4 ದಿನಗಳಲ್ಲಿ ಶಿವ ಕಾರ್ತಿಕೇಯನ್‌ ಸಾಯಿಪಲ್ಲವಿ ನಟನೆಯ ಅಮರನ್‌ ಸಿನಿಮಾ ಮಾಡಿದ ಕಲೆಕ್ಷನ್‌ ಎಷ್ಟು?
ಕನ್ನಡ ಸುದ್ದಿ  /  ಮನರಂಜನೆ  /  4 ದಿನಗಳಲ್ಲಿ ಶಿವ ಕಾರ್ತಿಕೇಯನ್‌ ಸಾಯಿಪಲ್ಲವಿ ನಟನೆಯ ಅಮರನ್‌ ಸಿನಿಮಾ ಮಾಡಿದ ಕಲೆಕ್ಷನ್‌ ಎಷ್ಟು?

4 ದಿನಗಳಲ್ಲಿ ಶಿವ ಕಾರ್ತಿಕೇಯನ್‌ ಸಾಯಿಪಲ್ಲವಿ ನಟನೆಯ ಅಮರನ್‌ ಸಿನಿಮಾ ಮಾಡಿದ ಕಲೆಕ್ಷನ್‌ ಎಷ್ಟು?

ಭಯೋತ್ಪಾದಕರ ಜೊತೆಗಿನ ಹೋರಾಟದಲ್ಲಿ ವೀರ ಮರಣವನ್ನಪ್ಪಿದ ಮೇಜರ್‌ ಮುಕುಂದ್‌ ವರದರಾಜನ್‌ ಬಯೋಪಿಕ್‌ ಅಮರನ್‌ ಸಿನಿಮಾ ಅಮರನ್‌ 4 ನೇ ದಿನ 21.55 ಕೋಟಿ ರೂ ಕಲೆಕ್ಷನ್‌ ಮಾಡಿದೆ. ಈ ಮೂಲಕ ಸಿನಿಮಾ ದೇಶಾದ್ಯಂತ ಒಟ್ಟು 95.60 ಕೋಟಿ ರೂ ಕಲೆಕ್ಷನ್‌ ಮಾಡಿದೆ.

ಸಾಯಿ ಪಲ್ಲವಿ, ಶಿವಕಾರ್ತಿಕೇಯನ್‌ ಅಮರನ್‌ 4ನೇ ದಿನದ ಬಾಕ್ಸ್‌ ಆಫೀಸ್‌ ಕಲೆಕ್ಷನ್‌
ಸಾಯಿ ಪಲ್ಲವಿ, ಶಿವಕಾರ್ತಿಕೇಯನ್‌ ಅಮರನ್‌ 4ನೇ ದಿನದ ಬಾಕ್ಸ್‌ ಆಫೀಸ್‌ ಕಲೆಕ್ಷನ್‌

ರಾಜ್‌ಕುಮಾರ್‌ ಪೆರಿಯಸಾಮಿ ನಿರ್ದೇಶನದಲ್ಲಿ ಸಾಯಿ ಪಲ್ಲವಿ ಹಾಗೂ ಶಿವಕಾರ್ತಿಕೇಯನ್‌ ಪ್ರಮುಖ ಪಾತ್ರದಲ್ಲಿ ನಟಿಸಿರುವ ಅಮರನ್‌ ಸಿನಿಮಾ ಒಳ್ಳೆ ಓಪನಿಂಗ್‌ ಪಡೆದುಕೊಂಡಿದೆ. ಸಿನಿಮಾ ಬಗ್ಗೆ ಜನರು ಉತ್ತಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಸೈನಿಕರು ಕೂಡಾ ಸಿನಿಮಾ ನೋಡಿ ಕಥೆ ಹಾಗೂ ಕಲಾವಿದರ ನಟನೆಗೆ ಫುಲ್‌ ಮಾರ್ಕ್ಸ್‌ ನೀಡಿದ್ದಾರೆ.

