ಅಜಿತ್‌ ಕುಮಾರ್ ನಟನೆಯ ಗುಡ್ ಬ್ಯಾಡ್ ಅಗ್ಲಿ ಸಿನಿಮಾದ ಫಸ್ಟ್‌ಗೆ ಹಾಫ್‌ಗೆ ಫುಲ್ ಮಾರ್ಕ್ಸ್‌ ಕೊಟ್ಟ ಪ್ರೇಕ್ಷಕ; ಹೀಗಿದೆ ಟ್ವಿಟರ್ ರಿವ್ಯೂ
ಕನ್ನಡ ಸುದ್ದಿ  /  ಮನರಂಜನೆ  /  ಅಜಿತ್‌ ಕುಮಾರ್ ನಟನೆಯ ಗುಡ್ ಬ್ಯಾಡ್ ಅಗ್ಲಿ ಸಿನಿಮಾದ ಫಸ್ಟ್‌ಗೆ ಹಾಫ್‌ಗೆ ಫುಲ್ ಮಾರ್ಕ್ಸ್‌ ಕೊಟ್ಟ ಪ್ರೇಕ್ಷಕ; ಹೀಗಿದೆ ಟ್ವಿಟರ್ ರಿವ್ಯೂ

ಅಜಿತ್‌ ಕುಮಾರ್ ನಟನೆಯ ಗುಡ್ ಬ್ಯಾಡ್ ಅಗ್ಲಿ ಸಿನಿಮಾದ ಫಸ್ಟ್‌ಗೆ ಹಾಫ್‌ಗೆ ಫುಲ್ ಮಾರ್ಕ್ಸ್‌ ಕೊಟ್ಟ ಪ್ರೇಕ್ಷಕ; ಹೀಗಿದೆ ಟ್ವಿಟರ್ ರಿವ್ಯೂ

Good Bad Ugly Twitter Review: ಅಜಿತ್‌ ಕುಮಾರ್ ನಟನೆಯ ಗುಡ್ ಬ್ಯಾಡ್ ಅಗ್ಲಿ ಸಿನಿಮಾ ಇಂದು (ಏಪ್ರಿಲ್ 10) ಬಿಡುಗಡೆಯಾಗಿದೆ. ಸಿನಿ ನೋಡಿರುವ ಪ್ರೇಕ್ಷಕರು ಫಸ್ಟ್‌ ಹಾಫ್‌ಗೆ ಫುಲ್‌ ಮಾರ್ಕ್ಸ್ ನೀಡಿದ್ದಾರೆ. ಸಂಪೂರ್ಣ ಸಿನಿಮಾ ಹೇಗಿದೆ? ಇಲ್ಲಿದೆ ಗುಡ್ ಬ್ಯಾಡ್ ಅಗ್ಲಿ ಚಿತ್ರದ ಟ್ವಿಟರ್ ರಿವ್ಯೂ.

ಅಜಿತ್‌ ಕುಮಾರ್ ನಟನೆಯ ಗುಡ್ ಬ್ಯಾಡ್ ಅಗ್ಲಿ ಸಿನಿಮಾದ ಫಸ್ಟ್‌ಗೆ ಹಾಫ್‌ಗೆ ಫುಲ್ ಮಾರ್ಕ್ಸ್‌ ಕೊಟ್ಟ ಪ್ರೇಕ್ಷಕ
ಅಜಿತ್‌ ಕುಮಾರ್ ನಟನೆಯ ಗುಡ್ ಬ್ಯಾಡ್ ಅಗ್ಲಿ ಸಿನಿಮಾದ ಫಸ್ಟ್‌ಗೆ ಹಾಫ್‌ಗೆ ಫುಲ್ ಮಾರ್ಕ್ಸ್‌ ಕೊಟ್ಟ ಪ್ರೇಕ್ಷಕ

