಿಮಾದ ಹೆಸರು ಬಹಿರಂಗ
Jana Nayagan: ದಳಪತಿ ವಿಜಯ್‌ ನಟನೆಯ ಕೊನೆಯ ಸಿನಿಮಾದ ಹೆಸರು ಬಹಿರಂಗ

Jana Nayagan: ತಮಿಳು ನಟ ದಳಪತಿ ವಿಜಯ್‌ ಅಭಿಮಾನಿಗಳಿಗೆ ಖುಷಿಯ ಸುದ್ದಿ. ಈ ಹಿಂದೆ ದಳಪತಿ 69 (Thalapathy 69) ಎಂಬ ಹೆಸರಿನಲ್ಲಿ ವಿಜಯ್‌ನ 69ನೇ ಸಿನಿಮಾವನ್ನು ಘೋಷಿಸಲಾಗಿತ್ತು. ಇದೀಗ ಈ ಸಿನಿಮಾದ ಹೆಸರು ಘೋಷಿಸಲಾಗಿದೆ. ಈ ಸಿನಿಮಾಕ್ಕೆ ಜನ ನಾಯಗನ್‌ ಎಂದು ಹೆಸರಿಡಲಾಗಿದೆ. ಕನ್ನಡದಲ್ಲಿ ಇದನ್ನು ಜನ ನಾಯಕ ಎಂದು ಅರ್ಥ ಮಾಡಿಕೊಳ್ಳಬಹುದು. ದಳಪತಿ ವಿಜಯ್‌ನ ಕೊನೆಯ ಸಿನಿಮಾ ಇದು ಎನ್ನಲಾಗಿದೆ. ಅಂದರೆ, ಇವರು ನಂತರ ರಾಜಕೀಯ ಪ್ರವೇಶಿಸಲಿದ್ದಾರೆ. ಹೀಗಾಗಿ, ಈ ಸಿನಿಮಾದ ಕುರಿತು ವಿಜಯ್‌ ಅಭಿಮಾನಿಗಳಲ್ಲಿ ನಿರೀಕ್ಷೆ ತುಸು ಹೆಚ್ಚೇ ಇದೆ.

ದಳಪತಿ ವಿಜಯ್‌ ಇಂದು ಎಕ್ಸ್‌ನಲ್ಲಿ (ಹಳೆಯ ಟ್ವಿಟ್ಟರ್‌) ಜನ ನಾಯಕನ್‌ ಸಿನಿಮಾದ ಕುರಿತು ಘೋಷಿಸಿದ್ದಾರೆ. ಈ ಸಿನಿಮಾದ ಹೆಸರು ಮತ್ತು ಫಸ್ಟ್‌ಲುಕ್‌ ಅನ್ನು ಇದೇ ಗಣರಾಜ್ಯೋತ್ಸವದ ದಿನ ಘೋಷಿಸಲಾಗುವುದು ಎಂದು ಕೆವಿಎನ್‌ ಪ್ರೊಡಕ್ಷನ್‌ ಕಳೆದ ಶುಕ್ರವಾರ ತಿಳಿಸಿತ್ತು. ಇದು ಈ ವರ್ಷದ ಬಹುನಿರೀಕ್ಷಿತ ಸಿನಿಮಾವಾಗಿದೆ. ಅಭಿಮಾನಿಗಳು ಈ ಸಿನಿಮಾದ ಝಲಕ್ ನೋಡಲು ಕಾಯುತ್ತಿದ್ದರು. ಸದ್ಯ ಸಿನಿಮಾ ತಂಡವು ಫಸ್ಟ್‌ ಲುಕ್‌ ಪೋಸ್ಟರ್‌ ಬಿಡುಗಡೆ ಮಾಡಿದೆ.

ಈ ಪೋಸ್ಟರ್‌ನಲ್ಲಿ ವಿಜಯ್‌ ಸೆಲ್ಫಿ ತೆಗೆದುಕೊಳ್ಳುತ್ತಿದ್ದಾರೆ. ಅವರ ಹಿಂದೆ ಫಾಲೋವರ್ಸ್‌ ಇದ್ದಾರೆ. ಬಹುಶಃ ಇವರ ರಾಜಕೀಯ ಪಕ್ಷದ ಮತದಾರರು, ಇವರ ಅಭಿಮಾನಿಗಳು ಆಗಿರಬಹುದು. ಸಿಗ್ನೆಚರ್‌ರ ದಳಪತಿ ಶೈಲಿಯಲ್ಲಿ ಇವರ ಲುಕ್‌ ಇದೆ.

ಈ ಸಿನಿಮಾದ ಕಥೆಯಲ್ಲಿ ರಾಜಕೀಯ ಅಂಶಗಳು ಇರಬಹುದು. ಇವರು ಇತ್ತೀಚೆಗೆ ರಾಜಕಾರಣಕ್ಕೆ ಇಳಿದಿದ್ದಾರೆ. ತಮಿಲಗ ವೆಟ್‌ರಿ ಕಾಝಗಮ್ ಟಿವಿಕೆ ಪಕ್ಷದ ಮೂಲಕ ತಮಿಳುನಾಡಿನಲ್ಲಿ ಹೊಸ ಇತಿಹಾಸ ಸೃಷ್ಟಿಸುವ ಕನಸಿನಲ್ಲಿದ್ದಾರೆ. ಈ ಸಿನಿಮಾದಲ್ಲಿ ವಿಜಯ್‌ ಜತೆಗೆ ಪೂಜಾ ಹೆಗ್ಡೆ, ಬಾಬಿ ಡಿಯೋಲ್‌, ಮಮಿತಾ ಬೈಜು, ಗೌತಮ್‌ ವಾಸುದೇವ್‌ ಮೆನನ್‌, ಪ್ರಿಯಾಮಣಿ, ಪ್ರಕಾಶ್‌ ರಾಜ್‌ ಮುಂತಾದವರು ಕೂಡ ನಟಿಸುತ್ತಿದ್ದಾರೆ.

ದಳಪತಿ ವಿಜಯ್‌ ಕೊನೆಯ ಸಿನಿಮಾವೇ?

ವಿವಿಧ ವರದಿಗಳ ಪ್ರಕಾರ ಈ ಪ್ರಾಜೆಕ್ಟ್‌ ವಿಜಯ್‌ ಅವರ ಕೊನೆಯ ಸಿನಿಮಾವಾಗಿರಲಿದೆ. ಮುಂದೆ ಸಂಪೂರ್ಣವಾಗಿ ರಾಜಕೀಯ ಕ್ಷೇತ್ರದಲ್ಲಿ ಮುಂದುವರೆಯಲಿದ್ದಾರೆ ಎನ್ನಲಾಗುತ್ತಿದೆ. ಹೀಗಾಗಿ, ಈ ಸಿನಿಮಾ ಅವರ ಮುಂದಿನ ಬದುಕಿಗೆ ದಾರಿ ದೀಪವೂ ಆಗಿರುವ ಸೂಚನೆ ಇರಲಿದೆ. ಈ ಸಿನಿಮಾದ ಮೂಲಕ ತಾನೊಬ್ಬ ಒಳ್ಳೆಯ ಜನಪ್ರತಿನಿಧಿ ಎಂದು ತೋರಿಸುವ ಪ್ರಯತ್ನವೂ ಇರಬಹುದು.

Whats_app_banner