ಅಕ್ಟೋಬರ್‌ 31 ರಂದು ತೆರೆ ಕಂಡಿದ್ದ ಸಿನಿಮಾ

ಬಾಕ್ಸ್‌ ಆಫೀಸಿನಲ್ಲಿ ಕೂಡಾ ಸಿನಿಮಾ ನಾಗಾಲೋಟದಲ್ಲಿ ಮುನ್ನುಗ್ತುತ್ತಿದೆ. ಸಿನಿಮಾ ಅಕ್ಟೋಬರ್‌ 31 ರಂದು ದೀಪಾವಳಿಗೆ ತೆರೆ ಕಂಡಿತ್ತು. ಮೊದಲ ದಿನ ಸಿನಿಮಾ 21.4 ಕೋಟಿ ರೂ ಲಾಭ ಮಾಡಿತ್ತು. ಅದರಲ್ಲಿ ತಮಿಳುನಾಡು ಪಾಲೇ ಹೆಚ್ಚಾಗಿತ್ತು. ಎರಡನೇ ದಿನ ಶುಕ್ರವಾರ 19.15 ಕೋಟಿ ರೂ ಗಳಿಸಿದರೆ ಮೂರನೇ ದಿನ ಶನಿವಾರ ಸಿನಿಮಾ 21 ಕೋಟಿ ರೂ ಕಲೆಕ್ಷನ್‌ ಮಾಡಿದೆ ಅದರಲ್ಲಿ ತಮಿಳುನಾಡಿನಿಂದ 17.4 ಕೋಟಿ ರೂ. ಕರ್ನಾಟಕದಿಂದ 6 ಲಕ್ಷ, ಹಿಂದಿಯಿಂದ 3 ಲಕ್ಷ, ತೆಲುಗು ಭಾಷೆಯಿಂದ 3.5 ಕೋಟಿ ಹಾಗೂ ಮಲಯಾಳಂನಿಂದ ಸಿನಿಮಾ 1 ಲಕ್ಷ ರೂ ಗಳಿಸಿದೆ. ಇನ್ನು 4ನೇ ದಿನ ಕೂಡಾ ಸಿನಿಮಾ ಉಳಿದ ದಿನಗಳಿಂದ ಉತ್ತಮ ಕಲೆಕ್ಷನ್‌ ಮಾಡಿದೆ.

4 ನೇ ದಿನ ಅಮರನ್‌ ಮಾಡಿದ ಕಲೆಕ್ಷನ್‌ ಎಷ್ಟು?

ಸಿನಿಮಾ 4ನೇ ದಿನ ಭಾನುವಾರ 21.55 ಕೋಟಿ ರೂ ಬಾಚಿಕೊಂಡಿದೆ. ಅದರಲ್ಲಿ ತಮಿಳು ವರ್ಷನ್‌ 17.65 , ಕನ್ನಡ 6 ಲಕ್ಷ , ಹಿಂದಿ 3 ಲಕ್ಷ, ತೆಲುಗು 3.8 ಲಕ್ಷ , ಮಲಯಾಳಂನಿಂದ 1 ಲಕ್ಷ ರೂ ಸೇರಿ ಒಟ್ಟು 21.55 ಕೋಟಿ ರೂ ಕಲೆಕ್ಷನ್‌ ಮಾಡಿದೆ. ಇದರ ಮೂಲಕ ಸಿನಿಮಾ ಇದುವರೆಗೂ ಕರ್ನಾಟಕದಿಂದ 7.45 ರೂ. ಆಂಧ್ರ-ತಮಿಳುನಾಡಿನಿಂದ 16 ಕೋಟಿ ರೂ. ತಮಿಳು ನಾಡು 66.6 ಕೋಟಿ ರೂ. ಕೇರಳದಿಂದ 4.35 ಕೋಟಿ ಹಾಗೂ ಭಾರತದ ಇತರ ಭಾಗಗಳಿಂದ 1.2 ಕೋಟಿ ಸೇರಿ ಒಟ್ಟು 95.60 ಕೋಟಿ ರೂ ಕಲೆಕ್ಷನ್‌ ಮಾಡಿದೆ. 4ನೇ ದಿನ ತಮಿಳುನಾಡಿನಲ್ಲಿ ಮಾರ್ನಿಂಗ್‌ ಶೋ 73.80, ಮಧ್ಯಾಹ್ನದ ಶೋ 89.91, ಸಂಜೆ ಶೋ 91.63 ಹಾಗೂ ನೈಟ್‌ ಶೋ 83.08 ಆಕ್ಯುಪೆನ್ಸಿ ಇತ್ತು.