Good Bad Ugly Twitter Review: ಥಾಲ ಅಜಿತ್‌ ಕುಮಾರ್ ನಟನೆಯ ಗುಡ್ ಬ್ಯಾಡ್ ಅಗ್ಲಿ ಇಂದು (ಏಪ್ರಿಲ್‌ 10) ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ತೆರೆ ಕಾಣುತ್ತಿದೆ. ಅಧಿಕ್ ರವಿಚಂದ್ರನ್ ನಿರ್ದೇಶನದ ಈ ಚಿತ್ರವನ್ನು ಮೈತ್ರಿ ಮೂವಿ ಮೇಕರ್ಸ್ ನಿರ್ಮಾಣ ಮಾಡಿದ್ದಾರೆ. ಇದೊಂದು ಆ್ಯಕ್ಷನ್ ಸಿನಿಮಾವಾಗಿದೆ. ಅಜಿತ್ 2 ವರ್ಷಗಳ ನಂತರ ಮತ್ತೆ ತೆರೆ ಮೇಲೆ ಕಾಣಿಸಿದ್ದು, ಸಿನಿಮಾದ ಬಗ್ಗೆ ಥಾಲ ಅಭಿಮಾನಿಗಳಲ್ಲಿ ನಿರೀಕ್ಷೆ ಕೊಂಚ ಹೆಚ್ಚೇ ಇತ್ತು ಎನ್ನಬಹುದು.

ಅಜಿತ್‌ ಜೊತೆ ತ್ರಿಶಾ ಕೃಷ್ಣನ್‌, ಅರ್ಜುನ್ ದಾಸ್, ಸುನೀಲ್, ಜಾಕಿ ಶ್ರಾಫ್, ಸಯಾಜಿ ಶಿಂಧೆ, ಟಿನ್ನು ಆನಂದ್, ಪ್ರಿಯಾ ಪ್ರಕಾಶ್ ವಾರಿಯರ್, ಪ್ರಭು, ಪ್ರಸನ್ನ, ಯೋಗಿ ಬಾಬು, ರಘು ರಾಮ್, ರೆಡಿನ್ ಕಿಂಗ್ಸ್ಲಿ, ರಾಹುಲ್ ದೇವ್, ಉಷಾ ಉತ್ತುಪ್ ಮತ್ತು ಶೈನ್ ಟಾಮ್ ಚಾಕ್‌ಕೋ ಮೊದಲಾದವರು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

ಈಗಾಗಲೇ ಸಿನಿಮಾ ಬಿಡುಗಡೆಯಾಗಿದ್ದು, ಚಿತ್ರಮಂದಿರದಲ್ಲಿರುವ ಪ್ರೇಕ್ಷಕರು ಎಕ್ಸ್‌ (ಹಿಂದಿನ ಟ್ವಿಟರ್‌) ನಲ್ಲಿ ರಿವ್ಯೂಗಳನ್ನು ಬರೆದಿದ್ದಾರೆ. ಅಜಿತ್ ಕುಮಾರ್ ನಟನೆಯ ಗುಡ್‌ ಬ್ಯಾಡ್‌ ಅಗ್ಲಿ ಸಿನಿಮಾದ ಮೊದಲಾರ್ಧಕ್ಕೆ ಹಲವರು ಫುಲ್ ಮಾರ್ಕ್ಸ್ ನೀಡಿದ್ದಾರೆ. ಈ ಸಿನಿಮಾದ ಫಸ್ಟ್ ಹಾಫ್ ಸೂಪರ್ ಆಗಿದ್ದಾರೆ ಎಂಬುದು ಹಲವರು ಅಭಿಪ್ರಾಯ. ಅಜಿತ್‌ ನಟನೆಯ ಜೊತೆಗೆ ಅಧಿಕ್ ರವಿಚಂದ್ರನ್ ನಿರ್ದೇಶನಕ್ಕೂ ಜನ ಫಿದಾ ಆಗಿದ್ದಾರೆ. ಸಿನಿಮಾ ಹೇಗಿದೆ ಎಂಬುದನ್ನು ಟ್ವಿಟರ್ ರಿವ್ಯೂಗಳಲ್ಲಿ ನೋಡೋಣ.

