ಸೋಷಿಯಲ್ ಮಿಡಿಯಾದಲ್ಲಿ 3 ಕೋಟಿ ಫಾಲೋವರ್ಸ್ ಇದ್ರೇನು ಪ್ರಯೋಜನ, ಅವರೆಲ್ಲ ಟಿಕೆಟ್ ಖರೀದಿಸಿ ಸಿನಿಮಾ ನೋಡ್ತಾರಾ; ಪೂಜಾ ಹೆಗ್ಡೆ ಬೇಸರ
ಸಾಮಾಜಿಕ ಜಾಲತಾಣದಲ್ಲಿ ಕೋಟಿಗಟ್ಟಲೆ ಫಾಲೋವರ್ಸ್ ಇದ್ರೆ ಏನು ಪ್ರಯೋಜನ, ಅವರೆಲ್ಲರೂ ಟಿಕೆಟ್ ಕೊಟ್ಟು ಸಿನಿಮಾ ನೋಡೋಲ್ಲ ಅಲ್ವಾ ಅಂತ ನಟಿ ಪೂಜಾ ಹೆಗ್ಡೆ ಪ್ರಶ್ನಿಸಿದ್ದಾರೆ. ಸದ್ಯ ಅವರ ರೆಟ್ರೊ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ.

ಒಂದು ಕಾಲದಲ್ಲಿ ಟಾಲಿವುಡ್‌ನ ಟಾಪ್ ನಟಿಯಾಗಿದ್ದ ಪೂಜಾ ಹೆಗ್ಡೆಗೆ ನಂತರ ನಿಧಾನಕ್ಕೆ ಅವಕಾಶಗಳು ಸಿಗುವುದು ಕಡಿಮೆಯಾಗುತ್ತದೆ. ಇದರಿಂದ ಹಲವು ಬಾಲಿವುಡ್ ಹಾಗೂ ಕಾಲಿವುಡ್‌ನತ್ತ ಮುಖ ಮಾಡುತ್ತಾರೆ. ಸಿನಿಮಾಗಳಲ್ಲಿ ಅವಕಾಶ ಸಿಗುವುದು ಕಡಿಮೆಯಾದ್ರೂ ಈಕೆಗೆ ಸಾಮಾಜಿಕ ಜಾಲತಾಣದಲ್ಲಿ ಫಾಲೋವರ್ಸ್‌ಗಳ ಸಂಖ್ಯೆ ಕಡಿಮೆಯಾಗಿಲ್ಲ. ಈ ವಿಚಾರವಾಗಿ ಮಾಧ್ಯಮಗಳ ಮುಂದೆ ಮಾತನಾಡಿರುವ ಕರಾವಳಿ ಬೆಡಗಿ ‘ಸೋಷಿಯಲ್ ಮಿಡಿಯಾದಲ್ಲಿ ಇಷ್ಟೊಂದು ಫಾಲೋವರ್ಸ್ ಇದ್ರೂ ಏನು ಪ್ರಯೋಜನ‘ ಎಂದು ಬೇಸರ ಹೊರ ಹಾಕಿದ್ದಾರೆ.
ಸದ್ಯ ಪೂಜಾ ಹೆಗ್ಡೆ ತಮ್ಮ ಮುಂದಿನ ರೆಟ್ರೊ ಸಿನಿಮಾದ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ. ಸಿನಿಮಾ ಪ್ರಚಾರದ ವೇಳೆ ಇವರು ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿದ್ದಾರೆ. ಆಗ ಸಾಮಾಜಿಕ ಜಾಲತಾಣದ ಕುರಿತು ಅವರು ಹೇಳಿರುವ ಮಾತು ಈ ವೈರಲ್ ಆಗುತ್ತಿದೆ. ನಿಜವಾದ ಜಗತ್ತು ಹಾಗೂ ಸಾಮಾಜಿಕ ಜಾಲತಾಣ ಈ ಎರಡೂ ಭಿನ್ನವಾಗಿದೆ ಎಂದು ಪೂಜಾ ಹೇಳಿದ್ದಾರೆ.
‘ನನಗೆ ಇನ್‌ಸ್ಟಾಗ್ರಾಂನಲ್ಲಿ 3 ಕೋಟಿ ಫಾಲೋವರ್ಸ್ ಇದ್ದಾರೆ. ಹಾಗಂತ ನನ್ನ ಸಿನಿಮಾ ನೋಡಲು ಆ 3 ಕೋಟಿ ಮಂದಿ ಟಿಕೆಟ್ ಖರೀದಿಸುತ್ತಾರಾ, ಅದೇ ರೀತಿ ಹಲವು ಸೂಪರ್ ಸ್ಟಾರ್‌ಗಳು ಸಾಮಾಜಿಕ ಜಾಲತಾಣದಲ್ಲಿ 5 ಕೋಟಿಗೂ ಹೆಚ್ಚು ಫಾಲೋವರ್ಸ್‌ಗಳನ್ನು ಹೊಂದಿದ್ದಾರೆ. ಆದರೆ ಅವರೆಲ್ಲರೂ ಥಿಯೇಟರ್‌ಗೆ ಬಂದು ನಾವು ಮಾಡಿದ ಸಿನಿಮಾ ನೋಡುತ್ತಾರೆ ಅಂತಲ್ಲ. ನಾವು ಮಾಡುವ ಕೆಲಸವನ್ನು ಚೆನ್ನಾಗಿ ಮಾಡಿ, ನಂತರ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆಯಬೇಕು‘ ಎಂದು ಅವರು ಹೇಳಿದ್ದಾರೆ.