ಮೇಜರ್‌ ಮುಕುಂದ್‌ ವರದರಾಜನ್‌ ಸಿನಿಮಾ

ಅಮರನ್‌ ಸಿನಿಮಾ ಮೇಜರ್‌ ಮುಕುಂದ್‌ ವರದರಾಜನ್‌ ಅವರ ಜೀವನ ಆಧಾರಿತ ಸಿನಿಮಾ. ದಿವಂಗತ ಮೇಜರ್ ಮುಕುಂದ್ ವರದರಾಜನ್ 2014 ರಲ್ಲಿ ಕಾಶ್ಮೀರದ ಶೋಪಿಯಾನ್ ಎನ್‌ಕೌಂಟರ್‌ನಲ್ಲಿ ಹುತಾತ್ಮರಾದರು. ಅವರ ಶೌರ್ಯಕ್ಕಾಗಿ ಕೇಂದ್ರ ಸರ್ಕಾರ ಅಶೋಕ ಚಕ್ರ ನೀಡಿ ಗೌರವಿಸಲಾಗಿದೆ. ಚಿತ್ರದಲ್ಲಿ ನಾಯಕಿಯಾಗಿ ಸಾಯಿ ಪಲ್ಲವಿ ನಟಿಸಿದ್ದಾರೆ. ಶಿವಕಾರ್ತಿಕೇಯನ್‌ಗೆ ವೃತ್ತಿ ಜೀವನದ ಬೆಸ್ಟ್ ಸಿನಿಮಾ ಇದೆಂದು ಹೇಳಲಾಗುತ್ತಿದೆ. ಅಮರನ್‌ ಚಿತ್ರದಲ್ಲಿ ಸಾಯಿ ಪಲ್ಲವಿ ಮುಕುಂದ್‌ ವರದರಾಜನ್‌ ಪತ್ನಿ ಇಂದು ರೆಬೆಕಾ ವರ್ಗೀಸ್‌ ಪಾತ್ರದಲ್ಲಿ ನಟಿಸಿದ್ದಾರೆ. ಬಹಳ ವರ್ಷಗಳ ಕಾಲ ಪ್ರೀತಿಯಲ್ಲಿದ್ದ ಈ ಜೋಡಿ 2009 ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಅದಕ್ಕೂ ಮುನ್ನ ಇಬ್ಬರೂ ಪ್ರೀತಿಯಲ್ಲಿದ್ದರು. 2011 ರಲ್ಲಿ ದಂಪತಿಗೆ ಮಗಳು ಜನಿಸಿದಳು. ಅಮರನ್ ಸಿನಿಮಾದಲ್ಲಿ ನಟಿಸುವ ಮುನ್ನ ಇಂದು ರೆಬೆಕಾ ಅವರನ್ನು ಭೇಟಿಯಾಗಿದ್ದ ಸಾಯಿ ಪಲ್ಲವಿ ಅವರೊಂದಿಗೆ ಕೆಲವು ದಿನ ಕಾಲ ಕಳೆದಿದ್ದಾಗಿ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

 

 

Whats_app_banner