ಗುಡ್ ಬ್ಯಾಡ್ ಅಗ್ಲಿ ಟ್ವಿಟರ್ ರಿವ್ಯೂ

ಸಿನಿಮಾದ ಮೊದಲಾರ್ಧ ಸೂಪರ್ ಆಗಿದೆ. ಇಂಟ್ರೊಡಕ್ಷನ್ ಸೀನ್‌ ಹಾಗೂ ಹಾಡಿನ ವಿಡಿಯೊಗಳು ಅದ್ಭುತವಾಗಿವೆ. ಅಜಿತ್‌ ನಟನೆಯ ಬಗ್ಗೆ ಎರಡು ಮಾತಿಲ್ಲ. ಎಂದಿನಂತೆ ಎನರ್ಜಿಟಿಕ್ ಆಗಿ ತೆರೆ ಮೇಲೆ ಕಾಣಿಸಿದ್ದಾರೆ. ಈ ಚಿತ್ರದಲ್ಲಿ ಸ್ಕ್ರೀನ್‌ ಪ್ಲೇ ಸೂಪರ್ ಆಗಿದೆ ಎಂದು ಶರತ್ ಎನ್ನುವವರು ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ.

ಥಾಲ ಅಭಿಮಾನಿಗಳಿಗೆ ಇಂದು ಖಂಡಿತ ಹಬ್ಬ. ಸಿನಿಮಾದಲ್ಲಿ ಅವರ ಎಂಟ್ರಿ ಪಾರ್ಟ್ 10 ನಿಮಿಷ ನಿಜಕ್ಕೂ ಅದ್ಭುತ. ಇಡೀ ಸಿನಿಮಾವನ್ನು ಅವರೊಬ್ಬರೇ ಆಳುತ್ತಾರೆ. ಇಂಟ್ರೋ ಪಾರ್ಟ್ ಗೂಸ್‌ಬಂಪ್ಸ್ ತರಿಸುವುದು ಖಂಡಿತ ಎಂದು ಪ್ರವೀಣ್ ಕುಮಾರ್ ಎನ್ನುವವರು ಬರೆದುಕೊಂಡಿದ್ದಾರೆ.

ಈ ಚಿತ್ರದ ಫಸ್ಟ್ ಹಾಫ್ ಸೂಪರ್ ಆಗಿದೆ. ಇಂಟ್ರೋ ಲೆವೆಲ್ ಬೇರೇನೆ ಇದೆ. ಗಾಡ್ ಬ್ಲೆಸ್ ಯು ಸಾಂಗ್‌ ಅಂತು ಥಿಯೇಟರ್‌ನಲ್ಲಿ ಬೇರೆ ಲೆವೆಲ್‌ನಲ್ಲಿ ಕಾಣಿಸುತ್ತದೆ. ಬಿಜಿಎಂ ಕೂಡ ಸೂಪರ್ ಆಗಿದೆ. 2ನ ಹಾಫ್‌ಗೆ ಕಾಯುತ್ತಿದ್ದೇನೆ ಎಂದು ಸಿನಿ ಪ್ರೇಕ್ಷಕರೊಬ್ಬರು ಬರೆದುಕೊಂಡಿದ್ದಾರೆ.

ನಿಜಕ್ಕೂ ಫಸ್ಟ್ ಹಾಫ್ ಸೂಪರ್ ಆಗಿದೆ. ಆದರೆ 2nd ಹಾಫ್‌ನಲ್ಲಿ ಫ್ಲಾಶ್‌ಬ್ಯಾಕ್ ಸೀನ್‌ಗಳನ್ನು ಎಳೆದಾಡಿದ್ದಾರೆ. ಇದು ಪ್ರೇಕ್ಷಕರಿಗೆ ಬೋರ್ ತರಿಸುವಂತಿದೆ. ಆದರೆ ಅಜಿತ್ ಅಭಿಮಾನಿಗಳಿಗೆ ಖಂಡಿತ ಹಬ್ಬ, ಇದೊಂದು ಮಾಸ್ ಎಂಟರ್‌ಟೈನ್‌ಮೆಂಟ್ ಸಿನಿಮಾ ಎಂದು ಇನ್ನೊಬ್ಬರು ಬರೆದುಕೊಂಡಿದ್ದಾರೆ.