ಸಾಮಾಜಿಕ ಮಾಧ್ಯಮ ಜಗತ್ತು ಬೇರೆ...
ಸೋಷಿಯಲ್ ಮಿಡಿಯಾ ಹಾಗೂ ಸಿನಿಮಾದ ಬಗ್ಗೆ ಪೂಜಾ ಹೆಗ್ಡೆ ಹೇಳಿರುವ ಮಾತುಗಳು ಈಗ ಎಲ್ಲೆಡೆ ವೈರಲ್ ಆಗುತ್ತಿದೆ. ಸಾಮಾಜಿಕ ಜಾಲತಾಣವೆಂಬ ಜಗತ್ತು ಸಂಪೂರ್ಣ ಭಿನ್ನವಾಗಿದೆ ಎಂದು ಪೂಜಾ ಹೇಳಿದ್ದಾರೆ.
‘ಸಾಮಾಜಿಕ ಮಾಧ್ಯಮದಲ್ಲಿ ಬಹಳಷ್ಟು ಬಾಟ್‌ಗಳಿವೆ. ಅದರಲ್ಲಿ ಯಾವುದೇ ಫೋಟೋಗಳಿಲ್ಲ. ಯಾವುದೇ ಪೋಸ್ಟ್‌ಗಳಿಲ್ಲ. ಈ ರೀತಿ ಪ್ರೊಫೈಲ್ ವಿವಿರ, ಪೋಟೊಗಳಿಲ್ಲದ ಪೋಸ್ಟ್‌ಗಳಿಂದ ನಾನು ಪ್ರಭಾವಿತಳಾಗಿದ್ದೇನೆ. ಯಾಕೆಂದರೆ ನಾನು ಕೂಡ ಮನುಷ್ಯಳು. ಆದರೆ ಖಂಡಿತ ಇದು ನಿಜವಾದ ಪ್ರಪಂಚವಲ್ಲ ಎಂಬುದನ್ನು ನಾವೆಲ್ಲರೂ ತಿಳಿದುಕೊಳ್ಳಬೇಕಿದೆ‘ ಎಂದು ಅವರು ಹೇಳಿದ್ದಾರೆ.
ರೆಟ್ರೋ ಚಿತ್ರದ ಬಗ್ಗೆ..
ರೆಟ್ರೊ ತಮಿಳಿನ ರೊಮ್ಯಾಂಟಿಕ್ ಆ್ಯಕ್ಷನ್ ಸಿನಿಮಾ. ಕಾರ್ತಿಕ್ ಸುಬ್ಬ ರಾಜ್ ನಿರ್ದೇಶನದ ಈ ಸಿನಿಮಾದಲ್ಲಿ ಸೂರ್ಯ ಹಾಗೂ ಪೂಜಾ ಹೆಗ್ಡೆ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಮೇ 1 ರಂದು ಈ ಚಿತ್ರ ಬಿಡುಗಡೆಯಾಗಲಿದೆ. 65 ಕೋಟಿ ಬಜೆಟ್‌ನಲ್ಲಿ ನಿರ್ಮಾಣವಾಗಿರುವ ಈ ಸಿನಿಮಾ ಸೂರ್ಯ ಹಾಗೂ ಜ್ಯೋತಿಕಾ ಕೂಡ ಹಣ ಹೂಡಿಕೆ ಮಾಡಿದ್ದಾರೆ. ಸೂರ್ಯನ ನಟನೆಯ ಕಂಗುವಾ ಚಿತ್ರ ಹೇಳಿಕೊಳ್ಳುವ ಯಶಸ್ಸು ನೀಡಲಿಲ್ಲ. ಹಾಗಾಗಿ ರೆಟ್ರೋ ಚಿತ್ರದ ಮೇಲೆ ಸಾಕಷ್ಟು ನಿರೀಕ್ಷೆ ಇರಿಸಿಕೊಂಡಿದ್ದಾರೆ ಕಾಲಿವುಡ್ ಸ್ಟಾರ್. ಈ ಚಿತ್ರ ಪೂಜಾ ಹೆಗ್ಡೆ ಸಿನಿಮಾ ಕರಿಯರ್‌ಗೂ ಬಹಳ ಮುಖ್ಯ ಎನ್ನಿಸಿದೆ.