ವಿದೇಶಗಳಲ್ಲೂ ಥಾಲ ಸಿನಿಮಾಕ್ಕೆ ಫುಲ್ ಮಾರ್ಕ್ ಸಿಕ್ಕಿದ್ದು, ಸಿನಿಮಾ 500 ಕೋಟಿ ಮಾಡಲಿದೆ ಎಂದು ಎಕ್ಸ್‌ನಲ್ಲಿ ಅಭಿಮಾನಿಯೊಬ್ಬರು ಬರೆದುಕೊಂಡಿದ್ದಾರೆ.

ಕೆಲವರು ಈ ಸಿನಿಮಾ ತಕ್ಕ ಮಟ್ಟಿಗೆ ಇದೆ, ಹೇಳಿಕೊಳ್ಳುವಷ್ಟು ಚೆನ್ನಾಗಿಲ್ಲ. ಸಿನಿಮಾದಲ್ಲೂ ಎಲ್ಲವೂ ಕಾಪಿ. ಕೆಲವು ದಿನಗಳವರೆಗೆ ಅಭಿಮಾನಿಗಳು ಸಿನಿಮಾ ಓಡಿಸಬಹುದು. ಕೊರಿಯನ್ ಸಿನಿಮಾಗಳನ್ನು ಕಾಪಿ ಮಾಡಿದಂತಿದೆ ಎಂದು ಪ್ರೇಕ್ಷಕರೊಬ್ಬರು ಬರೆದುಕೊಂಡಿದ್ದಾರೆ.

ಒಟ್ಟಾರೆ ಹೇಳೋದಾದ್ರೆ ಸಿನಿಮಾದ ಮೊದಲಾರ್ಧ ಪ್ರೇಕ್ಷಕರನ್ನು ಥಿಯೇಟರ್‌ನಲ್ಲಿ ಹಿಡಿದಿಟ್ಟು ಕೂರಿಸುವಂತೆ ಮಾಡಿದ್ರೆ, ಇಂಟವರ್ಲ್ ನಂತರದ ಬೋರ್ ಆಗುವಂತೆ ಕಥೆಯನ್ನು ಎಳೆದಿದ್ದಾರೆ. ಈಗಾಗಲೇ ಹಲವರು ಫಸ್ಟ್ ನೋಡಿ ಸಿನಿಮಾ ಚೆನ್ನಾಗಿದೆ ಎಂದು ಫುಲ್ ಮಾರ್ಕ್ಸ್ ನೀಡಿದ್ರೆ ಸಿನಿಮಾ ಪೂರ್ತಿ ನೋಡಿದವರು ಚಿತ್ರದ ದ್ವಿತಿಯಾರ್ಧ ಚೆನ್ನಾಗಿಲ್ಲ, ಕಥೆ ಬೋರಿಂಗ್ ಜೊತೆಗೆ ಸಾಕಷ್ಟು ಎಳೆದಿದ್ದಾರೆ ಎಂದು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ಅದೇನೇ ಇದ್ದರೂ ಅಜಿತ್ ಅಭಿಮಾನಿಗಳಿಗೆ ಈ ಚಿತ್ರ ಫುಲ್ ಮೀಲ್ಸ್ ಅನ್ನೋದರಲ್ಲಿ ಅನುಮಾನವಿಲ್ಲ.

Reshma

TwittereMail
ರೇಷ್ಮಾ ಶೆಟ್ಟಿ: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಜೀವನಶೈಲಿ (ಲೈಫ್‌ಸ್ಟೈಲ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಪ್ರಜಾವಾಣಿ ದಿನಪತ್ರಿಕೆಯ ವಿವಿಧ ವಿಭಾಗಗಳಲ್ಲಿ 9 ವರ್ಷಗಳ ಅನುಭವ. ಆರೋಗ್ಯ, ಆಹಾರ, ಸಿನಿಮಾ, ಕಿರುತೆರೆ ಆಸಕ್ತಿಯ ಕ್ಷೇತ್ರಗಳು. ಕುಂದಾಪುರ ತಾಲ್ಲೂಕಿನ ವಕ್ವಾಡಿ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.
Whats_app_banner